2020ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಆಡಿ ಕ್ಯೂ3

ಜರ್ಮನ್ ಮೂಲದ ಕಾರು ಉತ್ಪಾದನಾ ಕಂಪನಿಯಾದ ಆಡಿ ಎರಡನೇ ತಲೆಮಾರಿನ ಕ್ಯೂ3 ಕಾರನ್ನು ಮುಂದಿನ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಕ್ಯೂ ಶ್ರೇಣಿಯ ಈ ಕಾರ್ ಅನ್ನು ಮೊದಲ ಬಾರಿಗೆ 2018ರ ಪ್ಯಾರಿಸ್ ಮೋಟಾರ್ ಶೋ ನಲ್ಲಿ ಪ್ರದರ್ಶಿಸಲಾಗಿತ್ತು.

2020ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಆಡಿ ಕ್ಯೂ3

ಆಡಿ ಫ್ಲಾಗ್‍ಶಿಪ್ ಕ್ಯೂ8 ಎಸ್‍‍ಯು‍ವಿ ಕಾರಿನ ವಿನ್ಯಾಸದ ಪ್ರೇರಣೆಯಿಂದ ಹೊಸ ತಲೆಮಾರಿನ ಕ್ಯೂ3 ಕಾರಿನ ವಿನ್ಯಾಸ ರಚಿಸಲಾಗಿದೆ. ಆಡಿ ಕ್ಯೂ3 ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಕಾರಿನಲ್ಲಿ ಶಾರ್ಪ್ ಲೈನ್‍‍ಗಳನ್ನು ಹೊಂದಿಕೊಂಡಿದೆ. ಹೊಸ ಆಡಿ ಕ್ಯೂ3 ಕಾರು ಪೋಕ್ಸ್ ವ್ಯಾಗನ್ ಎಂ‍‍ಕ್ಯೂಬಿ ಫ್ಲಾ‍ಟ್‍ಫಾರ್ಮ್ ಅನ್ನು ಆಧರಿಸಿದೆ. ಇದು ಮೊದಲ ತಲೆಮಾರಿನ ಕಾರಿಗೆ ಹೋಲಿಸಿದರೆ 96 ಎಂಎಂ ಉದ್ದ, 18 ಎಂಎಂ ಅಗಲ ಮತ್ತು 55 ಎಂಎಂ ಕಡಿಮೆ ಹೊಂದಿದೆ. ಮೊದಲ ತಲೆಮಾರಿಗೆ ಹೋಲಿಸಿದರೆ ವ್ಹೀಲ್ ಬೆಸ್ 77 ಎಂಎಂ ಉದ್ದ ಹೊಂದಿದೆ.

2020ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಆಡಿ ಕ್ಯೂ3

ಮುಂದಿನ ತಲೆಮಾರಿನ ಆಡಿ ಕ್ಯೂ3 ಕಾರಿನ ಮುಂಭಾಗ ಹಲವಾರು ಪರಿಷ್ಕರಣೆಯೊಂದಿಗೆ ಬರುತ್ತಿದೆ. ಹೊಸ ಶೈಲಿಯ ಸಿಂಗಲ್ ಫ್ರೇಮ್ ಗ್ರೀಲ್ ಮತ್ತು ಸ್ಲೀಕ್ ಎಲ್‍ಇಡಿ ಹ್ಯಾಂಡ್‍‍ಲ್ಯಾಂಪ್ ಕ್ಲಸ್ಟರ್ ಜೊತೆ ಡೇ ಟೈಮ್ ರನ್ನೀಂಗ್ ಲೈಟ್ಸ್(ಡಿಆರ್‍ಎಲ್‍‍ಎಸ್) ಹೊಂದಿದೆ. ಮ್ಯಾಟ್‍‍ರಿಕ್ಸ್ ಎಲ್‍ಇಡಿ ಹೆಡ್‍‍ಲೈಟ್ಸ್ ಒಳಗೊಂಡಿದೆ.

2020ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಆಡಿ ಕ್ಯೂ3

ಮುಂದಿನ ವರ್ಷ ಬಿಡುಗಡೆಯಾಗಲಿರುವ ಆಡಿ ಕ್ಯೂ3 ಕಾರಿನ ಹಿಂಭಾಗದ ಪ್ರಮುಖ ಫೀಚರ್‍‍ಗಳು ಆಡಿ ಕ್ಯೂ8 ಎಸ್‍ಯು ಕಾರಿನಲ್ಲಿ ಇರುವಂತಹ ಇಂಟ್ರಿಗ್ರೇಟ್‍ಡ್ ಬ್ರೇಕ್ ಲೈಟ್ ಅನ್ನು ಹೊಂದಿದೆ. ಮೊದಲ ತಲೆಮಾರಿನ ಆಡಿ ಕಾರಿನ ರೀತಿಯಲ್ಲಿ ಹೊಸ ಆಡಿ ಕ್ಯೂ3 ಕಾರಿನಲ್ಲಿ ದೊಡ್ಡ ಪ್ರಮಾಣದ ಟೈಲ್ ಲೈಟ್ ಅನ್ನು ಒಳಗೊಂಡಿದೆ. ಹೊಸ ಕಾರಿನಲ್ಲಿ 17 ರಿಂದ 20ರ ವರೆಗಿನ ಇಂಚಿನ ಹೊಸ ಡ್ಯುಯಲ್ ಟೋನ್ ಅಲಾಯ್ ವ್ಹೀಲ್ ಅನ್ನು ಹೊಂದಿರಲಿದ್ದು ಮತ್ತು ಇದು ರೂಪಾಂತರಗಳಿಗೆ ಅನುಗುಣವಾಗಿ ಬದಲಾವಣೆಯಾಗಲಿದೆ.

2020ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಆಡಿ ಕ್ಯೂ3

ಹೊಸ ಆಡಿ ಕಾರಿನ ಇಂಟಿರಿಯರ್‍‍ನಲ್ಲಿ ಹೊಸ ರೋಮಿನರ್ ಕ್ಯಾಬಿನ್ ಮತ್ತು ಹೊಂದಾಣಿಕೆ ಮಾಡಿಕೊಳ್ಳಬಹುದಾದ ಪ್ಲೋರ್ ಇದು 675 ಲೀಟರ್ ಅನ್ನು ಹೊಂದಿದೆ. ಹಿಂಭಾಗದ ಸೀಟ್ ಅನ್ನು 40:20:40 ಮಡುಚಿಕೊಳ್ಳಬಹುದು. 1,525 ಲೀಟರ್ ಬೂಟ್ ಸ್ಪೆಸ್ ಅನ್ನು ಹೊಂದಿದೆ.

2020ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಆಡಿ ಕ್ಯೂ3

ಈ ಕಾರಿನ ಹೊಸ ಫೀಚರ್ಸ್‍‍ಗಳು ಡ್ಯಾಶ್‍‍ಬೋರ್ಡ್ ವಿನ್ಯಾಸ, ಹೊಸ ಟಚ್ ಸ್ಕ್ರೀನ್ ಇನ್ಪೋಟೈನ್‍‍ಮೆಂತ್ ಸಿಸ್ಟಂ ಮತ್ತು ಕ್ಲೈಮೇಟ್ ಕಂಟ್ರೋಲ್ ಯುನಿಟ್ ಅನ್ನು ಹೊಂದಿದೆ. ಆಧುನಿಕ ಶೈಲಿಯ ಕ್ಯಾಬಿನ್ ವಿನ್ಯಾಸಕ್ಕೆ ಅನುಗುಣವಾಗಿ ಮರುವಿನ್ಯಾಸ ಮಾಡಲಾಗಿದೆ. ಹೊಸ ತಲೆಮಾರಿನ ಮಾದರಿಯಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಪಾರ್ಕ್ ಅಸಿಸ್ಟ್, ಲೇನ್ ಡಿಪಾರ್ಚರ್ ವಾರ್ನಿಂಗ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸೇರಿದಂತೆ ಹಲವಾರು ಚಾಲಕನ ಸಹಾಯವಾಗುವ ಉಪಕರಣಗಳನ್ನು ಒಳಗೊಂಡಿದೆ.

2020ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಆಡಿ ಕ್ಯೂ3

ಹೊಸ ಆಡಿ ಕ್ಯೂ3 ಕಾರಿನಲ್ಲಿ ಹಲವು ಬಗೆಯ ಆಯ್ಕೆಯ ಎಂಜಿನ್ ಮತ್ತು ಗೇರ್‍‍ಬಾಕ್ಸ್ ಅಳವಡಿಸಿದ್ದಾರೆ. ದೇಶಿಯ ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ಆಡಿ ಕಾರಿನಲ್ಲಿ ಎರಡು ರೀತಿಯ ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ. 1.4 ಲೀಟರ್ ಟಿಎಪ್‍‍ಎಸ್‍ಐ ಪೆಟ್ರೋಲ್ ಎಂಜಿನ್ 148 ಬಿಎ‍ಚ್‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. 2.0 ಲೀಟರ್ ಟಿ‍ಡಿಐ ಎಂಜಿನ್ ಲೋವರ್-ಸ್ಪೆಕ್ ಎಂಜಿನ್ 150 ಬಿಎಚ್‍‍ಪಿ ಪವರ್ ಮತ್ತು 340 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಮತ್ತು ಉನ್ನತ ಮಟ್ಟದ ಮಾದರಿಯಲ್ಲಿ 184 ಬಿಎಚ್‍ಪಿ ಪವರ್ ಮತ್ತು 380 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

2020ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಆಡಿ ಕ್ಯೂ3

ಪೆಟ್ರೋಲ್ ಎಂಜಿನ್ 6-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ಹೊಂದಿದ್ದು, ಡೀಸೆಲ್ ಎಂಜಿನ್ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಜೋಡಿಸಲಾಗಿದೆ. ಕ್ಯೂ3 ರೂಪಾಂತರವು ಉನ್ನತ ಮಟ್ಟದ ಮಾದರಿಯಲ್ಲಿ ಆಡಿ ಕಾರಿನಲ್ಲಿ ಅಲ್-ವ್ಹೀಲ್ ಡ್ರೈವ್ ಸಿಸ್ಟಂ ಅಳವಡಿಸಲಾಗಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

2020ರ ಆರಂಭದಲ್ಲಿ ಬಿಡುಗಡೆಯಾಗಲಿದೆ ಆಡಿ ಕ್ಯೂ3

ಆಡಿಯ ಎ6 ಮತ್ತು ಎ8 ಸೆಡಾನ್ ಸೆಗ್‍‍ಮೆಂಟ್‍‍ನ ಕಾರುಗಳು ಸೆಪ್ಟಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಆಡ್ ಕ್ಯೂ3 ಕಾರು ಬಿಡುಗಡೆಯಾಗುವ ಮೊದಲೇ ಆಡಿ ಕ್ಯೂ8 ಕಾರು ಬಿಡುಗಡೆಯಾಗುವ ಸಾಧ್ಯತೆಗಳಿವೆ. ಹೊಸ ಆಡಿ 3 ಕಾರು ಬಿಎಂ‍ಡಬ್ಲ್ಯ್ ಎಕ್ಸ್1 ಮತ್ತು ಮರ್ಸಿಡಿಸ್ ಬೆಂಝ್ ಜಿಎಲ್ಎ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on ಆಡಿ audi
English summary
New Audi Q3 India Launch Confirmed: Expected To Arrive By Early Next Year - Read in Kannada
Story first published: Saturday, September 21, 2019, 18:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X