ಹೊಸ ಮಾದರಿಯಲ್ಲಿ ಬಿಡುಗಡೆಗೊಂಡ ಫೋರ್ಡ್ ಆಸ್ಫೈರ್ ಸೆಡಾನ್ ಕಾರು

ಫೋರ್ಡ್ ಇಂಡಿಯಾ ಸಂಸ್ಥೆಯು ತಮ್ಮ ಆಸ್ಫೈರ್ ಕಾರಿನ ಬ್ಲೂ ಲಿಮಿಟೆಡ್ ಎಡಿಷನ್ ಅನ್ನು ಬಿಡುಗಡೆ ಮಾಡಲಾಗಿದ್ದು, ಹಲವಾರು ಬಗೆಯ ಫೀಚರ್‍‍ಗಳನ್ನು ಪಡೆದುಕೊಂಡಿದೆ. ಬ್ಲೂ ಎಡಿಷನ್ ಆಸ್ಫೈರ್ ಕಾರು ಕೇವಲ ಟೈಟಾನಿಯಂ ವೇರಿಯಂಟ್‍ನಲ್ಲಿ ಮಾತ್ರ ಲಭ್ಯವಿರಲಿದ್ದು, ಪೆಟ್ರೋಲ್ ಮಾದರಿಯ ಕಾರುಗಳು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 7.50 ಲಕ್ಷ ಮತ್ತು ಡೀಸೆಲ್ ಮಾದರಿಯು ರೂ. 8.30 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ.

ಹೊಸ ಮಾದರಿಯಲ್ಲಿ ಬಿಡುಗಡೆಗೊಂಡ ಫೋರ್ಡ್ ಆಸ್ಫೈರ್ ಸೆಡಾನ್ ಕಾರು

ಬ್ಲೂ ಎಡಿಷನ್ ಫೋರ್ಡ್ ಆಸ್ಫೈರ್ ಕಾರು ವೈಟ್, ಮೂನ್‍ಡಸ್ಟ್ ಸಿಲ್ವರ್ ಮತ್ತು ಸ್ಮೋಕ್ ಎಂಬ ಮೂರು ಬಣ್ಣಗಳಲ್ಲಿ ಆಯ್ಕೆ ಮಾಡಬಹುದಾಗಿದೆ. ಈ ಸ್ಪೆಷನ್ ಎಡಿಷನ್ ಕಾರಿನಲ್ಲಿ ಮುಂಭಾಗದಲ್ಲಿನ ಗ್ರಿಲ್ ಎನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು, ಬ್ಲೂ ಎಡಿಷನ್ ಎಂಬ ಹೆಸರಿಗೆ ತಕ್ಕ ಹಾಗೆ ಕಾರಿನ ಅಲ್ಲಲ್ಲಿ ನೀಲಿ ಬಣ್ಣವನ್ನು ನೀಡಿರುವುದು ಈ ಕಾರಿನ ಹೈಲೈಟ್ ಎನ್ನಬಹುದು. ಹಾಗೆಯೆ ಈ ಕಾರು ಡ್ಯುಯಲ್ ಟೋನ್ ಬಣ್ಣವನ್ನು ಸಹ ಪಡೆದುಕೊಂಡಿರಲಿದೆ.

ಹೊಸ ಮಾದರಿಯಲ್ಲಿ ಬಿಡುಗಡೆಗೊಂಡ ಫೋರ್ಡ್ ಆಸ್ಫೈರ್ ಸೆಡಾನ್ ಕಾರು

ಮೇಲೆ ಹೇಳಿರುವ ಹಾಗೆ ಕಾರಿನ ಫಾಗ್ ಲ್ಯಾಂಪ್ಸ್ ಹೌಸಿಂಗ್ ಮತ್ತು ಫ್ರಂಟ್ ಬಂಪರ್ ಸೇರಿದಂತೆ ಇನ್ನು ಕೆಲವು ಕಡೆ ನೀಲಿ ಬಣ್ಣವನ್ನು ಬಳಸಲಾಗಿದೆ. ಹಾಗೆಯೆ ಇವುಗಳ ಜೊತೆಗೆ ಈ ಕಾರಿನಲ್ಲಿ ರೆಗ್ಯುಲರ್ ಮಾಡಲ್‍ಗಿಂತಲೂ ವಿಶೇಷವಾದ ಅಲಾಯ್ ವ್ಹೀಲ್‍ಗಳನ್ನು ಬಳಸಲಾಗಿದ್ದು, 15 ಇಂಚಿನ ಅಲಾಯ್ ವ್ಹೀಲ್ಸ್ ಅನ್ನು ನೀಡಲಾಗಿದೆ.

ಹೊಸ ಮಾದರಿಯಲ್ಲಿ ಬಿಡುಗಡೆಗೊಂಡ ಫೋರ್ಡ್ ಆಸ್ಫೈರ್ ಸೆಡಾನ್ ಕಾರು

ಇನ್ನು ಫೋರ್ಡ್ ಆಸ್ಫೈರ್ ಬ್ಲೂ ಎಡಿಷನ್ ಕಾರಿನ ಒಳಭಾಗದಲ್ಲಿ ಲೆಧರ್‍‍ನಿಂದ ಮತ್ತು ಅಲ್ಲಲ್ಲಿ ನೀಲಿ ಬಣ್ಣವನ್ನು ಪಡೆದ ಸ್ಟೀರಿಂಗ್ ವ್ಹೀಲ್ ಅನ್ನು ನೀಡಲಾಗಿದೆ. ಹಾಗೆಯೆ ಈ ಕಾರಿನಲ್ಲಿ ಹೊಸದಾಗಿ ಪುಷ್-ಬಟನ್ ಸ್ಟಾರ್ಟ್/ಸ್ಟಾಪ್ ಬಟನ್, ರಿಯರ್ ಪಾರ್ಕಿಂಗ್ ಸೆನ್ಸಾರ್ಸ್, ಯುಎಸ್‍ಬಿ ಸ್ಲಾಟ್ಸ್ ಮತ್ತು ಇನ್ನಿತರೆ ಫೀಚರ್‍‍ಗಳನ್ನು ಒದಗಿಸಲಾಗಿದೆ.

ಹೊಸ ಮಾದರಿಯಲ್ಲಿ ಬಿಡುಗಡೆಗೊಂಡ ಫೋರ್ಡ್ ಆಸ್ಫೈರ್ ಸೆಡಾನ್ ಕಾರು

ಕಾರಿನ ಒಳಭಾಗದಲ್ಲಿಯೂ ಸಹ ನೀಲಿ ಬಣ್ಣವನ್ನು ನೀಡಲಾಗಿದ್ದು, ಇಲ್ಲಿ ಬ್ಲೂತೂಥ್ ಸಪೋರ್ಟ್ ಮಾಡುವ 7ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ರಿಯರ್ ವ್ಯೂ ಕ್ಯಾಮೆರಾ, ರಿಮೋಟ್ ಸೆಂಟ್ರಲ್ ಲಾಕಿಂಗ್, ಆಟೋಮ್ಯಟಿಕ್ ಏರ್ ಕಂಡಿಷನರ್ ಮತ್ತು ಪವರ್ ವಿಂಡೋಸ್ ಸೇರಿದಂತೆ ಇನ್ನು ಹಲವಾರು ಫೀಚರ್‍‍ಗಳನ್ನು ನೀಡಲಾಗಿದೆ.

ಹೊಸ ಮಾದರಿಯಲ್ಲಿ ಬಿಡುಗಡೆಗೊಂಡ ಫೋರ್ಡ್ ಆಸ್ಫೈರ್ ಸೆಡಾನ್ ಕಾರು

ವಾರೆಂಟಿ

ಆಸ್ಫೈರ್ ಬ್ಲೂ ಎಡಿಷನ್ ಕಾರು ಖರೀದಿದಾದರಿಗೆ ಸಂಸ್ಥೆಯು ಇಂದು ವಿಶೇಷವಾದ ಆಫರ್ ಅನ್ನು ನೀಡಲಗಿದ್ದು, ಕಾರು ಖರೀದಿಯ ಸಮಯದಲ್ಲಿ 5 ವರ್ಷದ ಅಥವಾ 1,00,000 ಕಿಲೋಮೀಟರ್‍‍ವರೆಗಿನ ವಾರೆಂಟಿಯನ್ನು ಸಹ ನೀಡಲಾಗುತ್ತಿದೆ ಎಂದು ಸಂಸ್ಥೆಯು ಅಧಿಕೃತವಾಗಿ ಹೇಳಿಕೊಂಡಿದೆ.

ಹೊಸ ಮಾದರಿಯಲ್ಲಿ ಬಿಡುಗಡೆಗೊಂಡ ಫೋರ್ಡ್ ಆಸ್ಫೈರ್ ಸೆಡಾನ್ ಕಾರು

ಎಂಜಿನ್ ಸಾಮರ್ಥ್ಯ

ಫೋರ್ಡ್ ಆಸ್ಫೈರ್ ಬ್ಲೂ ಸೆಡಾನ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. ಈ ಕಾರಿನಲ್ಲಿ ನೀಡಲಾದ 1.2 ಲೀಟರ್ ಟಿಐವಿಸಿಟಿ ಪೆಟ್ರೋಲ್ ಎಂಜಿನ್ 96 ಬಿಹೆಚ್‍ಪಿ ಮತ್ತು 120ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣಾವನ್ನು ಪಡೆದುಕೊಂಡಿದೆ. ಹಾಗೆಯೆ ಡೀಸೆಲ್ ಮಾದರಿಯ ಕಾರುಗಳು 1.5 ಲೀಟರ್ ಟಿಡಿಸಿಐ ಎಂಜಿನ್ ಸಹಾಯದಿಂದ 100 ಬಿಹೆಚ್‍ಪಿ ಮತ್ತು 215ಎನ್ಎಂ ಟಾರ್ಕ್ ಅನ್ನು ಪಡೆದುಕೊಂಡಿದೆ.

ಹೊಸ ಮಾದರಿಯಲ್ಲಿ ಬಿಡುಗಡೆಗೊಂಡ ಫೋರ್ಡ್ ಆಸ್ಫೈರ್ ಸೆಡಾನ್ ಕಾರು

ಮೈಲೇಜ್

ಆಸ್ಫೈರ್ ಬ್ಲೂ ಸ್ಪೆಷಲ್ ಎಡಿಷನ್ ಕಾರು ಕೇವಲ ವೈಶಿಷ್ಟ್ಯತೆಗಳಲ್ಲಿ ಮಾತ್ರವಲ್ಲದೆಯೆ ಮೈಲೇಜ್ ಪರವಾಗಿ ಕೂಡಾ ಅಪ್ಡೆಟ್ ಆಗಿದ್ದು, ಪೆಟ್ರೋಲ್ ಮಾದರಿಯ ಕಾರುಗಳು ಒಂದು ಲೀಟರ್‍ ಪೆಟ್ರೋಲ್‍‍ಗೆ ಸುಮಾರು 20.4 ಕಿಲೋಮೀಟರ್ ಮತ್ತ್ ಡೀಸೆಲ್ ಮಾದರಿಯ ಕಾರುಗಳು ಲೀಟರ್‍‍ಗೆ ಸುಮಾರು 25.5 ಕಿಲೋಮೀಟರ್‍‍ನ ಮೈಲೇಜ್ ನೀಡಬಲ್ಲದು.

Most Read Articles

Kannada
English summary
New Ford Asphire Blu Launched - Price, Features & Details. Read In Kannada
Story first published: Friday, May 10, 2019, 17:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X