ಟಾಟಾ ಹ್ಯಾರಿಯರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಫೋರ್ಡ್ ಸಿ-ಸೆಗ್ಮೆಂಟ್ ಎಸ್‌ಯುವಿ..!

ಭಾರತದಲ್ಲಿ ಫೋರ್ಡ್ ಸಂಸ್ಥೆಯು ತನ್ನ ವಿವಿಧ ಮಾದರಿಯ ಕಾರು ಉತ್ಪನ್ನಗಳ ಮೂಲಕ ಈಗಾಗಲೇ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಪರಿಚಯಿಸುವ ಇರಾದೆಯಲ್ಲಿದ್ದು, ಸಿ-ಸೆಗ್ಮೆಂಟ್‌ನಲ್ಲಿ ಪರಿಚಯಿಸಲಾಗುತ್ತಿರುವ ಹೊಸ ಎಸ್‌ಯುವಿ ಕಾರೊಂದು ಗ್ರಾಹಕರಲ್ಲಿ ಕುತೂಹಲ ಹುಟ್ಟುಹಾಕಿದೆ.

ಟಾಟಾ ಹ್ಯಾರಿಯರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಫೋರ್ಡ್ ಸಿ-ಸೆಗ್ಮೆಂಟ್ ಎಸ್‌ಯುವಿ..!

ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಕೇಂದ್ರ ಸರ್ಕಾರವು ಹೊಸ ಕಾರುಗಳ ಉತ್ಪಾದನೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರುತ್ತಿದ್ದು, ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಸಹಭಾಗಿತ್ವದ ಆಧಾರದ ಮೇಲೆ ಹೊಸ ವಾಹನಗಳನ್ನು ಉತ್ಪಾದನೆ ಮಾಡಿ ಮಾರಾಟ ಮಾಡುವ ಯೋಜನೆಯಲ್ಲಿವೆ. ಇದರಲ್ಲಿ ಫೋರ್ಡ್ ಇಂಡಿಯಾ ಕೂಡಾ ಮಹೀಂದ್ರಾ ಜೊತೆ ಸೇರಿ ಹೊಸ ಕಾರುಗಳನ್ನು ಅಭಿವೃದ್ದಿಗೊಳಿಸುತ್ತಿದ್ದು, ಸಿ-ಸೆಗ್ಮೆಂಟ್‌ನಲ್ಲಿ ಹೊಸ ಮಾದರಿಯ ಎಸ್‌ಯುವಿ ಒಂದನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಟಾಟಾ ಹ್ಯಾರಿಯರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಫೋರ್ಡ್ ಸಿ-ಸೆಗ್ಮೆಂಟ್ ಎಸ್‌ಯುವಿ..!

2020ಕ್ಕೆ ಮಹೀಂದ್ರಾ ಸಂಸ್ಥೆಯು ತನ್ನ ಜನಪ್ರಿಯ ಕಾರು ಆವೃತ್ತಿಯಾದ ಎಕ್ಸ್‌ಯುವಿ500 ನೆಕ್ಸ್ಟ್ ಜನರೇಷನ್ ಮಾದರಿಗಳನ್ನು ಅಭಿವೃದ್ಧಿಗೊಳಿಸುತ್ತಿದ್ದು, ಈ ಕಾರಿನಲ್ಲಿ ಬಳಸಲು ಉದ್ದೇಶಿಸಲಾಗಿರುವ ಹೊಸ ಎಂಜಿನ್ ಮಾದರಿಯನ್ನೇ ಫೋರ್ಡ್ ಸಿ-ಸೆಗ್ಮೆಂಟ್ ಎಸ್‌ಯುವಿಯಲ್ಲೂ ಬಳಕೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ.

ಟಾಟಾ ಹ್ಯಾರಿಯರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಫೋರ್ಡ್ ಸಿ-ಸೆಗ್ಮೆಂಟ್ ಎಸ್‌ಯುವಿ..!

ಸದ್ಯ ಮಾರುಕಟ್ಟೆಯಲ್ಲಿ ರೂ.15 ಲಕ್ಷ ರೂ.19 ಲಕ್ಷ ಬೆಲೆ ಅಂತರದಲ್ಲಿ ಬಲಿಷ್ಠವಾದ ಸಿ-ಸೆಗ್ಮೆಂಟ್ ಎಸ್‌ಯುವಿ ಮಾದರಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಮಹೀಂದ್ರಾ ಎಕ್ಸ್‌ಯುವಿ500, ಟಾಟಾ ಹ್ಯಾರಿಯರ್ ಮತ್ತು ಜೀಪ್ ಕಂಪಾಸ್ ಕಾರುಗಳು ಉತ್ತಮ ಬೇಡಿಕೆ ಪಡೆದುಕೊಂಡಿವೆ. ಇದೇ ಕಾರಣಕ್ಕೆ ಫೋರ್ಡ್ ಕೂಡಾ ತನ್ನ ಎಸ್‌ಯುವಿ ಆವೃತ್ತಿಯನ್ನು ಪರಿಚಯಿಸುವ ಯೋಜನೆ ರೂಪಿಸಿರುವುದು.

ಟಾಟಾ ಹ್ಯಾರಿಯರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಫೋರ್ಡ್ ಸಿ-ಸೆಗ್ಮೆಂಟ್ ಎಸ್‌ಯುವಿ..!

ಜೊತೆಗೆ ಮಹೀಂದ್ರಾ ಸಂಸ್ಥೆಯೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿರುವ ಫೋರ್ಡ್ ಸಂಸ್ಥೆಯು ಹೊಸ ಕಾರುಗಳಿಗೆ ಎಂಜಿನ್ ಮತ್ತು ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿಗೆ ಪರಸ್ಪರ ಸಹಕರಿಸಲು ನಿರ್ಧರಿಸಿದ್ದು, ಈ ಯೋಜನೆಯ ಭಾಗವಾಗಿ ಮತ್ತಷ್ಟು ಹೊಸ ಕಾರುಗಳು ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿವೆ.

ಟಾಟಾ ಹ್ಯಾರಿಯರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಫೋರ್ಡ್ ಸಿ-ಸೆಗ್ಮೆಂಟ್ ಎಸ್‌ಯುವಿ..!

ಸುದ್ದಿ ಮೂಲಗಳ ಪ್ರಕಾರ, ಫೋರ್ಡ್ ಹೊಸ ಎಸ್‌ಯುವಿ ಕಾರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 5 ಸೀಟರ್ ಮತ್ತು 7 ಸೀಟರ್ ಮಾದರಿಯಲ್ಲಿ ಅಭಿವೃದ್ದಿಗೊಳ್ಳಲಿದ್ದು, ಬಿಎಸ್-6 ಪ್ರೇರಣೆಯ 2.0-ಲೀಟರ್ ಟರ್ಬೋಚಾಜ್ಡ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ.

MOST READ: ಆನೆ ನಡೆದಿದ್ದೇ ದಾರಿ ಎಂದ ಓಲಾ ಸಂಸ್ಥೆಗೆ ಬಿಗ್ ಶಾಕ್ ನೀಡಿದ ಸಾರಿಗೆ ಇಲಾಖೆ

ಟಾಟಾ ಹ್ಯಾರಿಯರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಫೋರ್ಡ್ ಸಿ-ಸೆಗ್ಮೆಂಟ್ ಎಸ್‌ಯುವಿ..!

2.0-ಲೀಟರ್ ಟರ್ಬೋಚಾಜ್ಡ್ ಎಂಜಿನ್ ಅನ್ನು 2020ರ ಆರಂಭದಲ್ಲಿ ಬಿಡುಗಡೆಯಾಗಲಿರುವ ನೆಕ್ಸ್ಟ್ ಜನರೇಷನ್ ಎಕ್ಸ್‌ಯುವಿ500 ಮಾದರಿಯಲ್ಲೂ ಬಳಕೆ ಮಾಡಲು ನಿರ್ಧರಿಸಿರುವ ಮಹೀಂದ್ರಾ ಸಂಸ್ಥೆಯು ತದನಂತರವಷ್ಟೇ ಫೋರ್ಡ್ ಹೊಸ ಎಸ್‌ಯುವಿ ಕಾರಿನಲ್ಲಿ ಜೋಡಣೆ ಮಾಡಿ ಬಿಡುಗಡೆಗೊಳಿಸಲಿದೆ.

ಟಾಟಾ ಹ್ಯಾರಿಯರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಫೋರ್ಡ್ ಸಿ-ಸೆಗ್ಮೆಂಟ್ ಎಸ್‌ಯುವಿ..!

ಹಾಗೆಯೇ ಹೊಸ ಕಾರು ಎಕ್ಸ್‌ಯುವಿ500 ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್‌ನಲ್ಲಿಯೇ ಅಭಿವೃದ್ಧಿಗೊಳಿಸಲು ನಿರ್ಧರಿಸಲಾಗಿದ್ದು, ಎಂಜಿನ್ ಮಾದರಿಯ ಬಳಕೆ ಕುರಿತಾದ ಮಾಹಿತಿ ಹೊರತಾಗಿ ಇನ್ಯಾವುದೇ ಹೆಚ್ಚಿನ ಮಾಹಿತಿ ನೀಡಿಲ್ಲ. ಹೀಗಾಗಿ ಹೊಸ ಕಾರು ಮುಂಬರುವ 2020ರ ಆಟೋ ಮೇಳದಲ್ಲಿ ಪ್ರದರ್ಶನಗೊಳ್ಳವ ಸಾಧ್ಯತೆಗಳಿವೆ.

MOST READ: ಭದ್ರತೆಗಾಗಿ ಮತ್ತೊಂದು ದುಬಾರಿ ಕಾರು ಖರೀದಿಸಿದ ಉದ್ಯಮಿ ಮುಕೇಶ್ ಅಂಬಾನಿ..!

ಟಾಟಾ ಹ್ಯಾರಿಯರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಫೋರ್ಡ್ ಸಿ-ಸೆಗ್ಮೆಂಟ್ ಎಸ್‌ಯುವಿ..!

ಇನ್ನು ಹೊಸ ಫೋರ್ಡ್ ಎಸ್‌ಯುವಿ ಕಾರು ಮಾದರಿಯು ಎಕ್ಸ್‌ಯುವಿ500 ಕಾರಿನ ಬೆಲೆಗಳಿಗೆ ಸರಿಸಮನಾಗುವ ಸಾಧ್ಯತೆಗಳಿದ್ದು, ಎಕ್ಸ್‌ಶೋರೂಂ ಪ್ರಕಾರ ರೂ.14 ಲಕ್ಷದಿಂದ ರೂ.18 ಲಕ್ಷ ಬೆಲೆಯೊಂದಿಗೆ ಟಾಟಾ ಹ್ಯಾರಿಯರ್ ಮತ್ತು ಜೀಪ್ ಕಂಪಾಸ್ ಕಾರುಗಳಿಗೆ ಪೈಪೋಟಿ ನೀಡುವ ನೀರಿಕ್ಷೆಗಳಿವೆ.

Note: Images are representative purpose only.

Most Read Articles

Kannada
Read more on ಫೋರ್ಡ್ ford
English summary
New Ford C-SUV To Be Launched In India In 2021. Read in Kannada.
Story first published: Saturday, March 23, 2019, 11:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X