2020ರ ಆಟೋ ಎಕ್ಸ್‌ಪೋ ನಂತರ ನ್ಯೂ ಜನರೇಷನ್ ಹೋಂಡಾ ಸಿಟಿ ಬಿಡುಗಡೆ ಪಕ್ಕಾ..!

ಮಧ್ಯಮ ಗಾತ್ರದ ಸೆಡಾನ್ ಆವೃತ್ತಿಗಳಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ಹೋಂಡಾ ಸಿಟಿ ಆವೃತ್ತಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಲು ಸಜ್ಜಾಗುತ್ತಿದ್ದು, ಹೊಸ ಕಾರು ಮುಂಬರುವ 2020ರ ದೆಹಲಿ ಆಟೋಎಕ್ಸೋ ನಂತರ ಬಿಡುಗಡೆಯ ಸುಳಿವು ನೀಡಿದೆ.

 2020ರ ಆಟೋ ಎಕ್ಸ್‌ಪೋ ನಂತರ ನ್ಯೂ ಜನರೇಷನ್ ಹೋಂಡಾ ಸಿಟಿ ಬಿಡುಗಡೆ ಪಕ್ಕಾ..!

ಹೋಂಡಾ ಸಂಸ್ಥೆಯು ಭಾರತ ಸೇರಿದಂತೆ ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ತನ್ನ ಜನಪ್ರಿಯ ಸಿಟಿ ಸೆಡಾನ್ ಕಾರಿನ 5ನೇ ತಲೆಮಾರಿನ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆಯನ್ನು ಅರಿಯಲು ಈಗಾಗಲೇ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದೆ. ಇದರಿಂದ ಬಿಡುಗಡೆಯ ಸನಿಹದಲ್ಲಿರುವ ಹೊಸ ಸಿಟಿ ಕಾರು 2020ರ ಫೆಬ್ರುವರಿಯಲ್ಲಿ ನಡೆಯಲಿರುವ ಆಟೋ ಎಕ್ಸ್‌ಪೋ ನಂತರ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.

 2020ರ ಆಟೋ ಎಕ್ಸ್‌ಪೋ ನಂತರ ನ್ಯೂ ಜನರೇಷನ್ ಹೋಂಡಾ ಸಿಟಿ ಬಿಡುಗಡೆ ಪಕ್ಕಾ..!

ಇದೇ ಮೊದಲ ಬಾರಿಗೆ ಹೋಂಡಾ ಸಂಸ್ಥೆಯು ಸಿಟಿ ಸೆಡಾನ್‌ನಲ್ಲಿ ಹೈಬ್ರಿಡ್ ಮಾದರಿಯನ್ನು ಕೂಡಾ ಬಿಡುಗಡೆಗೊಳಿಸುವ ಸಾಧ್ಯತೆಗಳಿದ್ದು, ಹೋಂಡಾ ನಿರ್ಮಾಣದ ಕಾರುಗಳಲ್ಲಿ ಅಕಾರ್ಡ್ ಸೆಡಾನ್ ನಂತರ ಹೈಬ್ರಿಡ್ ತಂತ್ರಜ್ಞಾನ ಹೊಂದಿದ 2ನೇ ಕಾರು ಮಾದರಿ ಇದಾಗಿರಲಿದೆ.

 2020ರ ಆಟೋ ಎಕ್ಸ್‌ಪೋ ನಂತರ ನ್ಯೂ ಜನರೇಷನ್ ಹೋಂಡಾ ಸಿಟಿ ಬಿಡುಗಡೆ ಪಕ್ಕಾ..!

ಕಳೆದ ಮಾರ್ಚ್‌ನಲ್ಲಿ ಸಿವಿಕ್ ಬಿಡುಗಡೆಯ ನಂತರ ಸಿಟಿ ಸೆಡಾನ್ ಕಾರಿನ ಮೇಲೆ ಹೆಚ್ಚಿನ ಗಮನಹರಿಸಿರುವ ಹೋಂಡಾ ಸಂಸ್ಥೆಯು 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಹೊಸ ತಲೆಮಾರಿನ ಸಿಟಿ ಕಾರನ್ನು ಪ್ರದರ್ಶನ ಮಾಡಿದ ನಂತರವಷ್ಟೇ ಬಿಡುಗಡೆ ಮಾಡಲಿದೆ.

 2020ರ ಆಟೋ ಎಕ್ಸ್‌ಪೋ ನಂತರ ನ್ಯೂ ಜನರೇಷನ್ ಹೋಂಡಾ ಸಿಟಿ ಬಿಡುಗಡೆ ಪಕ್ಕಾ..!

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸಿಟಿ ಕಾರಿಗಿಂತ ಹೊಸ ಆವೃತ್ತಿಯು ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಳ್ಳಲಿದ್ದು, 2014ರಲ್ಲಿ 4ನೇ ತಲೆಮಾರಿನ ಸಿಟಿ ಸೆಡಾನ್ ಕಾರು ಬಿಡುಗಡೆ ಮಾಡಿದ ಬಳಿಕ ಯಾವುದೇ ಬದಲಾವಣೆ ತರದ ಹೋಂಡಾ ಸಂಸ್ಥೆಯು ಇದೇ ಮೊದಲ ಬಾರಿಗೆ ಹೈಬ್ರಿಡ್ ತಂತ್ರಜ್ಞಾನ ಪರಿಚಯಿಸುತ್ತಿದೆ.

 2020ರ ಆಟೋ ಎಕ್ಸ್‌ಪೋ ನಂತರ ನ್ಯೂ ಜನರೇಷನ್ ಹೋಂಡಾ ಸಿಟಿ ಬಿಡುಗಡೆ ಪಕ್ಕಾ..!

5ನೇ ತಲೆಮಾರಿನ ಸಿಟಿ ಸೆಡಾನ್ ಕಾರು ಪ್ರಸ್ತುತ ಮಾದರಿಗಿಂತಲೂ ತುಸು ದೊಡ್ಡ ಗಾತ್ರವನ್ನು ಹೊಂದಿದ್ದು, ಬೂಟ್ ಸ್ಪೆಸ್ ಜೊತೆಗೆ ಹಿಂಬದಿಯ ಸವಾರರಿಗೆ ವಿಸ್ತರಿತ ಲೆಗ್ ರೂಂ ಮತ್ತು ಹೆಡ್ ರೂಂ ನೀಡಿರುವುದು ಆರಾಮದಾಯಕ ಪ್ರಯಾಣಕ್ಕೆ ಅನುಕೂಲಕರವಾಗಲಿದೆ. ಸದ್ಯ ಥೈಲ್ಯಾಂಡ್‌ನಲ್ಲಿ ಹೊಸ ತಲೆಮಾರಿನ ಕಾರಿನ ಟೆಸ್ಟಿಂಗ್ ಪ್ರಕ್ರಿಯೆ ಚಾಲನೆ ನೀಡಿರುವ ಹೋಂಡಾ ಸಂಸ್ಥೆಯು ಬಿಎಸ್-6 ನಿಯಮಗಳಿಗೆ ಅನುಗುಣವಾಗಿ ಹೊಸ ಕಾರಿನ ಎಂಜಿನ್ ಅನ್ನು ಅಲ್ಲಿಯೇ ಅಭಿವೃದ್ಧಿಪಡಿಸಿದೆ.

 2020ರ ಆಟೋ ಎಕ್ಸ್‌ಪೋ ನಂತರ ನ್ಯೂ ಜನರೇಷನ್ ಹೋಂಡಾ ಸಿಟಿ ಬಿಡುಗಡೆ ಪಕ್ಕಾ..!

ಥೈಲ್ಯಾಂಡ್‌ನಲ್ಲಿರುವ ಹೋಂಡಾ ಕಾರು ಉತ್ಪಾದನಾ ಘಟಕವು ಏಷ್ಯಾದ ಅತಿದೊಡ್ಡ ಕಾರು ಉತ್ಪಾದನಾ ಘಟಕ ಎಂಬ ಹೆಗ್ಗಳಿಕೆ ಹೊಂದಿದ್ದು, ಇಲ್ಲಿಂದಲೇ ಹೊಸ ಸಿಟಿ ಸೆಡಾನ್ ಕಾರು ಅಂತಿಮ ರೂಪ ಪಡೆದುಕೊಂಡು ಭಾರತಕ್ಕೆ ಪ್ರವೇಶಿಸಲಿದೆ.

MOST READ: ಕರ್ನಾಟಕದ ಪ್ರಮುಖ ನಾಲ್ಕು ಇಂಟರ್ ಸಿಟಿ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್

 2020ರ ಆಟೋ ಎಕ್ಸ್‌ಪೋ ನಂತರ ನ್ಯೂ ಜನರೇಷನ್ ಹೋಂಡಾ ಸಿಟಿ ಬಿಡುಗಡೆ ಪಕ್ಕಾ..!

ಹೊಸ ಸಿಟಿ ಸೆಡಾನ್ ಕಾರಿನಲ್ಲಿ ಈ ಬಾರಿ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಮಾರುತಿ ಸುಜುಕಿ ಸಿಯಾಜ್ ಮತ್ತು ಹ್ಯುಂಡೈ ವೆರ್ನಾ ಕಾರಿಗೆ ಮಾತ್ರವಲ್ಲದೇ ಟೊಯೊಟಾ ಕರೊಲ್ಲಾ ಆಟ್ಲಿಸ್ ಕಾರಿಗೂ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..

 2020ರ ಆಟೋ ಎಕ್ಸ್‌ಪೋ ನಂತರ ನ್ಯೂ ಜನರೇಷನ್ ಹೋಂಡಾ ಸಿಟಿ ಬಿಡುಗಡೆ ಪಕ್ಕಾ..!

ಎಂಜಿನ್ ಸಾಮರ್ಥ್ಯ

ಹೊಸ ತಲೆಮಾರಿನ ಹೋಂಡಾ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ನಲ್ಲಿ ಮಾತ್ರವಲ್ಲದೇ ಪೆಟ್ರೋಲ್ ಎಂಜಿನ್ ಜೊತೆಗೆ ಈ ಬಾರಿ ಕಂಪ್ಯಾಕ್ಟ್ ಹೈಬ್ರಿಡ್ ಎಂಜಿನ್ ಆಯ್ಕೆಯನ್ನು ಸಹ ಪಡೆದುಕೊಳ್ಳಲಿದ್ದು, ಇದು ಸೆಡಾನ್ ಕಾರು ಪ್ರಿಯರನ್ನು ಮತ್ತಷ್ಟು ಸೆಳೆಯಲಿದೆ.

MOST READ: ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

 2020ರ ಆಟೋ ಎಕ್ಸ್‌ಪೋ ನಂತರ ನ್ಯೂ ಜನರೇಷನ್ ಹೋಂಡಾ ಸಿಟಿ ಬಿಡುಗಡೆ ಪಕ್ಕಾ..!

ಸದ್ಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮಾದರಿಯು 1.5-ಲೀಟರ್ ಮತ್ತು ಡೀಸೆಲ್ ಮಾದರಿಯು 1.5-ಲೀಟರ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಹೊಸ ತಲೆಮಾರಿನಲ್ಲೂ 1.5-ಲೀಟರ್ ಎಂಜಿನ್ ಆಯ್ಕೆಯನ್ನೇ ಮುಂದುವರಿಸಿದ್ದರೂ ಸಹ ಬಿಎಸ್-6 ವೈಶಿಷ್ಟ್ಯತೆಯಿಂದಾಗಿ ಕಾರಿನ ಪರ್ಫಾಮೆನ್ಸ್ ಮತ್ತು ಮೈಲೇಜ್ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

 2020ರ ಆಟೋ ಎಕ್ಸ್‌ಪೋ ನಂತರ ನ್ಯೂ ಜನರೇಷನ್ ಹೋಂಡಾ ಸಿಟಿ ಬಿಡುಗಡೆ ಪಕ್ಕಾ..!

ಜೊತೆಗೆ 2020ರ ಏಪ್ರಿಲ್ 1ರಿಂದ ಬಿಎಸ್-6 ನಿಯಮ ಜಾರಿಗೆ ಹಿನ್ನೆಲೆಯಲ್ಲಿ ಹೊಸ ವಾಹನ ಎಂಜಿನ್‌ನಲ್ಲಿ ಸಾಕಷ್ಟು ಬದಲಾವಣೆ ಕಂಡುಬರುತ್ತಿದ್ದು, ಶೇ.25 ರಷ್ಟು ಹೊಗೆ ಉಗುಳುವ ಪ್ರಮಾಣ ಕಡಿಮೆಯಾದಲ್ಲಿ, ಶೇ.10ರಿಂದ 15ರಷ್ಟು ಮೈಲೇಜ್ ಪ್ರಮಾಣ ಹೆಚ್ಚಳವಾಗಲಿದೆ.

ಹಾಗೆಯೇ ಹೊಸ ಎಂಜಿನ್ ಹೊತ್ತುಬರುತ್ತಿರುವ ಬಿಎಸ್-6 ವಾಹನ ಬೆಲೆಯಲ್ಲೂ ತುಸು ದುಬಾರಿಯಾಗಲಿದ್ದು, ಬೆಲೆಗಳಿಗೆ ಅನುಗುಣವಾಗಿ ರೂ.80 ಸಾವಿರದಿಂದ ರೂ.2 ಲಕ್ಷದ ತನಕ ಈಗಿರುವ ಬೆಲೆಗಳಿಂತಲೂ ಹೆಚ್ಚು ಬೆಲೆ ಪಡೆದುಕೊಳ್ಳಲಿವೆ. ಇವುಗಳಲ್ಲಿ ಭಾರೀ ಬದಲಾವಣೆ ಪಡೆದುಕೊಳ್ಳುತ್ತಿರುವ ಹೋಂಡಾ ಸಿಟಿ ಸಹ ಈಗಿರುವ ವಿನ್ಯಾಸಕ್ಕಿಂತಲೂ ಹೆಚ್ಚಿನ ವೈಶಿಷ್ಟ್ಯತೆ ಹೊಂದಲಿದ್ದು, ಬೆಲೆಯೂ ಕೂಡಾ ತುಸು ದುಬಾರಿ ಎನ್ನಿಸಲಿದೆ.

Source: Key Auto

Most Read Articles

Kannada
Read more on ಹೋಂಡಾ honda
English summary
According to reports, New Gen Honda City car will be launched in Thailand by next month. Subsequent launches will follow later on with other Asian countries like Malaysia and India scheduled to get the new City in 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X