ಬಿಡುಗಡೆಯ ನಂತರ ಮೊದಲ ಬಾರಿಗೆ ಗ್ರಾಹಕರ ಕೈ ಸೇರಿದ ಹೊಸ ರ‍್ಯಾಂಗ್ಲರ್

ಜೀಪ್ ಇಂಡಿಯಾ ಸಂಸ್ಥೆಯು ತನ್ನ ಹೊಸ ರ‍್ಯಾಂಗ್ಲರ್ ಎಸ್‍‍ಯು‍‍ವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಕಳೆದ ವಾರವಷ್ಟೇ ಬಿಡುಗಡೆಗೊಳಿಸಿದ್ದು, ಹೊಸ ಕಾರು ಬಿಡುಗಡೆಯ ನಂತರ ಬುಕ್ಕಿಂಗ್ ಮಾಡಿ ಗ್ರಾಹಕರಿಗೆ ಇದೀಗ ಅಧಿಕೃತವಾಗಿ ಹೊಸ ಕಾರನ್ನು ವಿತರಣೆ ಮಾಡುತ್ತಿರುವುದು ಖಚಿತವಾಗಿದೆ.

ಬಿಡುಗಡೆಯ ನಂತರ ಮೊದಲ ಬಾರಿಗೆ ಗ್ರಾಹಕರ ಕೈ ಸೇರಿದ ಹೊಸ ರ‍್ಯಾಂಗ್ಲರ್

ನಾಲ್ಕನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿ ಹೊಂದಿರುವ ಹೊಸ ಜೀಪ್ ರ‍್ಯಾಂಗ್ಲರ್‍‍ನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.63.94 ಲಕ್ಷ ಬೆಲೆ ಹೊಂದಿದ್ದು, ಹೊಸ ರ‍್ಯಾಂಗ್ಲರ್ ಎಸ್‍‍ಯು‍‍ವಿಯೂ 5 ಡೋರ್‍ ವಿನ್ಯಾಸದೊಂದಿಗೆ ಅನ್‍‍ಲಿಮಿಟೆಡ್ ಮಾದರಿಯಾಗಿ ಮಾರುಕಟ್ಟೆಗೆ ಪ್ರವೇಶಿಸಿದೆ. ಹೊಸ ಕಾರನ್ನು ಸದ್ಯ ಕಂಪ್ಲೀಟ್ ಬಿಲ್ಟ್ ಯೂನಿಟ್ ನಿಯಮದಡಿ ಭಾರತಕ್ಕೆ ಆಮದು ಮಾಡಿಕೊಂಡು ಮಾರಾಟ ಮಾಡಲಾಗುತ್ತಿದ್ದು, ಹೊಸ ಕಾರು ಈ ಬಾರಿ ಮಹತ್ವದ ಬದಲಾವಣೆಗಳನ್ನು ಪಡೆದುಕೊಂಡಿದೆ.

ಬಿಡುಗಡೆಯ ನಂತರ ಮೊದಲ ಬಾರಿಗೆ ಗ್ರಾಹಕರ ಕೈ ಸೇರಿದ ಹೊಸ ರ‍್ಯಾಂಗ್ಲರ್

ಹೊಸ ತಲೆಮಾರಿನ ಜೀಪ್ ರ‍್ಯಾಂಗ್ಲರ್ ಕಾರು ಹಲವಾರು ಆಧುನಿಕ ಸ್ಟೈಲಿಂಗ್‍‍ಗಳನ್ನು ಹೊಂದಿದ್ದರೂ ಸಹ ಬೋಲ್ಡ್ ಹಾಗೂ ಮಸ್ಕ್ಯೂಲರ್ ಸಿಲ್‍‍ಹೌಟ್‍‍ನಲ್ಲಿರುವ ಹಳೆಯ ಸಿಗ್ನೇಚರ್ ಅನ್ನು ಉಳಿಸಿಕೊಂಡಿರುವುದು ಕಾರಿನ ಹಳೆಯ ಖದರ್ ಹಾಗೆಯೇ ಇದೆ.

ಬಿಡುಗಡೆಯ ನಂತರ ಮೊದಲ ಬಾರಿಗೆ ಗ್ರಾಹಕರ ಕೈ ಸೇರಿದ ಹೊಸ ರ‍್ಯಾಂಗ್ಲರ್

ಹೊಸ ರ‍್ಯಾಂಗ್ಲರ್ ಎಸ್‍‍ಯು‍‍ವಿಯ ಮುಂಭಾಗದಲ್ಲಿರುವ ಗ್ರಿಲ್‍ ಏಳು ವರ್ಟಿಕಲ್ ಸ್ಲ್ಯಾಟ್‌ಗಳನ್ನು ಹೊಂದಿದ್ದು, ಹೊಸ ಎಸ್‍‍ಯುವಿಯ ಎರಡೂ ತುದಿಯಲ್ಲೂ ರೌಂಡ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳಿಂದ ಇಂಟಿಗ್ರೇಟೆಡ್ ಆದ ಎಲ್ಇಡಿ ಡಿಆರ್‌ಎಲ್‌ಗಳು ಅಂದರೆ ಡೇಟೈಮ್ ರನ್ನಿಂಗ್ ಲೈಟ್ಸ್ ಗಳನ್ನು ಜೋಡಿಸಲಾಗಿದೆ.

ಬಿಡುಗಡೆಯ ನಂತರ ಮೊದಲ ಬಾರಿಗೆ ಗ್ರಾಹಕರ ಕೈ ಸೇರಿದ ಹೊಸ ರ‍್ಯಾಂಗ್ಲರ್

ಎಸ್‍‍ಯುವಿಯ ಸೈಡ್ ಪ್ರೊಫೈಲ್ ಬಾಕ್ಸಿ ಡಿಸೈನ್‍‍ನಲ್ಲಿ ಮುಂದುವರೆದಿದ್ದು, ದೊಡ್ಡ ಡೋರ್‍‍ಗಳು, ವಿಂಡೋ ಹಾಗೂ ಫ್ಲೇರ್ಡ್ ವ್ಹೀಲ್ ಆರ್ಕ್‍‍ಗಳನ್ನು ಹೊಂದಿದೆ. ಹೊಸ ರ‍್ಯಾಂಗ್ಲರ್ ಟೆಕ್ ಗ್ರೇ ಸ್ಪೋಕ್‍‍‍ಗಳಿರುವ 18 ಇಂಚಿನ ಅಲಾಯ್ ವ್ಹೀಲ್‍‍ಗಳನ್ನು ಹೊಂದಿದೆ. ಈ ವ್ಹೀಲ್‍‍ಗಳನ್ನು ರ‍್ಯಾಂಗ್ಲರ್ ಎಸ್‍‍ಯು‍‍ವಿಯಲ್ಲಿ ಸ್ಟಾಂಡರ್ಡ್ ಆಗಿ ನೀಡಲಾಗುತ್ತಿದ್ದು, ಆಫ್ ರೋಡ್ ಚಾಲನೆಗೆ ಇವು ಪ್ರಮುಖವಾಗಿರುವುದರಿಂದ ಹಲವು ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಬಿಡುಗಡೆಯ ನಂತರ ಮೊದಲ ಬಾರಿಗೆ ಗ್ರಾಹಕರ ಕೈ ಸೇರಿದ ಹೊಸ ರ‍್ಯಾಂಗ್ಲರ್

ಇಂಟಿರಿಯರ್ ಬಗ್ಗೆ ಹೇಳುವುದಾದರೆ, ಹೊಸ ಜೀಪ್ ರ‍್ಯಾಂಗ್ಲರ್‍‍‍ನ ಒಳಭಾಗವನ್ನು ಉತ್ತಮವಾಗಿ ವಿನ್ಯಾಸಗೊಳಿಸಲಾಗಿದೆ. ಹಿಂದಿನ ಮಾದರಿಯ ಎಸ್‍‍ಯು‍‍ವಿಗಿಂತ ಹೆಚ್ಚು ಆಧುನಿಕವಾಗಿ ವಿನ್ಯಾಸಗೊಳಿಸಲಾಗಿದ್ದು, ಐಷಾರಾಮಿ ಪ್ರೀಮಿಯಂ ಲುಕ್ ನೀಡಲಾಗಿದೆ.

ಬಿಡುಗಡೆಯ ನಂತರ ಮೊದಲ ಬಾರಿಗೆ ಗ್ರಾಹಕರ ಕೈ ಸೇರಿದ ಹೊಸ ರ‍್ಯಾಂಗ್ಲರ್

ಹೊಸ ಎಸ್‌ಯುವಿಯ ಇನ್ಸ್‌ಟ್ರೂಮೆಂಟ್ ಕ್ಲಸ್ಟರ್‌ನಲ್ಲಿ 7.0 ಇಂಚಿನ ಮಲ್ಟಿಇನ್ಫೊ‍‍ಡಿಸ್ಪ್ಲೇ ಹಾಗೂ 8.4 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋವನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿರಲಿದೆ.

MOST READ: ಕಿಯಾ ಬಹುನೀರಿಕ್ಷಿತ ಸೆಲ್ಟೊಸ್ ಬಿಡುಗಡೆ- ಭಾರತೀಯ ಆಟೋ ಉದ್ಯಮದಲ್ಲಿ ಹೊಸ ಅಧ್ಯಾಯ ಶುರು..!

ಬಿಡುಗಡೆಯ ನಂತರ ಮೊದಲ ಬಾರಿಗೆ ಗ್ರಾಹಕರ ಕೈ ಸೇರಿದ ಹೊಸ ರ‍್ಯಾಂಗ್ಲರ್

2019 ಜೀಪ್ ರ‍್ಯಾಂಗ್ಲರ್ ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ರಿಯರ್ ಎಸಿ ವೆಂಟ್ಸ್, ಆ್ಯಂಬಿಯೆಂಟ್ ಲೈಟಿಂಗ್ ಹಾಗೂ ಮಲ್ಟಿಪಲ್ 12 ವೋಲ್ಟ್ ಸಾಕೆಟ್ ಹಾಗೂ ಯುಎಸ್‍‍ಬಿ ಚಾರ್ಜಿಂಗ್ ಪೋರ್ಟ್‌ಗಳನ್ನು ಸಹ ಹೊಂದಿರಲಿದೆ.

MOST READ: ಹೊಸ ಕಾರುಗಳ ನೋಂದಣಿ ಮೇಲಿನ ಶುಲ್ಕ ಹೆಚ್ಚಳಕ್ಕೆ ಕೊನೆಗೂ ಬ್ರೇಕ್..!

ಬಿಡುಗಡೆಯ ನಂತರ ಮೊದಲ ಬಾರಿಗೆ ಗ್ರಾಹಕರ ಕೈ ಸೇರಿದ ಹೊಸ ರ‍್ಯಾಂಗ್ಲರ್

ಹೊಸ ಎಸ್‌ಯುವಿಯಲ್ಲಿ, ಜೀಪ್‌ ಕಂಪನಿಯ ಯುಕನೆಕ್ಟ್ ಸಿಸ್ಟಂ ಅಳವಡಿಸಲಾಗಿದ್ದು, ಇದು ವಿವಿಧ ಕನೆಕ್ಟಿವಿಟಿ ಫೀಚರ್‍‍ಗಳನ್ನು ನೀಡುವುದರ ಜೊತೆಗೆ ಇನ್ಫೋಟೈನ್‌ಮೆಂಟ್ ಸಿಸ್ಟಂ ಒಟ್ಟಾರೆ ಪರ್ಫಾಮೆನ್ಸ್ ಅನ್ನು ಸುಧಾರಿಸುತ್ತದೆ.

MOST READ: ಖರೀದಿ ಮಾಡಿ ಕೇವಲ 20 ದಿನಗಳಲ್ಲಿ ಬಯಲಾಯ್ತು ಜಾವಾ ಹೊಸ ಬೈಕ್‌ಗಳ ಬಂಡವಾಳ..!

ಬಿಡುಗಡೆಯ ನಂತರ ಮೊದಲ ಬಾರಿಗೆ ಗ್ರಾಹಕರ ಕೈ ಸೇರಿದ ಹೊಸ ರ‍್ಯಾಂಗ್ಲರ್

ಹೊಸ ಎಸ್‍‍ಯು‍‍ವಿಯಲ್ಲಿ ಪ್ರೀಮಿಯಂ ಆಲ್‍‍ಪೈನ್ 552 ವ್ಯಾಟ್‍‍ನ 8 ಸ್ಪೀಕರ್ ಸೌಂಡ್ ಸಿಸ್ಟಂ ಅನ್ನು ಪ್ರತ್ಯೇಕವಾದ ಸಬ್ ವೂಫರ್‍‍ನೊಂದಿಗೆ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಸುರಕ್ಷಾ ಫೀಚರ್‍‍ಗಳ ಬಗ್ಗೆ ಹೇಳುವುದಾದರೇ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ವಿಥ್ ಇಬಿಡಿ, ಇಎಸ್‌ಸಿ, ಎಲೆಕ್ಟ್ರಾನಿಕ್ ರೋಲ್ ಮಿಟಿಗೇಷನ್, ಹಿಲ್ ಸ್ಟಾರ್ಟ್ ಅಸಿಸ್ಟ್ ಹಾಗೂ ಟ್ರಾಕ್ಷನ್ ಕಂಟ್ರೋಲ್‍‍ಗಳನ್ನು ಹೊಂದಿದೆ.

ಬಿಡುಗಡೆಯ ನಂತರ ಮೊದಲ ಬಾರಿಗೆ ಗ್ರಾಹಕರ ಕೈ ಸೇರಿದ ಹೊಸ ರ‍್ಯಾಂಗ್ಲರ್

2019ರ ಹೊಸ ಜೀಪ್ ರ‍್ಯಾಂಗ್ಲರ್ ಮಾದರಿಯು ಬಿಎಸ್-4 ಪ್ರೇರಿತ 2.0-ಲೀಟರಿನ ಟರ್ಬೋಚಾರ್ಜ್ಡ್ ಇನ್ ಲೈನ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದ್ದು, ಈ ಎಂಜಿನ್ 268-ಬಿ‍‍ಹೆಚ್‍‍ಪಿ ಹಾಗೂ 400-ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 8 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

Most Read Articles

Kannada
Read more on ಜೀಪ್ jeep
English summary
India’s first new-gen Jeep Wrangler delivered. Read in Kannada.
Story first published: Friday, August 23, 2019, 14:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X