ಕ್ರಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ಪಡೆದ ಬಿ‍ಎಂ‍‍ಡಬ್ಲ್ಯು 3 ಸೀರಿಸ್ ಕಾರು

ಪ್ರತಿಯೊಬ್ಬರಿಗೂ ಪ್ರಯಾಣವೆಂದರೆ ಎಲ್ಲಿಲ್ಲದ ಅತ್ಯುತ್ಸಾಹ. ಪ್ರಯಾಣದ ಜೊತೆಗೆ ಸುರಕ್ಷತೆಗೂ ಆದ್ಯತೆ ನೀಡುತ್ತಾರೆ. ಕೆಲವು ಕಾರುಗಳಲ್ಲಿ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆಯಾದರೂ ಅಪಘಾತವಾದಾಗಲೇ ಅವುಗಳ ನಿಜವಾದ ಬಂಡವಾಳ ಬಯಲಾಗುವುದು.

ಕ್ರಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ಪಡೆದ ಬಿ‍ಎಂ‍‍ಡಬ್ಲ್ಯು 3 ಸೀರಿಸ್ ಕಾರು

ಯುರೋ ನ್ಯೂ ಕಾರ್ ಅಸೆಸ್‍‍ಮೆಂಟ್ ಪ್ರೊಗ್ರಾಂ (ಎನ್‍ಎ‍‍ಸಿ‍ಎ‍‍ಪಿ) ಕಾರುಗಳ ಸುರಕ್ಷತೆಯನ್ನು ಪರೀಕ್ಷಿಸಿ ಅವುಗಳಿಗೆ ಪ್ರಮಾಣಪತ್ರವನ್ನು ನೀಡುತ್ತದೆ. ಇದರ ಜೊತೆಗೆ ಈ ಸಂಸ್ಥೆಯು ಕಾರುಗಳ ಪೂರ್ಣ ಗುಣಮಟ್ಟವನ್ನು ಸಹ ಪರೀಕ್ಷಿಸುತ್ತದೆ. ಎನ್‍‍ಸಿ‍ಎ‍‍ಪಿ, ಜೀಪ್ ಚಿರೊಕೀ, ಪಿಗೆಟ್ 208 ಕಾರುಗಳ ಜೊತೆಗೆ ಬಿಎಂಡಬ್ಲ್ಯು 1 ಸೀರಿಸ್ ಹಾಗೂ 3 ಸೀರಿಸ್ ಕಾರುಗಳ ಕ್ರಾಶ್ ಟೆಸ್ಟ್ ನಡೆಸಿತ್ತು.

ಕ್ರಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ಪಡೆದ ಬಿ‍ಎಂ‍‍ಡಬ್ಲ್ಯು 3 ಸೀರಿಸ್ ಕಾರು

ಈಗ ಇವುಗಳ ಫಲಿತಾಂಶವನ್ನು ಪ್ರಕಟಿಸಿದೆ. ಇದರಲ್ಲಿ, ಬಿಎಂಡಬ್ಲ್ಯು ಕಾರುಗಳು 5 ಸ್ಟಾರ್ ರೇಟಿಂಗ್ ಪಡೆದರೆ, ಜೀಪ್ ಚಿರೊಕೀ ಹಾಗೂ ಪಿಗೆಟ್ 208 ಕಾರುಗಳು 4 ಸ್ಟಾರ್ ಪಡೆದಿವೆ. ಎನ್‌ಸಿಎಪಿಯು ವಯಸ್ಕರಿಗೆ, ಮಕ್ಕಳಿಗೆ, ಪಾದಚಾರಿಗಳಿಗೆ ಹಾಗೂ ಸೇಫ್ಟಿ ಅಸಿಸ್ಟ್ ಎಂಬ ನಾಲ್ಕು ರೀತಿಯ ಟೆಸ್ಟ್ ಗಳನ್ನು ನಡೆಸುತ್ತದೆ.

ಕ್ರಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ಪಡೆದ ಬಿ‍ಎಂ‍‍ಡಬ್ಲ್ಯು 3 ಸೀರಿಸ್ ಕಾರು

ಈ ನಾಲ್ಕು ವಿಭಾಗದ ಟೆಸ್ಟ್ ಗಳಲ್ಲಿ 2019ರ ಬಿಎಂಡಬ್ಲ್ಯು 3 ಸೀರಿಸ್ ಕಾರು ಕ್ರಮವಾಗಿ 97%, 87%, 87% ಹಾಗೂ 76% ರೇಟಿಂಗ್ ಪಡೆದಿದೆ. ಈ 5 ಸ್ಟಾರ್ ರೇಟಿಂಗ್ ಅನ್ನು ಬಿಎಂಡಬ್ಲ್ಯು 3 ಸೀರಿಸ್‍ನ 5 ಡೋರ್ ಹ್ಯಾಚ್‌ಬ್ಯಾಕ್ ಹಾಗೂ 4 ಡೋರ್ ಸಲೂನ್ ಕಾರುಗಳಿಗಾಗಿ ನೀಡಲಾಗಿದೆ.

ಕ್ರಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ಪಡೆದ ಬಿ‍ಎಂ‍‍ಡಬ್ಲ್ಯು 3 ಸೀರಿಸ್ ಕಾರು

ಇದರಲ್ಲಿ 2.0 ಲೀಟರ್ ಡೀಸೆಲ್ ಹಾಗೂ 2.0 ಲೀಟರ್ ಪೆಟ್ರೋಲ್ ಎಂಜಿನ್‌ ಕಾರುಗಳು ಸೇರಿವೆ. ಇವುಗಳಲ್ಲಿ 316 ಡಿ, 318 ಡಿ, 320 ಡಿ, 318 ಐ, 320 ಐ, 330 ಐ, 320 ಎಕ್ಸ್‌ಡಿ , 330ಎಕ್ಸ್ ಐ ಹಾಗೂ 320ಎಕ್ಸ್ ಮಾದರಿಯ ಕಾರುಗಳಿವೆ.

ಕ್ರಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ಪಡೆದ ಬಿ‍ಎಂ‍‍ಡಬ್ಲ್ಯು 3 ಸೀರಿಸ್ ಕಾರು

ವಯಸ್ಕರ ಸುರಕ್ಷತೆಯ ಬಗ್ಗೆ ಹೇಳುವುದಾದರೆ, ಬಿಎಂಡಬ್ಲ್ಯು 3 ಸರಣಿಯು ಫ್ರಂಟಲ್ ಆಫ್‌ಸೆಟ್ ಡಿಫಾರ್ಮಬಲ್ ಬ್ಯಾರಿಯರ್‌ನಲ್ಲಿ 8ಕ್ಕೆ 7.9 ಅಂಕ ಹಾಗೂ ಮುಂಭಾಗದ ಅಗಲಕ್ಕೆ 8ಕ್ಕೆ 7.6 ಅಂಕಗಳನ್ನು ಪಡೆದುಕೊಂಡಿದೆ. ಹಿಂಭಾಗದಲ್ಲಿರುವ ವಿಪ್ಲ್ಯಾಷ್‍‍ಗೆ 2ಕ್ಕೆ 1.6 ಪಾಯಿಂಟ್‍‍ಗಳನ್ನು ಪಡೆದಿದೆ.

ಕ್ರಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ಪಡೆದ ಬಿ‍ಎಂ‍‍ಡಬ್ಲ್ಯು 3 ಸೀರಿಸ್ ಕಾರು

ಮಕ್ಕಳ ಸುರಕ್ಷತೆಯಲ್ಲಿ, ಈ ಟೆಸ್ಟ್ ಅನ್ನು 6ರಿಂದ 10 ವರ್ಷದ ಮಕ್ಕಳ ವಿಭಾಗದಲ್ಲಿ ನಡೆಸಲಾಯಿತು. ಇದರಲ್ಲಿ 24ಕ್ಕೆ 23.8 ಅಂಕಗಳನ್ನು ಪಡೆದಿದೆ. ಸುರಕ್ಷತಾ ಫೀಚರ್‍‍ಗಳಲ್ಲಿ 13ಕ್ಕೆ 7 ಅಂಕಗಳನ್ನು ಪಡೆದಿದೆ. ಪಾದಚಾರಿಗಳ ಟೆಸ್ಟ್ ನಲ್ಲಿ 3 ಸೀರಿಸ್ ಕಾರು 36ಕ್ಕೆ 31.6 ಅಂಕಗಳನ್ನು ಪಡೆದಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಕ್ರಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ಪಡೆದ ಬಿ‍ಎಂ‍‍ಡಬ್ಲ್ಯು 3 ಸೀರಿಸ್ ಕಾರು

ಭಾರತದಲ್ಲಿ, ಬಿಎಂಡಬ್ಲ್ಯು 3 ಸೀರೀಸ್‍‍ನ 320 ಡಿ ಮಾದರಿಯ ಸ್ಪೋರ್ಟ್ ಹಾಗೂ ಐಷಾರಾಮಿ ಕಾರುಗಳನ್ನು ಹಾಗೂ 330ಐ ಎಂ ಮಾದರಿಯ ಸ್ಪೋರ್ಟ್ ವೇರಿಯಂಟ್‍‍ಗಳನ್ನು ಮಾರಾಟ ಮಾಡಲಾಗುತ್ತಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಕ್ರಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ಪಡೆದ ಬಿ‍ಎಂ‍‍ಡಬ್ಲ್ಯು 3 ಸೀರಿಸ್ ಕಾರು

ಈ ಕಾರುಗಳ ಬೆಲೆಯು ರೂ.41.40 ಲಕ್ಷಗಳಿಂದ - ರೂ.47.90 ಲಕ್ಷಗಳಾಗಿದೆ. ಈ ಕಾರುಗಳನ್ನು ಸಿ‍ಎಲ್‍ಎ‍ಆರ್ ಆರ್ಕಿಟೆಕ್ಚರ್ ಆಧಾರದ ಮೇಲೆ ನಿರ್ಮಿಸಿರುವುದರಿಂದ ಈ ಕಾರುಗಳು ಹೆಚ್ಚಿನ ಗಾತ್ರವನ್ನು ಹೊಂದಿವೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಈ ಕಾರುಗಳು ಎಲ್ಇಡಿ ಹೆಡ್ ಲ್ಯಾಂಪ್, ಎಲ್ ಶೇಪಿನ ಡಿಆರ್‍ಎಲ್ ಹಾಗೂ ಎಲ್‍ಇ‍‍ಡಿ ಟೇಲ್ ಲ್ಯಾಂಪ್‍‍ಗಳನ್ನು ಹೊಂದಿವೆ. ಇಂಟಿರಿಯರ್‍‍ನಲ್ಲಿ 8.8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅಳವಡಿಸಲಾಗಿದೆ.

ಕ್ರಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ಪಡೆದ ಬಿ‍ಎಂ‍‍ಡಬ್ಲ್ಯು 3 ಸೀರಿಸ್ ಕಾರು

ಬಿಎಂಡಬ್ಲ್ಯು 3 ಸೀರೀಸ್ 330 ಐ ಎಂ ಸ್ಪೋರ್ಟ್ ಕಾರಿನಲ್ಲಿ 2.0 ಲೀಟರ್, 4 ಸಿಲಿಂಡರ್, ಟರ್ಬೋಚಾರ್ಜ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 256 ಬಿ‍‍ಹೆಚ್‍‍ಪಿ ಪವರ್ ಹಾಗೂ 400 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಕ್ರಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ಪಡೆದ ಬಿ‍ಎಂ‍‍ಡಬ್ಲ್ಯು 3 ಸೀರಿಸ್ ಕಾರು

320 ಡಿ ಕಾರಿನಲ್ಲಿ ಅಳವಡಿಸಲಾಗಿರುವ 2.0 ಲೀಟರ್, 4 ಸಿಲಿಂಡರ್, ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್, 190 ಬಿ‍‍ಹೆಚ್‍‍ಪಿ ಪವರ್ ಹಾಗೂ 400 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎರಡೂ ಎಂಜಿನ್‍‍ಗಳು 8 ಸ್ಪೀಡಿನ ಸ್ಟೆಪ್‍‍ಟ್ರಾನಿಕ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿವೆ.

Most Read Articles

Kannada
English summary
2019 BMW 3 Series gets 5 star safety rating - Read in Kannada
Story first published: Saturday, October 12, 2019, 11:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X