ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದು ದೇಶದಲ್ಲಿ ಅಧಿಕವಾಗುತ್ತಿದ್ದು, ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲದೆಯೆ ಈ ಅಪಯಾಕಾರಿಯಾದ ಹವ್ಯಾಸವು ಹಲವಾರು ಚಾಲಕರು ಮತ್ತು ಅಮಾಯಕರ ಜೀವವನ್ನು ಬಲಿ ಪಡೆದಿದೆ. ಈ ನಿಟ್ಟಿನಲ್ಲಿ ಡ್ರಿಂಕ್ ಡ್ರೈವ್ ಚಾಲಕರನ್ನು ಹಿಡಿಯಲು ಟ್ರಾಫಿಕ್ ಪೊಲೀಸರು ಹೊಸ ಯೋಜನೆಗಳನ್ನು ಸಹ ಶುರು ಮಾಡಲಾಗಿದೆ.

ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

ಅದರಲ್ಲಿಯು ಹಲವಾರು ಪಬ್ ಮತ್ತು ಹಲವಾರು ವೈನ್ ಶಾಪ್‍‍ಗಳಿರುವ ನಮ್ಮ ಬೆಂಗಳೂರಿನಲ್ಲಿ ಮಧ್ಯ ಸೇವಿಸಿ ವಾಹನ ಸೇವನೆಯು ಹವ್ಯಾಸವಾಗಿ ಹೋಗಿದೆ ಎಂದೇ ಹೆಳಬಹುದು, ಏಕೆಂದರೆ ಇಟಿ ಆಟೋ ವರದಿ ಪ್ರಕಾರ 2016 ರಿಂದ 2018ರಲ್ಲಿ ಕರ್ನಾಟಕ ಆರ್‍‍ಟಿಒ ಸುಮಾರು 83, 690 ಡ್ರೈವಿಂಗ್ ಲೈಸೆನ್ಸ್ ಅನ್ನು ರದ್ದು ಮಾಡಲಾಗಿದ್ದು, ಇವುಗಳಲ್ಲಿ ಸುಮಾರು 59,797 ರದ್ದಾದ ಲೈಸೆನ್ಸ್ ಗಳು ಡ್ರಂಕ್ ಆಂಡ್ ಡ್ರೈವ್ ಕೇಸ್‍‍ನಲ್ಲಿ ಬುಕ್ ಆದ ಚಾಲಕರದ್ದೆ ಆಗಿದೆ.

ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

ಇದು ಮಾತ್ರವಲ್ಲದೆಯೆ ಕರ್ನಾಟಕ ರಾಜ್ಯ ಆರ್‍‍ಟಿಒ ಇಲಾಖೆಯು 2016ರಲ್ಲಿ 20,611, 2017ರಲ್ಲಿ 21,945 ಮತ್ತು 2018ರಲ್ಲಿ ಬರೊಬ್ಬರಿ 41,134 ಸಾವಿರ ಲೈಸೆನ್ಸ್ ಅನ್ನು ರದ್ದು ಮಾಡಲಾಗಿದ್ದು, ಈ ಅವದಿಯಲ್ಲಿ ಎಲ್ಲಾ ಅಪರಾಧಗಳಿಗೆ ಡ್ರೈವಿಂಗ್ ಪರವಾನಗಿ ರದ್ದುಗೊಳಿಸುವಲ್ಲಿ ಇದೇ ತೀವ್ರವಾದ ಏರಿಕೆ ಕಂಡುಬಂದಿದೆ.

ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

2016ರ ವೇಳೆಗೆ ಸುಮಾರು 12,151, 2017ರಲ್ಲಿ 14,881 ಮತ್ತು 2018ರಲ್ಲಿ 32,765 ಸಾವಿರ ಮಂದಿ ವಾಹನ ಚಾಲಕರು ಡ್ರಂಕ್ ಕೆಸ್‍ನಲ್ಲಿ ಬುಕ್ ಆದ ಕಾರಣ ಅವರು ತಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಎರಡು ವರ್ಷದಲ್ಲಿ ಸಮಾರು 83,690 ಸಾವಿರ ಡ್ರೈವಿಂಗ್ ಲೈಸೆನ್ಸ್ ರದ್ದಾಗಿದ್ದರೆ ಅವುಗಳಲ್ಲಿ ಸುಮಾರು 59,797 ಲೈಸೆನ್ಸ್ ಗಳು ಡ್ರಂಕ್ ಡ್ರೈವ್ ಕೇಸ್‍ನಲ್ಲಿ ಸಿಲುಕಿದವರದ್ದೆ ಆಗಿದೆ.

ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

ಟ್ರಾಫಿಕ್ ಪೋಲಿಸರನ್ನು ಶಿಫಾರಸು ಮಾಡುವ ಮೂಲಕ ಸಾರಿಗೆ ಇಲಾಖೆಯು ಪರವಾನಗಿಗಳನ್ನು ರದ್ದುಗೊಳಿಸುತ್ತದೆ. ಕುಡಿದು ವಾಹನ ಚಾಲನೆ ಮಾಡುವುದರ ಜೊತೆಗೆ, ಸಿಗ್ನಲ್ ಜಂಪಿಂಗ್, ಓವರ್ ಸ್ಪೀಡಿಂಗ್, ಓವರ್ ಲೋಡಿಂಗ್, ವಾಹನ ಚಾಲನೆಯ ವೇಳೆ ಮೊಬೈಲ್ ಬಳಕೆ, ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ರಹಿತವಾಗಿ ವಾಹನ ಚಾಲನೆ ಮಾಡುವಂತಹ ಉಲ್ಲಂಘನೆಗಳಿಗಾಗಿ ಪೋಲಿಸರು ಪರವಾನಗಿಯನ್ನು ರದ್ದುಗೊಳಿಸಲು ಶಿಫಾರಸು ಮಾಡುತ್ತಾರೆ.

ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

ಆದರೆ ಮಧ್ಯ ಸೇವಿಸಿ ವಾಹನ ಚಾಲನೆ ಮಾಡುವ ಚಾಲಕರು ಕೇವಲ ಇದೊಂದೇ ಕಾರಣಕ್ಕಾಗಿ ತಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ಕಳೆದುಕೊಳ್ಳುತ್ತಿದ್ದು, ಇನ್ನಿತರೆ ಸಂಚಾರಿ ನಿಯಮಗಳನ್ನು ಸಹ ಇವರು ಮಾಡಿದ್ದರೆ ಇನ್ನು ಲೈಸೆನ್ಸ್ ರದ್ದು ಮಾಡುವುದಲ್ಲದೆಯೆ ದಂಡವನ್ನು ಸಹ ತೆರಬೇಕಾಗುತ್ತದೆ.

MOST READ: ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿಯೊಂದಿಗೆ ಮಾರಾಟದಲ್ಲಿ ಮಿಂಚುತ್ತಿದೆ ಮಾರುತಿ ಬಲೆನೊ

ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

"ಉಲ್ಲಂಘನೆಗಾರರ ವಿರುದ್ಧ ತೀವ್ರವಾದ ಕ್ರಮ ತೆಗೆದುಕೊಳ್ಳುತ್ತೇವೆ ಹಾಗು ಮುಖ್ಯವಾಗಿ ಮದ್ಯದ ಪ್ರಭಾವದಿಂದ ಚಾಲನೆ ಮಾದುವ ಚಾಲಕರ ಮೇಲೇ ಕಠಿಣವಾದ ಕ್ರಮ ಕೈ ತೆಗೆದುಕೊಳ್ಳುತ್ತೇವೆ" ಎಂದು ಹಿರಿಯ ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

MOST READ: ಶೀಘ್ರವೇ ಬ್ಯಾನ್ ಆಗಲಿವೆ 150ಸಿಸಿಗಿಂತಲೂ ಕಡಿಮೆ ಸಾಮರ್ಥ್ಯದ ವಾಹನಗಳು

ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

ಮಧ್ಯದ ಪ್ರಭಾವದಿಂದ ಚಾಲನೆಗೆ ಹೆಚ್ಚಿನ ಶಿಕ್ಷೆಯನ್ನು ಒದಗಿಸಲು ಕೇಂದ್ರ ಮೋಟಾರ್ ವಾಹನ ಕಾಯಿದೆ, 1988 ರ ಸೆಕ್ಷನ್ 185 ರನ್ನು ತಿದ್ದುಪಡಿ ಮಾಡುವ ಮೂಲಕ ತಡೆಗಟ್ಟುವಿಕೆಯನ್ನು ಹೆಚ್ಚಿಸುವ ಅಗತ್ಯವಿರುತ್ತದೆ. "ಬುಕಿಂಗ್ ಪ್ರಕರಣಗಳ ಹೊರತಾಗಿ, ಕುಡಿದು ವಾಹನ ಚಾಲನೆ ಮಾಡುವ ದುಷ್ಪರಿಣಾಮಗಳ ಬಗ್ಗೆ ರಸ್ತೆ ಬಳಕೆದಾರರಿಗೆ ಶಿಕ್ಷಣ ನೀಡಲು ನಿರಂತರ ಜಾಗೃತಿ ಅಭಿಯಾನದ ಅಗತ್ಯವೂ ಇದೆ" ಎಂದು ಸಂಚಾರಿ ಮತ್ತು ರಸ್ತೆ ಸುರಕ್ಷತೆ ಮತ್ತು ಅಪರಾಧ ಮತ್ತು ತಾಂತ್ರಿಕ ಸೇವೆಗಳ ಆಯುಕ್ತರಾದ ಎಂಎ ಸಲೀಂ ಅವರು ಹೇಳಿದರು.

MOST READ: ಮುಂಬೈನಲ್ಲಿ ಶುರುವಾದ ಬಜಾಜ್ ಕ್ಯೂಟ್ ಸಂಚಾರ - ಇದು ದೇಶದ ಮೊದಲ 4 ವ್ಹೀಲರ್ ಆಟೋ ರಿಕ್ಷಾ

ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

ದಯವಿಟ್ಟು ಕುಡಿದು ವಾಹನ ಚಾಲನೆ ಮಾಡಬೇಡಿ

ಇಡೀ ಜಗತ್ತಿನಲ್ಲಿ ನಡೆಯುವ ಹೆಚ್ಚಿನ ವಾಹನ ಅಪಘಾತಗಳ ಹಿಂದಿರುವ ಪ್ರಮುಖ ಶಕ್ತಿ ಆಲ್ಕೋಹಾಲ್. ನಿಶೆಯಲ್ಲಿ ವಾಹನ ಚಲಾಯಿಸಿ ಸಾವಿರಾರು ಜನರು ರಸ್ತೆಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

ಕುಡಿದಿದ್ದರೆ ಖಂಡಿತವಾಗಿಯೂ ಸ್ಟಿರಿಂಗ್ ಮುಟ್ಟಬೇಡಿ. ಬಾರ್ ಅಥವಾ ಪಬ್ ಗೆ ಹೋಗಿದ್ದರೆ ಕುಡಿಯದ ವ್ಯಕ್ತಿಯೊಬ್ಬ ನಿಮ್ಮ ಜೊತೆಗಿರಲಿ. ಆತ ನಿಮ್ಮನ್ನು ಮನೆಯವರೆಗೆ ಸುರಕ್ಷಿತವಾಗಿ ತಲುಪಿಸಬಲ್ಲ. ಅದು ಸಾಧ್ಯವಾಗದಿದ್ದರೆ ಕಾರನ್ನು ಅಲ್ಲೇ ಬಿಟ್ಟು ಟ್ಯಾಕ್ಸಿ ಹತ್ತಿ.

Most Read Articles

Kannada
English summary
More Than 59000 Driving License Cancelled In Karnataka Due To Drunk And Drive. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X