ಮಾರುತಿ ಎಕ್ಸ್‌ಎಲ್6 ಬಿಡುಗಡೆಗೆ ದಿನಗಣನೆ- ಬ್ರಾಂಡ್ ಅಂಬಾಸಿಡರ್ ಆಗಿ ಮಿಂಚಿದ ರಣವೀರ್ ಸಿಂಗ್..!

ಮಾರುತಿ ಸುಜುಕಿ ಸಂಸ್ಥೆಯು ಇದೇ ತಿಂಗಳು 21ಕ್ಕೆ ತನ್ನ ಹೊಚ್ಚ ಹೊಸ ಎಕ್ಸ್ಎಲ್6 ಎಂಪಿವಿ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಈಗಾಗಲೇ ಹೊಸ ಕಾರು ಖರೀದಿಗೆ ಬುಕ್ಕಿಂಗ್ ಆರಂಭಿಸಿರುವ ಮಾರುತಿ ಸುಜುಕಿಯು ಹೊಸ ಕಾರಿನ ಮತ್ತೊಂದು ಟೀಸರ್ ಬಿಡುಗಡೆ ಮಾಡಿದೆ.

ಮಾರುತಿ ಎಕ್ಸ್‌ಎಲ್6 ಬಿಡುಗಡೆಗೆ ದಿನಗಣನೆ- ಬ್ರಾಂಡ್ ಅಂಬಾಸಿಡರ್ ಆಗಿ ಮಿಂಚಿದ ರಣವೀರ್ ಸಿಂಗ್..!

ಹೊಸದಾಗಿ ಬಿಡುಗಡೆ ಮಾಡಲಾಗಿರುವ ಟೀಸರ್‌ನಲ್ಲಿ ಎಕ್ಸ್‌ಎಲ್ 6 ಕಾರಿನ ಕುರಿತಾದ ಮತ್ತಷ್ಟು ತಾಂತ್ರಿಕ ಅಂಶಗಳ ಮಾಹಿತಿಯನ್ನು ಹಂಚಿಕೊಳ್ಳಲಾಗಿದ್ದು, ಎರ್ಟಿಗಾಗಿಂತಲೂ ಹೆಚ್ಚಿನ ವಿನ್ಯಾಸ ಮತ್ತು ಪ್ರೀಮಿಯಂ ಫೀಚರ್ಸ್ ಹೊಂದಿರುವುದು ಸ್ಪಷ್ಟವಾಗಿದೆ. ಜೊತೆಗೆ ಹೊಸ ಕಾರಿನ ಬ್ರಾಂಡ್ ಅಂಬಾಸಿಡರ್ ಆಗಿ ಈ ಬಾರಿ ಬಾಲಿವುಡ್‌ನ ಜನಪ್ರಿಯ ನಾಯಕ ನಟ ರಣವೀರ್ ಸಿಂಗ್ ಆಯ್ಕೆಯಾಗಿದ್ದು, ಎಂಪಿವಿ ಕಾರುಗಳ ಮಾರಾಟದಲ್ಲಿ ಹೊಸ ಎಕ್ಸ್ಎಲ್6 ಭಾರೀ ಸದ್ದು ಮಾಡುವ ನೀರಿಕ್ಷೆಯಲ್ಲಿದೆ.

ಮಾರುತಿ ಎಕ್ಸ್‌ಎಲ್6 ಬಿಡುಗಡೆಗೆ ದಿನಗಣನೆ- ಬ್ರಾಂಡ್ ಅಂಬಾಸಿಡರ್ ಆಗಿ ಮಿಂಚಿದ ರಣವೀರ್ ಸಿಂಗ್..!

ಪ್ರೀಮಿಯಂ ಸೌಲಭ್ಯಗಳೊಂದಿಗೆ ಎರ್ಟಿಗಾ ಕಾರಿಗಿಂತಲೂ ಉದ್ದಳತೆಯಲ್ಲಿ ಉತ್ತಮ ವಿನ್ಯಾಸ ಹೊಂದಿರುವ ಎಕ್ಸ್ಎಲ್6 ಕಾರು 6-ಸೀಟರ್ ಸೌಲಭ್ಯವನ್ನು ಹೊಂದಿದ್ದು, ಎರ್ಟಿಗಾಗಿಂತ 50-ಎಂಎಂ ಹೆಚ್ಚುವರಿ ಉದ್ದ, 40-ಎಂಎಂ ಹೆಚ್ಚುವರಿ ಅಗಲ ಮತ್ತು 10-ಎಂಎಂ ನಷ್ಟು ಹೆಚ್ಚುವರಿ ಎತ್ತರ ಹೊಂದಿಯಂತೆ.

ಮಾರುತಿ ಎಕ್ಸ್‌ಎಲ್6 ಬಿಡುಗಡೆಗೆ ದಿನಗಣನೆ- ಬ್ರಾಂಡ್ ಅಂಬಾಸಿಡರ್ ಆಗಿ ಮಿಂಚಿದ ರಣವೀರ್ ಸಿಂಗ್..!

ಇದರಿಂದ ಮಹೀಂದ್ರಾ ಮರಾಜೊ ಕಾರಿನ ಗಾತ್ರಕ್ಕೆ ಸರಿಸಮನಾಗುವ ಎಕ್ಸ್ಎಲ್6 ಮಾದರಿಯು ಈ ಬಾರಿ ಮತ್ತಷ್ಟು ಎಂಪಿವಿ ಕಾರು ಖರೀದಿದಾರರನ್ನು ಸೆಳೆಯುವ ವಿಶ್ವಾಸದಲ್ಲಿದ್ದು, ಹಲವು ಹೊಸ ಪ್ರೀಮಿಯಂ ಸೌಲಭ್ಯಗಳಿಂದಾಗಿ ನೆಕ್ಸಾ ಶೋರೂಂನಲ್ಲಿ ಮಾತ್ರವೇ ಈ ಹೊಸ ಕಾರು ಖರೀದಿಗೆ ಲಭ್ಯವಾಗಲಿದೆ.

ಮಾರುತಿ ಎಕ್ಸ್‌ಎಲ್6 ಬಿಡುಗಡೆಗೆ ದಿನಗಣನೆ- ಬ್ರಾಂಡ್ ಅಂಬಾಸಿಡರ್ ಆಗಿ ಮಿಂಚಿದ ರಣವೀರ್ ಸಿಂಗ್..!

ಮಾರುತಿ ಸುಜುಕಿ ಸಂಸ್ಥೆಯು ಕಾರು ಮಾರಾಟದಲ್ಲಿ ಎರಡು ಮಾದರಿಯ ಶೋರೂಂ ಸೌಲಭ್ಯವನ್ನು ಹೊಂದಿದ್ದು, ಸಾಮಾನ್ಯ ಕಾರುಗಳನ್ನು ಅರೆನಾ ಡೀಲರ್ಸ್‌ಗಳಲ್ಲಿ ಮತ್ತು ಪ್ರೀಮಿಮಂ ಕಾರುಗಳನ್ನು ನೆಕ್ಸಾ ಶೋರೂಂನಲ್ಲಿ ಪ್ರತ್ಯೇಕವಾಗಿ ಮಾರಾಟ ಮಾಡುತ್ತದೆ. ಇದೀಗ ಬಿಡುಗಡೆಗಾಗಿ ಸಿದ್ದವಾಗಿರುವ ಎಕ್ಸ್ಎಲ್6 ಕೂಡಾ ಸಾಮಾನ್ಯ ಮಾದರಿಯಾಗಿರದೇ ಪ್ರೀಮಿಯಂ ಸೌಲಭ್ಯಗಳೊಂದಿಗೆ ಮಿಂಚಲಿದ್ದು, ಬಿಎಸ್-6 ವೈಶಿಷ್ಟ್ಯತೆಯೊಂದಿಗೆ ಮತ್ತಷ್ಟು ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಮಾರುತಿ ಎಕ್ಸ್‌ಎಲ್6 ಬಿಡುಗಡೆಗೆ ದಿನಗಣನೆ- ಬ್ರಾಂಡ್ ಅಂಬಾಸಿಡರ್ ಆಗಿ ಮಿಂಚಿದ ರಣವೀರ್ ಸಿಂಗ್..!

ಮಾರುತಿ ಸುಜುಕಿ ಎಕ್ಸ್ಎಲ್6 ಕಾರಿನಲ್ಲಿ ಸಾಮಾನ್ಯ ಎರ್ಟಿಗಾ ಕಾರಿನಂತೆಯೇ ಇಂಟಿರಿಯರ್ ಜೋಡಿಸಲಾಗಿದ್ದರೂ ಸಹ ಹೊಸದಾಗಿ ಆಲ್ ಬ್ಲಾಕ್ ಥೀಮ್ ಜೋಡಣೆ ಹೊಂದಿದ್ದು, 2+2+2 ಆಸನ ಸೌಲಭ್ಯದೊಂದಿಗೆ ಮಧ್ಯಭಾಗದಲ್ಲಿನ ಸೀಟ್‍‍ಗಳಲ್ಲಿ ಈ ಬಾರಿ ಕ್ಯಾಪ್ಟನ್ ಸೀಟ್‍ ಅನ್ನು ಅಳವಡಿಸಲಾಗಿದೆ.

ಮಾರುತಿ ಎಕ್ಸ್‌ಎಲ್6 ಬಿಡುಗಡೆಗೆ ದಿನಗಣನೆ- ಬ್ರಾಂಡ್ ಅಂಬಾಸಿಡರ್ ಆಗಿ ಮಿಂಚಿದ ರಣವೀರ್ ಸಿಂಗ್..!

ಇನ್ನು ಕೆಲವು ಮಾಹಿತಿಗಳ ಪ್ರಕಾರ, ಎಕ್ಸ್ಎಲ್6 ಕಾರಿನ ಒಳಭಾಗದಲ್ಲಿ 5 ಸ್ಪೀಡ್ ಆಟೋ‍ಮ್ಯಾಟಿಕ್ ಗೇರ್‍‍ಬಾಕ್ಸ್, ಮಲ್ಟಿ ಫಂಕ್ಷನಿಂಗ್ ಸ್ಟೀರಿಂಗ್ ವ್ಹೀಲ್ ಮತ್ತು ಕಾರಿನ ಒಳಭಾಗದಲ್ಲಿರುವ ಬಹುತೇಕ ಭಾಗಗಳನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದೆ. ಜೊತೆಗೆ ಆಪಲ್ ಕಾರ್‍ ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ನ್ಯಾವಿಗೇಷನ್ ಸಪೋರ್ಟ್ ಮಾಡುವ ಸ್ಮಾರ್ಟ್‍ಪ್ಲೇ ಇನ್ಫೋಟೈನ್ಮೆಂಟ್ ಸಿಸ್ಟಂ, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್ ಮತ್ತು ಹಿಲ್ ಹೋಲ್ಡ್ ಅಸಿಸ್ಟ್ ಎಂಬ ಸುರಕ್ಷಾ ಸಾಧನಗಳನ್ನು ಕೂಡಾ ಹೊಂದಿರಲಿದೆ.

ಮಾರುತಿ ಎಕ್ಸ್‌ಎಲ್6 ಬಿಡುಗಡೆಗೆ ದಿನಗಣನೆ- ಬ್ರಾಂಡ್ ಅಂಬಾಸಿಡರ್ ಆಗಿ ಮಿಂಚಿದ ರಣವೀರ್ ಸಿಂಗ್..!

ಎಂಜಿನ್ ಸಾಮರ್ಥ್ಯ

ಹೊಸ ಎಕ್ಸ್ಎಲ್6 ಕಾರು ಮಾದರಿಯು ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿ ಪ್ರೇರಿತ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯಲಿದ್ದು, ಇದು 104-ಬಿಹೆಚ್‍ಪಿ ಮತ್ತು 138-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಳ್ಳಲಿದೆ. ಹಾಗೆಯೇ ಈ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ 4 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ನೊಂದಿಗೆ ಬರಲಿದೆ ಎನ್ನಲಾಗಿದೆ.

ಎರಡನೇ ತಲೆಮಾರಿನ ಎರ್ಟಿಗಾ ಮಾದರಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.45 ಲಕ್ಷ ಮತ್ತು ಟಾಪ್ ಎಂಡ್ ಮಾದರಿಗೆ ರೂ. 11.21 ಲಕ್ಷ ಬೆಲೆ ಹೊಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 13 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಮಾರುತಿ ಎಕ್ಸ್‌ಎಲ್6 ಬಿಡುಗಡೆಗೆ ದಿನಗಣನೆ- ಬ್ರಾಂಡ್ ಅಂಬಾಸಿಡರ್ ಆಗಿ ಮಿಂಚಿದ ರಣವೀರ್ ಸಿಂಗ್..!

ಇದೀಗ ಬಿಡುಗಡೆಯಾಗುತ್ತಿರುವ ಹೊಸ ಎಕ್ಸ್ಎಲ್6 ಮಾದರಿಯು ವ್ಯಯಕ್ತಿಕ ಕಾರು ಬಳಕೆದಾರರ ಬೇಡಿಕೆಯೆಂತೆ ಜೆಟಾ ಮತ್ತು ಅಲ್ಫಾ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.9.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 10.50 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
Ranveer Singh makes an appearance in new teaser of Maruti XL6. Read in Kannada.
Story first published: Friday, August 16, 2019, 15:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X