ಬಿಡುಗಡೆಯಾಯ್ತು ಬಿ‍ಎಂ‍‍ಡಬ್ಲ್ಯು 7 ಸೀರಿಸ್ ಕಾರು

ಬಿಎಂಡಬ್ಲ್ಯು ಇಂಡಿಯಾ ತನ್ನ ಹೊಸ ತಲೆಮಾರಿನ 7 ಸೀರಿಸ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಹೊಸ 2019 ಬಿಎಂಡಬ್ಲ್ಯು 7 ಸೀರಿಸ್ ಕಾರಿನ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.22 ಕೋಟಿಗಳಾಗಿದೆ. ಬಿಎಂಡಬ್ಲ್ಯು 7 ಸೀರಿಸ್ ಕಾರ್ ಅನ್ನು - 740 ಎಲ್‍‍ಡಿ ಡಿಪಿಇ, 740 ಎಲ್‍‍ಡಿ ಡಿಪಿಇ ಸಿಗ್ನೇಚರ್, 740 ಎಲ್‍‍ಡಿ ಎಂ ಸ್ಪೋರ್ಟ್, 740 ಎಲ್‍ಐ ಡಿಪಿಇ ಸಿಗ್ನೇಚರ್, 745 ಎಲ್‍ಇ ಎಕ್ಸ್ ಡ್ರೈವ್ ಹಾಗೂ ಎಂ 760 ಎಲ್‍ಐ ಎಕ್ಸ್ ಡ್ರೈವ್ ಎಂಬ 6 ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.

ಬಿಡುಗಡೆಯಾಯ್ತು ಬಿ‍ಎಂ‍‍ಡಬ್ಲ್ಯು 7 ಸೀರಿಸ್ ಕಾರು

2019 ಬಿಎಂಡಬ್ಲ್ಯು 7 ಕಾರಿನ ಬುಕ್ಕಿಂಗ್‍‍ಗಳನ್ನು ದೇಶಾದ್ಯಂತವಿರುವ ಡೀಲರ್‍‍ಗಳ ಬಳಿ ಆರಂಭಿಸಲಾಗಿದೆ. ಹೊಸ ಸೆಡಾನ್ ಕಾರಿನ ಡೆಲಿವರಿಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. 7 ಸೀರಿಸ್ ಕಾರ್ ಅನ್ನು ಬಿಎಂಡಬ್ಲ್ಯು ಕಂಪನಿಯ ಮೊದಲ 7 ಸೀಟುಗಳ ಎಸ್‌ಯುವಿಯಾದ ಎಕ್ಸ್ 7 ಜೊತೆಗೆ ಬಿಡುಗಡೆಗೊಳಿಸಲಾಗಿದೆ. ಹೊಸ ಬಿಎಂಡಬ್ಲ್ಯು 7 ಸೀರಿಸ್ ಕಾರು ಡಿಸೈನ್, ಮೆಕಾನಿಕಲ್ ಅಪ್‍‍ಡೇಟ್‍‍ಗಳ ಜೊತೆಗೆ ಹೊಸ ಹಾಗೂ ಹೆಚ್ಚುವರಿ ಫೀಚರ್‍‍ಗಳು ಸೇರಿದಂತೆ ಹಲವಾರು ಬದಲಾವಣೆಗಳನ್ನು ಒಳಗೊಂಡಿದೆ.

ಬಿಡುಗಡೆಯಾಯ್ತು ಬಿ‍ಎಂ‍‍ಡಬ್ಲ್ಯು 7 ಸೀರಿಸ್ ಕಾರು

ಜಾಗತಿಕವಾಗಿ, ಹೊಸ ಬಿಎಂಡಬ್ಲ್ಯು 7 ಸೀರಿಸ್ ಕಾರ್ ಅನ್ನು ಸ್ಟ್ಯಾಂಡರ್ಡ್ ವೀಲ್‌ಬೇಸ್ ಹಾಗೂ ಲಾಂಗ್ ವೀಲ್‌ಬೇಸ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ, ದೇಶಿಯ ಮಾರುಕಟ್ಟೆಯಲ್ಲಿ ಲಾಂಗ್ ವ್ಹೀಲ್‍‍ಬೇಸ್ ಮಾದರಿಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ. ಡಿಸೈನ್‍‍ನ ಬಗ್ಗೆ ಹೇಳುವುದಾದರೆ, ಹೊಸ 7 ಸೀರಿಸ್ ಬಿಎಂಡಬ್ಲ್ಯು ಸಿಗ್ನೇಚರ್ ಕಿಡ್ನಿ ಗ್ರಿಲ್ ಹೊಂದಿದೆ. 7 ಸೀರಿಸ್‍‍ನಲ್ಲಿರುವ ಹೊಸ ದೊಡ್ಡ ಗಾತ್ರದ ಕಿಡ್ನಿ ಗ್ರಿಲ್ ಅನ್ನು ಎಕ್ಸ್ 7 ಎಸ್‌ಯುವಿಯಿಂದ ಪಡೆಯಲಾಗಿದೆ. ಈ ಗ್ರಿಲ್ ಹಿಂದಿನ ತಲೆಮಾರಿನ ಕಾರಿಗಿಂತ 47%ನಷ್ಟು ದೊಡ್ಡದಾಗಿದೆ.

ಮಾದರಿಗಳು ಬೆಲೆ
730 ಎಲ್‍‍ಡಿ ಡಿ‍‍ಪಿ‍ಇ ರೂ.1.22 ಕೋಟಿ
730 ಎಲ್‍‍ಡಿ ಡಿಪಿಇ ಸಿಗ್ನೇಚರ್ ರೂ.1.31 ಕೋಟಿ
730 ಎಲ್‍‍ಡಿ ಎಂ ಸ್ಪೋರ್ಟ್ ರೂ.1.34 ಕೋಟಿ
740 ಎಲ್‍ಐ ಡಿಪಿಇ ಸಿಗ್ನೇಚರ್ ರೂ.1.34 ಕೋಟಿ
745 ಎಲ್‍ಇ ಎಕ್ಸ್ ಡ್ರೈವ್ ರೂ.1.65 ಕೋಟಿ
ಎಂ 760 ಎಲ್‍ಐ ಎಕ್ಸ್ ಡ್ರೈವ್ ರೂ.2.42 ಕೋಟಿ

ಬಿಡುಗಡೆಯಾಯ್ತು ಬಿ‍ಎಂ‍‍ಡಬ್ಲ್ಯು 7 ಸೀರಿಸ್ ಕಾರು

ಹೊಸ ಸೆಡಾನ್ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್‍‍ಲ್ಯಾಂಪ್‍‍ಗಳ ಜೊತೆಗೆ ದೊಡ್ಡ ಗಾತ್ರದ ಗ್ರಿಲ್ ಹಾಗೂ ಇಂಟಿಗ್ರೇಟೆಡ್ ಎಲ್ಇಡಿ ಡಿಆರ್‍ಎಲ್‍‍ಗಳನ್ನು ಹೊಂದಿದೆ. ಬಿಎಂಡಬ್ಲ್ಯು, ಫ್ರಂಟ್ ಬಂಪರ್ ಅನ್ನು ಸಹ ಅಪ್‍‍ಡೇಟ್‍‍ಗೊಳಿಸಿದೆ. ಈ ಬಂಪರ್‍‍ಗಳು ಕ್ರೋಮ್ ಅಸೆಂಟ್ ಹೊಂದಿದ್ದು, ಈ ಸೆಡಾನ್ ಕಾರಿಗೆ ಪ್ರೀಮಿಯಂನೆಸ್ ನೀಡುತ್ತವೆ. ಹೊಸ 7 ಸೀರಿಸ್‍‍ನ ಸೈಡ್ ಪ್ರೊಫೈಲ್ ಸ್ವಚ್ಛವಾದ ಡಿಸೈನ್ ಹೊಂದಿದೆ. ಸೆಡಾನ್‌ನ ಕೆಳಭಾಗದಲ್ಲಿ ಹಾಗೂ ವಿಂಡೋಗಳಲ್ಲಿ ತೆಳುವಾದ ಕ್ರೋಮ್ ಸ್ಟ್ರಿಪ್‍‍ಗಳಿವೆ. ಇವು ಕಾರಿನ ಪ್ರೀಮಿಯಂನೆಸ್ ಹೆಚ್ಚಿಸಿವೆ.

ಬಿಡುಗಡೆಯಾಯ್ತು ಬಿ‍ಎಂ‍‍ಡಬ್ಲ್ಯು 7 ಸೀರಿಸ್ ಕಾರು

ಕಾರಿನ ಹಿಂಭಾಗದಲ್ಲಿ ಎಲ್ಇಡಿ ಟೇಲ್‌ಲೈಟ್‌ಗಳಿದ್ದು, ತೆಳುವಾದ ಎಲ್‌ಇಡಿ ಲೈನ್ ಹಾಗೂ ಕ್ರೋಮ್ ಸ್ಟ್ರಿಪ್‍ಗಳೊಂದಿಗೆ ಸಂಪರ್ಕ ಹೊಂದಿವೆ. ಹಿಂಭಾಗದ ಬಂಪರ್‌ಗಳು ಸಿಲ್ವರ್ ಅಸೆಂಟ್ ಹೊಂದಿದ್ದು, ಎರಡೂ ಬದಿಯಲ್ಲಿಎಕ್ಸಾಸ್ಟ್ ಟಿಪ್‍‍ಗಳನ್ನು ಹೊಂದಿವೆ. ಹೊಸ ಬಿಎಂಡಬ್ಲ್ಯು 7 ಸೀರಿಸ್ ಕಾರು ಹೊಸ ತಲೆಮಾರಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ವಾಯ್ಸ್ ಅಸಿಸ್ಟ್ ಹೊಂದಿರುವ 7.0 ಇಂಚಿನ ಟಚ್‍‍ಸ್ಕ್ರೀನ್ ಇನ್ಫೊಟೇನ್‍‍ಮೆಂಟ್ ಸಿಸ್ಟಂ, ಹ್ಯಾಂಡ್ ಗೆಸ್ಚರ್ ಕಂಟ್ರೋಲ್ ಹಾಗೂ ಇನ್ನಿತರ ಫೀಚರ್‍‍ಗಳನ್ನು ಹೊಂದಿದೆ.

ಬಿಡುಗಡೆಯಾಯ್ತು ಬಿ‍ಎಂ‍‍ಡಬ್ಲ್ಯು 7 ಸೀರಿಸ್ ಕಾರು

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

7 ಸೀರಿಸ್‍‍ನ ಸೀಟುಗಳನ್ನು ಪ್ರೀಮಿಯಂ ನಪ್ಪಾ ಲೆದರ್‌ನಲ್ಲಿ ಕವರ್ ಮಾಡಲಾಗಿದ್ದು, ಲೆದರ್ ಬಣ್ಣವನ್ನು ಹೊಂದಿದೆ. ಹಿಂದಿನ ಸೀಟಿನ ಪ್ರಯಾಣಿಕರಿಗಾಗಿ 10 ಇಂಚಿನ ಟಚ್‌ಸ್ಕ್ರೀನ್ ಡಿಸ್‍‍ಪ್ಲೇ ಅಳವಡಿಸಲಾಗಿದೆ. ಈ ಡಿಸ್‍‍ಪ್ಲೇ ಕಾರಿನ ವಿವಿಧ ಕಾರ್ಯಗಳನ್ನು ನಿಯಂತ್ರಿಸುತ್ತದೆ. ಭಾರತದಲ್ಲಿ ಹೊಸ 2019 ಬಿಎಂಡಬ್ಲ್ಯು 7 ಸೀರಿಸ್ ಕಾರ್ ಅನ್ನು 6 ವಿವಿಧ ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಡೀಸೆಲ್ ಮಾದರಿಗಳು ಅದೇ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತವೆ. 3.0 ಲೀಟರ್ ಇನ್ ಲೈನ್ ಸಿಕ್ಸ್ ಸಿಲಿಂಡರ್ ಎಂಜಿನ್ 265 ಬಿಹೆಚ್‌ಪಿ ಹಾಗೂ 620 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿಡುಗಡೆಯಾಯ್ತು ಬಿ‍ಎಂ‍‍ಡಬ್ಲ್ಯು 7 ಸೀರಿಸ್ ಕಾರು

ಪೆಟ್ರೋಲ್ ಮಾದರಿಗಳು ಹಲವು ಎಂಜಿನ್ ಆಯ್ಕೆಗಳನ್ನು ಹೊಂದಿವೆ. ಬೇಸ್ 740 ಲಿ ಡಿಪಿಇ ಸಿಗ್ನೇಚರ್ ಮಾದರಿಯು, ಸ್ಟ್ಯಾಂಡರ್ಡ್ 3.0-ಲೀಟರ್ 6 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 340 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಇದೇ ವೇಳೆ ಬಿಎಂಡಬ್ಲ್ಯು ತನ್ನ ಮೊದಲ ಪ್ಲಗ್ ಇನ್ ಹೈಬ್ರಿಡ್ ಮಾದರಿಯಾದ 745 ಲೆ ಎಕ್ಸ್‌ಡ್ರೈವ್ ಕಾರ್ ಅನ್ನು ಭಾರತದಲ್ಲಿ 7 ಸೀರಿಸ್‍‍ನೊಂದಿಗೆ ಬಿಡುಗಡೆಗೊಳಿಸಿದೆ. ಈ ಕಾರಿನಲ್ಲಿರುವ 6 ಸಿಲಿಂಡರ್ ಪೆಟ್ರೋಲ್ ಎಂಜಿನ್‌ 286 ಬಿಹೆಚ್‌ಪಿ ಹಾಗೂ 450 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿಡುಗಡೆಯಾಯ್ತು ಬಿ‍ಎಂ‍‍ಡಬ್ಲ್ಯು 7 ಸೀರಿಸ್ ಕಾರು

ಈ ಕಾರಿ‍ನಲ್ಲಿ ಎಲೆಕ್ಟ್ರಿಕ್ ಮೋಟಾರ್ ಅನ್ನು ಸಹ ಅಳವಡಿಸಲಾಗಿದ್ದು, 113 ಬಿ‍‍ಹೆಚ್‍‍ಪಿ ಹಾಗೂ 265 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಒಟ್ಟಾರೆಯಾಗಿ 394 ಬಿ‍‍ಹೆಚ್‍‍ಪಿ ಹಾಗೂ 600ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಬಿಎಂಡಬ್ಲ್ಯುನ ಎಕ್ಸ್‌ಡ್ರೈವ್ ಸಿಸ್ಟಂ ಮೂಲಕ ಎಲ್ಲಾ ನಾಲ್ಕು ಚಕ್ರಗಳಿಗೆ ಪವರ್ ಹೋಗುತ್ತದೆ. ಪ್ಲಗ್-ಇನ್ ಹೈಬ್ರಿಡ್ ಮಾದರಿಯು 5.8 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಕ್ರಮಿಸಲಿದೆ. ಪ್ರತಿ ಲೀಟರ್ ಪೆಟ್ರೋಲ್‍‍ಗೆ 39.5 ಕಿ.ಮೀ ಮೈಲೇಜ್ ನೀಡುತ್ತದೆ.

ಬಿಡುಗಡೆಯಾಯ್ತು ಬಿ‍ಎಂ‍‍ಡಬ್ಲ್ಯು 7 ಸೀರಿಸ್ ಕಾರು

ಟಾಪ್ ಮಾದರಿಯಾದ ಎಂ760 ಲಿ ಎಕ್ಸ್‌ಡ್ರೈವ್, ದೊಡ್ಡ ಗಾತ್ರದ 6.6 ಲೀಟರ್ ಟ್ವಿನ್ ಟರ್ಬೊ ವಿ12 ಎಂಜಿನ್ ಹೊಂದಿದ್ದು, 585 ಬಿಹೆಚ್‍‍ಪಿ ಹಾಗೂ 850 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದು ಕೇವಲ 3.8 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ತಲುಪಲಿದೆ. ಹೊಸ ಬಿಎಂಡಬ್ಲ್ಯು 7 ಸೀರಿಸ್ ಕಾರುಗಳ ಎಲ್ಲಾ ಎಂಜಿನ್‍‍ಗಳು 8 ಸ್ಪೀಡಿನ ಸ್ಟೆಪ್ಟ್ರಾನಿಕ್ ಸ್ಟಾಂಡರ್ಡ್ ಗೇರ್‌ಬಾಕ್ಸ್‌ ಹೊಂದಿವೆ.

ಬಿಡುಗಡೆಯಾಯ್ತು ಬಿ‍ಎಂ‍‍ಡಬ್ಲ್ಯು 7 ಸೀರಿಸ್ ಕಾರು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

2019ರ ಬಿಎಂಡಬ್ಲ್ಯು 7 ಸೀರಿಸ್ ಕಾರು, ದೇಶಿಯ ಮಾರುಕಟ್ಟೆಯಲ್ಲಿ ಬಿ‍ಎಂ‍‍ಡಬ್ಲ್ಯು ಕಂಪನಿಯು ಬಿಡುಗಡೆಗೊಳಿಸಿರುವ ಅತ್ಯಂತ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ. ಜರ್ಮನ್ ಕಂಪನಿಯ ಪ್ರಮುಖ ಮಾದರಿಯ ಕಾರು ಹಲವಾರು ವೈಶಿಷ್ಟ್ಯಗಳ ಜೊತೆಗೆ ನಿಜವಾದ ಚಾಲನಾ ಅನುಭವವನ್ನು ನೀಡಲಿದೆ. ಭಾರತದಲ್ಲಿ ಹೊಸ 7 ಸೀರಿಸ್ ಕಾರುಗಳು ಮರ್ಸಿಡಿಸ್ ಬೆಂಜ್ ಎಸ್-ಕ್ಲಾಸ್‌ ಕಾರುಗಳಿಗೆ ಪೈಪೋಟಿ ನೀಡಲಿವೆ.

Most Read Articles

Kannada
English summary
New (2019) BMW 7 Series Launched In India — Prices Start At Rs 1.22 Crore - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X