ಮೊಬ್ ಹೆಸರಿನಲ್ಲಿ ಬರಲಿದೆ ಜೀಪ್ ವ್ರಾಂಗ್ಲರ್ ಆಫ್ ರೋಡ್ ವರ್ಷನ್

ಮೂರು ಹಾಗೂ ಐದು ಡೋರ್ ವೇರಿಯಂಟ್‍‍ನ ಜೀಪ್ ವ್ರಾಂಗ್ಲರ್ ವಾಹನವನ್ನು ಹಲವಾರು ಬಾರಿ ಭಾರತದಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಒವರ್‍‍ಡ್ರೈವ್ ವರದಿಗಳ ಪ್ರಕಾರ, ಜೀಪ್ ಕಂಪನಿಯು 2020ರ ವ್ರಾಂಗ್ಲರ್ ವಾಹನವನ್ನು ಈ ವರ್ಷದ ಹಬ್ಬದ ಋತುವಿನಲ್ಲಿ ಬಿಡುಗಡೆಗೊಳಿಸಲಿದೆ. ಹೊಸ ತಲೆಮಾರಿನ ಟಾಪ್ ಮಾದರಿಯಾದ ಜೀಪ್ ವ್ರಾಂಗ್ಲರ್ ರೂಬಿಕಾನ್ ವಾಹನವನ್ನು ದೇಶಿಯ ಮಾರುಕಟ್ಟೆಯಲ್ಲಿ ಮೊಬ್ ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸಲಾಗುವುದು.

ಮೊಬ್ ಹೆಸರಿನಲ್ಲಿ ಬರಲಿದೆ ಜೀಪ್ ವ್ರಾಂಗ್ಲರ್ ಆಫ್ ರೋಡ್ ವರ್ಷನ್

ಜಾಗತಿಕ ಮಾರುಕಟ್ಟೆಯಲ್ಲಿ ವ್ರಾಂಗ್ಲರ್ ಮೋಬ್, ಜೀಪ್ ರೂಬಿಕಾನ್‍‍ನಲ್ಲಿ ಇಲ್ಲದೇ ಇರುವ, ಬ್ಲಾಕ್ ಔಟ್ ಅಲಾಯ್ ವ್ಹೀಲ್‍‍ಗಳು ಹಾಗೂ ಆಫ್ ರೋಡ್ ಟಯರ್‍ ಸೇರಿದಂತೆ ಇತರೆ ಕಾಸ್ಮೆಟಿಕ್ ಅಪ್‍‍ಡೇಟ್‍‍ಗಳನ್ನು ಪಡೆಯಲಿದೆ. ಮೋಬ್ ವಾಹನವು ಬಾನೆಟ್‍‍ನ ಸೈಡ್‍‍ನಲ್ಲಿ ಡೆಕಾಲ್ ಹೊಂದಿರಲಿದೆ. ಹೊಸ ಆಫ್ ರೋಡರ್ ಹೊಸದಾಗಿ ಅಭಿವೃದ್ದಿಪಡಿಸಲಾಗಿರುವ ಜೆ‍ಎಲ್ ಪ್ಲಾಟ್‍‍ಫಾರಂ ಮೇಲೆ ಆಧಾರಿತವಾಗಿರಲಿದೆ. ಹೊಸ ಪ್ಲಾಟ್‍ಫಾರಂ ಈಗಿರುವ ಜೆಕೆ ಪ್ಲಾಟ್‍‍ಫಾರಂಗಿಂತ ಹಗುರವಾಗಿರಲಿದೆ.

ಮೊಬ್ ಹೆಸರಿನಲ್ಲಿ ಬರಲಿದೆ ಜೀಪ್ ವ್ರಾಂಗ್ಲರ್ ಆಫ್ ರೋಡ್ ವರ್ಷನ್

ಹೊಸ ಪ್ಲಾಟ್‍‍ಫಾರಂನಿಂದ ಹೊಸ ವ್ರಾಂಗ್ಲರ್ ವಾಹನದಲ್ಲಿರುವ ಅಪ್ರೋಚ್ ಹಾಗೂ ಡಿಪಾರ್ಚರ್ ಆಂಗಲ್‍‍ಗಳು ಸುಧಾರಿಸಲಿವೆ. ಈ ವಾಹನವು 227 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರಲಿದ್ದು, 30 ಇಂಚಿನ ವಾಟರ್ ಫೋರ್ಡಿಂಗ್ ಎಬಿಲಿಟಿ ಹೊಂದಿರಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ವ್ರಾಂಗ್ಲರ್ ವಾಹನವನ್ನು ಎರಡು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಮೊದಲನೆಯದು 3.6 ಲೀಟರಿನ ನ್ಯಾಚುರಲಿ ಆಸ್ಪೀರೇಟೆಡ್ ಪೆಟ್ರೋಲ್ ಎಂಜಿನ್.

ಮೊಬ್ ಹೆಸರಿನಲ್ಲಿ ಬರಲಿದೆ ಜೀಪ್ ವ್ರಾಂಗ್ಲರ್ ಆಫ್ ರೋಡ್ ವರ್ಷನ್

ಈ ಎಂಜಿನ್ 283 ಬಿ‍‍ಹೆಚ್‍‍ಪಿ ಪವರ್ ಹಾಗೂ 347 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಎರಡನೇಯ ಎಂಜಿನ್ 2.0 ಲೀಟರಿನ, ಟಿ-ಜಿ‍‍ಡಿ‍ಐ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಗಿದ್ದು, 271 ಬಿ‍‍ಹೆಚ್‍‍ಪಿ ಪವರ್ ಹಾಗೂ 400 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 8 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.

ಮೊಬ್ ಹೆಸರಿನಲ್ಲಿ ಬರಲಿದೆ ಜೀಪ್ ವ್ರಾಂಗ್ಲರ್ ಆಫ್ ರೋಡ್ ವರ್ಷನ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ದೇಶಿಯ ಮಾರುಕಟ್ಟೆಗೆ ಬರುವ ಸಾಧ್ಯತೆಗಳಿವೆ. ಇದರ ಜೊತೆಗೆ 198.5 ಬಿಹೆಚ್‍‍ಪಿ ಹಾಗೂ 450 ಎನ್‍ಎಂ ಟಾರ್ಕ್ ಉತ್ಪಾದಿಸುವ 2.2 ಲೀಟರಿನ ಮಲ್ಟಿಜೆಟ್ 2, ಡೀಸೆಲ್ ಎಂಜಿನ್ ಸಹ ಬರುವ ಸಾಧ್ಯತೆಗಳಿವೆ. ಈ ಎಂಜಿನ್ ಸಹ 8 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿರಲಿದೆ.

ಮೊಬ್ ಹೆಸರಿನಲ್ಲಿ ಬರಲಿದೆ ಜೀಪ್ ವ್ರಾಂಗ್ಲರ್ ಆಫ್ ರೋಡ್ ವರ್ಷನ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಬಿಡುಗಡೆಯಾದ ನಂತರ ಹೊಸ ತಲೆಮಾರಿನ ಜೀಪ್ ವ್ರಾಂಗ್ಲರ್‍ ಮೊಬ್‍‍ನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.65-70 ಲಕ್ಷಗಳಾಗಲಿದೆ. ಈ ಆಫ್ ರೋಡ್ ವಾಹನವನ್ನು ಖರೀದಿಸಲು ಹಲವಾರು ಜನ ಕಾಯುತ್ತಿದ್ದಾರೆ.

Most Read Articles

Kannada
Read more on ಜೀಪ್ jeep
English summary
2020 Jeep Wrangler Rubicon To Be Called Moab In India - Read in kannada
Story first published: Wednesday, July 17, 2019, 12:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X