ಭಾರತದಲ್ಲಿ ಬಿಡುಗಡೆಯಾಗಲಿದೆ ಮಿಟ್ಸುಬಿಷಿ ಎಕ್ಲಿಪ್ಸ್

ಮಿಟ್ಸುಬಿಷಿ ಮೋಟಾರ್ ಕಂಪನಿಯು ಮತ್ತೆ ಭಾರತೀಯ ಮಾರುಕಟ್ಟೆಗೆ ಕಾಲಿಡುವ ತವಕದಲ್ಲಿದೆ. ಜಪಾನ್ ಮೂಲದ ದೈತ್ಯ ಆಟೋ ಮೋಬೈಲ್ ಕಂಪನಿ ಪ್ರಪಂಚದ ಮಾರುಕಟ್ಟೆಯಲ್ಲಿರುವ ತನ್ನ ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸುವ ತವಕದಲ್ಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಮಿಟ್ಸುಬಿಷಿ ಎಕ್ಲಿಪ್ಸ್

ಮೊದಲಿಗೆ ಮಿಟ್ಸುಬಿಷಿ ಎಕ್ಲಿಪ್ಸ್ ಕ್ರಾಸ್ ವಾಹನವನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಈ ವಾಹನವು ಭಾರತೀಯ ಮಾರುಕಟ್ಟೆಯಲ್ಲಿ 2020ರಲ್ಲಿ ಬಿಡುಗಡೆಯಾಗಲಿದೆ. ಗಾಡಿವಾಡಿ ಸುದ್ದಿ ಸಂಸ್ಥೆಯ ಪ್ರಕಾರ, ಮಿಟ್ಸುಬಿಷಿ ಎಕ್ಲಿಪ್ಸ್ ಕ್ರಾಸ್ ವಾಹನವು 2020ರಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಇದು ರೆನಾಲ್ಟ್ ನಿಸ್ಸಾನ್ ಕಂಪನಿಯು, ಮಿಟ್ಸುಬಿಷಿ ಕಂಪನಿಯನ್ನು ಸ್ವಾಧೀನ ಪಡಿಸಿಕೊಂಡ ನಂತರ ಮಿಟ್ಸುಬಿಷಿ ಕಂಪನಿ ಬಿಡುಗಡೆ ಮಾಡುತ್ತಿರುವ ಮೊದಲ ವಾಹನವಾಗಿದೆ. ನಿಸ್ಸಾನ್ ಕಂಪನಿಯು ಮಿಟ್ಸುಬಿಷಿಯಲ್ಲಿ 34% ಶೇರುಗಳನ್ನು ಖರೀದಿಸಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಮಿಟ್ಸುಬಿಷಿ ಎಕ್ಲಿಪ್ಸ್

ಮಿಟ್ಸುಬಿಷಿ ಎಕ್ಲಿಪ್ಸ್ ಕ್ರಾಸ್ ವಾಹನವು ಕಂಪನಿಯ ಎಸ್‍‍ಯುವಿ ಸರಣಿಯ ನಾಲ್ಕನೇ ಮಾದರಿಯಾಗಿದೆ. ಇನ್ನುಳಿದ ಮಾದರಿಗಳೆಂದರೆ, ಔಟ್‍‍ಲ್ಯಾಂಡರ್, ಮಾಂಟೆರೋ ಮತ್ತು ಪಜೆರೋ ಸ್ಪೋರ್ಟ್. ಕಂಪನಿಯು ಔಟ್‍‍ಲ್ಯಾಂಡರ್ ಹಾಗೂ ಪಜೆರೋ ಸ್ಪೋರ್ಟ್‍‍ನ ಸಿ‍‍ಕೆ‍‍ಡಿ ಕಿಟ್‍‍ಗಳನ್ನು ಆಮದು ಮಾಡಿಕೊಂಡು ತಮಿಳುನಾಡಿನಲ್ಲಿರುವ ಹಿಂದೂಸ್ತಾನ್ ಮೋಟಾರ್ಸ್‍ ಘಟಕದಲ್ಲಿ ಉತ್ಪಾದಿಸುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಮಿಟ್ಸುಬಿಷಿ ಎಕ್ಲಿಪ್ಸ್

ಮಾಂಟೆರೋ ವಾಹನವು ಸಿ‍‍ಬಿ‍‍ಯುವಾಗಿ ಭಾರತಕ್ಕೆ ಬರುತ್ತದೆ. ಎಕ್ಲಿಪ್ಸ್ ಕ್ರಾಸ್ ವಾಹನವನ್ನು ಸಹ ಸಿ‍‍ಕೆ‍‍ಡಿ ಯೂನಿಟ್ ಆಗಿ ಆಮದು ಮಾಡಿಕೊಳ್ಳುವ ಸಾಧ್ಯತೆಗಳಿವೆ. ಭಾರತ ಸರ್ಕಾರದ ಹೊಸ ಸುರಕ್ಷತಾ ನಿಯಮಗಳ ಅನುಸಾರ ಮಿಟ್ಸುಬಿಷಿ ಕಂಪನಿಯು ಎಕ್ಲಿಪ್ಸ್ ಕ್ರಾಸ್ ವಾಹನದಲ್ಲಿ ಒವರ್ ಸ್ಪೀಡ್ ಎಚ್ಚರಿಕೆ ನೀಡುವ ಅಲಾರಂ ಅಳವಡಿಸಬೇಕಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಮಿಟ್ಸುಬಿಷಿ ಎಕ್ಲಿಪ್ಸ್

ಈ ವಾಹನದ ಬೆಲೆಯು ರೂ.15 ಲಕ್ಷದಿಂದ ರೂ.22 ಲಕ್ಷಗಳ ಆಸುಪಾಸಿನಲ್ಲಿರಲಿದ್ದು, ಬಿಡುಗಡೆಯಾದ ನಂತರ ಜೀಪ್ ಕಾಂಪಾಸ್, ಹ್ಯುಂಡೈ ಟುಕ್ಸನ್, ಟಾಟಾ ಹೆಚ್7‍ಎಕ್ಸ್ ಮತ್ತು ಮಹೀಂದ್ರಾ ಎಕ್ಸ್ ಯುವಿ 500 ವಾಹನಗಳಿಗೆ ಪೈಪೋಟಿ ನೀಡಲಿದೆ. ಮಿಟ್ಸುಬಿಷಿ ಎಕ್ಲಿಪ್ಸ್ ಕ್ರಾಸ್ ವಾಹನವು, ಮಾಸ್ ಮಾರ್ಕೆಟ್ ಸೆಗ್‍‍ಮೆಂಟಿನ ಮೇಲಿನ ಸ್ಥಾನದಲ್ಲಿರಲಿದೆ. ಈ ವಾಹನವು ಎಸ್‍‍ಯು‍‍ವಿ ವಾಹನಗಳ ಸೆಗ್‍‍ಮೆಂಟಿನಲ್ಲಿ ಹೊಸ ಭರವಸೆಯಂತಿದ್ದು, ಮಿಟ್ಸುಬಿಷಿ ಕಂಪನಿಯು ಕಳೆದುಕೊಂಡಿರುವ ವೈಭವವನ್ನು ಮರಳಿ ನೀಡುವ ಸಾಧ್ಯತೆಗಳಿವೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಮಿಟ್ಸುಬಿಷಿ ಎಕ್ಲಿಪ್ಸ್

ಮಿಟ್ಸುಬಿಷಿ ಕಂಪನಿಯು ಈ ಹಿಂದೆ ದೇಶಿಯ ಮಾರುಕಟ್ಟೆಯಲ್ಲಿ ಮಿಟ್ಸುಬಿಷಿ ಲ್ಯಾನ್ಸರ್, ಮಿಟ್ಸುಬಿಷಿ ಪಜೆರೋ ಎಸ್‍ಎಫ್‍ಎಕ್ಸ್ ನ ಜನಪ್ರಿಯ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಹೊಸ ವಾಹನವು ಮಿಟ್ಸುಬಿಷಿ ಕಂಪನಿಗೆ ಮರಳಿ ಅದೃಷ್ಟ ನೀಡುವುದೇ ಕಾದು ನೋಡ ಬೇಕಿದೆ.

MOST READ: ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮರ್ಸಿಡಿಸ್ ಬೆಂಝ್ ಇ ಕ್ಲಾಸ್

ಭಾರತದಲ್ಲಿ ಬಿಡುಗಡೆಯಾಗಲಿದೆ ಮಿಟ್ಸುಬಿಷಿ ಎಕ್ಲಿಪ್ಸ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮಿಟ್ಸುಬಿಷಿ ಎಕ್ಲಿಪ್ಸ್ ಕ್ರಾಸ್ ವಾಹನವು ಆಕರ್ಷಕ ವಿನ್ಯಾಸ ಹೊಂದಿರುವ ಎಸ್‍‍ಯು‍‍ವಿಯಾಗಿದೆ. ಕೆಲವು ಕೋನಗಳಿಂದ ನೋಡಿದರೆ ಈ ವಾಹನವು ಹ್ಯುಂಡೈ ಕಂಪನಿಯ ವೆನ್ಯೂ ವಾಹನದಂತೆ ಕಾಣುತ್ತದೆ. ಈ ವಾಹನವು ಯಾವ ಯಾವ ಬಣ್ಣಗಳಲ್ಲಿ ದೊರೆಯಲಿದೆ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಈ ವಾಹನವು ಭಾರತೀಯ ಮಾರುಕಟ್ಟೆಯಲ್ಲಿ ಒಳ್ಳೆಯ ಮಾರಾಟ ಪ್ರಮಾಣವನ್ನು ದಾಖಲಿಸುವ ನಿರೀಕ್ಷೆಯಿದೆ. ಈ ವಾಹನದ ಬಿಡುಗಡೆಯೊಂದಿಗೆ, ಮಿಟ್ಸುಬಿಷಿ ವಾಹನಗಳನ್ನು ಮತ್ತೆ ಭಾರತೀಯ ರಸ್ತೆಗಳಲ್ಲಿ ಕಾಣಬಹುದಾಗಿದೆ. ಈ ಕಂಪನಿಯ ವಾಹನಗಳು ಹಿಂದೆ ಭಾರತದಲ್ಲಿ ಬಹು ಜನಪ್ರಿಯತೆಯನ್ನು ಹೊಂದಿ ಇತಿಹಾಸವನ್ನು ಸೃಷ್ಟಿಸಿದ್ದವು. ಮತ್ತೊಮ್ಮೆ ಇತಿಹಾಸ ಮರುಕಳಿಸಲಿ ಎಂದು ಶುಭ ಹಾರೈಸುತ್ತೇವೆ.

Most Read Articles

Kannada
English summary
Mitsubishi Eclipse Cross Set For 2020 India Launch - Read in kannada
Story first published: Tuesday, May 21, 2019, 9:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X