ಭಾರತದಲ್ಲಿ ಮಾರಾಟವಾಗುತ್ತಿರುವ ಹತ್ತು ದುಬಾರಿ ಎಸ್‍‍ಯು‍‍ವಿ ಕಾರುಗಳಿವು..!

ಎಸ್‍‍ಯುವಿ ವಾಹನಗಳು ಜಾಗತಿಕವಾಗಿ ಹೆಚ್ಚು ಮಾರಾಟವಾಗುತ್ತಿರುವ ವಾಹನಗಳಾಗಿವೆ. ದಶಕಗಳ ಹಿಂದೆ ಎಸ್‍‍ಯುವಿ ವಾಹನಗಳ ತಯಾರಿಕೆಯ ಬಗ್ಗೆ ಕೇಳಿದಾಗ ಉರಿದು ಬೀಳುತ್ತಿದ್ದ ಕೆಲವು ಜನಪ್ರಿಯ ಕಂಪನಿಗಳು ಸಹ ಇಂದು ತಮ್ಮ ಆದ್ಯತೆಗಳನ್ನು ಬದಲಾಯಿಸಿಕೊಂಡು ಎಸ್‍‍ಯುವಿ ಕಾರುಗಳನ್ನು ತಯಾರಿಸುತ್ತಿವೆ. ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಅಲ್ಟ್ರಾ ಲಗ್ಷುರಿ ಹಾಗೂ ಹೈ ಪರ್ಫಾಮೆನ್ಸ್ ಎಂಬ ಸೆಗ್‍‍ಮೆಂಟ್‍‍ಗಳು ಹುಟ್ಟಿಕೊಂಡಿವೆ.

ಭಾರತದ ಹತ್ತು ದುಬಾರಿ ಎಸ್‍‍ಯು‍‍ವಿಗಳಿವು

ಈ ಸೆಗ್‍‍ಮೆಂಟಿನಲ್ಲಿ ರೋಲ್ಸ್ ರಾಯ್ಸ್, ಬೆಂಟ್ಲಿ ಹಾಗೂ ಲ್ಯಾಂಬೊರ್ಗಿನಿ ಮುಂತಾದ ಕಂಪನಿಗಳು ಮುಂಚೂಣಿಯಲ್ಲಿವೆ. ಹೆಸರಾಂತ ಸ್ಪೋರ್ಟ್ಸ್ ಕಾರ್ ತಯಾರಕ ಕಂಪನಿಗಳಾದ ಆಸ್ಟರ್ ಮಾರ್ಟಿನ್ ಹಾಗೂ ಫೆರಾರಿಗಳೂ ಸಹ ಎಸ್‍‍ಯುವಿಗಳ ಅಭಿವೃದ್ದಿಯಲ್ಲಿ ತೊಡಗಿವೆ. ಭಾರತದಲ್ಲಿ ಎಸ್‍‍ಯುವಿ ವಾಹನಗಳು ಹೆಚ್ಚು ಜನಪ್ರಿಯವಾಗಿದ್ದು, ಟಾಪ್ ಮಾದರಿಯ ಎಸ್‍‍ಯುವಿಗಳು ಇಲ್ಲಿ ಸೂಪರ್ ಕಾರುಗಳ ಬೆಲೆಯಲ್ಲಿ ಮಾರಾಟವಾಗುತ್ತಿವೆ. ಭಾರತದಲ್ಲಿ ಮಾರಾಟವಾಗುವ ಹತ್ತು ಅತ್ಯಂತ ದುಬಾರಿ ಎಸ್‍‍ಯುವಿಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಭಾರತದ ಹತ್ತು ದುಬಾರಿ ಎಸ್‍‍ಯು‍‍ವಿಗಳಿವು

ರೋಲ್ಸ್ ರಾಯ್ಸ್ ಕಲಿನನ್

ಬೆಲೆ: ರೂ. 6.95 ಕೋಟಿ ರೂ

ರೋಲ್ಸ್ ರಾಯ್ಸ್ ಕಂಪನಿಯು ಕಳೆದ ವರ್ಷವಷ್ಟೇ ಎಸ್‌ಯುವಿ ಸೆಗ್‍‍‍ಮೆಂಟಿನಲ್ಲಿ ಕಾರು ಬಿಡುಗಡೆ ಮಾಡಲು ನಿರ್ಧರಿಸಿತ್ತು. ರೋಲ್ಸ್ ರಾಯ್ಸ್ ವಿಶ್ವದ ಅತ್ಯುತ್ತಮ ಹಾಗೂ ದುಬಾರಿ ಬೆಲೆಯ ಎಸ್‍‍ಯುವಿ ಬಿಡುಗಡೆಗೊಳಿಸಲು ನಿರ್ಧರಿಸಿ, ಎಲ್ಲಾ ಟೀಕೆಗಳ ಮಧ್ಯೆ ದುಬಾರಿ ಬೆಲೆಯ ಕಲಿನನ್ ಎಸ್‍‍ಯುವಿಯನ್ನು ಬಿಡುಗಡೆಗೊಳಿಸಿ ಎಲ್ಲಾ ಟೀಕಾಕಾರರ ಬಾಯಿ ಮುಚ್ಚಿಸಿತು. ರೂ.6.95 ಕೋಟಿ ಬೆಲೆ ಹೊಂದಿರುವ ಈ ಎಸ್‍‍ಯುವಿ, 6.75-ಲೀಟರ್ ಬೃಹತ್ ಗಾತ್ರದ ವಿ12 ಎಂಜಿನ್‌ ಹೊಂದಿದೆ. ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಅತ್ಯಂತ ದುಬಾರಿ ಬೆಲೆಯ ಎಸ್‌ಯುವಿಯಾಗಿದೆ. ಈ ಎಸ್‍‍ಯುವಿಯಲ್ಲಿ ಯಾರೂ ಊಹಿಸಲಾಗದಂತಹ ಎಲ್ಲಾ ರೀತಿಯ ಐಷಾರಾಮಿ ಸೌಕರ್ಯಗಳಿವೆ.

ಭಾರತದ ಹತ್ತು ದುಬಾರಿ ಎಸ್‍‍ಯು‍‍ವಿಗಳಿವು

ರೇಂಜ್ ರೋವರ್ 5.0 ಎಲ್‌ಡಬ್ಲ್ಯೂಬಿ ಎಸ್‌ವಿ ಆಟೋಬಯಾಗ್ರಫಿ

ಬೆಲೆ: ರೂ. 4.05 ಕೋಟಿ

ದುಬಾರಿ ಎಸ್‍‍ಯುವಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರೇಂಜ್ ರೋವರ್ ಎಸ್‍‍ಯು‍‍ವಿ ಅನೇಕರನ್ನು ಆಶ್ಚರ್ಯಗೊಳಿಸಬಹುದು. ರೂ. 4.05 ಕೋಟಿ ಬೆಲೆ ಹೊಂದಿರುವ ಜನಪ್ರಿಯ ಲ್ಯಾಂಡ್ ರೋವರ್ ರೇಂಜ್ ರೋವರ್ 5.0 ಎಲ್‌ಡಬ್ಲ್ಯೂಬಿ ಎಸ್‌ವಿ ಆಟೋಬಯೋಗ್ರಾಫಿ ಭಾರತದಲ್ಲಿ ಇದೀಗ ಮಾರಾಟವಾಗುತ್ತಿರುವ ಅತ್ಯಂತ ದುಬಾರಿ ಹಾಗೂ ಶಕ್ತಿಯುತ ಎಸ್‍‍ಯುವಿಗಳಲ್ಲಿ ಒಂದಾಗಿದೆ. ಈ ಎಸ್‍‍ಯುವಿಯಲ್ಲಿರುವ 558 ಬಿಎಚ್‌ಪಿ ಪವರ್ ಉತ್ಪಾದಿಸುವ 5.0 ಲೀಟರ್ ಪೆಟ್ರೋಲ್ ಎಂಜಿನ್, ಈ ಎಸ್‍‍ಯುವಿ ಹೆಚ್ಚು ಸಮಸ್ಯೆಯಿಲ್ಲದೆ ಕಠಿಣ ಭೂಪ್ರದೇಶದಲ್ಲಿ ಚಲಿಸುವಂತೆ ಮಾಡುತ್ತದೆ. ಬೇರೆ ಕಂಪನಿಗಳು ಈ ಸೆಗ್‍‍ಮೆಂಟಿನಲ್ಲಿ ಹೊಸದಾಗಿ ಬಂದಿರಬಹುದು. ಆದರೆ ಲ್ಯಾಂಡ್ ರೋವರ್ ಕಂಪನಿಯು ಆರಂಭದಿಂದಲೂ ಎಸ್‍‍ಯುವಿಗಳನ್ನು ತಯಾರಿಸುತ್ತಿದೆ.

ಭಾರತದ ಹತ್ತು ದುಬಾರಿ ಎಸ್‍‍ಯು‍‍ವಿಗಳಿವು

ಬೆಂಟ್ಲಿ ಬೆಂಟಾಯ್ಗಾ 6.0 ಡಬ್ಲ್ಯೂ12

ಬೆಲೆ: ರೂ. 3.85 ಕೋಟಿ

ಬೆಂಟ್ಲಿ ಕಂಪನಿಯು, ಇತ್ತೀಚಿಗಷ್ಟೇ ಅಲ್ಟ್ರಾ ಐಷಾರಾಮಿ ಎಸ್‌ಯುವಿ ಸೆಗ್‍‍ಮೆಂಟ್ ಪ್ರವೇಶಿಸಿದೆ ಎಂದು ಹಲವರು ಪರಿಗಣಿಸಿದ್ದಾರೆ. ಆದರೆ ಬೆಂಟಾಯ್ಗಾವನ್ನು ಆರಂಭಿಸಿದಾಗಿನಿಂದಲೂ ಬೆಂಟ್ಲಿ ಈ ಸೆಗ್‍‍ಮೆಂಟಿನಲ್ಲಿದೆ. ಬ್ರಿಟಿಷ್ ಮೂಲದ ಕಂಪನಿಯು ಪ್ರೀಮಿಯಂ ಎಸ್‍‍ಯುವಿಯನ್ನು ಬಿಡುಗಡೆಗೊಳಿಸಿದ ನಂತರ ಹೆಚ್ಚು ಜನಪ್ರಿಯವಾಯಿತು. ಬೆಂಟಾಯ್ಗಾ ಭಾರತದಲ್ಲಿ ಬಹಳ ಜನಪ್ರಿಯವಾಗಿದ್ದು, ಭಾರತದ ರಸ್ತೆಗಳಲ್ಲಿ ಈ ಎಸ್‍‍ಯುವಿಯ ಹಲವಾರು ವಾಹನಗಳನ್ನು ಕಾಣಬಹುದಾಗಿದೆ. ರೂ.3.85 ಕೋಟಿ ಬೆಲೆ ಹೊಂದಿರುವ, 6.0ಲೀಟರ್‍‍ನ ಬೃಹತ್ ಡಬ್ಲ್ಯು12 ಎಂಜಿನ್‌ ಹೊಂದಿರುವ ಈ ಎಸ್‍‍ಯುವಿ ಅತ್ಯುತ್ತಮ ಲಗ್ಷುರಿಗಳನ್ನು ನೀಡುತ್ತಿದೆ.

ಭಾರತದ ಹತ್ತು ದುಬಾರಿ ಎಸ್‍‍ಯು‍‍ವಿಗಳಿವು

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಲ್ಯಾಂಬೊರ್ಗಿನಿ ಉರುಸ್

ಬೆಲೆ: ರೂ. 3.0 ಕೋಟಿ

ಕಾರು ಪ್ರಿಯರ ಪ್ರಕಾರ ಲ್ಯಾಂಬೊರ್ಗಿನಿ ಕಂಪನಿಯು ವಿಶ್ವದ ಅತ್ಯುತ್ತಮ ಸ್ಪೋರ್ಟ್ಸ್, ಸೂಪರ್, ಹೈಪರ್ ಕಾರುಗಳನ್ನು ನಿರ್ಮಿಸಿದೆ. ಕಳೆದ ವರ್ಷ ಬಿಡುಗಡೆಯಾದ ಉರುಸ್ ಬೆಂಟ್ಲಿ ಎಸ್‍‍ಯು‍‍ವಿ ಕಾರು, ಬೆಂಟಾಯ್ಗಾ ಸ್ಪೋರ್ಟ್ ಕಾರು ಬಿಡುಗಡೆಯಾಗುವವರೆಗೂ ಪ್ರಪಂಚದಲ್ಲಿಯೇ ಅತಿ ವೇಗದಲ್ಲಿ ಅಧಿಕ ಸಂಖ್ಯೆಯಲ್ಲಿ ತಯಾರಾದ ಕಾರು ಎಂಬ ಹೆಗ್ಗಳಿಕೆಯನ್ನು ಹೊಂದಿತ್ತು.

ಭಾರತದ ಹತ್ತು ದುಬಾರಿ ಎಸ್‍‍ಯು‍‍ವಿಗಳಿವು

ರೂ.3.0 ಕೋಟಿ ಬೆಲೆಯನ್ನು ಹೊಂದಿರುವ ಎಸ್‌ಯುವಿಯು ಈಗಾಗಲೇ ಭಾರತದಲ್ಲಿ ವೇಗವಾಗಿ ಮಾರಾಟವಾಗುತ್ತಿರುವ ವಾಹನವಾಗಿದೆ. ಲ್ಯಾಂಬೊರ್ಗಿನಿ ಕಂಪನಿಯ ಕಾರುಗಳಲ್ಲಿಯೇ ಮೊದಲನೆಯದು ಎನ್ನಲಾದ 4 ಲೀಟರ್ ಟ್ವಿನ್ ಟರ್ಬೋಚಾರ್ಜ್ಡ್ ವಿ8 ಎಂಜಿನ್ ಹೊಂದಿರುವ ಉರುಸ್ 641 ಬಿಎಚ್‌ಪಿ ಪವರ್ ಉತ್ಪಾದಿಸುತ್ತದೆ. ಸದ್ಯಕ್ಕೆ ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯಂತ ಬಲಶಾಲಿ ಎಸ್‍‍ಯುವಿಗಳಲ್ಲಿ ಒಂದಾಗಿದೆ.

ಭಾರತದ ಹತ್ತು ದುಬಾರಿ ಎಸ್‍‍ಯು‍‍ವಿಗಳಿವು

ಲೆಕ್ಸಸ್ ಎಲ್ಎಕ್ಸ್ 570

ಬೆಲೆ: ರೂ. 2.33 ಕೋಟಿ

ಸಾಮಾನ್ಯವಾಗಿ ಅತ್ಯಂತ ದುಬಾರಿ ವಾಹನಗಳ ಬಗ್ಗೆ ಮಾತನಾಡುವಾಗ ಜಪಾನಿನ ವಾಹನಗಳನ್ನು ಪರಿಗಣಿಸುವುದಿಲ್ಲ ಆದರೆ ಎಸ್‍‍ಯುವಿಗಳ ಬಗ್ಗೆ ಮಾತನಾಡುವಾಗ, ಲೆಕ್ಸಸ್ ಎಲ್ಎಕ್ಸ್ 570 ಕಾರಿನ ಬಗ್ಗೆ ಮಾತನಾಡಲೇ ಬೇಕಾಗುತ್ತದೆ. ಇದು ಮೂಲತಃ ಟೊಯೋಟಾ ಕಂಪನಿಯ ಲ್ಯಾಂಡ್ ಕ್ರೂಸರ್ ಆಗಿದ್ದರೂ, ಲೆಕ್ಸಸ್ ಕಂಪನಿಯು ತಂತ್ರಜ್ಞಾನ ಹಾಗೂ ವೈಶಿಷ್ಟ್ಯಗಳನ್ನು ಅಳವಡಿಸಿದೆ. ಇಂಟಿರಿಯರ್‍‍ನಲ್ಲಿ ಸವಾರರಿಗೆ ಆರಾಮದಾಯಕವಾದ ಅನುಭವವನ್ನು ನೀಡಲಿದೆ. 362 ಬಿಎಚ್‌ಪಿ ಪವರ್ ಉತ್ಪಾದಿಸುವ 5.7ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಲೆಕ್ಸಸ್ ಎಲ್ಎಕ್ಸ್ 570 ಎಸ್‍‍ಯುವಿಯು ಭಾರತದಲ್ಲಿ ರೂ.2.33 ಕೋಟಿ ಬೆಲೆಯನ್ನು ಹೊಂದಿದೆ.

ಭಾರತದ ಹತ್ತು ದುಬಾರಿ ಎಸ್‍‍ಯು‍‍ವಿಗಳಿವು

ಮರ್ಸಿಡಿಸ್-ಎಎಂಜಿ ಜಿ 63

ಬೆಲೆ: ರೂ. 2.19 ಕೋಟಿ

ದಶಕಗಳಿಂದ ಅಪ್ರತಿಮ ಆಫ್ ರೋಡ್ ವಾಹನಗಳಲ್ಲಿ ಒಂದಾದ ಮರ್ಸಿಡಿಸ್ ಜಿ ವ್ಯಾಗನ್ ತನ್ನ ಎಎಂಜಿಯಲ್ಲಿರುವ ನಿಜವಾದ ವಾಹನವಾಗಿದೆ. ಎಎಂಜಿ ಟ್ಯೂನ್ಡ್ ಜಿ-ವ್ಯಾಗನ್ ವಾಹನವನ್ನು ವಿಶ್ವದ ಮೊದಲ ಪರ್ಫಾಮೆನ್ಸ್ ಅಥವಾ ಕ್ರೀಡಾ ಎಸ್‍‍ಯು‍‍‍‍ವಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇಟ್ಟಿಗೆಯಂತಹ ಆಕಾರವನ್ನು ಹೊಂದಿದ್ದರೂ, ಜಿ-ವ್ಯಾಗನ್ ಈ ಸೆಗ್‍‍ಮೆಂಟಿನಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸಿದೆ. ಜಿ 63 ಎಎಂಜಿ ವಿಶ್ವದಾದ್ಯಂತ ಸೆಲೆಬ್ರಿಟಿಗಳ ನೆಚ್ಚಿನ ವಾಹನವಾಗಿದ್ದು, ಫೈರ್‌ಬ್ರೀಥಿಂಗ್ 4.0 ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್‌ ಹೊಂದಿದ್ದು, ಫೆರಾರಿ 458 ಇಟಾಲಿಯಾಗಿಂತ ಹೆಚ್ಚಿನ ಪ್ರಮಾಣದ, 569 ಬಿಎಚ್‌ಪಿ ಪವರ್ ಉತ್ಪಾದಿಸುತ್ತದೆ. ಜಿ63 ಎಎಂಜಿಯ ಬೆಲೆಯು ದೇಶಿಯ ಮಾರುಕಟ್ಟೆಯಲ್ಲಿ ರೂ.2.19 ಕೋಟಿಗಳಾಗಿದೆ. ಈ ಎಸ್‍‍ಯುವಿಯ ಬೆಲೆಯು ಹಲವಾರು ಸ್ಪೋರ್ಟ್ಸ್ ಹಾಗೂ ಐಷಾರಾಮಿ ಕಾರುಗಳಿಗಿಂತ ಹೆಚ್ಚು ದುಬಾರಿಯಾಗಿದೆ.

ಭಾರತದ ಹತ್ತು ದುಬಾರಿ ಎಸ್‍‍ಯು‍‍ವಿಗಳಿವು

ಪೋರ್ಷೆ ಕೇಯೆನ್ ಟರ್ಬೊ

ಬೆಲೆ: ರೂ. 1.92 ಕೋಟಿ

2002 ರಲ್ಲಿ ಪೋರ್ಷೆ ಕಂಪನಿಯು ಸ್ಪೋರ್ಟ್ಸ್ ಕಾರ್‌ನಂತಹ ಹಾಗೂ ಪರ್ವತಗಳಲ್ಲಿ ಚಲಿಸುವಷ್ಟು ಶಕ್ತಿಯುತವಾದ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಎಸ್‍‍ಯುವಿ ತಯಾರಿಸಲು ನಿರ್ಧರಿಸಿದಾಗ, ಜನರು ಈ ಪರಿಕಲ್ಪನೆಯ ಬಗ್ಗೆ ಅಷ್ಟು ಉತ್ಸಾಹ ಹೊಂದಿರಲಿಲ್ಲ. ಈಗ 2019 ರಲ್ಲಿ, ಸ್ಟಟ್‌ಗಾರ್ಟ್ ಮೂಲದ ಕಂಪನಿಯು ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಜನಪ್ರಿಯವಾಗಿದ್ದು, ಕೇಯೆನ್ ಎಸ್‍‍ಯು‍‍ವಿ ಈ ಸೆಗ್‍‍ಮೆಂಟಿನಲ್ಲಿ ಅತ್ಯುತ್ತಮವಾಗಿ ಮಾರಾಟವಾಗುತ್ತಿರುವ ವಾಹನಗಳಲ್ಲಿ ಒಂದಾಗಿದೆ. ಬಹಳಷ್ಟು ಜನ ಕೇಯೆನ್ ಎಸ್‍‍ಯು‍‍ವಿಯನ್ನು ಮೊದಲ ಸ್ಪೋರ್ಟ್ಸ್ ಕ್ರಾಸ್ಒವರ್ ಎಸ್‍‍ಯುವಿಯೆಂದು ಪರಿಗಣಿಸುತ್ತಾರೆ. ಈ ಎಸ್‍‍ಯುವಿ ಟಾಪ್ ಎಸ್‌ಯುವಿಗಳ ಪೈಕಿ ಒಂದಾಗಿದೆ. ಈ ಸರಣಿಯಲ್ಲಿನ ಅತ್ಯಂತ ದುಬಾರಿ ಮಾದರಿಯೆಂದರೆ ಕೇಯೆನ್ ಟರ್ಬೊ. ಈ ಎಸ್‍‍ಯುವಿಯ ಬೆಲೆಯು ಭಾರತದಲ್ಲಿ ರೂ.1.92 ಕೋಟಿಗಳಾಗಿದೆ.

ಭಾರತದ ಹತ್ತು ದುಬಾರಿ ಎಸ್‍‍ಯು‍‍ವಿಗಳಿವು

ಮರ್ಸಿಡಿಸ್-ಎಎಂಜಿ ಜಿಎಲ್ಎಸ್

ಬೆಲೆ: ರೂ. 1.92 ಕೋಟಿ

ಮರ್ಸಿಡಿಸ್-ಬೆಂಝ್ ಕಂಪನಿಯ ಕಾರುಗಳ ಹೆಸರುಗಳನ್ನು ಸರಳೀಕರಿಸಲಾಗಿದೆ. ಬಹಳಷ್ಟು ವಾಹನಗಳು ಹೊಸ ಹೆಸರುಗಳನ್ನು ಪಡೆದಿವೆ. ಜಿಎಲ್ ಸೀರಿಸ್‍ ಸಹ ಹೆಚ್ಚು ಐಷಾರಾಮಿ ಹಾಗೂ ಪವರ್ ಹೊಂದುವುದರೊಂದಿಗೆ ಜಿಎಲ್ಎಸ್ ಆಗಿ ಮಾರ್ಪಟ್ಟಿದೆ. ಜಿಎಲ್ಎಸ್ ಎಸ್‌ಯುವಿಯ ಎಎಂಜಿ ಆವೃತ್ತಿಯು 5.5-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ವಿ 8 ಎಂಜಿನ್ ಹೊಂದಿದ್ದು, 577 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಭಾರತದಲ್ಲಿ ರೂ.1.92 ಕೋಟಿ ಬೆಲೆಯನ್ನು ಹೊಂದಿದೆ. ಈ ಪಟ್ಟಿಯಲ್ಲಿರುವ ಇತರ ಎಸ್‍‍ಯುವಿಗಳಿಗೆ ಹೋಲಿಸಿದರೆ ನೀಡುವ ಹಣಕ್ಕೆ ತಕ್ಕ ಪ್ರತಿಫಲ ಸಿಗಲಿದೆ.

ಭಾರತದ ಹತ್ತು ದುಬಾರಿ ಎಸ್‍‍ಯು‍‍ವಿಗಳಿವು

ಪೋರ್ಷೆ ಮಕಾನ್ ಟರ್ಬೊ ಪರ್ಫಾಮೆನ್ಸ್

ಬೆಲೆ: ರೂ.1.52 ಕೋಟಿ

ಪೋರ್ಷೆ ಈಗಾಗಲೇ ಕೈಯೆನ್ ಮಾದರಿಯ ಎಸ್‍‍ಯುವಿಯನ್ನು ಬಿಡುಗಡೆಗೊಳಿಸಿ ಜನಪ್ರಿಯವಾಗಿತ್ತು. ಜರ್ಮನಿ ಮೂಲದ ಕಂಪನಿಯು ಇದೇ ಸೂತ್ರಗಳನ್ನು ತನ್ನ ಹೊಸ ಕಾರಿನಲ್ಲಿ ಸಣ್ಣ ಪ್ರಮಾಣದಲ್ಲಿ ಅಳವಡಿಸಿಕೊಂಡಿತು. ಇದರ ಪರಿಣಾಮವಾಗಿ ಮಕಾನ್ ಎಸ್‍‍ಯು‍‍ವಿ ಹೊರಬಂತು. ಈ ಎಸ್‍‍ಯುವಿ ವಿಶ್ವ ಮಾರುಕಟ್ಟೆಯಲ್ಲಿ ಕಂಪನಿಯ ಜನಪ್ರಿಯ ಎಸ್‍‍ಯು‍‍ವಿಯಾಗಿದೆ. ಈ ಪಟ್ಟಿಯಲ್ಲಿನ ಆಯಾಮಗಳ ಪ್ರಕಾರ ಇದು ಅತ್ಯಂತ ಚಿಕ್ಕ ವಾಹನವಾಗಿದ್ದರೂ, ಟಾಪ್ ಎಂಡ್ ಮಕಾನ್ ಟರ್ಬೊ ಭಾರತದಲ್ಲಿ ರೂ.1.52 ಕೋಟಿ ಬೆಲೆಯನ್ನು ಹೊಂದಿದೆ. ಮಕಾನ್ 3.6-ಲೀಟರ್ ವಿ6 ಟ್ವಿನ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, 440 ಬಿಎಚ್‌ಪಿ ಪವರ್ ಉತ್ಪಾದಿಸುತ್ತದೆ.

ಭಾರತದ ಹತ್ತು ದುಬಾರಿ ಎಸ್‍‍ಯು‍‍ವಿಗಳಿವು

ಟೊಯೋಟಾ ಲ್ಯಾಂಡ್ ಕ್ರೂಸರ್

ಬೆಲೆ: ರೂ.1.47 ಕೋಟಿ

ಹಳೆಯ ಲ್ಯಾಂಡ್ ಕ್ರೂಸರ್ ಈ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಲ್ಯಾಂಡ್ ಕ್ರೂಸರ್ ದಶಕಗಳಿಂದ ವಿಶ್ವದ ಅತ್ಯಂತ ಜನಪ್ರಿಯ ಎಸ್‍‍ಯುವಿಗಳಲ್ಲಿ ಒಂದಾಗಿದ್ದು, ಪ್ರಸಿದ್ಧ ಟೊಯೋಟಾ ಕಂಪನಿಯ ವಿಶ್ವಾಸಾರ್ಹತೆಗೆ ಉದಾಹರಣೆಯಾಗಿದೆ. ಈ ಎಸ್‌ಯುವಿಯನ್ನು ಹಲವಾರು ರಾಜಕಾರಣಿಗಳು ಹಾಗೂ ಗಣ್ಯ ವ್ಯಕ್ತಿಗಳು ಬಳಸುತ್ತಿರುವುದರಿಂದ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ. ಬೃಹತ್ ಗಾತ್ರದ ವಿ8 ಚಾಲಿತ ಆಫ್ ರೋಡರ್‍‍ನ ಈಗಿರುವ ತಲೆಮಾರಿನ ಮಾದರಿಯ ಬೆಲೆ ಭಾರತದಲ್ಲಿರೂ.1.47 ಕೋಟಿಗಳಾಗಿದ್ದು, 261.5 ಬಿಎಚ್‌ಪಿ ಉತ್ಪಾದಿಸುತ್ತದೆ.

Most Read Articles

Kannada
English summary
10 most EXPENSIVE SUVs of India: Rolls Royce Cullinan to Lamborghini Urus - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X