ನವೆಂಬರ್ 17ರಂದು ಬಿಡುಗಡೆಯಾಗಲಿದೆ ಮಸ್ಟಾಂಗ್ ಮಾಚ್ ಇ ಕಾರು

ಫೋರ್ಡ್ ತನ್ನ ಟೆಸ್ಲಾ ಮಾಡೆಲ್ ವೈ ಕಾರಿನ ಪ್ರತಿಸ್ಪರ್ಧಿಯಾದ ಮಸ್ಟಾಂಗ್ ಮಾಚ್-ಇ ಕಾರಿನ ಅನಾವರಣವು ನವೆಂಬರ್ 17 ರಂದು ನಡೆಯಲಿದೆ ಎಂದು ಅಧಿಕೃತವಾಗಿ ದೃಢಪಡಿಸಿದೆ. ಈ ಮೊದಲು ಈ ಎಲೆಕ್ಟ್ರಿಕ್ ಕಾರ್ ಅನ್ನು ಮಸ್ಟಾಂಗ್ ಪ್ರೇರಿತ ಎಲೆಕ್ಟ್ರಿಕ್ ಎಸ್‌ಯುವಿ ಎಂದು ಕರೆಯಲಾಗುತ್ತಿತ್ತು.

ನವೆಂಬರ್ 17ರಂದು ಬಿಡುಗಡೆಯಾಗಲಿದೆ ಮಸ್ಟಾಂಗ್ ಮಾಚ್ ಇ ಕಾರು

ಮಸ್ಟಾಂಗ್ ಮಾಚ್ ಇ ಯ ಹೊಸ ಚಿತ್ರಗಳನ್ನು ಕಂಪನಿಯ ವೆಬ್‍‍ಸೈಟಿನಲ್ಲಿ ಬಿಡುಗಡೆಗೊಳಿಸಲಾಗಿದೆ. ಮಸ್ಟಾಂಗ್, ಕಾರುಗಳ ಇತಿಹಾಸದಲ್ಲಿರುವ ಅತ್ಯಂತ ಪ್ರಸಿದ್ಧವಾದ ಹಾಗೂ ಜನಪ್ರಿಯವಾದ ಹೆಸರುಗಳಲ್ಲಿ ಒಂದಾಗಿದೆ.

ನವೆಂಬರ್ 17ರಂದು ಬಿಡುಗಡೆಯಾಗಲಿದೆ ಮಸ್ಟಾಂಗ್ ಮಾಚ್ ಇ ಕಾರು

ಕಂಪನಿಯು ಈಗ ಮಾಚ್-ಇಯನ್ನು ಬಿಡುಗಡೆಗೊಳಿಸುವುದರೊಂದಿಗೆ ಮತ್ತಷ್ಟು ಜನಪ್ರಿಯವಾಗಲು ಬಯಸಿದೆ. ಮುಂಚಿನ, ಮಸ್ಟಾಂಗ್ ಹೆಸರಿನ ವಿರುದ್ಧ ಸಾರ್ವಜನಿಕರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.

ನವೆಂಬರ್ 17ರಂದು ಬಿಡುಗಡೆಯಾಗಲಿದೆ ಮಸ್ಟಾಂಗ್ ಮಾಚ್ ಇ ಕಾರು

ಎಲೆಕ್ಟ್ರಿಕ್ ವಾಹನಕ್ಕೆ ಸೂಕ್ತವೆಂಬ ಕಾರಣಕ್ಕೆ ಈ ಕಾರಿಗೆ ಮಾಚ್ 1 ಎಂಬ ಹೆಸರಿಡಲಾಗಿದೆ. ಕಂಪನಿಯು, ಸಾರ್ವಜನಿಕರ ವಿರೋಧಗಳ ನಡುವೆಯೂ ಮಾಚ್ - ಇ ಎಂಬ ಹೆಸರಿನೊಂದಿಗೆ ಹೋಗಲು ನಿರ್ಧರಿಸಿದೆ.

ನವೆಂಬರ್ 17ರಂದು ಬಿಡುಗಡೆಯಾಗಲಿದೆ ಮಸ್ಟಾಂಗ್ ಮಾಚ್ ಇ ಕಾರು

ಹೊರಭಾಗದಲ್ಲಿ, ಫೋರ್ಡ್ ಮಸ್ಟಾಂಗ್ ಮಾಚ್-ಇ ಮಾರುಕಟ್ಟೆಯಲ್ಲಿರುವ ಮಸ್ಟಾಂಗ್‍‍ನಿಂದ ಕೆಲವು ವಿನ್ಯಾಸಗಳನ್ನು ತೆಗೆದುಕೊಂಡಿರುವಂತೆ ತೋರುತ್ತದೆ. ಮಾಚ್-ಇ ಕಾರು ಉದ್ದನೆಯ ಹುಡ್ ಹಾಗೂ ವಿಶಾಲ ಹಿಂಭಾಗದ ಹಾಂಚ್‌ಗಳನ್ನು ಹೊಂದಿದೆ.

ನವೆಂಬರ್ 17ರಂದು ಬಿಡುಗಡೆಯಾಗಲಿದೆ ಮಸ್ಟಾಂಗ್ ಮಾಚ್ ಇ ಕಾರು

ಮುಂಭಾಗದಲ್ಲಿ, ಹೊಸ ಕ್ಲೋಸ್ಡ್-ಆಫ್ ಮುಖ್ಯ ಗ್ರಿಲ್ ಅನ್ನು ಹೊಂದಿದೆ. ಇದು ಫ್ಯೂಚರಿಸ್ಟಿಕ್ ಲುಕಿಂಗ್ ಎಲ್ಇಡಿ ಡಿಆರ್‍ಎಲ್‍‍ಗಳನ್ನು ಒಳಗೊಂಡ ನಯವಾದ ಸ್ವೀಪ್-ಬ್ಯಾಕ್ ಹೆಡ್‍‍ಲ್ಯಾಂಪ್‍‍ಗಳಿಂದ ಸುತ್ತುವರೆದಿದೆ.

ನವೆಂಬರ್ 17ರಂದು ಬಿಡುಗಡೆಯಾಗಲಿದೆ ಮಸ್ಟಾಂಗ್ ಮಾಚ್ ಇ ಕಾರು

ಒಟ್ಟಾರೆಯಾಗಿ ಇದು ಕ್ರಾಸ್ಒವರ್ ತರಹದ ವಿನ್ಯಾಸವನ್ನು ಹೊಂದಿದೆ. ದ್ರವರೂಪದ ಹಾಗೂ ಸ್ಮೂತ್ ಡಿಸೈನಿನ ರೇಖೆಗಳು ಈ ಕಾರಿಗೆ ಆಕರ್ಷಕ ನೋಟವನ್ನು ನೀಡುತ್ತವೆ. ವೆಬ್‌ಸೈಟ್‍‍ಗಳಲ್ಲಿರುವ ಚಿತ್ರಗಳಲ್ಲಿ ಕಂಡುಬಂದಂತೆ, ಫೋರ್ಡ್ ಮಸ್ಟಾಂಗ್ ಮಾಚ್-ಇ ಎಲೆಕ್ಟ್ರಿಕ್ ಎಸ್‌ಯುವಿ ಒಳಭಾಗದಲ್ಲಿ ಕಡಿಮೆ ವಿನ್ಯಾಸವನ್ನು ಹೊಂದಿದೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ನವೆಂಬರ್ 17ರಂದು ಬಿಡುಗಡೆಯಾಗಲಿದೆ ಮಸ್ಟಾಂಗ್ ಮಾಚ್ ಇ ಕಾರು

ವರ್ಟಿಕಲ್ ಆಗಿ ಜೋಡಿಸಲಾದ ದೊಡ್ಡದಾದ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಅನ್ನು ಡ್ಯಾಶ್‌ಬೋರ್ಡ್‌ನ ಮಧ್ಯಭಾಗದಲ್ಲಿಡಲಾಗಿದೆ. ಇದರ ಜೊತೆಗೆ ಆಕರ್ಷಕವಾಗಿ ಕಾಣುವ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಆಧುನಿಕವಾಗಿ ಕಾಣುವ ಇಂಟಿರಿಯರ್ ಸ್ಪೇಸ್ ಅನ್ನು ಮತ್ತಷ್ಟು ಹೆಚ್ಚಿಸುತ್ತದೆ.

MOST READ: ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ನವೆಂಬರ್ 17ರಂದು ಬಿಡುಗಡೆಯಾಗಲಿದೆ ಮಸ್ಟಾಂಗ್ ಮಾಚ್ ಇ ಕಾರು

ಈ ತಿಂಗಳ 17ರಂದು ಹೊಸ ಕಾರಿನ ಬುಕ್ಕಿಂಗ್‍‍ಗಳು ಅಮೇರಿಕಾ ಹಾಗೂ ಯುರೋಪ್‍‍ನಲ್ಲಿ ಆರಂಭವಾಗಲಿದೆಯೆಂದು ಕಂಪನಿಯು ಹೇಳಿದೆ. ಚೀನಾದ ಮಾರುಕಟ್ಟೆಯಲ್ಲಿ ಈ ಕಾರಿನ ಬಿಡುಗಡೆಯು ಇನ್ನೂ ತಡವಾಗಲಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ನವೆಂಬರ್ 17ರಂದು ಬಿಡುಗಡೆಯಾಗಲಿದೆ ಮಸ್ಟಾಂಗ್ ಮಾಚ್ ಇ ಕಾರು

ಡಬ್ಲ್ಯುಎಲ್‌ಟಿಪಿ ಪ್ರಮಾಣಪತ್ರದಂತೆ ಮಸ್ಟಾಂಗ್ ಮಾಚ್-ಇ ಕಾರ್ ಅನ್ನು ಒಂದು ಬಾರಿಗೆ ಚಾರ್ಜ್‌ ಮಾಡಿದರೆ 595 ಕಿ.ಮೀ ದೂರ ಚಲಿಸುತ್ತದೆ. ಟೆಕ್ನಿಕಲ್ ವಿಶೇಷತೆ ಹಾಗೂ ಇತರ ಮಾಹಿತಿಗಳನ್ನು ಮುಂಬರುವ ದಿನಗಳಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಹೊಸ ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ನೀಡಿಲ್ಲ.

Most Read Articles

Kannada
Read more on ಫೋರ್ಡ್ ford
English summary
Mustang mach e global unveil on november 17 details - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X