Just In
- 13 min ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- 21 min ago ಹ್ಯುಂಡೈನ ಈ ಕಾರಿಗೆ ಭಾರತದಲ್ಲಿ ಭರ್ಜರಿ ಡಿಸ್ಕೌಂಟ್: ಇದಕ್ಕಿಂತ ಉತ್ತಮ ಆಫರ್ ಸದ್ಯಕ್ಕಿಲ್ಲ!
- 30 min ago ರೈತರ ವಿಶ್ವಾಸದೊಂದಿಗೆ 40 ಲಕ್ಷ ಟ್ರ್ಯಾಕ್ಟರ್ ಮಾರಾಟ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ
- 1 hr ago Bangaluru: ನಮ್ಮ ಯಾತ್ರಿ ಕ್ಯಾಬ್ ಸೇವೆ ಆರಂಭ.. ಎಷ್ಟಿದೆ ದರ?
Don't Miss!
- Movies ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
- News Bengaluru Rain: ಸುದೀರ್ಘ ಕಾಯುವಿಕೆ ಅಂತ್ಯ: ಬೆಂಗಳೂರಿಗೆ ಎಂಟ್ರಿ ಕೊಟ್ಟ ಮಳೆ; ವಿಡಿಯೋ ನೋಡಿ
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Technology oneplus: ಒನ್ಪ್ಲಸ್ನಿಂದ ಫ್ಲ್ಯಾಗ್ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೆಲ್ಫ್ ಡ್ರೈವಿಂಗ್ ಸೇವೆಗೂ ದೊರೆಯಲಿದೆ ಎಂಜಿ ಇಜೆಡ್ಎಸ್ ಎಲೆಕ್ಟ್ರಿಕ್
ಡಿಸೆಂಬರ್ 5ಕ್ಕೆ ಭಾರತದಲ್ಲಿ ಅನಾವರಣಗೊಳ್ಳಲಿರುವ ಎಂಜಿ ಮೋಟಾರ್ ಬಹುನೀರಿಕ್ಷಿತ ಇಜೆಡ್ಎಸ್ ಎಲೆಕ್ಟ್ರಿಕ್ ಕಾರು ಗ್ರಾಹಕರ ಆಕರ್ಷಣೆ ಕಾರಣವಾಗಿದ್ದು, ವ್ಯಯಕ್ತಿಕ ಕಾರು ಬಳಕೆಗೆ ಮಾತ್ರವಲ್ಲದೇ ಸೆಲ್ಫ್ ಡ್ರೈವಿಂಗ್ ಕಾರುಗಳನ್ನು ಒದಗಿಸುವ ಸಂಸ್ಥೆಗಳಲ್ಲೂ ಇಜೆಡ್ಎಸ್ ಎಲೆಕ್ಟ್ರಿಕ್ ಕಾರು ಸೇವೆಯು ಲಭ್ಯವಿರಲಿದೆ ಎನ್ನಲಾಗಿದೆ.
ಅನಾವರಣಗೊಂಡ ನಂತರ 2020ರ ಜನವರಿ ಆರಂಭದಲ್ಲಿ ಇಜೆಡ್ಎಸ್ ಕಾರು ಅಧಿಕೃತವಾಗಿ ಖರೀದಿಗೆ ಲಭ್ಯವಾಗಲಿದ್ದು, ಮೊದಲ ಹಂತವಾಗಿ ದೆಹಲಿ, ಬೆಂಗಳೂರು, ಮುಂಬೈ, ಅಹಮದಾಬಾದ್ ಮತ್ತು ಹೈದ್ರಾಬಾದ್ ನಗರಗಳಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರಲಿದೆ. ಹೀಗಾಗಿ ಸೆಲ್ಫ್ ಡ್ರೈವಿಂಗ್ ಕಾರು ಸೇವೆಗಳನ್ನು ಒದಗಿಸುವ ಸಂಸ್ಥೆಗಳ ಜೊತೆ ಮಹತ್ವದ ಮಾತುಕತೆ ನಡೆಸಿರುವ ಎಂಜಿ ಮೋಟಾರ್ ಸಂಸ್ಥೆಯು ಇಜೆಡ್ಎಸ್ ಕಾರುಗಳನ್ನು ಭಾರೀ ಮಾರಾಟ ಮಾಡುವ ನೀರಿಕ್ಷೆಯಲ್ಲಿದ್ದು, ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರಿಗೆ ಭರ್ಜರಿ ಪೈಪೋಟಿ ನೀಡಲಿದೆ.
ಇನ್ನು ಇಜೆಡ್ಎಸ್ ಎಲೆಕ್ಟ್ರಿಕ್ ಎಸ್ಯುವಿ ಬಿಡುಗಡೆಗಾಗಿ ಈಗಾಗಲೇ ಅಂತಿಮ ಹಂತದ ಸಿದ್ದತೆ ನಡೆಸಿರುವ ಎಂಜಿ ಮೋಟಾರ್ ಸಂಸ್ಥೆಯು ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಮತ್ತು ಬ್ಯಾಟರಿ ಸಾಮಾರ್ಥ್ಯದ ಕುರಿತು ವಿವಿಧ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದು, ಹೊಸ ಕಾರು ಹಲವು ಪ್ರೀಮಿಯಂ ಫೀಚರ್ಸ್ಗಳೊಂದಿಗೆ ಬಿಡುಗಡೆಯಾಗಲಿದೆ.
ಇಜೆಡ್ಎಸ್ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಜ್ಜಾಗುತ್ತಿರುವ ಬೆನ್ನಲ್ಲೇ ಹೊಸ ಕಾರಿನಲ್ಲಿರುವ ತಾಂತ್ರಿಕ ಅಂಶಗಳ ಕುರಿತಾದ ಮಹತ್ವದ ಮಾಹಿತಿಗಳು ಒಂದೊಂದಾಗಿ ಸೋರಿಕೆಯಾಗುತ್ತಿದ್ದು, ಐಷಾರಾಮಿ ಕಾರುಗಳ ಮಾದರಿಯಲ್ಲಿ ಶುದ್ದಗಾಳಿ ಒದಗಿಸುವ ಏರ್ ಫಿಲ್ಟರ್ ಸೌಲಭ್ಯವನ್ನು ಒದಗಿಸಲಿದೆಯೆಂತೆ.
ಇದು ಎಸ್ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾಗಿದ್ದು, ಹಾಗೆಯೇ ಜೆಡ್ಎಸ್ ಕಾರು ಎಲೆಕ್ಟ್ರಿಕ್ ವರ್ಷನ್ನಲ್ಲಿ ಮಾತ್ರವಲ್ಲದೇ ಪೆಟ್ರೋಲ್ ಮತ್ತು ಹೈಬ್ರಿಡ್ ಎಂಜಿನ್ ಆಯ್ಕೆಯಲ್ಲೂ ಸಹ ಬಿಡುಗಡೆಗೊಳ್ಳುವ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ. ಪೆಟ್ರೋಲ್ ಮತ್ತು ಹೈಬ್ರಿಡ್ ವರ್ಷನ್ ಜೆಡ್ಎಸ್ ಕಾರು ಬಿಡುಗಡೆಗೂ ಮುನ್ನ ಇಜೆಡ್ಎಸ್ ಕಾರು ಬಿಡುಗಡೆಯಾಗಲಿದ್ದು, ತದನಂತರವಷ್ಟೇ 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಮೇಳದಲ್ಲಿ ಭಾಗಿಯಾದ ನಂತರವಷ್ಟೇ ಪೆಟ್ರೋಲ್ ಮತ್ತು ಹೈಬ್ರಿಡ್ ವರ್ಷನ್ ರಸ್ತೆಗಿಳಿಯಲಿವೆ.
ಬ್ಯಾಟರಿ ಸಾಮರ್ಥ್ಯ
ಜೆಡ್ಎಸ್ ಎಲೆಕ್ಟ್ರಿಕ್ ಕಾರು 44.5kWh ಲೀಥಿಯಂ ಅಯಾನ್ ಬ್ಯಾಟರಿ ಸೌಲಭ್ಯದೊಂದಿಗೆ ಪ್ರತಿ ಚಾರ್ಜ್ಗೆ 320ರಿಂದ 350ಕಿ.ಮೀ ಮೈಲೇಜ್ ಸಾಮರ್ಥ್ಯ ಹೊಂದಿರಲಿದೆ.
ಹಾಗೆಯೇ ಇಜೆಡ್ಎಸ್ ಮೇಲೆ ಎಂಜಿ ಮೋಟಾರ್ ಗರಿಷ್ಠ 7 ವರ್ಷಗಳ ಕಾಲ ವಾರಂಟಿ ನೀಡಲಿದ್ದು, ಕಾರಿನಲ್ಲಿ ಐಷಾರಾಮಿ ಚಾಲನಾ ಅನುಭವಕ್ಕಾಗಿ ಹಲವಾರು ಪ್ರೀಮಿಯಂ ಫೀಚರ್ಸ್ಗಳನ್ನು ನೀಡಲಾಗಿದೆ.
ಹೊಸ ಕಾರಿನಲ್ಲಿ ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ, ಆಕ್ಟಿವ್ ಎರ್ಮಜೆನ್ಸಿ ಬ್ರೆಕಿಂಗ್, ಲೆನ್ ಕಿಪಿಂಗ್ ಅಸಿಸ್ಟ್, ಟ್ರಾಫಿಕ್ ಜಾಮ್ ಅಸಿಸ್ಟ್, ಇಂಟಲಿಜೆಂಟ್ ಸ್ಪೀಡ್ ಲಿಮಿಟ್ ಅಸಿಸ್ಟ್ ಮತ್ತು ಟಾಪ್ ಎಂಡ್ ಮಾದರಿಯಲ್ಲಿ ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಸಿಸ್ಟಂ ಸೌಲಭ್ಯ ಇರಲಿದೆ.
ಇದರೊಂದಿಗೆ ಹೊಸ ಕಾರು ಹೆಕ್ಟರ್ ಕಾರಿಗಿಂತಲೂ ತಳಮಟ್ಟದ ಕಾರು ಮಾದರಿಯಾಗಿ ರಸ್ತೆಗಿಳಿಯಲಿದ್ದು, ಸಿಗ್ನೆಚರ್ ಹನಿಕೊಂಬ್ ಗ್ರಿಲ್, ಎಲ್ಇಡಿ ಹೆಡ್ಲ್ಯಾಂಪ್ ಜೊತೆ ಡಿಆರ್ಎಲ್ಎಸ್, ಎಲ್ಇಡಿ ಟೈಲ್ಲ್ಯಾಂಪ್, ಅಲ್ಯುನಿಯಂ ಸ್ಕಿಡ್ ಪ್ಲೇಟ್, 17-ಇಂಚಿನ ಡೈಮೆಂಡ್ ಕಟ್ ಅಲಾಯ್ ವೀಲ್ಹ್, ಪ್ರೀಮಿಯಂ ಕ್ಯಾಬಿನ್, ಎಂಟು ಇಂಚಿನ ಇನ್ಪೋಟೈನ್ಮೆಂಟ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ ಜೊತೆ ಅಂಡ್ರಾಯಿಡ್ ಆಟೋ, ರೈನ್ ಸೆನ್ಸಾರ್ ವೈಪರ್, ವೆಂಟಿಲೆಟೆಡ್ ಲೆದರ್ ಸೀಟುಗಳು, ಕ್ಲೈಮೆಟ್ ಕಂಟ್ರೊಲ್, ಏರ್ ಫಿಲ್ಟರ್ ಮತ್ತು ಸ್ಟಾರ್ಟ್/ಸ್ಟಾಪ್ ಬಟನ್ ಫೀಚರ್ಸ್ ಹೊಂದಿದೆ.
ಹೊಸ ಕಾರಿನಲ್ಲಿ ಇಕೊ, ನಾರ್ಮಲ್ ಮತ್ತು ಸ್ಪೋರ್ಟ್ ಡ್ರೈವ್ ಮೋಡ್ಗಳನ್ನು ಸಹ ನೀಡಲಾಗಿದ್ದು, ಪನೆರೊಮಿಕ್ ಸನ್ರೂಫ್ ಸೌಲಭ್ಯವು ಕಾರಿಗೆ ಮತ್ತಷ್ಟು ಪ್ರೀಮಿಯಂ ಲುಕ್ ನೀಡಲಿದೆ. ಜೊತೆಗೆ ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಎರ್ಮಜೆನ್ಸಿ ಬ್ರೇಕಿಂಗ್, ಲೈನ್ ಕೀಪ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಎಬಿಎಸ್ ಜೊತೆ ಇಬಿಡಿ, 4 ಏರ್ಬ್ಯಾಗ್, ಹಿಲ್ ಲಾಂಚ್ ಅಸಿಸ್ಟ್ ಸೌಲಭ್ಯ ಹೊಂದಿದೆ.
ಈ ಮೂಲಕ ಎಲೆಕ್ಟ್ರಿಕ್ ಕಾರುಗಳಲ್ಲೇ ಆಕರ್ಷಕ ಬೆಲೆಯೊಂದಿಗೆ ಬಿಡುಗಡೆಯಾಗಲಿರುವ ಇಜೆಡ್ಎಸ್ ಕಾರು ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ದೆಹಲಿ ಎಕ್ಸ್ಶೋರೂಂ ಪ್ರಕಾರ ಹೊಸ ಕಾರು ರೂ.17 ಲಕ್ಷದಿಂದ ರೂ.20 ಲಕ್ಷ ಬೆಲೆ ಹೊಂದುವ ಸಾಧ್ಯತೆಗಳಿವೆ.