ಎರಡು ವರ್ಷದಲ್ಲಿ 300ಕ್ಕು ಹೆಚ್ಚು ಡೀಲರ್‍‍ಶಿಪ್‍ಗಳು ಬಂದ್..! ಇದಕ್ಕೆ ಕಾರಣ.?

ವಾರಕ್ಕೆರಡು ಹೊಸ ವಾಹನಗಳು ಬಿಡುಗಡೆಯಾಗುತ್ತಿದ್ದರೂ ಸಹ ಮಾರಾಟದ ಸಂಖ್ಯೆಗಳಿಗೆ ಹೋಲಿಸಿದರೆ ಕಳೆದ ಮೂರು ತಿಂಗಳಿನಿಂದ ವಾಹನ ತಯಾರಕ ಸಂಸ್ಥೆಗಳು ಕಡಿಮೆ ಸಂಖ್ಯೆಯಲ್ಲಿ ತಮ್ಮ ಕಾರುಗಳನ್ನು ಮಾರಾಟ ಮಾಡಲಾಗಿದೆ ಅಂತ ಹೇಳಬಹುದು. ಇದರಿಂದ ಡೀಲರ್‍‍ಗಳಿಗೆ ಭಾರೀ ಪ್ರಮಾಣ ನಷ್ಟ ಅನುಭವಿಸುತ್ತಿದ್ದು, ದೇಶದ ಪ್ರಮುಖ ನಗರಗಳಲ್ಲಿ ಕೆಲವು ಮುಖ್ಯ ಕಾರು ಮಾರಾಟ ಮಳಿಗೆಗಳೇ ಬಂದ್ ಆಗಿವೆ.

ಎರಡು ವರ್ಷದಲ್ಲಿ 300ಕ್ಕು ಹೆಚ್ಚು ಡೀಲರ್‍‍ಶಿಪ್‍ಗಳು ಬಂದ್..! ಇದಕ್ಕೆ ಕಾರಣ.?

ಹೌದು, ದೇಶಿಯ ಆಟೋಮೊಬೈಲ್ ಉದ್ಯಮಕ್ಕೆ ತಿಂಗಳಿಗೊಂದು ಹೊಸ ಸಂಸ್ಥೆ ವಾರಕ್ಕೆರಡು ಹೊಸ ವಾಹನಗಳು ಬಿಡುಗಡೆಯಾಗುತ್ತಿದ್ದರೂ ಸಹ ಗ್ರಾಹಕರು ಅವುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಇವುಗಳಿಗೆ ಕಾರಣವೆಂದರೆ ಒಂದು, ಎಲೆಕ್ಟ್ರಿಕ್ ವಾಹನಗಳ ಬಳಕೆ, ಇಂಧನ ಬೆಲೆ ಏರಿಳಿಕೆ, ಹೆಚ್ಚು ವೈಶಿಷ್ಟ್ಯತೆ ಪಡೆದ ಕಾರುಗಳು ದುಬಾರಿ ಬೆಲೆಯಲ್ಲಿ ಹಾಗು ಕಡಿಮೆ ಬೆಲೆಯಲ್ಲಿ ದೊರೆಯುತ್ತಿರುವ ಕಾರುಗಳು ಅಷ್ಟಾಗಿ ಸೇಫ್ಟಿ ಫೀಚರ್‍‍ಗಳನ್ನು ಪಡೆದಿಲ್ಲವೆಂಬ ಕಾರಣಗಳು ಕೇಳಿ ಬರುತ್ತಿವೆ.

ಎರಡು ವರ್ಷದಲ್ಲಿ 300ಕ್ಕು ಹೆಚ್ಚು ಡೀಲರ್‍‍ಶಿಪ್‍ಗಳು ಬಂದ್..! ಇದಕ್ಕೆ ಕಾರಣ.?

ಈ ನಿಟ್ಟಿನಲ್ಲಿ ಸರಿಯಾದ ಮಾರಾಟ ಇಲ್ಲವಾದ ಕಾರಣ ಕಳೆದ ಎರಡು ವರ್ಷಗಳಲ್ಲಿ ಸುಮಾರು 300ಕ್ಕು ಹೆಚ್ಚಿನ ಡೀಲರ್‍‍ಗಳು ತಮ್ಮ ವ್ಯಾಪಾರವನ್ನು ಸ್ಥಗಿತಗೊಳಿಸಲಾಗಿದ್ದು, ಇದರಿಂದ ಸುಮಾರು 3000ಕ್ಕು ಹೆಚ್ಚಿನ ಮಂದಿ ನಿರುದ್ಯೋಗಿಗಳಾಗಿದ್ದಾರೆ.

ಎರಡು ವರ್ಷದಲ್ಲಿ 300ಕ್ಕು ಹೆಚ್ಚು ಡೀಲರ್‍‍ಶಿಪ್‍ಗಳು ಬಂದ್..! ಇದಕ್ಕೆ ಕಾರಣ.?

ಮಾಹಾರಾಷ್ಟ್ರದಲ್ಲಿ 56, ಬಿಹಾರ್‌ದಲ್ಲಿ 26 ಡೀಲರ್‍‍ಗಳು ಮಾತ್ರವಲ್ಲದೆ 23 ಹ್ಯುಂಡೈ ಶೋರುಂಗಳು ಹಾಗು ಮಾರುತಿ ಸುಜುಕಿ, ಮಹೀಂದ್ರಾ, ಹೋಂಡಾ ಮತ್ತು ಟಾಟಾ ಮೋಟಾರ್ಸ್ ಸೇರಿದಂತೆ ಎಲ್ಲಾ ವಾಹನ ತಯಾರಕ ಸಂಸ್ಥೆಗಳ 9 ರಿಂದ 12 ಡೀಲರ್‍‍ಶಿಪ್‍ಗಳು ಬಂದ್ ಆಗಿವೆ.

ಎರಡು ವರ್ಷದಲ್ಲಿ 300ಕ್ಕು ಹೆಚ್ಚು ಡೀಲರ್‍‍ಶಿಪ್‍ಗಳು ಬಂದ್..! ಇದಕ್ಕೆ ಕಾರಣ.?

ಇನ್ನು ದೇಶದಲ್ಲಿನ ಪ್ರಮುಖ ನಗರಗಳಾದ ಮುಂಬೈನಲ್ಲಿ 26, ಪುಣೆಯಲ್ಲಿ 21 ಮತ್ತು ಇನ್ನಿತರೆ ನಗರಗಳಲ್ಲಿ ಸುಮಾರು 10ಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಡೀಲರ್‍‍ಶಿಪ್‍‍ಗಳು ಬಂದ್ ಆಗಿವೆ. ವಿದ್ಯುತ್ ವಾಹನಗಳ ಖರೀದಿಯ ಮೇಲೆ ಸರ್ಕಾರ ನೀಡುತ್ತಿರುವ ಸಬ್ಸಿಡಿಯಿಂದಾಗಿ ಗ್ರಾಹಕರಲ್ಲಿ ಒಂದು ಭರವಸೆ ಬಂದರೂ ಸಹ ಸರಿಯಾದ ಚಾರ್ಜಿಂಗ್ ಸ್ಟೇಷನ್‍‍ಗಳ ಸೌಲತ್ತುಗಳಿಲ್ಲದೆ ಅವುಗಳನ್ನು ಖರೀದಿಸಲು ಸಹ ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ.

ಎರಡು ವರ್ಷದಲ್ಲಿ 300ಕ್ಕು ಹೆಚ್ಚು ಡೀಲರ್‍‍ಶಿಪ್‍ಗಳು ಬಂದ್..! ಇದಕ್ಕೆ ಕಾರಣ.?

ಇದಲ್ಲದೇ ನಗರ ಪ್ರದೇಶಗಳಲಿಯೂ ಸಹ ಹೆಚ್ಚುತ್ತಿರುವ ಓಲಾ ಮತ್ತು ಓಬರ್‍‍ನಂತಹ ಆಪ್ ಆಧಾರಿತ ಟ್ಯಾಕ್ಸಿ ಸೇವೆಗೆಳಿಂದಾಗಿ ಜನರು ಸ್ವಂತ ವಾಹನವನ್ನು ಖರೀದಿಸದೆಯೆ ಟ್ಯಾಕ್ಸಿ ಮತ್ತು ಮೆಟ್ರೋ ಹಾಗು ಇನ್ನಿತರೆ ಸಂಚಾರಿ ಸಾರಿಗೆಯಲ್ಲಿ ಪ್ರಯಾಣಿಸುತ್ತಿದ್ದಾರಂತೆ.

ಎರಡು ವರ್ಷದಲ್ಲಿ 300ಕ್ಕು ಹೆಚ್ಚು ಡೀಲರ್‍‍ಶಿಪ್‍ಗಳು ಬಂದ್..! ಇದಕ್ಕೆ ಕಾರಣ.?

ಕೋಟಿಗಟ್ಟಲೇ ಬಂಡವಾಳ ಹಾಕಿ ಒಂದು ಡೀಲರ್‍‍ಶಿಪ್ ಅನ್ನು ಪ್ರಾರಂಭಿಸುವ ಡೀಲರ್‍‍ಗಳಿಗೆ ಸದ್ಯ ಮಾರುಕಟ್ಟೆಯಲ್ಲಿ ಕಳಪೆ ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವ ವಾಹನಗಳಿಂದ ಭಾರೀ ಮೊತ್ತದಲ್ಲಿ ನಷ್ಟವಾಗಿದ್ದು, ಇದರಿಂದ ಅಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳು ಸಹ ಇದೀಗ ನಿರುದ್ಯೋಗಿಗಳಾಗಿದ್ದಾರೆ.

ಎರಡು ವರ್ಷದಲ್ಲಿ 300ಕ್ಕು ಹೆಚ್ಚು ಡೀಲರ್‍‍ಶಿಪ್‍ಗಳು ಬಂದ್..! ಇದಕ್ಕೆ ಕಾರಣ.?

ಇನ್ನು ಇಂಧನ ಏರಿಕೆಯ ವಿಚಾರಕ್ಕೆ ಬಂದ್ರೆ ಕಳೆದ ವರ್ಷ ನಡೆದ ಇಂಧನ ಬೆಲೆಯ ಏರಿಳಿಕೆಯ ಪರಿಣಾಮದಿಂದಾಗಿ ಮಧ್ಯಮ ವರ್ಗದ ಗ್ರಾಹಕರು ನಮಗೆ ಯಾವ ವಾಹನವೂ ಬೇಡ, ನಾವು ಸಾರ್ವಜನಿಕ ಸಾರಿಗೆ ವಾಹನಗಳಲ್ಲಿಯೇ ಪ್ರಯಾಣಿಸುತ್ತೇವೆ ಎಂದು ಭಾವಿಸಿದ್ದರು.

ಎರಡು ವರ್ಷದಲ್ಲಿ 300ಕ್ಕು ಹೆಚ್ಚು ಡೀಲರ್‍‍ಶಿಪ್‍ಗಳು ಬಂದ್..! ಇದಕ್ಕೆ ಕಾರಣ.?

ಏಕೆಂದರೆ ಒಂದೇ ಬಾರಿ ಒಂದು ಲೀಟರ್‍‍ಗೆ ಸುಮಾರು ರೂ.90 ರಿಂದ ರೂ.105ವರೆಗು ಏರಿಕೆಯಾಗಿತ್ತು, ತದ ನಂತರ ಸುಮಾರು 2 ತಿಂಗಳ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಕಡಿಮೆಯಾಗಿದೆ ಅಂತಾನೆ ಹೇಳ್ಬೋದು. ಹಾಗೆಯೆ ಕಳೆದ ವರ್ಷ ಕೇರಳದಲ್ಲಿ ಸಂಭವಿದ ಭೀಕರ ಪ್ರವಾಹದಿಂದಾಗಿ ಕೂಡಾ ಹಲವಾರು ಡೀಲರ್‍‍ಗಳು ಮತ್ತು ವಾಹನ ತಯಾರಕ ಸಂಸ್ಥೆಗಳು ಭಾರೀ ಮೊತ್ತದಲ್ಲಿ ನಷ್ಟವನ್ನು ಅನುಭವಿಸಿದ್ದಾರೆ.

ಎರಡು ವರ್ಷದಲ್ಲಿ 300ಕ್ಕು ಹೆಚ್ಚು ಡೀಲರ್‍‍ಶಿಪ್‍ಗಳು ಬಂದ್..! ಇದಕ್ಕೆ ಕಾರಣ.?

ಹೀಗಿರುವಾಗ ಇನ್ನು ಭವಿಷ್ಯದಲ್ಲಿ ಇನ್ನೆಷ್ಟು ಡೀಲರ್‍‍ಗಳು ತಮ್ಮ ವ್ಯಾಪಾರವನ್ನು ಸ್ಥಗಿತಗೊಳಿಸಲಿದ್ದಾರೆ ಎಂಬುದನ್ನು ಕಾಯ್ದು ನೋಡಬೇಕಿದ್ದು, ಇದರಿಂದ ವಾಹನ ತಯಾರಕ ಸಂಸ್ಥೆಗಳು ನಷ್ಟ ತಪ್ಪಿಸಲು ಯಾವ ರೀತಿಯ ನಿರ್ಣಯವನು ತೆಗೆದುಕೊಳ್ಳಲಿದ್ದಾರೆ ಎಂದು ಕಾಯ್ದು ನೋಡಬೇಕಿದೆ.

ಎರಡು ವರ್ಷದಲ್ಲಿ 300ಕ್ಕು ಹೆಚ್ಚು ಡೀಲರ್‍‍ಶಿಪ್‍ಗಳು ಬಂದ್..! ಇದಕ್ಕೆ ಕಾರಣ.?

ಹಾಗೆಯೇ ದೇಶದಲ್ಲಿರುವ ಹಲವಾರು ಡೀಲರ್‍‍ಗಳು ಮತ್ತು ಸರ್ವೀಸ್ ಸೆಂಟರ್‍‍‍ಗಳು ಸಹ ಗ್ರಾಹಕರಿಗೆ ಮೋಸ ಮಾಡುತ್ತಿರುವುದಾಗಿ ಸಹ ತಿಳಿದು ಬಂದಿದ್ದು, ಈ ಕುರಿತಾದ ಹಲವಾರು ಮಾಹಿತಿಯನ್ನು ನಾವೀಗಾಗಲೆ ನಿಮಗೆ ನೀಡಿದ್ದೇವೆ. ನೀವು ಸಹ ವಾಹನವನ್ನು ಖರೀದಿ ಮಾಡುವಾಗ ಹಲವಾರು ಭಾರೀ ಯೋಚನೆ ಮಾಡಿ..

Source: Team-Bhp

ಎರಡು ವರ್ಷದಲ್ಲಿ 300ಕ್ಕು ಹೆಚ್ಚು ಡೀಲರ್‍‍ಶಿಪ್‍ಗಳು ಬಂದ್..! ಇದಕ್ಕೆ ಕಾರಣ.?

ಗ್ರಾಹಕನಿಗೆ ಮೋಸ ಮಾಡಲು ಹೋಗಿ ಭಾರೀ ಮೊತ್ತದಲ್ಲಿ ದಂಡ ಪಾವತಿಸಿದ ಡೀಲರ್

ಹೊಸ ವಾಹನ ಖರೀದಿಸುವಾಗ ಇನ್ಮುಂದೆ ನೀವು ಹತ್ತು ಬಾರಿ ಯೋಚಿಸಿ ವ್ಯವಹಾರ ಮಾಡುವುದು ಒಳಿತು. ಇಲ್ಲವಾದ್ರೆ ಸಾವಿರಾರು ರೂಪಾಯಿ ಖರ್ಚು ಮಾಡಿ ಹೊಸ ದ್ವಿಚಕ್ರ ವಾಹನ ಖರೀದಿ ಮಾಡಿ ಸಂಕಷ್ಟಕ್ಕೆ ಸಿಲುಕುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದನ್ನೆಲ್ಲಾ ಯಾಕೆ ಹೇಳ್ತಾ ಇದೀವಿ ಅಂದ್ರೆ, ಪಂಚಕುಲಾನಲ್ಲಿರುವ ಹೋಂಡಾ ಶೋರುಂನವರು ರಿಜಿಸ್ಟ್ರೇಷನ್ ಎಂಬ ಹೆಸರಿನಲ್ಲಿ ಸುಮಾರು ರೂ.500 ಹೆಚ್ಚು ಕೇಳಿದ್ದು, ಇದೀಗ ತಾವೆ ಸ್ವತಃ ರೂ.5000 ಮಾಲೀಕನಿಗೆ ಹಿಂತಿರುಗಿಸುವ ಪರಿಸ್ಥಿತಿ ಎದುರಾಗಿದೆ.

ಎರಡು ವರ್ಷದಲ್ಲಿ 300ಕ್ಕು ಹೆಚ್ಚು ಡೀಲರ್‍‍ಶಿಪ್‍ಗಳು ಬಂದ್..! ಇದಕ್ಕೆ ಕಾರಣ.?

ಕರ್ನಲ್ ಮೂಲದಲ್ಲಿರುವ ಸೊಂಕ್ರ ಹಳ್ಳಿಯ ನಿವಾಸಿಯಾದ ಸ್ಮಾಜ್‍ಪಲ್ ಸಿಂಗ್ ಎಂಬುವವರು ನವೆಂಬರ್ 21, 2017ರಂದು ಹೊಸ ಹೋಂಡಾ ಆಕ್ಟೀವಾ 4ಜಿ ಸ್ಕೂಟರ್ ಅನ್ನು ಪಂಚಕುಲನಲ್ಲಿರುವ ಹೋಂಡಾ ಮೋಟಾರ್‍‍ಸೈಕಲ್ & ಸ್ಕೂಟರ್ ಇಂಡಿಯಾ ಪ್ರೈ.ಲಿ. ಜೋಷಿ ಆಟೋ ಸ್ಕ್ಯಾನ್ಸ್ ನಲ್ಲಿ ಖರೀದಿ ಮಾಡಿದ್ದರು.

ಎರಡು ವರ್ಷದಲ್ಲಿ 300ಕ್ಕು ಹೆಚ್ಚು ಡೀಲರ್‍‍ಶಿಪ್‍ಗಳು ಬಂದ್..! ಇದಕ್ಕೆ ಕಾರಣ.?

ಹೊಸದಾಗಿ ಹೋಂಡಾ 4 ಆಕ್ಟೀವಾ 4ಜಿ ಸ್ಕೂಟರ್ ಅನ್ನು ಖರೀಸಿದುವ ಸಮಯದಲ್ಲಿ ಸ್ಕೂಟರ್‍‍ನ ಮೊತ್ತವನ್ನು ಸೇರಿ ರಿಜಿಸ್ಟ್ರೇಶಷ ವೆಚ್ಚವನ್ನು ಸಹ ಪಾವತಿ ಮಾಡಲಾಗಿದೆ. ಆದರೆ ಇಲ್ಲಿ ವಿಚಾರ ಏನಪ್ಪಾ ಅಂದ್ರೆ ರಿಜಿಸ್ಟ್ರೇಷನ್‍‍ಗಾಗಿ ರೂ. 300, ತಾತ್ಕಾಲಿಕ ನೋಂದಣಿ ಶುಲ್ಕವಾಗಿ ರೂ. 150, ಪೋಸ್ಟಲ್ ಫೀ ಅಂತಾ ರೂ.30, ಸ್ಮಾರ್ಟ್ ಕಾರ್ಡ್‍‍ಗಾಗಿ ರೂ. 200 ಮತ್ತು ಮೋಟರ್ ವೆಹಿಕಲ್ ಟ್ಯಾಕ್ಸ್ ಎಂದು ರೂ.2,050 ಪಾವತಿಸಲಾಗಿದೆ.

ಎರಡು ವರ್ಷದಲ್ಲಿ 300ಕ್ಕು ಹೆಚ್ಚು ಡೀಲರ್‍‍ಶಿಪ್‍ಗಳು ಬಂದ್..! ಇದಕ್ಕೆ ಕಾರಣ.?

ರಿಜಿಸ್ಟ್ರೇಶಷನ್ ಫೀ ಎಂದು ಮೊತ್ತವಾಗಿ ರೂ. 2,730 ಪಾವತಿಸಬೇಕಾದ ಜಾಗದಲ್ಲಿ ಡೀಲರ್‍‍ಗಳು ರೂ. 479 ಹೆಚ್ಚಾಗಿ ಕೇಳಿ ಒಟ್ಟಾರೆಯಾಗಿ ರೂ. 3,209 ಪಡೆದುಕೊಂಡಿದ್ದಾರೆ. ಮೊದಲೇ ಅನುಮಾನಗೊಂಡ ಸ್ಕೂಟರ್ ಮಾಲೀಕನು ಹೆಚ್ಚಿನ ಹಣ ಏಕೆ ಪಡೆಯುತ್ತಿದ್ಡೀರಿ ಎಂದು ಕೇಳಿದಾಗ ಉತ್ತರ ನೀಡದ ಡೀಲರ್‍‍ಗಳ ಮೇಲೆ ದೂರನ್ನು ನೀಡಲಾಗಿದೆ.

ಎರಡು ವರ್ಷದಲ್ಲಿ 300ಕ್ಕು ಹೆಚ್ಚು ಡೀಲರ್‍‍ಶಿಪ್‍ಗಳು ಬಂದ್..! ಇದಕ್ಕೆ ಕಾರಣ.?

ಹೌದು, ತನಗಾದ ಮೋಸವನ್ನು ಸಹಿಸಲಾಗದ ಸ್ಮಾಜ್‍ಪಲ್ ಸಿಂಗ್‍ರವರು ತಕ್ಷಣವೇ ಮೊದಲಿಗೆ ಸ್ಥಳೀಯ ಪೋಲಿಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ ನಂತರ ಪಂಚಕುಲಾನಲ್ಲಿರುವ ಪಂಚಕುಲಾ ಜಿಲ್ಲಾ ನ್ಯಾಯಾಲಯಕ್ಕೆ ಹೋಗಿ ಡೀಲರ್‍‍ಗಳ ಮೇಲೆ ದೂರು ನೀಡಲಾಗಿದೆ.

ಎರಡು ವರ್ಷದಲ್ಲಿ 300ಕ್ಕು ಹೆಚ್ಚು ಡೀಲರ್‍‍ಶಿಪ್‍ಗಳು ಬಂದ್..! ಇದಕ್ಕೆ ಕಾರಣ.?

ಸ್ಮಾಜ್‍ಪಲ್ ಸಿಂಗ್‍‍ರವರ ದೂರಿನ ಮೇಲೆ ನ್ಯಾಯಾಲಯ ಹೋಂಡಾ ಡೀಲರ್ ಅವರನ್ನು ಕಣಿಸಿಕೊಳ್ಳಲು ಹೇಳಲಾಗಿದ್ದು, ನ್ಯಾಯಾಲಯದ ಮುಂದೆ ಶರಣಾದ ಹೋಂಡಾ ಸ್ಕೂಟರ್ ಡೀಲರ್‍‍ಗಳು ತಮ್ಮ ತಪ್ಪನ್ನು ಒಪ್ಪಿಕೊಳ್ಳಲಾಗಿದೆ. ಇದರಿಂದಾಗಿ ನ್ಯಾಯಲವು ಸರಿಯಾದ ಶಿಕ್ಷೆಯನ್ನು ವಿಧಿಸಲಾಗಿದೆ.

ಎರಡು ವರ್ಷದಲ್ಲಿ 300ಕ್ಕು ಹೆಚ್ಚು ಡೀಲರ್‍‍ಶಿಪ್‍ಗಳು ಬಂದ್..! ಇದಕ್ಕೆ ಕಾರಣ.?

ಮಾಲೀಕನಿಗೆ ರೂ. 5000 ದಂಡ ನೀಡುವಂತೆ ಕೋರ್ಟ್ ಆದೇಶ

ಡೀಲರ್‍‍ಗಳು ಹೌದು, ರಿಜಿಸ್ಟ್ರೇಷನ್‍‍ಗಾಗಿ ಸ್ಮಾಜ್‍ಪಲ್ ಅವರ ಹತ್ತಿರ ನಾವು ರೂ. 479 ಹೆಚ್ಚಾಗಿಯೆ ಪಡೆದ್ದಿದ್ದೆವೆ ಎಂದು ಒಪ್ಪಿಕೊಳ್ಳಲಾಗಿದ್ದು, ನ್ಯಾಯಾಲಯವು ಹೋಂಡಾ ಡೀಲರ್‍‍ಗಳು ಸ್ಮಾಜ್‍ಪಲ್ ಸಿಂಗ್‍‍ರವರಿಗೆ ರೂ. 5000 ಹಿಂತಿರುಗಿಸಬೇಕಾಗಿ ಆದೇಶವನ್ನು ನೀಡಿದೆ.

ಎರಡು ವರ್ಷದಲ್ಲಿ 300ಕ್ಕು ಹೆಚ್ಚು ಡೀಲರ್‍‍ಶಿಪ್‍ಗಳು ಬಂದ್..! ಇದಕ್ಕೆ ಕಾರಣ.?

ಅರೆ ಇಷ್ಟು ಸಣ್ಣ ಹಣಕ್ಕೆ ಕೋರ್ಟ್‍ಗೆ ಹೋಗುವ ಅನಿವಾರ್ಯತೆ ಏನಿದೆ ಎಂಬುದು ನಿಮ್ಮ ಪ್ರಶ್ನೆ ಇರಬಹುದು. ಒಂದು ರೂಪಾಯಿ ಹೆಚ್ಚಾಗಿ ತೆಗೆದುಕೊಂಡರೂ ಸಹ ಪ್ರಶ್ನಿಸುವ ಹಕ್ಕು ನಮಗೆ ಇದ್ದೇ ಇದೆ. ಏಕೆಂದರೆ ಅದು ನಮ್ಮ ಹಣ. ಒಂದೊಂದು ರೂಪಾಯಿಯನ್ನು ಕೂಡಿಡಲು ಪಡುವ ಕಷ್ಟ ನಮಗೆ ಮಾತ್ರವೇ ಗೊತ್ತು.

ಎರಡು ವರ್ಷದಲ್ಲಿ 300ಕ್ಕು ಹೆಚ್ಚು ಡೀಲರ್‍‍ಶಿಪ್‍ಗಳು ಬಂದ್..! ಇದಕ್ಕೆ ಕಾರಣ.?

ಅದರಲ್ಲಿಯು 500 ರೂ. ತಾನೆ ಏನಾಗುತ್ತೆ ಎಂದುಕೊಂಡರೆ ಅದು ತಪ್ಪು. ಏಕೆಂದರೆ ನಾವು ಪ್ರಶ್ನಿಸದಿದ್ದರೆ ನಾಳೆ ಮತ್ತೊಬ್ಬರಿಗೆ ಹೀಗೆ ಮೋಸ ಮಾಡುತ್ತಾರೆ. ಮೋಸ ಮಾಡಿ ಹೆಚ್ಚು ಹಣ ಸಂಪಾದನೆ ಮಾಡುತ್ತಾರೆ. ಹೀಗಾಗಿ ವಾಹನ ಖರೀದಿಸುವಾಗ ವ್ಯವಹಾರವನ್ನು ಸರಿಯಾಗಿ ಮಾಡಿದರೆ ಒಳಿತು.

Most Read Articles

Kannada
English summary
More Than Three Hundred Dealers Shut Down Their Business In Past 2 Years. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X