ಎಂಪಿವಿ ವಾಹನಗಳ ಮಾರಾಟದಲ್ಲಿ ಭಾರಿ ಏರಿಕೆ

ಎಂಪಿವಿ ಅಥವಾ ಮಲ್ಟಿ ಪರ್ಪಸ್ ವೆಹಿಕಲ್ ಗಳ ಸೆಗ್ ಮೆಂಟಿನ ವಾಹನಗಳು ಭಾರತೀಯ ಮಾರುಕಟ್ಟೆಯಲ್ಲಿ ಭಾರಿ ಏರಿಕೆ ಕಂಡಿದ್ದು, 14% ನಷ್ಟು ಹೆಚ್ಚು ಮಾರಾಟ ಮಾಡಲಾಗಿದೆ. ಈ ಸೆಗ್ ಮೆಂಟಿನ ವಾಹನಗಳು ಭಾರತೀಯ ಮಾರುಕಟ್ಟೆಯಲ್ಲಿ ವೇಗವಾಗಿ ಪ್ರಗತಿಯನ್ನು ಕಾಣುತ್ತಿದ್ದು, ಎಂಪಿವಿ ವಾಹನಗಳಿಗೆ ಬೇಡಿಕೆ ಹೆಚ್ಚಾಗಿರುವುದೇ ಇದಕ್ಕೆ ಬಹು ಮುಖ್ಯ ಕಾರಣವಾಗಿದೆ.

ಎಂಪಿವಿ ವಾಹನಗಳ ಮಾರಾಟದಲ್ಲಿ ಭಾರಿ ಏರಿಕೆ

ದೇಶಿಯ ಮಾರುಕಟ್ಟೆಯಲ್ಲಿ ಬಹು ಜನಪ್ರಿಯವಾಗಿದ್ದ ಎಸ್‍ಯುವಿ ಗಳ ಮಾರಾಟ ಪ್ರಮಾಣವು ಮೊದಲ ಬಾರಿಗೆ ಕಳೆದ ದಶಕದಲ್ಲಿ ಕಡಿಮೆಯಾಗಿದೆ. ಎಸ್‍ಯುವಿ ವಾಹನಗಳ ಮಾರಾಟವು 2019ರ ಆರ್ಥಿಕ ವರ್ಷದಲ್ಲಿ 1% ನಷ್ಟು ಕಡಿಮೆಯಾಗಿದೆ. ಆದರೆ ಇವುಗಳ ಮಾರಾಟವು ಮುಂಬರುವ ದಿನಗಳಲ್ಲಿ ಚೇತರಿಕ ಕಾಣುವ ಸಾಧ್ಯತೆಗಳಿವೆ. ಎಂಪಿವಿ ವಾಹನಗಳ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ವಾಹನಗಳು ಅಧಿಕ ಸಂಖ್ಯೆಯಲ್ಲಿ ಬರುತ್ತಿರುವ ಕಾರಣ ಎಂಪಿವಿ ವಾಹನಗಳಿಗೆ ಬೇಡಿಕೆ ಜಾಸ್ತಿಯಾಗಿದೆ.

ಎಂಪಿವಿ ವಾಹನಗಳ ಮಾರಾಟದಲ್ಲಿ ಭಾರಿ ಏರಿಕೆ

ಮಾರುತಿ ಎರ್ಟಿಗಾ ಮತ್ತು ಮಹೀಂದ್ರಾ ಮರಾಜೋ ಈ ಮಾದರಿಯಲ್ಲಿ ಬರುತ್ತಿರುವ ಕೆಲವು ವಾಹನಗಳಾಗಿವೆ. ಈ ಎರಡೂ ವಾಹನಗಳ ಜೊತೆಯಲ್ಲಿ ಸತತವಾಗಿ ಉತ್ತಮ ಮಾರಾಟ ದಾಖಲಿಸುತ್ತಿರುವ ಟೊಯೋಟಾ ಇನೋವಾ ಕ್ರಿಸ್ಟಾ ಸಹ ಎಂಪಿವಿ ಸೆಗ್ ಮೆಂಟ್ ನಲ್ಲಿ ಮಾರಾಟ ಹೆಚ್ಚಾಗಲು ಕಾರಣವಾಗಿವೆ.

ಎಂಪಿವಿ ವಾಹನಗಳ ಮಾರಾಟದಲ್ಲಿ ಭಾರಿ ಏರಿಕೆ

ಈ ಎಲ್ಲಾ ಮೂರು ಎಂಪಿವಿ ಗಳು ಉತ್ತಮ ಇಂಟಿರಿಯರ್ ಮತ್ತು 7 ಸೀಟುಗಳ ಸೌಲಭ್ಯ ಸೇರಿದಂತೆ ಅನೇಕ ಫೀಚರ್ ಗಳನ್ನು ನೀಡುತ್ತಿರುವುದರಿಂದ ದೇಶಿಯ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಕಾಯ್ದು ಕೊಂಡಿವೆ. ಮಾರುತಿ ಎರ್ಟಿಗಾ ಮತ್ತು ಮಹೀಂದ್ರಾ ಹೊರತು ಪಡಿಸಿ, ಬೇರೆ ತಯಾರಕರು ಸಹ ಹೊಸ ಉತ್ಪನ್ನಗಳನ್ನು ಈ ಸೆಗ್ ಮೆಂಟ್ ನಲ್ಲಿ ಬಿಡುಗಡೆ ಮಾಡಲು ಉತ್ಸುಕರಾಗಿದ್ದಾರೆ.

ಎಂಪಿವಿ ವಾಹನಗಳ ಮಾರಾಟದಲ್ಲಿ ಭಾರಿ ಏರಿಕೆ

2019ರ ಕೊನೆಯ ಭಾಗದಲ್ಲಿ ಟಾಟಾ ಕಂಪನಿಯ ಹ್ಯಾರಿಯರ್ ಮಾದರಿಯ ಕ್ಯಾಸಿನಿ ಮತ್ತು ರೆನಾಲ್ಟ್ ಟ್ರೈಬರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಮಾರುತಿ ಸುಜುಕಿಯು ನವೆಂಬರ್ 2018ರಲ್ಲಿ ಹೊಸ ಎರ್ಟಿಗಾ ಎಂಪಿವಿ ಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಹೊಸ ಎರ್ಟಿಗಾ ವಾಹನದ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.7.44 ಲಕ್ಷಗಳು. ಸೆಪ್ಟೆಂಬರ್ 2018ರಲ್ಲಿ ಬಿಡುಗಡೆಯಾದ ಮಹೀಂದ್ರಾ ಮರಾಜೋ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ 9.99 ಲಕ್ಷಗಳು.

MUST READ: ಬಲೆನೋ ಕಾರುಗಳ ದರ ಏರಿಕೆ ಮಾಡಿದ ಮಾರುತಿ ಸುಜುಕಿ

ಎಂಪಿವಿ ವಾಹನಗಳ ಮಾರಾಟದಲ್ಲಿ ಭಾರಿ ಏರಿಕೆ

ಮಾರುತಿ ಎರ್ಟಿಗಾ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಮಾದರಿಯ ಎಂಜಿನ್ ಗಳಲ್ಲಿ ದೊರೆಯುತ್ತದೆ. ಆದರೆ ಮರಾಜೋ ಸದ್ಯಕ್ಕೆ ಡೀಸೆಲ್ ಎಂಜಿನ್ ಮಾದರಿಯಲ್ಲಿ ಮಾತ್ರ ದೊರೆಯುತ್ತದೆ.

ಎಂಪಿವಿ ವಾಹನಗಳ ಮಾರಾಟದಲ್ಲಿ ಭಾರಿ ಏರಿಕೆ

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಎಂಪಿವಿ ಸೆಗ್ ಮೆಂಟ್ 2019ರ ಆರ್ಥಿಕ ವರ್ಷದಲ್ಲಿ ಉತ್ತಮ ಬೆಳವಣಿಗೆಯನ್ನು ಕಂಡಿದೆ. ಪ್ಯಾಸೆಂಜರ್ ವಾಹನಗಳ ಮಾರಾಟವು ಕೇವಲ 2.4 % ಬೆಳವಣಿಗೆಯನ್ನು ಕಂಡಿದ್ದರೆ, ಎಂಪಿವಿ ಸೆಗ್ ಮೆಂಟ್ 14% ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಮುಂಬರುವ ದಿನಗಳಲ್ಲಿ ಇನ್ನೂ ಅನೇಕ ಮಾದರಿಯ ವಾಹನಗಳು ಎಂಪಿವಿ ಸೆಗ್ ಮೆಂಟ್ ನಲ್ಲಿ ಬಿಡುಗಡೆಯಾಗಲಿದ್ದು, ನಾವು ಇನ್ನೂ ಹೆಚ್ಚಿನ ಬೆಳವಣಿಗೆಯನ್ನು ಮಾರುಕಟ್ಟೆಯಲ್ಲಿ ನಿರೀಕ್ಷಿಸಬಹುದು.

Most Read Articles

Kannada
English summary
MPV Sales In India On The Rise — Witness 14 Percent Growth In Sales - Read in Kannada
Story first published: Friday, April 26, 2019, 13:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X