Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನ್ಯೂ ಜನರೇಷನ್ ಇಸುಝು ಡಿ-ಮ್ಯಾಕ್ಸ್ ಪಿಕ್ ಅಪ್ ಟ್ರಕ್ ಅನಾವರಣ
ಜಪಾನ್ ಜನಪ್ರಿಯ ಆಟೋ ಬ್ರಾಂಡ್ ಇಸುಝು ಸಂಸ್ಥೆಯು ತನ್ನ ಬಹುಬೇಡಿಕೆಯ ಡಿ-ಮ್ಯಾಕ್ಸ್ ಪಿಕ್ ಅಪ್ ಆವೃತ್ತಿಯ ಹೊಸ ಅವತರಣಿಕೆಯನ್ನು ಬಿಡುಗಡೆಗೆ ಸಜ್ಜಾಗುತ್ತಿದ್ದು, ಹೊಸ ಪಿಕ್ ಅಪ್ ವಾಹನವನ್ನು ಮಹತ್ವದ ಬದಲಾವಣೆಗಳೊಂದಿಗೆ ಅನಾವರಣಗೊಳಿಸಿ ಮುಂಬರುವ ಕೆಲವೇ ದಿನಗಳಲ್ಲಿ ಬಿಡುಗಡೆಯ ಸುಳಿವು ನೀಡಿದೆ.

ಹೊಸ ತಲೆಮಾರಿನ ಡಿ-ಮ್ಯಾಕ್ಸ್ ಪಿಕ್ ಅಪ್ ವಾಹನವು ತಾಂತ್ರಿಕವಾಗಿ ಭಾರೀ ಬದಲಾವಣೆ ಹೊಂದಿದ್ದು, ಮುಂಭಾಗದ ವಿನ್ಯಾಸದಲ್ಲಿ ಹೊಸ ತಂತ್ರಜ್ಞಾನ ಪ್ರೇರಿತ ಗ್ರಿಲ್ ಮತ್ತು ಕ್ರ್ಯಾಶ್ ಬಂಪರ್ ವಿನ್ಯಾಸದಲ್ಲಿ ಬದಲಾವಣೆ ತಂದಿದೆ. ನ್ಯೂ ಜನರೇಷನ್ ಪಿಕ್ ಅಪ್ ವಾಹನವು ಭಾರತದಲ್ಲಿ ಮಾತ್ರವಲ್ಲದೇ ಥೈಲ್ಯಾಂಡ್ ಸೇರಿದಂತೆ ಆಗ್ನೇಯ ಏಷ್ಯಾದ ಪ್ರಮುಖ ರಾಷ್ಟ್ರಗಳಲ್ಲೂ ಬಿಡುಗಡೆಯಾಗಲಿದ್ದು, ಈ ಹಿನ್ನಲೆ ಭಾರೀ ಬದಲಾವಣೆ ಪಡೆದಿರುವ ಹೊಸ ಪಿಕ್ ಅಪ್ ವಾಹನವು ಪ್ರಯಾಣಿಕ ಸುರಕ್ಷೆಗಾಗಿ ಗರಿಷ್ಠ ಮಟ್ಟದ ಸೆಫ್ಟಿ ಫೀಚರ್ಸ್ ಹೊಂದಿರಲಿದೆ.

ಸದ್ಯ ಡಿ-ಮ್ಯಾಕ್ಸ್ ಪಿಕ್ ಅಪ್ ವಾಹನವು ವಾಣಿಜ್ಯ ಬಳಕೆ ಮತ್ತು ವ್ಯಯಕ್ತಿಕ ಬಳಕೆಗಾಗಿ ಎರಡು ಮಾದರಿಯಲ್ಲಿ ಮಾರಾಟವಾಗುತ್ತಿದ್ದು, ನ್ಯೂ ಜನರೇಷನ್ ಮಾದರಿಯಲ್ಲೂ ಎರಡು ಆವೃತ್ತಿಗಳು ಕೂಡಾ ಮುಂದುವರಿಸಲು ನಿರ್ಧರಿಸಲಾಗಿದೆ.

ವ್ಯಯಕ್ತಿಕ ಬಳಕೆಗಾಗಿ ಮಾರಾಟವಾಗುತ್ತಿರು ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ ಅಪ್ ಮಾದರಿಗೆ ಸದ್ಯ ಹೆಚ್ಚು ಬೇಡಿಕೆಯಿದ್ದು, ನ್ಯೂ ಜನರೇಷನ್ ಮಾದರಿಯಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ವಾಹನಕ್ಕಿಂತಲೂ ಹೆಚ್ಚಿನ ಮಟ್ಟದ ವೀಲ್ಹ್‌ಬೆಸ್ ಸೌಲಭ್ಯವನ್ನು ನೀಡಲಾಗಿದೆ.

ಜೊತೆಗೆ ಪ್ರಯಾಣಿಕರ ಸುರಕ್ಷತೆಗಾಗಿ ಥೈಲ್ಯಾಂಡ್‌ನಲ್ಲಿ ಕಡ್ಡಾಯಗೊಳಿಸಲಾಗಿರುವ ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಮತ್ತು ಕ್ರಾಸ್ ಟ್ರಾಫಿಕ್ ಅಲರ್ಟ್ ಸಿಸ್ಟಂ ಫಿಚರ್ಸ್‌ಗಳನ್ನು ಸಹ ಹೊಸ ಇಸುಝು ಡಿ-ಮ್ಯಾಕ್ಸ್ ಪಿಕ್ ಅಪ್ ಪಡೆದುಕೊಂಡಿದ್ದು, ಆಫ್ ರೋಡ್ ಕೌಶಲ್ಯಕ್ಕೆ ಮತ್ತಷ್ಟು ರಗಡ್ ಲುಕ್ ನೀಡಲಾಗಿದೆ. ಈ ಬಾರಿ ಹೊಸ ಪಿಕ್ ವಾಹನದಲ್ಲಿ ಬಿ-ಎಲ್ಇಡಿ ಪ್ರೋಜೆಕ್ಟರ್ ಹೆಡ್‌ಲೈಟ್ಸ್, ಎಲ್ಇಡಿ ಟೈಲ್‌ಲೈಟ್ಸ್, ಇಂಟ್ರಾಗ್ರೆಟೆಡ್ ರಿಯರ್ ಬಂಪರ್, ಟರ್ನ್ ಇಂಡಿಕೇಟರ್ ಮತ್ತು ಹೊಸ ಡಿಸೈನ್ ಪ್ರೇರಿತ ಅಲಾಯ್ ವೀಲ್ಹ್ ನೀಡಲಾಗಿದೆ.

ಹೊಸ ವಾಹನದಲ್ಲಿ ಒಳಭಾಗದ ಫೀಚರ್ಸ್‌ಗಳಲ್ಲೂ ಕೂಡಾ ಸಾಕಷ್ಟು ಬದಲಾವಣೆಗಳಾಗಿದ್ದು, 9.0-ಇಂಚಿನ ಇನ್ಪೋಟೈನ್‌ಮೆಂಟ್, ನ್ಯಾವಿಗೇಷನ್, ಆಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ, ತ್ರಿ ಜೋನ್ ಕ್ಲೈಮೆಟ್ ಕಂಟ್ರೋಲ್, ನ್ಯೂ ಡಿಜಿಟಲ್ ಮಲ್ಟಿ ಇನ್ಫಾರ್ಮೆಷನ್ ಡಿಸ್‌ಪ್ಲೇ ನೀಡಲಾಗಿದೆ.

ಎಂಜಿನ್ ಸಾಮರ್ಥ್ಯ
ಪ್ರಸ್ತುತ ಮಾರುಕಟ್ಟೆಯಲ್ಲಿ ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ ಅಪ್ ವಾಹನದಲ್ಲಿ ಗ್ರಾಹಕರ ಬೇಡಿಕೆಯೆಂತೆ 1.9-ಲೀಟರ್ ಡೀಸೆಲ್ ಎಂಜಿನ್ ಮತ್ತು 3.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, ಇದರಲ್ಲಿ ಇಸುಝು ಸಂಸ್ಥೆಯು 1.9-ಲೀಟರ್ ಎಂಜಿನ್ ಅನ್ನು ಮಾತ್ರವೇ ಭಾರತದಲ್ಲಿ ಮಾಡುತ್ತಿದ್ದು, 3.0-ಲೀಟರ್ ಎಂಜಿನ್ ಮಾದರಿಯು ಥೈಲ್ಯಾಂಡ್‌ನಲ್ಲಿ ಮಾತ್ರವೇ ಖರೀದಿ ಲಭ್ಯವಿದೆ.

ಇಸುಝು ಸಂಸ್ಥೆಯು ಭಾರತದಲ್ಲಿ ಈ ಹಿಂದಿನಂತೆ 1.9-ಲೀಟರ್ ಡೀಸೆಲ್ ಎಂಜಿನ್ ಮಾತ್ರವೇ ಮಾರಾಟ ಮಾಡಲಿದ್ದು, ಹೊಸ ಎಂಜಿನ್ ಅನ್ನು 2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್-6 ನಿಯಮಕ್ಕೆ ಅನುಗುಣವಾಗಿ ಉನ್ನತೀಕರಿಸಿ ಮಾರಾಟ ಮಾಡಲಿದೆ.

ಬಿಎಸ್-6 ವೈಶಿಷ್ಟ್ಯತೆಯಿಂದಾಗಿ ಹೊಸ ವಾಹನದ ಪರ್ಫಾಮೆನ್ಸ್‌ನಲ್ಲಿ ಸಾಕಷ್ಟು ಬದಲಾವಣೆಗಳಾಗಲಿದ್ದು, ಅದಕ್ಕಿಂತಲೂ ಮುಖ್ಯವಾಗಿ ಮಾಲಿನ್ಯ ಉತ್ಪಾದನಾ ಪ್ರಮಾಣದಲ್ಲಿ ಸಾಕಷ್ಟು ಸುಧಾರಣೆಯೊಂದಿಗೆ ವರ್ಷಾಂತ್ಯಕ್ಕೆ ರಸ್ತೆಗಿಳಿಯುವುದು ಬಹುತೇಕ ಖಚಿತವಾಗಿದೆ.

ಹೊಸ ಎಂಜಿನ್ ಹೊತ್ತು ಬರುತ್ತಿರುವ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಕಾರು ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ರೂ.19.99 ಲಕ್ಷ ಬೆಲೆ ಹೊಂದಿದ್ದು, ಬಿಎಸ್-6 ಎಂಜಿನ್‌ನಿಂದಾಗಿ ಹೊಸ ವಾಹನದ ಬೆಲೆಯು ರೂ.22 ಲಕ್ಷದಿಂದ ರೂ.23 ಲಕ್ಷ ಬೆಲೆ ನಿಗದಿಯಾಗಬಹುದು ಎನ್ನಬಹುದು.