ಎಎಂಟಿ ಗೇರ್‍‍ಬಾಕ್ಸ್ ಆಯ್ಕೆಯನ್ನು ಪಡೆಯಲಿದೆಯೆ ಹೊಸ ಮಹೀಂದ್ರಾ ಥಾರ್.?

ತನ್ನ ಎಸ್‍ಯುವಿ ಕಾರುಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಪ್ರೀಯತೆಯನ್ನು ಪಡೆದುಕೊಂಡಿರುವ ಮಹೀಂದ್ರಾ ಸಂಸ್ಥೆಯು, ಹೊಸ ತಲೆಮಾರಿನ ಥಾರ್ ಕಾರನ್ನು ಬಿಡುಗಡೆಗೊಳಿಸುವ ಕಾರ್ಯದಲ್ಲಿದ್ದಾರೆ. ಮಹೀಂದ್ರಾ ಸಂಸ್ಥೆಯು ಇದೇ ಮೊದಲ ಬಾರಿಗೆ ಥಾರ್ ಆಫ್-ರೋಡ್ ಕಾರು ಮಾದರಿಯನ್ನು ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೊಳಿಸುತ್ತಿದ್ದು, ಇದಕ್ಕಾಗಿ ವಿವಿಧ ಹಂತದ ಸ್ಪಾಟ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಿದೆ.

ಎಎಂಟಿ ಗೇರ್‍‍ಬಾಕ್ಸ್ ಆಯ್ಕೆಯನ್ನು ಪಡೆಯಲಿಯೆ ಹೊಸ ಮಹೀಂದ್ರಾ ಥಾರ್.?

ದೇಶಿಯ ವಾಹನ ತಯಾರಕ ಸಂಸ್ಥೆಯಾಗಿರುವ ಮಹೀಂದ್ರಾ ಸಂಸ್ಥೆಯು 2010ರಲ್ಲಿ ಮೊದಲ ಬಾರಿಗೆ ಒಂದನೇ ತಲೆಮಾರಿನ ಥಾರ್ ಕಾರನ್ನು ಬಿಡುಗಡೆಗೊಳಿಸಿದ್ದು, ಅಂದಿನಿಂದಲೂ ಈ ಕಾರು ಯಾವುದೇ ಬದಲಾವಣೆಯನ್ನು ಪಡೆದಿಲ್ಲ. ಈ ನಿಟ್ಟಿನಲ್ಲಿ ವರದಿಗಳ ಮಹೀಂದ್ರಾ ಸಂಸ್ಥೆಯು ಇದೀಗ ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಥಾರ್ ಕಾರಿನಲ್ಲಿ ಹೆಚ್ಚಿನ ನವೀಕರಣ ತರಲು ಸಜ್ಜುಗೊಂಡಿದೆ.

ಎಎಂಟಿ ಗೇರ್‍‍ಬಾಕ್ಸ್ ಆಯ್ಕೆಯನ್ನು ಪಡೆಯಲಿಯೆ ಹೊಸ ಮಹೀಂದ್ರಾ ಥಾರ್.?

ಎಂಜಿನ್ ಸಮಾರ್ಥ್ಯ

ಹೊಸ ತಲೆಮಾರಿನ ಮಹೀಂದ್ರಾ ಥಾರ್ ಕಾರು ಹೊಸ ಡೀಸೆಲ್ ಎಂಜಿನ್ ಅನ್ನು ಪಡೆಯಬಹುದಾಗಿದ್ದು, ಪ್ರಸ್ಥುತ ಇರುವ 2.5 ಲೀಟರ್ ಡೀಸೆಲ್ ಎಂಜಿನ್ 2020ರ ಏಪ್ರಿಲ್1 ರಿಂದ ಜಾರಿಯಾಗಲಿರುವ ಹೊಸ ಎಮಿಷನ್ ನಿಬಂಧನೆಗಳನ್ನು ಪೂರೈಸಲು ಅಸಂಭವವಾಗಿದೆ.

ಎಎಂಟಿ ಗೇರ್‍‍ಬಾಕ್ಸ್ ಆಯ್ಕೆಯನ್ನು ಪಡೆಯಲಿಯೆ ಹೊಸ ಮಹೀಂದ್ರಾ ಥಾರ್.?

ಹೀಗಾಗಿ ಹೊಸ ಎಂಜಿನ್ ಬಗ್ಗೆ ಮಾಹಿತಿಯು ಲಭ್ಯವಾಗಿಲ್ಲವಾದರೂ, ಪ್ರಸ್ತುತ ಇರುವ ಮಹೀಂದ್ರಾ ಥಾರ್ ಕಾರಿನಲ್ಲಿರುವ 2.0 ಲೀಟರ್, 4 ಸಿಲೆಂಡರ್ ಡೀಸೆಲ್ ಎಂಜಿನ್ 140 ಬಿಹೆಚ್‍ಪಿ ಹಾರ್ಸ್‍ಪವರ್ ಅನ್ನು ಹೊರ ಹಾಕಲಿದ್ದು, ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಹೊಂದಿತ್ತು. ಆದ್ರೆ ಇದೀಗ ಮಾಹಿತಿಗಳ ಪ್ರಕಾರ ಈ ಕಾರು ಹೊಸದಾಗಿ ಎಎಂಟಿ ಗೇರ್‍‍ಬಾಕ್ಸ್ ಆಯ್ಕೆಯಲ್ಲಿ ಕೂಡಾ ಬಿಡುಗಡೆಗೊಳ್ಳಲಿದೆ ಎನ್ನಲಾಗಿದೆ.

ಎಎಂಟಿ ಗೇರ್‍‍ಬಾಕ್ಸ್ ಆಯ್ಕೆಯನ್ನು ಪಡೆಯಲಿಯೆ ಹೊಸ ಮಹೀಂದ್ರಾ ಥಾರ್.?

ಮಹೀಂದ್ರಾ ಸಂಸ್ಥೆಯು ಬಿಡುಗಡೆಗೊಳಿಸಲಿರುವ ಹೊಸ ತಲೆಮಾರಿನ ಥಾರ್ ಕಾರಿನ ಚಿಕ್ರಗಳು ಸೋರಿಕೆಯಾಗಿದ್ದು, ಈ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸೋರಿಕೆಯಾದ ಚಿತ್ರಗಳಲ್ಲಿ ಥಾರ್ ಕಾರನ್ನು ಸಂಪೂರ್ಣವಾಗಿ ಮುಸುಕಿನಿಂದ ಮುಚ್ಚಲ್ಪಟ್ತಿದ್ದು, ಹೊಸ ಥಾರ್ ಹಿಂದಿನ ತಲೆಮಾರಿನ ಕಾರಿಗಿಂತಾ ಹೆಚ್ಚಿನ ಗಾತ್ರವನ್ನು ಪಡೆದುಕೊಂಡಿದೆ.

ಎಎಂಟಿ ಗೇರ್‍‍ಬಾಕ್ಸ್ ಆಯ್ಕೆಯನ್ನು ಪಡೆಯಲಿಯೆ ಹೊಸ ಮಹೀಂದ್ರಾ ಥಾರ್.?

ಹೊಸ ತಲೆಮಾರಿನ ಥಾರ್ ಕಾರಿನಲ್ಲಿ ಮಹೀಂದ್ರಾ ಸಂಸ್ಥೆಯು ಇತ್ತೀಚೆಗೆ ಬಿಡುಗಡೆಗೊಳಿಸಿದ ಮರಾಜೊ ಕಾರಿನಲ್ಲಿ ಬಳಸಲಾದ ಅಗಲವಾದ ಲಾಡರ್ ಫ್ರೇಮ್ ಅನ್ನು ಈ ಕಾರಿನಲ್ಲಿಯು ಬಳಸಲಾಗಿದ್ದು, ಹೆಚ್ಚಿನದಾಗಿ ಆಧೂನಿಕ ಲುಕ್ ಮತ್ತು ಮರುವಿನ್ಯಾಸಗೊಳಿಸಲಾದ ವಿನ್ಯಾಸವನ್ನು ಪಡೆದುಕೊಂಡಿರಲಿದೆ.

ಎಎಂಟಿ ಗೇರ್‍‍ಬಾಕ್ಸ್ ಆಯ್ಕೆಯನ್ನು ಪಡೆಯಲಿಯೆ ಹೊಸ ಮಹೀಂದ್ರಾ ಥಾರ್.?

ಹೊಸ ಮಹೀಂದ್ರಾ ಥಾರ್ ಕಾರನ್ನು ಪ್ರಸ್ತುತ ಅದರ ಆಫ್‍-ರೋಡಿಂಗ್ ಕೌಶಲ್ಯವನ್ನು ಪರೀಕ್ಷಿಸಲು ಪ್ಲಾಂಟ್‍ನಿಂದ ಹೊರ ಬಂದಾಗ ಕಾಣಿಸಿಕೊಂಡಿದ್ದು, 2020ರಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋ ಮೇಳದಲ್ಲಿ ಬಹಿರಂಗಗೊಳ್ಳಲಿದೆ.

ಎಎಂಟಿ ಗೇರ್‍‍ಬಾಕ್ಸ್ ಆಯ್ಕೆಯನ್ನು ಪಡೆಯಲಿಯೆ ಹೊಸ ಮಹೀಂದ್ರಾ ಥಾರ್.?

ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ತಲೆಮಾರಿನ ಥಾರ್ ಕಾರಿನಲ್ಲಿ ಈ ಬಾರಿ ಎರಡು ಏರ್‍‍ಬ್ಯಾಗ್‍ಗಳು, ಬ್ರೇಕ್ ಅಸಿಸ್ಟ್, ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್), ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (ಎಬಿಡಿ)ಯನ್ನು ಸ್ಟ್ಯಾಂಡರ್ಡ್ ಆಗಿ ನೀಡಿರಲಿದೆ.

ಎಎಂಟಿ ಗೇರ್‍‍ಬಾಕ್ಸ್ ಆಯ್ಕೆಯನ್ನು ಪಡೆಯಲಿಯೆ ಹೊಸ ಮಹೀಂದ್ರಾ ಥಾರ್.?

ಇದರ ಜೊತೆಗೆ ರಿವರ್ಸ್ ಪಾರ್ಕಿಂಗ್ ಸೆನ್ಸಾರ್ಸ್, ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್ಸ್, ಕ್ರಂಪಲ್ ಜೋನ್ ಮತ್ತು ಸೀಟ್ ಬೆಲ್ಟ್ ರಿಮೈಂಡರ್ ಎಂಬ ಸೇಫ್ಟಿ ಫೀಚರ್‍‍ಗಳನ್ನು ವಿಶೇಷವಾಗಿದ್ದು, ಸುಗಮ ಸವಾರಿಗೆ ನಾಲ್ಕು ಚಕ್ರಗಳಲ ಡಿಸ್ಕ್ ಬ್ರೇಕ್ ಪಡೆದುಕೊಳ್ಳಲಿವೆ.

ಎಎಂಟಿ ಗೇರ್‍‍ಬಾಕ್ಸ್ ಆಯ್ಕೆಯನ್ನು ಪಡೆಯಲಿಯೆ ಹೊಸ ಮಹೀಂದ್ರಾ ಥಾರ್.?

ಅಂತೆಯೇ ಮಹೀಂದ್ರಾ ಥಾರ್ ಕಾರಿನಲ್ಲಿ ಎಂದಿನಂತೆಯೇ 4 ಡಬ್ಲ್ಯೂಡಿ ಸಿಸ್ಟಂ ಅನ್ನು ಹೊಂದಿರಲಿದ್ದು, ಹಳೆಯ ಥಾರ್ ಕಾರಿಗಿಂತ ಹೊಸ ಥಾರ್ ಕಾರಿನ ಬೆಲೆಯಲ್ಲಿ ಮಾರ್ಪಾಡುಗಳನ್ನು ಕೂಡಾ ಮಾಡಲು ಮಹೀಂದ್ರಾ ಸಂಸ್ಥೆಯು ಎದುರು ನೋಡುತ್ತಿದೆ.

ಎಎಂಟಿ ಗೇರ್‍‍ಬಾಕ್ಸ್ ಆಯ್ಕೆಯನ್ನು ಪಡೆಯಲಿಯೆ ಹೊಸ ಮಹೀಂದ್ರಾ ಥಾರ್.?

ಪ್ರಸ್ತುತ ತಲೆಮಾರಿನ ಥಾರ್ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 9.29 ಲಕ್ಷದ ಮಾರಾಟವನ್ನು ಪಡೆದುಕೊಂಡಿದ್ದು, ಹೊಸ ಫೀಚರ್ಸ್ ಪಡೆಯಲಿರುವ ಹೊಸ ಥಾರ್ ಕಾರುಗಳು ಕನಿಷ್ಠ ಅಂದ್ರು ರೂ. 1.50 ಲಕ್ಷದಿಂದ ರೂ.2.50 ಲಕ್ಷ ಹೆಚ್ಚುವರಿ ಬೆಲೆ ಪಡೆಯಲಿವೆ.

ಎಎಂಟಿ ಗೇರ್‍‍ಬಾಕ್ಸ್ ಆಯ್ಕೆಯನ್ನು ಪಡೆಯಲಿಯೆ ಹೊಸ ಮಹೀಂದ್ರಾ ಥಾರ್.?

ಇನ್ನು ಹೊಸ ತಲೆಮಾರಿನ ಥಾರ್ ಕಾರು ಬಿಡುಗಡೆಗೊಂಡಲ್ಲಿ ಮಾರುಕಟ್ಟೆಯಲ್ಲಿರುವ ಫೋರ್ಸ್ ಗೂರ್ಖಾ ಮತ್ತು ಮಾರುತಿ ಸುಜುಕಿ ಸಂಸ್ಥೆಯು ಪರಿಚಯಿಸಲಿರುವ ಹೊಸ ಜಿಮ್ನಿ ಕಾರುಗಳಿಗೆ ಪೈಪೋಟಿ ನೀಡಲಿದ್ದು, ಆಫ್ ರೋಡ್ ಪ್ರಿಯರಿಗೆ ಹೊಸ ಥಾರ್ ಮತ್ತಷ್ಟು ಹೊಸ ಅನುಭವ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
English summary
New Mahindra Thar May Feature AMT Transmission — Launch Early Next Year. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X