TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಬಿಡುಗಡೆಗೊಳ್ಳಲಿರುವ ಹೊಸ ಹೋಂಡಾ ಸಿವಿಕ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಶುರು
ಈ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯತೆ ಸಾಧಿಸಿ ಕಾರಣಾಂತರಗಳಿಂದ ಉತ್ಪಾದನೆ ಸ್ಥಗಿತಗೊಳಿಸಲಾಗಿದ್ದ ಹೋಂಡಾ ಸಿವಿಕ್ ಸೆಡಾನ್ ಕಾರುಗಳು ಇದೀಗ ಮತ್ತೆ ಖರೀದಿಗೆ ಲಭ್ಯವಾಗುತ್ತಿದ್ದು, ಪ್ರತಿಸ್ಪರ್ಧಿ ಕಾರುಗಳಿಗೆ ಭಾರೀ ಪೈಪೋಟಿ ನೀಡುವ ಸುಳಿವು ನೀಡಿದೆ.
2018ರ ಫೆಬ್ರುವರಿಯಲ್ಲಿ ನಡೆದಿದ್ದ ದೆಹಲಿ ಆಟೋ ಮೇಳದಲ್ಲಿ ಪ್ರದರ್ಶನಗೊಳ್ಳುವ ಮೂಲಕ ಸೆಡಾನ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ್ದ ಸಿವಿಕ್ ಕಾರುಗಳು ಸ್ಕೋಡಾ ಒಕ್ಟಿವಿಯಾ ಆರ್ಎಸ್ ಕಾರಿಗೆ ಪೈಪೋಟಿ ನೀಡುವ ಸುಳಿವು ನೀಡಿದ್ದು, ಸೆಡಾನ್ ಕಾರುಗಳಲ್ಲೇ ಬೆಸ್ಟ್ ಫೀಚರ್ಸ್ ಹೊತ್ತುಬರುವುದು ಬಹುತೇಕ ಖಚಿತವಾಗಿದೆ.
ಸೆಡಾನ್ ಆವೃತ್ತಿಗಳಿಗೆ ವಿಶೇಷ ಬೇಡಿಕೆ ಹಿನ್ನೆಲೆ ಹೋಂಡಾ ಇಂಡಿಯಾ ಸಂಸ್ಥೆಯು ತನ್ನ ಸಿವಿಕ್ ಮಾದರಿಗಳನ್ನು ಹೊಸತನದೊಂದಿಗೆ ಮರು ಅಭಿವೃದ್ಧಿಗೊಳಿಸಿದ್ದು, ಮುಂದಿನ ಮಾರ್ಚ್ ಅಂತ್ಯಕ್ಕೆ ಇಲ್ಲವೇ ಏಪ್ರಿಲ್ ಮೊದಲ ವಾರದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದೆ.
10ನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಸಿವಿಕ್ ಕಾರುಗಳನ್ನು ಅಭಿವೃದ್ಧಿ ಮಾಡಲಾಗಿದ್ದು, ವಿದೇಶಿ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಲಭ್ಯವಿರುವ ಸಿವಿಕ್ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿನ ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ವಿನ್ಯಾಸಗಳೊಂದಿಗೆ ಪರಿಚಯಿಸಲಾಗುತ್ತಿದೆ.
ಸದ್ಯ ವಿದೇಶಿ ಮಾರುಕಟ್ಟೆಯಲ್ಲಿರುವ ಸಿವಿಕ್ ಕಾರುಗಳು 4 ಸಿಲಿಂಡರ್ ಸೌಲಭ್ಯದೊಂದಿಗೆ ಮೂರು ವಿವಿಧ ಪೆಟ್ರೋಲ್ ಆವೃತ್ತಿಗಳು ಮತ್ತು ಡೀಸೆಲ್ ಆವೃತ್ತಿಯಲ್ಲಿ ಒಂದು ಆವೃತ್ತಿ ಲಭ್ಯವಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಸಿವಿಕ್ ಕಾರುಗಳು ತುಸು ಬದಲಾವಣೆ ಹೊಂದಲಿವೆ.
ಮಾಹಿತಿಗಳ ಪ್ರಕಾರ ಭಾರತೀಯ ಮಾದರಿಯ ಸಿವಿಕ್ ಕಾರುಗಳು 2.0-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1. 6- ಡೀಸೆಲ್ ಎಂಜಿನ್ ಹೊಂದಿರಲಿದ್ದು, ಪೆಟ್ರೋಲ್ ವರ್ಷನ್ 158 ಬಿಎಚ್ಪಿ, 187 ಎನ್ಎಂ ಟಾರ್ಕ್ ಮತ್ತು ಡೀಸೆಲ್ ವರ್ಷನ್ 118 ಬಿಎಚ್ಪಿ, 300 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.
ಸುಧಾರಿತ ತಂತ್ರಜ್ಞಾನಗಳ ಅಳವಡಿಕೆಯಲ್ಲಿ ಒಂದು ಹೆಜ್ಜೆ ಮುನ್ನಡೆ ಸಾಧಿಸಿರುವ ಹೋಂಡಾ ಸಂಸ್ಥೆಯು ಹೊಸ ಸಿವಿಕ್ ಕಾರುಗಳ ಇಂಧನ ಕಾರ್ಯಕ್ಷಮತೆಯನ್ನು ಹೆಚ್ಚಿಸಿದ್ದು, ಪ್ರತಿ ಲೀಟರ್ ಡೀಸೆಲ್ಗೆ 30 ಕಿಮಿ ಮೈಲೇಜ್ ನೀಡಲಿವೆ ಎಂದು ಹೇಳಿಕೊಂಡಿದೆ.
ಜೊತೆಗೆ 10ನೇ ಜನರೇಷನ್ ವೈಶಿಷ್ಟ್ಯತೆ ಹೊಂದಿರುವ ಸಿವಿಕ್ ಕಾರುಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇಲ್ಲವೇ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಅಳವಡಿಕೆ ಇರಲಿದ್ದು, ಎಲ್ಇಡಿ ಟೈಲ್ ಲೈಟ್ಸ್, ಡ್ಯುಯಲ್ ಟೋನ್ ಇಂಟಿರಿಯರ್, ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಇರಲಿದೆ.
ಇನ್ನು ಹೊಸ ಕಾರುಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್, ಇಬಿಡಿ, ಲಾರ್ಜ್ ಕ್ರೋಮ್ ಗ್ರಿಲ್, ಅಲಾಯ್ ಚಕ್ರಗಳು ಮತ್ತು 8 ಏರ್ ಬ್ಯಾಗ್ ವ್ಯವಸ್ಥೆ ಇರುವುದು ಸೆಡಾನ್ ಪ್ರಿಯರ ಆಯ್ಕೆಗೆ ಮತ್ತೊಂದು ಪ್ಲಸ್ ಪಾಯಿಂಟ್ ಆಗಲಿದೆ.