ಬಿಡುಗಡೆಯಾಗಿ ಸಜ್ಜಾದ ಮಾರುತಿ ಬ್ರೆಝಾ ಪ್ರತಿಸ್ಪರ್ಧಿ ಹ್ಯುಂಡೈ ಕಂಪ್ಯಾಕ್ಟ್ ಎಸ್‌ಯುವಿ..!

ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟ ವಿಭಾಗದಲ್ಲಿ ಗ್ರಾಹಕರ ಬೇಡಿಕೆ ಹೆಚ್ಚುತ್ತಿದ್ದು, ಮಾರುತಿ ಸುಜುಕಿ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ300, ನಿಸ್ಸಾನ್ ಕಿಕ್ಸ್ ಸೇರಿದಂತೆ ಹಲವು ಹೊಸ ಕಾರುಗಳು ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿವೆ. ಹೀಗಾಗಿ ಹ್ಯುಂಡೈ ಸಂಸ್ಥೆಯು ಸಹ ತನ್ನ ಬಹುನೀರಿಕ್ಷಿತ ಕಾರ್ಲಿನೋ ಕಾನ್ಸೆಪ್ಟ್ ಕಾರನ್ನು ಪರಿಚಯಿಸುತ್ತಿದ್ದು, ಇದೇ ಮೊದಲ ಬಾರಿಗೆ ಹೊಸ ಕಾರಿನ ಕುರಿತಾಗಿ ಟೀಸರ್ ಬಿಡುಗಡೆ ಮಾಡಿದೆ.

ಬಿಡುಗಡೆಯಾಗಿ ಸಜ್ಜಾದ ಮಾರುತಿ ಬ್ರೆಝಾ ಪ್ರತಿಸ್ಪರ್ಧಿ ಹ್ಯುಂಡೈ ಕಂಪ್ಯಾಕ್ಟ್ ಎಸ್‌ಯುವಿ..!

ಕಾರ್ಲಿನೋ ಕಾನ್ಸೆಪ್ಟ್ ಕಾರು ಈಗಾಗಲೇ ಎಂಜಿನ್ ಕಾರ್ಯಕ್ಷಮತೆಯನ್ನು ಕುರಿತು ಸ್ಪಾಟ್ ಟೆಸ್ಟಿಂಗ್ ನಡೆಸುವಾಗ ಹಲವು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಇದೀಗ ಬಿಡುಗಡೆ ಮಾಡಲಾಗಿರುವ ಟೀಸರ್‌ನಲ್ಲಿ ಹೊಸ ಕಾರು ಡ್ಯುಯಲ್ ಟೋನ್ ಬಣ್ಣ ಮತ್ತು ಸನ್‍ರೂಫ್ ಹೊಂದಿರುವುದು ಗ್ರಾಹಕರಲ್ಲಿ ಮತ್ತಷ್ಟು ಕುತೂಹಲ ಹುಟ್ಟುಹಾಕಿದೆ. ಈ ಮೂಲಕ ಮಹೀಂದ್ರಾ ಎಕ್ಸ್‌ಯುವಿ300 ಮತ್ತು ಮಾರುತಿ ಸುಜುಕಿ ಬ್ರೆಝಾ ಕಾರಿನ ಸರಿಯಾಗಿಯೇ ಟಕ್ಕರ್ ನೀಡಲು ಸಿದ್ದಗೊಳಿಸಿರುವಂತೆ ಕಾಣಿಸುತ್ತಿದೆ.

ಬಿಡುಗಡೆಯಾಗಿ ಸಜ್ಜಾದ ಮಾರುತಿ ಬ್ರೆಝಾ ಪ್ರತಿಸ್ಪರ್ಧಿ ಹ್ಯುಂಡೈ ಕಂಪ್ಯಾಕ್ಟ್ ಎಸ್‌ಯುವಿ..!

ಹ್ಯುಂಡೈ ಸಂಸ್ಥೆಯು ಕ್ರೆಟಾ ಮತ್ತು ಕೊನಾ ಎಸ್‍‍ಯುವಿ ಕಾರುಗಳ ಭರ್ಜರಿ ಯಶಸ್ವಿ ನಂತರ ಕಾರ್ಲಿನೋ ಕಾರುಗಳ ಬಿಡುಗಡೆಗಾಗಿ ಯೋಜನೆ ರೂಪಿಸುತ್ತಿದ್ದು, ಹಲವು ವಿಶೇಷತೆಗಳಿಗಳಿಗೆ ಕಾರಣವಾಗಿರುವ ಹೊಸ ಕಾರು ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವುದು ಮಧ್ಯಮ ವರ್ಗದ ಕಾರು ಪ್ರಿಯರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಬಿಡುಗಡೆಯಾಗಿ ಸಜ್ಜಾದ ಮಾರುತಿ ಬ್ರೆಝಾ ಪ್ರತಿಸ್ಪರ್ಧಿ ಹ್ಯುಂಡೈ ಕಂಪ್ಯಾಕ್ಟ್ ಎಸ್‌ಯುವಿ..!

ಹ್ಯುಂಡೈ ಹೊಸ ಕಂಪ್ಯಾಕ್ಟ್ ಎಸ್‍‍ಯುವಿ ಅರ್ಬನ್ ಕಮ್ಯೂಟರ್ ವಿಭಾಗಕ್ಕಾಗಿಯೇ ವಿಶೇಷವಾಗಿ ವಿನ್ಯಾಸ ಮಾಡಲಾಗಿದ್ದು, ಕ್ರಾಸ್‍ ಓವರ್ ವಿನ್ಯಾಸದೊಂದಿಗೆ ಕ್ರೆಟಾ ಹಾಗೂ ಕೊನಾ ಕಾರುಗಳ ಮಧ್ಯದ ಕಾರು ಮಾದರಿಯಾಗಿ ಮಾರಾಟಗೊಳ್ಳಲಿದೆ.

ಬಿಡುಗಡೆಯಾಗಿ ಸಜ್ಜಾದ ಮಾರುತಿ ಬ್ರೆಝಾ ಪ್ರತಿಸ್ಪರ್ಧಿ ಹ್ಯುಂಡೈ ಕಂಪ್ಯಾಕ್ಟ್ ಎಸ್‌ಯುವಿ..!

ಹೊಸ ಕಾರ್ಲಿನೋ ಕಾನ್ಸೆಪ್ಟ್ ಕಾರು ಉತ್ಪಾದನೆಗಾಗಿಯೇ ಪ್ರತ್ಯೇಕವಾದ ಪ್ಲ್ಯಾಟ್‍‍ಫಾರ್ಮ್ ಅನ್ನೇ ಸಿದ್ದಪಡಿಸಲಾಗಿದ್ದು, ಈ ಮೂಲಕ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿರುವ ಈ ಕಾರ್ಲಿನೋ ಕಾನ್ಸೆಪ್ಟ್ ಕಾರುಗಳು ಮಾರುತಿ ಸುಜುಕಿ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ300, ಟಾಟಾ ನೆಕ್ಸಾನ್ ಮತ್ತು ಫೋರ್ಡ್ ಇಕೊಸ್ಪೋರ್ಟ್ ಕಾರಿಗಳಿಗೆ ನೇರ ಪ್ರತಿಸ್ಪರ್ಧಿಸಲಾಗಲಿದೆ.

ಬಿಡುಗಡೆಯಾಗಿ ಸಜ್ಜಾದ ಮಾರುತಿ ಬ್ರೆಝಾ ಪ್ರತಿಸ್ಪರ್ಧಿ ಹ್ಯುಂಡೈ ಕಂಪ್ಯಾಕ್ಟ್ ಎಸ್‌ಯುವಿ..!

ಪ್ರಸ್ತುತ ಮಾಹಿತಿಗಳ ಪ್ರಕಾರ, ಈ ಹೊಸ ಕಾರು ಇದೇ ತಿಂಗಳು ಅಥವಾ ಏಪ್ರಿಲ್ ಆರಂಭದಲ್ಲಿ ಯುಎಸ್ಎ ಮಾರುಕಟ್ಟೆಯಲ್ಲಿ ಮೊದಲು ಬಿಡುಗಡೆಗೊಳ್ಳಲಿದ್ದು, ತದನಂತರವಷ್ಟೇ ಭಾರತ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲೂ ಇದು ಬಿಡುಗಡೆಗೊಳ್ಳಲಿದೆಯೆಂತೆ.

ಬಿಡುಗಡೆಯಾಗಿ ಸಜ್ಜಾದ ಮಾರುತಿ ಬ್ರೆಝಾ ಪ್ರತಿಸ್ಪರ್ಧಿ ಹ್ಯುಂಡೈ ಕಂಪ್ಯಾಕ್ಟ್ ಎಸ್‌ಯುವಿ..!

ಕಂಪ್ಯಾಕ್ಟ್ ಎಸ್‍‍ಯುವಿ ವಿನ್ಯಾಸ ಆಧಾರಿತ ಕಾರ್ಲಿನೊ ಪರಿಕಲ್ಪನೆಯನ್ನು ಮೊದಲು ಹ್ಯುಂಡೈ ಸಂಸ್ಥೆಯು 2016ರ ದೆಹಲಿ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶನ ಮಾಡಿತ್ತು. ಆದ್ರೆ ಕಾರಣಾಂತರಗಳಿಂದ ಹೊಸ ಕಾರಿನ ಉತ್ಪಾದನಾ ಪ್ರಕ್ರಿಯೆಯನ್ನು ಮೂಂದುಡಿಕೆ ಮಾಡುತ್ತಾ ಬಂದಿದ್ದ ಹ್ಯುಂಡೈ ಇದೀಗ ಕಾರ್ಲಿನೋ ಬಿಡುಗಡೆ ಮಾಡುವ ಇರಾದೆಯಲ್ಲಿದೆ.

MOST READ: 10 ಕೋಟಿಯಿಂದ ಆರಂಭವಾದ ಓಲಾ ಸಂಸ್ಥೆಯ ಆಸ್ತಿ ಮೌಲ್ಯ 29 ಸಾವಿರ ಕೋಟಿ ಆಗಿದ್ದು ಹೇಗೆ ಗೊತ್ತಾ?

ಇನ್ನು ಕಾರ್ಲಿನೋ ಕಾನ್ಸೆಪ್ಟ್ ಕಾರುಗಳು ಮೂರು ಎಂಜಿನ್ ಆಯ್ಕೆ ಹೊಂದಿರಲಿದ್ದು, 1.0 ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ 1.4 ಲೀಟರ್ ಪೆಟ್ರೋಲ್ ಮತ್ತು 1.4-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿರಲಿದೆ.

ಬಿಡುಗಡೆಯಾಗಿ ಸಜ್ಜಾದ ಮಾರುತಿ ಬ್ರೆಝಾ ಪ್ರತಿಸ್ಪರ್ಧಿ ಹ್ಯುಂಡೈ ಕಂಪ್ಯಾಕ್ಟ್ ಎಸ್‌ಯುವಿ..!

1.4-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಸದ್ಯ ಮಾರುಕಟ್ಟೆಯಲ್ಲಿರುವ ವೆರ್ನಾ ಸೆಡಾನ್ ಮಾದರಿಯಿಂದ ಎರವಲು ಪಡೆಯಲಾಗಿದ್ದು, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲೈಟ್, 7 ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್‌ಬಾಕ್ಸ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್, 4 ಏರ್‌ಬ್ಯಾಗ್ ಮತ್ತು ಲಾರ್ಜ್ ಟಚ್‌ಸ್ಕ್ರೀನ್ ಡಿಸ್‌ಪ್ಲೇಯೊಂದಿಗೆ ಹಲವು ಮಾದರಿಯ ಪ್ರೀಮಿಯಂ ಸೌಲಭ್ಯಗಳನ್ನು ಪಡೆದುಕೊಂಡಿರಲಿದೆ.

MOST READ: ರಾಜಧಾನಿಯಲ್ಲಿ ಗಸ್ತು ನಿರ್ವಹಣೆಗಾಗಿ ನಿಯೋಜನೆಗೊಂಡ ಹೈ ಟೆಕ್ ಪೊಲೀಸ್ ಬಸ್..!

ಬಿಡುಗಡೆಯಾಗಿ ಸಜ್ಜಾದ ಮಾರುತಿ ಬ್ರೆಝಾ ಪ್ರತಿಸ್ಪರ್ಧಿ ಹ್ಯುಂಡೈ ಕಂಪ್ಯಾಕ್ಟ್ ಎಸ್‌ಯುವಿ..!

ಬಿಡುಗಡೆಯ ಅವಧಿ ಮತ್ತು ಕಾರಿನ ಬೆಲೆಗಳು(ಅಂದಾಜು)

ಇದೇ ವರ್ಷ ಏಪ್ರಿಲ್ ಆರಂಭದಲ್ಲಿ ಯುಎಸ್ಎ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಹೊಸ ಕಾರ್ಲಿನೋ ಕಾರು ತದನಂತರವಷ್ಟೇ ಭಾರತದಲ್ಲಿ ಬಿಡುಗಡೆಯಾಗುವ ನೀರಿಕ್ಷೆಗಳಿದ್ದು, ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.8 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ.12 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
Hyundai’s New Compact-SUV Styx Teased In Its First Official Video — Watch It Here!
Story first published: Friday, March 22, 2019, 19:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X