ಹ್ಯುಂಡೈನಿಂದ ರೂ.10 ಲಕ್ಷದೊಳಗೆ ಎಲೆಕ್ಟ್ರಿಕ್ ಕಾರು ಬಿಡುಗಡೆ ಪಕ್ಕಾ..!

ಹ್ಯುಂಡೈ ಸಂಸ್ಥೆಯು ಸದ್ಯ ಎಲೆಕ್ಟ್ರಿಕ್ ಕಾರು ಉತ್ಪಾದನೆ ಮತ್ತು ಮಾರಾಟ ವಿಚಾರವಾಗಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ದೇಶಿಯ ಮಾರುಕಟ್ಟೆಗಾಗಿ ರೂ.10 ಲಕ್ಷ ಬೆಲೆ ಅಂತರದಲ್ಲಿ ಅತ್ಯುತ್ತಮ ಮೈಲೇಜ್ ಪ್ರೇರಿತ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಪರಿಚಯಿಸುವುದಾಗಿ ಹೇಳಿಕೊಂಡಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹ್ಯುಂಡೈ ಹೊಸ ಕಾರು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗಾಗಿ ಸಿದ್ದವಾಗುತ್ತಿರುವ ಟಾಟಾ ಆಲ್‌ಟ್ರೊಜ್ ಎಲೆಕ್ಟ್ರಿಕ್ ಕಾರಿಗೆ ತೀವ್ರ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಹ್ಯುಂಡೈನಿಂದ ರೂ.10 ಲಕ್ಷದೊಳಗೆ ಎಲೆಕ್ಟ್ರಿಕ್ ಕಾರು ಬಿಡುಗಡೆ ಪಕ್ಕಾ..!

ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ತನ್ನ ಬಹುನೀರಿಕ್ಷಿತ ಕೋನಾ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಬಿಡುಗಡೆ ಮಾಡಿರುವ ಹ್ಯುಂಡೈ ಸಂಸ್ಥೆಯು ಹೊಸ ಕಾರಿನ ಬೆಲೆಯನ್ನು ರೂ.25.30 ಲಕ್ಷ ಬಿಡುಗಡೆಗೊಳಿಸಿದೆ. ಪ್ರತಿ ಚಾರ್ಜ್‌ಗೆ 452 ಕಿ.ಮಿ ಮೈಲೇಜ್ ಹೊಂದಿರುವ ಕೋನಾ ಎಲೆಕ್ಟ್ರಿಕ್ ಕಾರು ಬೆಲೆಗೆ ತಕ್ಕಂತೆ ಮೈಲೇಜ್ ಹಾಗೂ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿದೆ. ಆದರೆ ಇದು ಮಧ್ಯಮ ವರ್ಗದ ಗ್ರಾಹಕರು ಖರೀದಿ ಮಾಡಲು ಸಾಧ್ಯವಿಲ್ಲ ಎನ್ನುವುದು ಅರಿತಿರುವ ಹ್ಯುಂಡೈ ಸಂಸ್ಥೆಯು ಮುಂಬರುವ ದಿನಗಳಲ್ಲಿ ಅಗ್ಗದ ಬೆಲೆ ಇವಿ ಕಾರುಗಳನ್ನು ಸಿದ್ದಪಡಿಸುವುದಾಗಿ ಹೇಳಿಕೊಂಡಿದೆ.

ಹ್ಯುಂಡೈನಿಂದ ರೂ.10 ಲಕ್ಷದೊಳಗೆ ಎಲೆಕ್ಟ್ರಿಕ್ ಕಾರು ಬಿಡುಗಡೆ ಪಕ್ಕಾ..!

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿ ಮತ್ತು ಮಾರಾಟ ಕುರಿತಾಗಿ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿರುವ ಹ್ಯುಂಡೈ ಇಂಡಿಯಾ ಸಿಇಒ ಎಸ್ಎಸ್ ಕಿಮ್ ಅವರು, ಆಟೋ ಉದ್ಯಮದಲ್ಲಿ ವೇಗವಾಗಿ ಬೆಳೆಯುತ್ತಿರುವ ಭಾರತೀಯ ಮಾರುಕಟ್ಟೆಯಲ್ಲಿ ಕೋನಾ ಪ್ರಮುಖ ಪಾತ್ರವಹಿಸಲಿದ್ದು, ಮುಂಬರುವ ದಿನಗಳಲ್ಲಿ ಮಧ್ಯಮ ವರ್ಗದ ಗ್ರಾಹಕರು ಕೂಡಾ ಎಲೆಕ್ಟ್ರಿಕ್ ಕಾರು ಖರೀದಿಸಲು ಸಾಧ್ಯವಾಗುವಂತೆ ಅಗ್ಗದ ಬೆಲೆಯ ಎಲೆಕ್ಟ್ರಿಕ್ ಕಾರುಗಳನ್ನು ಭಾರತದಲ್ಲೇ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ.

ಹ್ಯುಂಡೈನಿಂದ ರೂ.10 ಲಕ್ಷದೊಳಗೆ ಎಲೆಕ್ಟ್ರಿಕ್ ಕಾರು ಬಿಡುಗಡೆ ಪಕ್ಕಾ..!

ಸದ್ಯ ಬಿಡುಗಡೆ ಮಾಡಲಾಗಿರುವ ಕೋನಾ ಎಲೆಕ್ಟ್ರಿಕ್ ಆವೃತ್ತಿಯನ್ನು ದಕ್ಷಿಣ ಕೊರಿಯಾದಿಂದ ಆಮದು ಮಾಡಿಕೊಂಡು ಭಾರತದಲ್ಲಿ ಕೆಲವು ಬದಲಾವಣೆಗಳೊಂದಿಗೆ ಮಾರಾಟ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಭಾರತದಲ್ಲೇ ಪೂರ್ಣಪ್ರಮಾಣದಲ್ಲಿ ನಿರ್ಮಾಣವಾದಲ್ಲಿ ಎಲೆಕ್ಟ್ರಿಕ್ ಕಾರಿನ ಬೆಲೆ ಸಾಕಷ್ಟುಇಳಿಕೆಯಾಗಲಿದೆ.

ಹ್ಯುಂಡೈನಿಂದ ರೂ.10 ಲಕ್ಷದೊಳಗೆ ಎಲೆಕ್ಟ್ರಿಕ್ ಕಾರು ಬಿಡುಗಡೆ ಪಕ್ಕಾ..!

ಹೀಗಾಗಿಯೇ ಎಲೆಕ್ಟ್ರಿಕ್ ಕಾರು ಉತ್ಪಾದನೆ ಮೇಲೆ ವಿಶೇಷ ಆಸಕ್ತಿ ತೊರಿರುವ ಹ್ಯುಂಡೈ ಸಂಸ್ಥೆಯು ಭಾರತದಲ್ಲೇ ಇವಿ ಕಾರುಗಳ ಉತ್ಪಾದನೆಗಾಗಿ ಚೆನ್ನೈ ಬಳಿಯಿರುವ ತನ್ನ ಕಾರು ಉತ್ಪಾದನಾ ಘಟಕವನ್ನು ವಿಸ್ತರಣೆ ಮಾಡುತ್ತಿದ್ದು, ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿಗೊಳಿಸಲು ಪ್ರತ್ಯೇಕ ಪ್ಲಾಟ್‌ಫಾರ್ಮ್ ನಿರ್ಮಾಣಕ್ಕಾಗಿ ಬರೋಬ್ಬರಿ ರೂ. 2 ಸಾವಿರ ಕೋಟಿ ಬಂಡವಾಳ ಹೂಡಿಕೆ ಕೂಡಾ ಮಾಡಿದೆ. ಸದ್ಯ ಹೊಸ ಎಲೆಕ್ಟ್ರಿಕ್ ಕಾರು ಉತ್ಪಾದನಾ ಘಟಕದ ನಿರ್ಮಾಣ ಕಾರ್ಯವು ಭರದಿಂದ ಸಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಕಾರು ಉತ್ಪಾದನೆಗೆ ಅಧಿಕೃತ ಚಾಲನೆ ಸಿಗಲಿದೆ.

ಹ್ಯುಂಡೈನಿಂದ ರೂ.10 ಲಕ್ಷದೊಳಗೆ ಎಲೆಕ್ಟ್ರಿಕ್ ಕಾರು ಬಿಡುಗಡೆ ಪಕ್ಕಾ..!

ಈ ಮೂಲಕ ಐಷಾರಾಮಿ ಮಾದರಿಯ ಎಲೆಕ್ಟ್ರಿಕ್ ಕಾರುಗಳ ಜೊತೆಗೆ ಕೈಗೆಟುಕುವ ಬೆಲೆಗಳಲ್ಲೂ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿರುವ ಹ್ಯುಂಡೈ ಸಂಸ್ಥೆಯು, ರೂ. 10 ಲಕ್ಷದೊಳಗೆ ಹ್ಯಾಚ್‌ಬ್ಯಾಕ್ ಶೈಲಿಯ ಹೊಸ ಎಲೆಕ್ಟ್ರಿಕ್ ಕಾರು ಮಾದರಿಯೊಂದನ್ನು ಮಾರುಕಟ್ಟೆಗೆ ಪರಿಚಯಿಸುವ ಇರಾದೆಯಲ್ಲಿದೆ. ಇದು ಟಾಟಾ ಸಂಸ್ಥೆಯು ಬಿಡುಗಡೆ ಮಾಡಲು ಉದ್ದೇಶಿಸಿರುವ ಟಾಟಾ ಆಲ್‌ಟ್ರೊಜ್ ಎಲೆಕ್ಟ್ರಿಕ್ ಕಾರಿಗೆ ಸಮನಾಗಿರಲಿದೆ ಎನ್ನಲಾಗಿದೆ.

ಹ್ಯುಂಡೈನಿಂದ ರೂ.10 ಲಕ್ಷದೊಳಗೆ ಎಲೆಕ್ಟ್ರಿಕ್ ಕಾರು ಬಿಡುಗಡೆ ಪಕ್ಕಾ..!

ಇನ್ನು ಕೋನಾ ಎಲೆಕ್ಟ್ರಿಕ್ ಕಾರು 39.2kWh ಬ್ಯಾಟರಿ ಸಾಮರ್ಥ್ಯದೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 452 ಕಿ.ಮಿ ಮೈಲೇಜ್ ಹಿಂದಿರುಗಿಸಬಲ್ಲ ವೈಶಿಷ್ಟ್ಯತೆಯನ್ನು ಹೊಂದಿದ್ದು, ಎಲೆಕ್ಟ್ರಿಕ್ ವಾಹನಗಳ ಮೈಲೇಜ್ ಪ್ರಮಾಣಕ್ಕೆ ಪ್ರಮಾಣ ಪತ್ರ ಒದಗಿಸುವ ಎಆರ್‌ಎಐ ಸಂಸ್ಥೆಯೇ ಕೋನಾ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಪ್ರಮಾಣವನ್ನು ಪ್ರಮಾಣಿಕರಿಸಿದೆ.

ಹ್ಯುಂಡೈನಿಂದ ರೂ.10 ಲಕ್ಷದೊಳಗೆ ಎಲೆಕ್ಟ್ರಿಕ್ ಕಾರು ಬಿಡುಗಡೆ ಪಕ್ಕಾ..!

ಕೋನಾ ಎಲೆಕ್ಟ್ರಿಕ್ ಕಾರು ಸಾಮಾನ್ಯ ಕಾರುಗಳಂತೆಯೇ ಪರ್ಫಾಮೆನ್ಸ್‌ನಲ್ಲೂ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದು, 100kW ಫ್ರಂಟ್ ವೀಲ್ಹ್ ಮೋಟಾರ್ ಪವರ್ ಮೂಲಕ 131-ಬಿಎಚ್‌ಪಿ ಮತ್ತು 395-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಕೇವಲ 9.7-ಸೇಕೆಂಡುಗಳಲ್ಲಿ ಸೊನ್ನೆಯಿಂದ 100ಕಿ.ಮಿ ವೇಗ ತಲುಪಬಲ್ಲದು.

ಹ್ಯುಂಡೈನಿಂದ ರೂ.10 ಲಕ್ಷದೊಳಗೆ ಎಲೆಕ್ಟ್ರಿಕ್ ಕಾರು ಬಿಡುಗಡೆ ಪಕ್ಕಾ..!

ಕೋನಾ ಕಾರು 155 ಕಿ.ಮಿ ಟಾಪ್ ಸ್ಪೀಡ್ ಸೌಲಭ್ಯವನ್ನು ಹೊಂದಿದ್ದು, ಪೂರ್ಣ ಪ್ರಮಾಣದಲ್ಲಿ ಬ್ಯಾಟರಿ ಚಾರ್ಜ್‌ ಆಗಲು ಕನಿಷ್ಠ 8 ಗಂಟೆ ತೆಗೆದುಕೊಳ್ಳಲಿದೆ. ಹೀಗಾಗಿ ಕೋನಾ ಕಾರಿನಲ್ಲಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವು ಆಕರ್ಷಕವಾಗಿದ್ದು, ಶೇ.80 ರಷ್ಟು ಚಾರ್ಜಿಂಗ್ ಮಾಡಲು ಕೇವಲ 52 ನಿಮಿಷ ತೆಗೆದುಕೊಳ್ಳುತ್ತದೆ.

ಹ್ಯುಂಡೈನಿಂದ ರೂ.10 ಲಕ್ಷದೊಳಗೆ ಎಲೆಕ್ಟ್ರಿಕ್ ಕಾರು ಬಿಡುಗಡೆ ಪಕ್ಕಾ..!

ಕ್ರೆಟಾ ಕಾರಿಗಿಂತಲೂ ತುಸು ಕಡಿಮೆ ಉದ್ದಳತೆ ಹೊಂದಿರುವ ಕೋನಾ ಎಲೆಕ್ಟ್ರಿಕ್ ಕಾರು ಹಲವು ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬಂದಿದ್ದು, 4,180-ಎಂಎಂ ಉದ್ದ, 1,800-ಎಂಎಂ ಅಗಲ, 1,570-ಎಂಎಂ ಎತ್ತರ ಮತ್ತು 2,600-ಎಂಎಂ ವೀಲ್ಹ್‌ಬೇಸ್‌ನೊಂದಿಗೆ 332-ಲೀಟರ್ ಸಾಮರ್ಥ್ಯದ ಲಗೇಜ್ ಸ್ಪೆಸ್ ಪಡೆದುಕೊಂಡಿದೆ.

Most Read Articles

Kannada
English summary
Hyundai Working On A New Electric Car Under Rs 10 Lakh — An Electric Vehicle For The Masses.
Story first published: Wednesday, July 17, 2019, 16:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X