ಅನಾವರಣಗೊಂಡ ಹೊಸ ಗ್ರಾಂಡ್ ಐ10 ನಿಯೋಸ್

ಹ್ಯುಂಡೈ ಇಂಡಿಯಾ ತನ್ನ ಹೊಸ ಕಾರ್ ಆದ ಗ್ರಾಂಡ್ ಐ10 ನಿಯೋಸ್ ಹ್ಯಾಚ್‍‍ಬ್ಯಾಕ್ ಅನ್ನು ಅನಾವರಣಗೊಳಿಸಿದೆ. ಹೊಸ ಗ್ರಾಂಡ್ ಐ10 ನಿಯೋಸ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಆಗಸ್ಟ್ 20ರಂದು ಬಿಡುಗಡೆಗೊಳಿಸಲಾಗುವುದು.

ಅನಾವರಣಗೊಂಡ ಹೊಸ ಗ್ರಾಂಡ್ ಐ10 ನಿಯೋಸ್

ಮೊದಲಿಗೆ ಈ ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗುವುದು. ಮುಂಬರುವ ದಿನಗಳಲ್ಲಿ ಈ ಕಾರ್ ಅನ್ನು ಕೊರಿಯಾ ಸೇರಿದಂತೆ ಉಳಿದ ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಕಾರಿನ ಅನಾವರಣದೊಂದಿಗೆ ಹ್ಯುಂಡೈ ಕಂಪನಿಯು ಹೊಸ ಹ್ಯಾಚ್‍‍ಬ್ಯಾಕ್‍‍ನ ಬುಕ್ಕಿಂಗ್‍ ಶುರುವಾಗಿರುವುದರ ಬಗ್ಗೆ ಘೋಷಿಸಿದೆ. ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಅನ್ನು ಕಂಪನಿಯ ಡೀಲರ್‍‍‍ಗಳ ಬಳಿ ಹಾಗೂ ಆನ್‌ಲೈನ್‌ನಲ್ಲಿ ರೂ.11,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಈ ಹ್ಯಾಚ್‌ಬ್ಯಾಕ್‌ ಅನ್ನು ಬಿಡುಗಡೆಗೊಳಿಸಿದ ನಂತರ, ಈ ಕಾರಿನ ವಿತರಣೆಯನ್ನು ಶುರುಮಾಡುವ ಸಾಧ್ಯತೆಗಳಿವೆ. ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್, ಹ್ಯುಂಡೈ ಕಂಪನಿಯು ಐ10 ಸರಣಿಯಲ್ಲಿ ಬಿಡುಗಡೆಗೊಳಿಸುತ್ತಿರುವ ಮೂರನೇ ತಲೆಮಾರಿನ ಮಾದರಿಯಾಗಿದೆ.

ಅನಾವರಣಗೊಂಡ ಹೊಸ ಗ್ರಾಂಡ್ ಐ10 ನಿಯೋಸ್

ನಿಯೋಸ್‍‍ನ ಅರ್ಥವು ಹೆಚ್ಚು ಎಂಬುದಾಗಿದೆ. ಇದರಿಂದಾಗಿ ಗ್ರಾಹಕರಿಗೆ ಹೆಚ್ಚಿನ ಸ್ಪೇಸ್, ಫೀಚರ್‍ ಹಾಗೂ ಪರ್ಫಾಮೆನ್ಸ್ ಬಗ್ಗೆ ಹೇಳಿದಂತಾಗುತ್ತದೆ. ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿರುವ ಹಳೆಯ ಹ್ಯಾಚ್‍‍ಬ್ಯಾಕ್‍‍ನೊಂದಿಗೆ ಮಾರಾಟ ಮಾಡಲಾಗುವುದು.

ಅನಾವರಣಗೊಂಡ ಹೊಸ ಗ್ರಾಂಡ್ ಐ10 ನಿಯೋಸ್

ನಿಯೋಸ್ ಕಾರು ಈಗಿನ ತಲೆಮಾರಿನ ಗ್ರ್ಯಾಂಡ್ ಐ10 ಹಾಗೂ ಎಲೈಟ್ ಐ20 ಕಾರುಗಳ ನಡುವಿನ ಸರಣಿಯಲ್ಲಿರಲಿದೆ. ಕಾರಿನ ಎಕ್ಸ್ ಟಿರಿಯರ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಇತ್ತೀಚಿನ ತಲೆಮಾರಿನ ಸ್ಯಾಂಟ್ರೊ ಮಾದರಿಯ ಸ್ಟೈಲಿಂಗ್ ಹೊಂದಿರಲಿದೆ. ಈ ಕಾರಿನ ಮುಂಭಾಗದಲ್ಲಿ ಹ್ಯುಂಡೈನ ಸಿಗ್ನೇಚರ್ ಕ್ಯಾಸ್ಕೇಡಿಂಗ್ ಗ್ರಿಲ್ ಇರಲಿದ್ದು, ಎರಡೂ ಬದಿಯಲ್ಲಿ ಆಂಗ್ಯುಲರ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳಿರಲಿವೆ.

ಅನಾವರಣಗೊಂಡ ಹೊಸ ಗ್ರಾಂಡ್ ಐ10 ನಿಯೋಸ್

ಹೊಸ ಗ್ರ್ಯಾಂಡ್ ಐ10 ನಿಯೋಸ್‌ನಲ್ಲಿನ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಈಗ ಮುಂಭಾಗದ ಗ್ರಿಲ್‌ನ ಎಡ್ಜ್ ನಲ್ಲಿ ಅಳವಡಿಸಲಾಗಿದೆ. ಗ್ರ್ಯಾಂಡ್ ಐ10 ನಿಯೋಸ್‌ನ ಸೈಡ್ ಪ್ರೊಫೈಲ್ ಮಿನಿಮಲ್ ಸ್ಟೈಲಿಂಗ್ ಹೊಂದಿರಲಿದ್ದು, ಸಿ-ಪಿಲ್ಲರ್, ಕ್ರೋಮ್ ಡೋರ್ ಹ್ಯಾಂಡಲ್‌ಗಳು ಹಾಗೂ ಹೊಸ ವಿನ್ಯಾಸದ ಅಲಾಯ್ ವ್ಹೀಲ್‌ಗಳನ್ನು ಹೊಂದಿರಲಿದೆ.

ಅನಾವರಣಗೊಂಡ ಹೊಸ ಗ್ರಾಂಡ್ ಐ10 ನಿಯೋಸ್

ಗ್ರ್ಯಾಂಡ್ ಐ10 ನಿಯೋಸ್‌ನಲ್ಲಿರುವ ಸಿಲೂಯೆಟ್ ನೇರವಾಗಿ ಮಾರುಕಟ್ಟೆಯಲ್ಲಿರುವ ಮಾದರಿಯನ್ನು ಹೋಲುತ್ತದೆ. ಹೊಸ ಗ್ರ್ಯಾಂಡ್ ಐ10 ನಿಯೋಸ್‌ನ ಇಂಟಿರಿಯರ್ ಅನ್ನು ಸಹ ಬಹಿರಂಗಪಡಿಸಲಾಗಿದೆ. ಇಂಟಿರಿಯರ್‍‍ನಲ್ಲಿ ಐವರಿ ಗ್ರೇ ಬಣ್ಣದಲ್ಲಿರುವ ಕ್ಯಾಬಿನ್‌, ಸಂಪೂರ್ಣವಾಗಿ ಹೊಸ ವಿನ್ಯಾಸವನ್ನು ಹೊಂದಿದೆ.

MOST READ: ಈ ಮೆಕಾನಿಕಲ್ ಎಂಜಿನಿಯರ್ ಈಗ ಮುಂಬೈನ ಮೊದಲ ಮಹಿಳಾ ಚಾಲಕಿ

ಅನಾವರಣಗೊಂಡ ಹೊಸ ಗ್ರಾಂಡ್ ಐ10 ನಿಯೋಸ್

ಈ ಹ್ಯಾಚ್‌ಬ್ಯಾಕ್‍‍ನಲ್ಲಿ ಟೆಕ್ಸ್ಚರ್ಡ್ ಫಿನಿಶ್ ಹೊಂದಿರುವ ಹೊಸ ಡ್ಯಾಶ್‌ಬೋರ್ಡ್‌, 8.0 ಇಂಚಿನ ದೊಡ್ಡ ಗಾತ್ರದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂಗಳಿವೆ. ಇದರ ಜೊತೆಯಲ್ಲಿ ಎರಡೂ ಬದಿಯಲ್ಲಿ ಫಿಸಿಕಲ್ ಬಟನ್‍‍ಗಳು ಹಾಗೂ ಕೆಳಗೆ ರೆಕ್ಟಾಂಗ್ಯುಲರ್ ಎಸಿ ವೆಂಟ್‍‍ಗಳಿವೆ.

MOST READ: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅಪಘಾತ..!

ಅನಾವರಣಗೊಂಡ ಹೊಸ ಗ್ರಾಂಡ್ ಐ10 ನಿಯೋಸ್

ಅನಾವರಣಗೊಂಡಿರುವ ಅಧಿಕೃತ ಚಿತ್ರಗಳಲ್ಲಿ ಭಾಗಶ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸ್ಟೀಯರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್, ಪವರ್ ಒಆರ್‍‍ವಿಎಂಗಳು, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್‍‍ಗಳಿವೆ. ಹಲವು ಕ್ಯೂಬಿ ಹೋಲ್‍‍ಗಳು, ಕಪ್‌ಹೋಲ್ಡರ್‌ ಹಾಗೂ ಹ್ಯಾಚ್‌ಬ್ಯಾಕ್‌ನ ಸುತ್ತ ಹಲವಾರು ಸ್ಟೋರೇಜ್ ಸ್ಥಳಗಳನ್ನು ಕಾಣಬಹುದು.

MOST READ: ಹತ್ತು ಸಾವಿರಕ್ಕೆ ಎಲೆಕ್ಟ್ರಿಕ್ ಬೈಕ್ ತಯಾರಿಸಿದ ಮೆಕಾನಿಕ್

ಅನಾವರಣಗೊಂಡ ಹೊಸ ಗ್ರಾಂಡ್ ಐ10 ನಿಯೋಸ್

ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಗುಣಮಟ್ಟದ ಸುರಕ್ಷ ಸಾಧನಗಳನ್ನೂ ಸಹ ಹೊಂದಿದೆ. ಹ್ಯುಂಡೈ ಕಂಪನಿಯು, ಹೊಸ ಗ್ರ್ಯಾಂಡ್ ಐ10 ನಿಯೋಸ್‌ನಲ್ಲಿರುವ ಟೆಕ್ನಿಕಲ್ ಅಂಶಗಳನ್ನು ಬಹಿರಂಗಪಡಿಸಿಲ್ಲ.

ಅನಾವರಣಗೊಂಡ ಹೊಸ ಗ್ರಾಂಡ್ ಐ10 ನಿಯೋಸ್

ಈ ಕಾರು ಮಾರುಕಟ್ಟೆಯಲ್ಲಿರುವ ಕಾರಿನಲ್ಲಿರುವ 1.2-ಲೀಟರ್ ಕಪ್ಪಾ ಪೆಟ್ರೋಲ್ ಎಂಜಿನ್‌ನ, ಬಿಎಸ್6 ಆಧಾರಿತ ಎಂಜಿನ್ ಹಾಗೂ 1.2-ಲೀಟರ್‍‍ನ 2 ಡೀಸೆಲ್ ಎಂಜಿನ್ ಹೊಂದಿರಲಿದೆ. ಎರಡೂ ಎಂಜಿನ್‌ಗಳಲ್ಲಿ ಸ್ಟಾಂಡರ್ಡ್ ಆದ ಐದು ಸ್ಪೀಡ್‍‍ನ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಅಳವಡಿಸಲಾಗಿದೆ.

ಅನಾವರಣಗೊಂಡ ಹೊಸ ಗ್ರಾಂಡ್ ಐ10 ನಿಯೋಸ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ದೇಶಿಯ ಮಾರುಕಟ್ಟೆಯಲ್ಲಿರುವ ಜನಪ್ರಿಯ ಹ್ಯಾಚ್‌ಬ್ಯಾಕ್‌ನ ಹೊಸ ತಲೆಮಾರಿನ ಮಾದರಿಯಾಗಿದೆ. ಹೊಸ ಮಾದರಿಯನ್ನು ಹೊಂದಿರುವ ವಿಶ್ವದ ಮೊದಲ ದೇಶಗಳಲ್ಲಿ ಭಾರತವು ಒಂದು. ಹಿಂದಿನ ತಲೆಮಾರಿನ ಕಾರಿಗೆ ಹೋಲಿಸಿದರೆ ಹೆಚ್ಚಿನ ಸ್ಪೇಸ್, ಪರ್ಫಾಮೆನ್ಸ್ ಹಾಗೂ ಫೀಚರ್‍‍ಗಳನ್ನು ಹೊಂದಿರುವ ಸಾಧ್ಯತೆಗಳಿವೆ. ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್‌ ಕಾರಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
All-New Hyundai Grand i10 Nios Unveiled: Bookings Now Open Ahead Of Its Launch - Read in kannada
Story first published: Wednesday, August 7, 2019, 15:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X