ಹೊಸ ಅವತಾರದಲ್ಲಿ ಮರಳಿ ಬರಲಿರುತ್ತಿದೆ ನ್ಯೂ ಜನರೇಷನ್ ಮಾರುತಿ ಆಲ್ಟೋ..!

ಈ ಹಿಂದೆ ಬಹುತೇಕ ಕಾರು ಖರೀದಿದಾರರು ಸುರಕ್ಷತೆಗಿಂತ ಬೆಲೆ ಮತ್ತು ಮೈಲೇಜ್ ಬಗೆಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿದ್ರು. ಆದ್ರೆ ಇದೀಗ ಕಾಲ ಬದಲಾಗಿದೆ. ಬೆಲೆ ಮತ್ತು ಮೈಲೇಜ್ ಜೊತೆಗೆ ಹೊಸ ವಾಹನದಲ್ಲಿರುವ ಸುರಕ್ಷತೆ ಕುರಿತಂತೆ ಹೆಚ್ಚು ಆಲೋಚನೆ ಮಾಡುತ್ತಿರುವುದು ಇಂದು ಆಟೋ ಉದ್ಯಮದಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಗಿದೆ.

ಹೊಸ ಅವತಾರದಲ್ಲಿ ಮರಳಿ ಬರಲಿರುತ್ತಿದೆ ನ್ಯೂ ಜನರೇಷನ್ ಮಾರುತಿ ಆಲ್ಟೋ..!

ದೇಶದಲ್ಲಿ ಪ್ರಯಾಣಿಕ ಸುರಕ್ಷತೆಯ ಉದ್ದೇಶದಿಂದ ಆಟೋ ಉದ್ಯಮದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದ್ದು, ಮಾರುಕಟ್ಟೆಯಲ್ಲಿ ಹಾಟ್ ಚೀಪ್ಸ್‌ನಂತೆ ಮಾರಾಟವಾಗುತ್ತಿರುವ ಮಾರುತಿ ಸುಜುಕಿ ಬಹುತೇಕ ಕಾರುಗಳಲ್ಲಿ ಕನಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳಿಲ್ಲದಿರುವುದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ.

ಹೊಸ ಅವತಾರದಲ್ಲಿ ಮರಳಿ ಬರಲಿರುತ್ತಿದೆ ನ್ಯೂ ಜನರೇಷನ್ ಮಾರುತಿ ಆಲ್ಟೋ..!

ಹೀಗಾಗಿ ಕೇಂದ್ರ ಸರ್ಕಾರವು ನಿರ್ದಿಷ್ಟ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಹೊಂದಿರುವ ಕಾರುಗಳಿಗೆ ಮಾತ್ರವೇ ಮಾರಾಟಕ್ಕೆ ಅವಕಾಶ ನೀಡುವ ಉದ್ದೇಶದಿಂದ ಇಂಡಿಯನ್ ಕ್ರ್ಯಾಶ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಆರಂಭಿಸಿದ್ದು, ಇದರಲ್ಲಿ ನಿಗದಿತ ಮಟ್ಟದ ಸುರಕ್ಷತೆ ಹೊಂದಿರದ ಕೆಲವು ಕಾರುಗಳನ್ನು ಬ್ಯಾನ್ ಮಾಡುವುದಾಗಿ ಹೇಳಿದೆ.

ಹೊಸ ಅವತಾರದಲ್ಲಿ ಮರಳಿ ಬರಲಿರುತ್ತಿದೆ ನ್ಯೂ ಜನರೇಷನ್ ಮಾರುತಿ ಆಲ್ಟೋ..!

ಇದೇ ಕಾರಣಕ್ಕೆ ಕೇಂದ್ರ ಸರ್ಕಾರದ ಹೊಸ ನಿಯಮದಂತೆ ತನ್ನ ಬಹುತೇಕ ಕಾರುಗಳನ್ನು ಗುಣಮಟ್ಟದ ಸೌಲಭ್ಯಗಳೊಂದಿಗೆ ಉನ್ನತಿಕರಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಬ್ಯಾನ್ ಅಸ್ತ್ರಕ್ಕೆ ಸಿಲುಕಲಿರುವ ಆಲ್ಟೋ ಮತ್ತು ಇನ್ನಿತರ ಪ್ರಮುಖ ಕಾರುಗಳ ಉತ್ಪಾದನೆಯಲ್ಲಿ ಭಾರೀ ಬದಲಾವಣೆ ತರುತ್ತಿದೆ.

ಹೊಸ ಅವತಾರದಲ್ಲಿ ಮರಳಿ ಬರಲಿರುತ್ತಿದೆ ನ್ಯೂ ಜನರೇಷನ್ ಮಾರುತಿ ಆಲ್ಟೋ..!

ಕಳೆದ ಒಂದೂವರೆ ದಶಕದಿಂದ ಸಣ್ಣ ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಮಾರುತಿ ಸುಜುಕಿ ಸಂಸ್ಥೆಯು ಕಳೆದ ಕೆಲ ದಿನಗಳ ಹಿಂದಷ್ಟೇ ಆಲ್ಟೋ ಉತ್ಪಾದನೆಯನ್ನು ಸ್ಥಗಿತಗೊಳಿಸಲಿದೆ ಎಂದು ಸುದ್ದಿಯಾಗಿತ್ತು. ಆದ್ರೆ ಕೇಂದ್ರ ಸರ್ಕಾರದ ನಿಯಮಕ್ಕೆ ತಕ್ಕಂತೆ ಆಲ್ಟೋ ಕಾರನ್ನು ಮತ್ತೆ ರಸ್ತೆಗಿಳಿಸುವ ಭರವಸೆ ನೀಡಿದೆ.

ಹೊಸ ಅವತಾರದಲ್ಲಿ ಮರಳಿ ಬರಲಿರುತ್ತಿದೆ ನ್ಯೂ ಜನರೇಷನ್ ಮಾರುತಿ ಆಲ್ಟೋ..!

ಈ ಹಿಂದೆ 2018ರ ಫೆಬ್ರುವರಿಯಲ್ಲಿ ನಡೆದಿದ್ದ ದೆಹಲಿ ಆಟೋ ಮೇಳದಲ್ಲಿ ಪ್ರದರ್ಶನ ಮಾಡಲಾಗಿದ್ದ ಫ್ಯೂಚರ್ ಎಸ್ ಕಾನ್ಸೆಪ್ಟ್ ಮಾದರಿಯಲ್ಲೇ ಹೊಸ ಆಲ್ಟೋ ಕಾರು ರಸ್ತೆಗಿಳಿಯಲಿದ್ದು, ಮಿನಿ ಎಸ್‌ಯುವಿ ಮಾದರಿಯಲ್ಲಿ ನಿರ್ಮಾಣಗೊಂಡಿರವುದು ಹಲವು ವಿಶೇಷಗಳಿಗೆ ಕಾರಣವಾಗಿದೆ.

MOST READ: ಮಂಗಳೂರಿನಲ್ಲಿ ತಪ್ಪಿದ ಭೀಕರ ಅಪಘಾತ- ಎಬಿಎಸ್ ಇಲ್ಲವಾಗಿದ್ರೆ ಕಥೆ ಅಷ್ಟೇ..!

ಹೊಸ ಅವತಾರದಲ್ಲಿ ಮರಳಿ ಬರಲಿರುತ್ತಿದೆ ನ್ಯೂ ಜನರೇಷನ್ ಮಾರುತಿ ಆಲ್ಟೋ..!

ಈಗಾಗಲೇ ಹೊಸ ಕಾರಿನ ಸ್ಪಾಟ್ ಟೆಸ್ಟಿಂಗ್ ನಡೆಸಿರುವ ಮಾರುತಿ ಸುಜುಕಿ ಸಂಸ್ಥೆಯು ಎಂಜಿನ್ ಕಾರ್ಯಕ್ಷಮತೆ ಕುರಿತು ಹಲವು ಸುತ್ತಿನ ಪರೀಕ್ಷೆಗಳನ್ನು ನಡೆಸಿದ್ದು, 2020ರ ಆರಂಭ ಅವಧಿಯಲ್ಲಿ ಹೊಸ ಆಲ್ಟೋ ಕಾರು ಮಾರಾಟಕ್ಕೆ ಲಭ್ಯವಾಗುವ ಸಾಧ್ಯತೆಗಳಿವೆ.

ಹೊಸ ಅವತಾರದಲ್ಲಿ ಮರಳಿ ಬರಲಿರುತ್ತಿದೆ ನ್ಯೂ ಜನರೇಷನ್ ಮಾರುತಿ ಆಲ್ಟೋ..!

ಕೇಂದ್ರ ಸರ್ಕಾರವು ಕೂಡಾ ಪ್ರಯಾಣಿಕ ಸುರಕ್ಷತೆಗಾಗಿ ಅಗ್ಗದ ಬೆಲೆಯ ಕಳಪೆ ಕಾರುಗಳ ಉತ್ಪಾದನೆ ಮತ್ತು ಮಾರಾಟವನ್ನು ಭಾರತದಲ್ಲಿ ನಿಷೇಧಗೊಳಿಸಲು ಇದೇ ವರ್ಷ ಅಕ್ಟೋಬರ್ 1ರಂದು ಹೊಸ ನಿಯಮವನ್ನು ಜಾರಿ ಮಾಡುತ್ತಿದ್ದು, ಪ್ರತಿ ಕಾರು ಉತ್ಪಾದನಾ ಸಂಸ್ಥೆಯೂ ಸಹ ಗುಣಮಟ್ಟದ ಉತ್ಪನ್ನದೊಂದಿಗೆ ಗರಿಷ್ಠ ಮಟ್ಟದ ಪ್ರಯಾಣಿಕರ ಸುರಕ್ಷಾ ಸೌಲಭ್ಯಗಳನ್ನು ಒದಗಿಸಬೇಕಿದೆ.

MOST READ: ಆಟೋ ರಿಕ್ಷಾಗಳನ್ನು ಹಿಂದಿಕ್ಕುತ್ತಾ ಬಜಾಜ್ ಕ್ಯೂಟ್.?

ಹೊಸ ಅವತಾರದಲ್ಲಿ ಮರಳಿ ಬರಲಿರುತ್ತಿದೆ ನ್ಯೂ ಜನರೇಷನ್ ಮಾರುತಿ ಆಲ್ಟೋ..!

ಹೀಗಾಗಿ ಹೊಸ ನಿಯಮವನ್ನು ಅನುಸರಿಸಲು ಸಾಧ್ಯವಾಗದ ಜಿಪ್ಸಿ ಮತ್ತು ಓಮ್ನಿ ವ್ಯಾನ್‌ಗೆ ಗುಡ್ ಬೈ ಹೇಳುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ತನ್ನ ಜನಪ್ರಿಯ ಆಲ್ಟೋ ಕಾರುನ್ನು ಉಳಿಸಿಕೊಳ್ಳುವ ಭರವಸೆ ನೀಡಿದ್ದು, ಹೊಸ ಕಾರು ಮತ್ತಷ್ಟು ಬೇಡಿಕೆ ಪಡೆಯುವ ವಿಶ್ವಾಸದಲ್ಲಿದೆ.

Spy Image Source: Team-BHP

Most Read Articles

Kannada
English summary
New Maruti Alto (2020) Spied Testing — To Be Based On The Future-S Concept. Read in Kannada.
Story first published: Monday, March 18, 2019, 18:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X