Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಯಾದ ಹೋಂಡಾ ಡಬ್ಲ್ಯೂಆರ್-ವಿ ಕಾರಿನ ಹೊಸ ವೇರಿಯೆಂಟ್
ದೇಶಿಯ ಮಾರುಕಟ್ಟೆಯಲ್ಲಿ ಸಬ್-4-ಮೀಟರ್ ಎಸ್ಯುವಿ ಕಾರುಗಳಿಗೆ ಬೇಡಿಕೆಯು ಹೆಚ್ಚುತ್ತಿರುವ ಕಾರಣ ಹ್ಯುಂಡೈ ಸಂಸ್ಥೆಯು ಈ ಸೆಗ್ಮೆಂಟ್ನಲ್ಲಿ ವೆನ್ಯೂ ಕಾರನ್ನು ಮತ್ತು ಮಹೀಂದ್ರಾ ಸಂಸ್ಥೆಯು ಎಕ್ಸ್ಯುವಿ300 ಕಾರನ್ನು ಬಿಡುಗಡೆ ಮಾದಿದ್ದು, ಉತ್ತಮ ರೆಸ್ಪಾನ್ಸ್ ಅನ್ನು ಪಡೆದುಕೊಳ್ಳುತ್ತಿದೆ. ಈ ಸೆಗ್ಮೆಂಟ್ನಲ್ಲಿ ಈಗಾಗಲೇ ಬಿಡುಗಡೆಗೊಂಡಿರುವ ಟಾಟಾ ನೆಕ್ಸಾನ್, ಫೋರ್ಡ್ ಇಕೊಸ್ಪೋರ್ಟ್ ಮತ್ತು ಹೋಂಡಾ ಡಬ್ಲ್ಯೂಆರ್-ವಿ ಕಾರುಗಳು ಕಡಿಮೆ ಸಂಖ್ಯೆಯಲ್ಲಿ ಮರಾಟವಾಗುತ್ತಿದೆ ಎಂದರೆ ತಪ್ಪಾಗಲಾರದು.

ಈ ನಿಟ್ಟಿನಲ್ಲಿ ಹೋಂಡಾ ಕಾರ್ಸ್ ಸಂಸ್ಥೆಯು ಸಬ್-4-ಮೀಟರ್ ಎಸ್ಯುವಿ ಕಾರುಗಳಲ್ಲಿ ಹೆಚ್ಚಿನ ಸಂಖ್ಯೆಯ ಮಾರಾಟವನ್ನು ಕಾಣಲು ಹಲವಾರು ಆಯ್ಕೆಗಳನ್ನು ಒಳಗೊಂಡ ತಮ್ಮ ಡಬ್ಲ್ಯೂಆರ್-ವಿ ಕಾರಿನ ಮತ್ತೊಂದು ವೇರಿಯೆಂಟ್ ಅನ್ನು ಬಿಡುಗಡೆ ಮಾಡಲಾಗಿದೆ. ಹೋಂಡಾ ಸಂಸ್ಥೆಯು ಬಿಡುಗಡೆ ಮಾಡಲಾದ ಹೋಂಡಾ ಡಬ್ಲ್ಯೂಆರ್-ವಿ ಕಾರಿನ ವಿ ವೇರಿಯಂಟ್ ಈಗಾಗಲೇ ಇರುವ ವಿ ಮತ್ತು ವಿಎಕ್ಸ್ ವೇರಿಯೆಂಟ್ಗಳೊಂದಿಗೆ ಮಾರಾಟವಾಗುತ್ತದೆ.

ಹೋಂಡಾ ಡಬ್ಲ್ಯೂಆರ್-ವಿ ಕಾರಿನ 1.2 ಲೀಟರ್ ಐ-ವಿಟೆಕ್ ಎಸ್ಎಂಟಿ ಕಾರು ರೂ, 8.15 ಲಕ್ಷದ ಬೆಲೆ, ಇದೇ ಎಂಜಿನ್ನ ವಿಎಕ್ಸ್ ಎಂಟಿ ಪೆಟ್ರೋಲ್ ಮಾದರಿಯು ರೂ, 9.25 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಇದಲ್ಲದೆ ಈ ಕಾರಿನ 1.5 ಲೀಟರ್ ಐ-ಡಿಟೆಕ್ ಡಿಸೆಲ್ ಎಸ್ ವೇರಿಯೆಂಟ್ ಎಂಟಿ ಮಾದರಿಯು ರೂ. 9.25 ಲಕ್ಷ ಮತ್ತು ವಿ ಡೀಸೆಲ್ ಮಾದರಿಯು 9.95 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಹಾಗೆಯೆ 1.5 ಲೀಟರ್ ಐ-ಡಿಟೆಕ್ ವಿಎಕ್ಸ್ ವೇರಿಯೆಂಟ್ ಎಂಟಿ ಮಾದರಿಯು ರೂ. 10.35 ಲಕ್ಷದ ಎಕ್ಸ್ ಶೋರುಂ ಬೆಲೆಯನ್ನು ಪಡೆದುಕೊಂಡಿದೆ.

ಹೋಂಡಾ ಡಬ್ಲ್ಯೂಆರ್-ವಿ ಕಾರಿನ ವಿ ಡೀಸೆಲ್ ವೇರಿಯೆಂಟ್ ಎಸ್ ಮತ್ತು ವಿಎಕ್ಸ್ ಕಾರಿನ ಮಧ್ಯ ಭಾಗದಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಹೊಸ ವೇರಿಯೆಂಟ್ನಲ್ಲಿ ಈ ಬಾರಿ ಇಂಟಿಗ್ರೇಟೆಡ್ ಎಲ್ಇಡಿ ಡಿಆರ್ಎಲ್, ಫ್ರಂಟ್ ಫಾಗ್ ಲ್ಯಾಂಪ್ಸ್, ಟರ್ನ್ ಇಂಡಿಕೇಟರ್ಸ್, 16 ಇಂಚಿನ ಅಲಾಯ್ ವ್ಹೀಲ್ಸ್ ಜೊತೆಗೆ ಗನ್ಮೆಟಲ್ ಫಿನಿಷ್, ರಿಯರ್ ಮೈಕ್ರೋ ಆನ್ಟೆನಾ ಮತ್ತು ಕ್ರೋಮ್ ಡೋರ್ ಹ್ಯಾಂಡಲ್ಸ್ ಅನ್ನು ಪಡೆದುಕೊಂಡಿದೆ.

ಇನ್ನು ಕಾರಿನ ಒಳಭಾಗದಲ್ಲಿ 17.7 ಸೆಂಟಿಮೀಟರ್ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ವಾಯ್ಸ್ ಕಮಾಂಡ್ ಮತ್ತು ಆಡಿಯೋ ಒಳಗೊಂಡತೆ ಇವುಗಳ ಜೊತೆಗೆ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ, ಕ್ರೂಸ್ ಕಂಟ್ರೋಲ್, ಮಲ್ಟಿ-ಫಂಕ್ಷನಲ್ ಸ್ಟೀರಿಂಗ್ ವ್ಹೀಲ್, ಫುಶ್ ಸ್ಟಾರ್ಟ್/ಸ್ಟಾಪ್ ಬಟನ್, ಹೋಂಡಾದ ಸ್ಮಾರ್ಟ್ ಕೀ ಫಂಕ್ಷನ್ನೊಂದಿಗೆ ಕೀಲೆಸ್ ರಿಮೋಟ್, ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಸ್ಟೀರಿಂಗ್, ಫ್ರಂಟ್ ಸೆಂಟ್ರಲ್ ಆರ್ಮ್ರೆಸ್ಟ್ ಹಾಗು ಡ್ಯುಯಲ್ ಟೋನ್ ಬ್ಲಾಕ್/ಸಿಲ್ವರ್ ಸೀಟ್ನಿಂದ ಸಜ್ಜುಗೊಂಡ ಸೀಟ್ಗಳನ್ನು ನೀಡಲಾಗಿದೆ.

ಹೋಂಡಾ ಡಬ್ಲ್ಯೂಆರ್-ವಿ ಕಾರು ಜಾಝ್ ಕಾರಿನಲ್ಲಿ ಬಳಸಲಾದ ಎಸಿಇ ಬಾಡಿ ವಿನ್ಯಾಸವನ್ನು ಅಧರಿಸಲಾಗಿದ್ದು, ಈ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಫ್ರಂಟ್ ಏರ್ಬ್ಯಾಗ್ಸ್, ಎಬಿಎಸ್ನೊಂದಿಗೆ ಇಬಿಡಿ, ರಿವರ್ಸ್ ಸೆನ್ಸಾರ್ಸ್ ಮತ್ತು ಕ್ಯಾಮೆರಾದೊಂದಿಗೆ ಗೈಡ್ಲೈನ್ಸ್, ಸ್ಪೀಡ್ ಅಲರ್ಟ್, ಪೆಡೆಸ್ಟ್ರೈನ್ ಇನ್ಜ್ಯುರಿ ಮಿಟಿಗೇಷನ್, ಬ್ರೇಕ್ ಓವರ್ರೈಡ್ ಸಿಸ್ಟಂ ಮತ್ತು ಫ್ರಂಟ್ ಸೀಟ್ ಬೆಲ್ಟ್ ರಿಮೈಂಡರ್ ಹಾಗು ಇನ್ನಿತರೆ ಸುರಕ್ಷಾ ಸಾಧನಗಳನ್ನು ಪಡೆದುಕೊಂಡಿದೆ.

ಹೊಸ ವೇರಿಯೆಂಟ್ ಅನ್ನು ಬಿಡುಗಡೆ ಮಾಡುವುದಲ್ಲದೆಯೆ ಹೋಂಡಾ ಸಂಸ್ಥೆಯು ತಮ್ಮ ಡಬ್ಲ್ಯೂಆರ್ವಿ ಕಾರಿನ ಎಸ್ಸ್ ವೇರಿಯೆಂಟ್ನಲ್ಲಿ ಹೊಸದಾಗಿ ಜ್ಯಾಕ್ ಕ್ನೈಫ್ ರೆಟ್ರಾಕ್ಟಬಲ್ ಕೀ, ಆಟೋ ಎಸಿನೊಂದಿಗೆ ಟಚ್ ಕಂಟ್ರೋಲ್ ಪ್ಯಾನಲ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ಫಾಗ್ ಲ್ಯಾಂಪ್ಸ್, ಡ್ರೈವರ್ ಸೈಡ್ ವಿಂಡೋ ಒನ್ ಟಚ್ ಅಪ್/ಡೌನ್ನೊಂಡಿಗೆ ಪಿಂಚ್ ಗಾರ್ಡ್, ಫ್ರಂಟ್ ವ್ಯಾನಿಟಿ ಮಿರರ್ನೊಂದಿಗೆ ಲಿಡ್, ರಿಯರ್ ಅಪರ್ಕಿಂಗ್ ಸೆನ್ಸಾರ್ಸ್, ಹೈ-ಸ್ಪೀಡ್ ಅಲರ್ಟ್ ಮತ್ತು ರಿಯರ್ ಪಾರ್ಕಿಂಗ್ ಅನ್ನು ಹೊಸದಾಗಿ ನೀಡಲಾಗಿದೆ.

ಇನ್ನು ಹೋಂಡಾ ಡಬ್ಲ್ಯೂಆರ್-ವಿ ಕಾರಿನ ಟಾಪ್ ಎಂಡ್ ವೇರಿಯೆಂಟ್ ಆದ ವಿಎಕ್ಸ್ ವೇರಿಯೆಂಟ್ನಲ್ಲಿ ಈ ಬಾರಿ ಹೊಸದಾಗಿ ಲೆದರ್ನಿಂದ ಸಜ್ಜುಗೊಂಡ ಸ್ಟೀರಿಂಗ್ ವ್ಹೀಲ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ವ್ಯಾನಿಟಿ ಮಿರರ್ ಅಪ್ ಫ್ರಂಟ್ ವಿಥ್ ಲಿಡ್ ಮತ್ತು ಸರ್ಕಾರವು ಜಾರಿ ಮಾಡಲಾದ ಹೊಸ ಸುರಕ್ಷಾ ಕಾಯ್ದೆಯ ಅನುಸಾರ ಎಲ್ಲಾ ಸೇಫ್ಟಿ ಫೀಚರ್ಗಳನ್ನು ಈ ವೇರಿಯೆಂಟ್ನಲ್ಲಿ ನೀಡಲಾಗಿದೆ.

ಹೋಂಡಾ ಸಂಸ್ಥೆಯು ಜೂನ್ 2019ರಲ್ಲಿ ಕೇವಲ 1268 ಡಬ್ಲ್ಯೂಆರ್-ವಿ ಕಾರುಗಳನ್ನು ಮಾರಾಟ ಮಾಡಿದ್ದು, ತನ್ನ ಎದುರಾಳಿಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಇದರಿಂದಾಗಿ ಡಬ್ಲ್ಯೂಆರ್ವಿ ಕಾರಿನ ಹೊಸ ವೇರೆಯಂಟ್ ಅನ್ನು ಬಿಡುಗಡೆ ಮಾಡಿದ ಕಾರಣ ಈ ಕಾರಿನ ಮಾರಾಟ ಸಂಖ್ಯೆಯು ಹೆಚ್ಚಲಿದೆಯೆ ಎಂದು ಕಾಯ್ದು ನೋಡಬೇಕಿದೆ.