Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅನಾವರಣಗೊಂಡ ಮಿಟ್ಸುಬಿಷಿ ಎಕ್ಸ್ಪ್ಯಾಂಡರ್ ಕ್ರಾಸ್
ಜಪಾನಿನ ವಾಹನ ತಯಾರಕ ಕಂಪನಿಯಾದ ಮಿಟ್ಸುಬಿಷಿ ತನ್ನ ಎಕ್ಸ್ಪ್ಯಾಂಡರ್ ಕ್ರಾಸ್ ಎಂಬ ಹೊಸ ಕ್ರಾಸ್ ಒವರ್ ಎಂಪಿವಿಯನ್ನು ಅನಾವರಣಗೊಳಿಸಿದೆ. ಇದು ಮೊದಲಿಗೆ ಇಂಡೋನೇಷ್ಯಾದಲ್ಲಿ ಮಾರಾಟವಾಗಲಿದ್ದು, ನಂತರದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ.

ಇಂಡೋನೇಷ್ಯಾದ ಮಾರುಕಟ್ಟೆಯಲ್ಲಿ ನವೆಂಬರ್ 13ರಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇನೋವಾ ಎಂಪಿವಿಯ ಮಾದರಿಯಲ್ಲಿ ಕುಟುಂಬ ವಾಹನ ಗ್ರಾಹಕರನ್ನು ಗುರಿಯಾಗಿಸಿಕೊಂಡು ಈ ಕ್ರಾಸ್ ಒವರ್ ಅನ್ನು ಬಿಡುಗಡೆಗೊಳಿಸಲಾಗುತ್ತಿದೆ. ಜಪಾನಿನ ಬ್ರ್ಯಾಂಡ್ ಮಿಟ್ಸುಬಿಷಿ ಪ್ರಕಾರ ಈ ಎಂಪಿವಿ ಹೆಚ್ಚು ಇಂಟಿರಿಯರ್ ಸ್ಪೇಸ್ ಮತ್ತು ಹೆಚ್ಚು ದೂರ ಚಲಿಸಲು ಉತ್ತಮ ವಾಹನವಾಗಿದೆ. 2018ರಲ್ಲಿ ಎಕ್ಸ್ಪ್ಯಾಂಡರ್ ಎಂಪಿವಿಯು 1 ಲಕ್ಷಕ್ಕೂ ಅಧಿಕ ಯುನಿಟ್ಗಳಷ್ಟು ಮಾರಾಟವಾಗಿದೆ. ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾದ ನಾಲ್ಕನೇ ಎಂಪಿವಿ ಇದಾಗಿದೆ.

ಮಿಟ್ಸುಬಿಷಿ ಎಕ್ಸ್ಪ್ಯಾಂಡರ್ ಎಂಪಿವಿಯನ್ನು ಎರಡು ವರ್ಷಗಳ ಹಿಂದೆ ಇಂಡೋನೇಷ್ಯಾದ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿತ್ತು. ಮಿಟ್ಸುಬಿಷಿ ಎಕ್ಸ್ಪ್ಯಾಂಡರ್ ಕ್ರಾಸ್ನೊಂದಿಗೆ ತನ್ನ ಯಶಸ್ಸನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಎಕ್ಸ್ಪ್ಯಾಂಡರ್ ಕ್ರಾಸ್ ಎಂಪಿವಿ ತಯಾರಿಸುವ ಇಂಡೋನೇಷ್ಯಾದ ಸಿಕಾರಂಗ್ ಘಟಕದಲ್ಲಿ ತಯಾರಿಕೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ರಫ್ತು ಹೆಚ್ಚಸಲು ನಿರ್ಧರಿಸಲಾಗಿದೆ.

ಈ ಎಂಪಿವಿಯು ಕಪ್ಪು ಬಣ್ಣದ ಹೊಸ ಗ್ರಿಲ್ ಅನ್ನು ಹೊಂದಿದೆ. ಕಾರಿನಲ್ಲಿ ಹೊಸ ಎಲ್ಇಡಿ ಹೆಡ್ಲ್ಯಾಂಪ್ ಮತ್ತು ಎಲ್ಇಡಿ ಫಾಗ್ ಲ್ಯಾಂಪ್ಗಳನ್ನು ಅಳವಡಿಸಲಾಗಿದೆ. ಎಕ್ಸ್ಪ್ಯಾಂಡರ್ ಕ್ರಾಸ್ನಲ್ಲಿ ಬ್ಲ್ಯಾಕ್ ಬಾಡಿ ಕ್ಲಾಡಿಂಗ್ ಅನ್ನು ಹೊಂದಿದೆ. 17 ಇಂಚಿನ ಅಲಾಯ್ ವ್ಹೀಲ್ಗಳ ಜೊತೆ ಪ್ರೊಫೈಲ್ ಟಯರ್ಗಳು ಮತ್ತು ಹೊಸ ರೂಫ್ ರೇಲ್ ಮತ್ತು ಹಿಂಭಾಗದಲ್ಲಿ ಹೊಸ ಬಂಪರ್ ಅನ್ನು ಫಾಕ್ಸ್ ಸ್ಕಿಡ್ ಪ್ಲೇಟ್ ಅನ್ನು ಹೊಂದಿದೆ.

ಇಂಟಿರಿಯರ್ನಲ್ಲಿ ಕ್ರಾಸ್ ಡ್ಯುಯಲ್-ಟೋನ್ ಬ್ಲ್ಯಾಕ್ ಮತ್ತು ರೆಡ್ ಥೀಮ್ ಅನ್ನು ಹೊಂದಿದೆ. ಇದಲ್ಲದೆ ರೆಡ್ ಥೀಮ್ ಇರುವ ಹೆಚ್ಚಿನ ರೂಪಾಂತರಗಳು ಹೆಚ್ಚಾಗಿ ಬ್ಲ್ಯಾಕ್ ಬಣ್ಣದ ಇಂಟಿರಿಯರ್ ಹೊಂದಿರುತ್ತವೆ.

ಕಾಸ್ಮೆಟಿಕ್ ಬದಲಾವಣೆಗಳ ಜೊತೆಗೆ ಎಕ್ಸ್ಪಾಂಡರ್ ಕ್ರಾಸ್ ಸ್ಟ್ಯಾಂಡರ್ಡ್ ಮಾದರಿಯ 225 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೆಚ್ಚುವರಿ 25 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಈ ಎಂಪಿವಿ 50 ಎಂಎಂ ಅಗಲವನ್ನು ಹೊಂದಿದೆ. ಈ ಮಾದರಿಯನ್ನು ಮಿಟ್ಸುಬಿಷಿ ಇಂಡೋನೇಷ್ಯಾ ಘಟಕದಲ್ಲಿ ತಯಾರಿಸಿ ನಂತರ ಬೇರೆ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಮಿಟ್ಸುಬಿಷಿ ಎಕ್ಸ್ಪಾಂಡರ್ ಕ್ರಾಸ್ ಇತ್ತೀಚಿನ 4 ಎ 91 1.5-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಅಥವಾ 4 ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಅನ್ನು ಅಳವಡಿಸಲಿದೆ. ಇದು ಪ್ರಸ್ತುತ ಇರುವ 4ಎ 9 ಸರಣಿಗಿಂತ ಹೆಚ್ಚು ದಕ್ಷತೆಯನ್ನು ಹೊಂದಿದೆ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಮಿಟ್ಸುಬಿಷಿ ಹೇಳುವಂತೆ ಈ ಎಂಪಿವಿ ಹೈ ಫರ್ಪಾಮೆನ್ಸ್ ಸೌಂಡ್ ಅಬ್ಸರ್ವಿಂಗ್ ಮತ್ತು ವೈಬರೇಷನ್ ಬ್ಲಾಕಿಂಗ್ ಸಿಸ್ಟಂ ಅನ್ನು ಹೊಂದಿದೆ. ಈ ಎಂಪಿವಿಯು 7 ಜನರು ಪ್ರಯಾಣಿಸುವಷ್ಟು ವಿಶಾಲವಾಗಿದೆ.
MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಈ ಎಂಪಿವಿಯಲ್ಲಿ ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಸ್ಟೀಯರಿಂಗ್ ವ್ಹೀಲ್, ಕ್ರೂಸ್ ಕಂಟ್ರೋಲ್, ಪ್ರೊಗ್ರಾಮೆಬಲ್ ಎಕ್ಸ್ ಟಿರಿಯರ್, ಹೈ-ಕಾಂಟ್ರಾಸ್ಟ್ ಕಲರ್ ಇನ್ಸ್ ಟ್ರೂಮೆಂಟ್ ಪ್ಯಾನೆಲ್ ಮೀಟರ್, ಫ್ಲೋಡಿಂಗ್ ಆರ್ಮ್ ರೆಸ್ಟ್ , ಲಗೇಜ್ ಸ್ಪೇಸ್, ಕ್ಯೂಬಿ ಹೊಲ್ಸ್, ಎರಡನೇ ಸಾಲಿನ ಸೀಟ್ ಬ್ಯಾಕ್ 60:40 ಸ್ಪ್ಲೀಟ್, ಮೂರನೇ ಸಾಲಿನ ಸೀಟು 50:50 ಸ್ಪ್ಲೀಟ್ ಅನ್ನು ಹೊಂದಿದೆ. ಮಿಟ್ಸುಬಿಷಿ ಎಕ್ಸ್ಪ್ಯಾಂಡರ್ ಓವರ್ ಎಂಪಿವಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.