ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ವ್ಯಾಗನ್‍ಆರ್ ಹೊಸ ರೂಪಾಂತರ

ಮರುತಿ ಸುಜುಕಿಯ ವ್ಯಾಗನ್‍ಆರ್ ಕಾರಿನ ಹೊಸ ರೂಪಾಂತರವಾದ ವ್ಯಾಗನ್‍ಆರ್ ಸ್ಟಿಂಗ್ರೇ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿದೆ. ಸ್ಪಾಟ್ ಟೆಸ್ಟ್ ವೇಳೆಯ ರಶ್ಲೆ ಸ್ಪೈ ಚಿತ್ರದಲ್ಲಿ ಬಹಿರಂಗವಾಗಿದೆ ಮಾರುತಿ ಸುಜುಕಿ ಹ್ಯಾಚ್‍‍ಬ್ಯಾಕ್ ವಿಭಾಗದ ಇಗ್ನಿಸ್‍ ಆವೃತ್ತಿಯಿಂದ ಎರೆವಲು ಪಡೆದ ಬ್ಲ್ಯಾಕ್ ಅಲಾಯ್ ವ್ಹೀಲ್ ಅನ್ನು ಈ ಕಾರಿಗೆ ಅಳವಡಿಸಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ವ್ಯಾಗನ್‍ಆರ್ ಹೊಸ ರೂಪಾಂತರ

ಸ್ಪಾಟ್ ಟೆಸ್ಟ್ ವೇಳೆ ಕಾರಿನ ಹೆಚ್ಚಿನ ಭಾಗವನ್ನು ಮರೆಮಾಚಿರುವುದರಿಂದ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲವಾದರೂ, ಈ ಕಾರು 2017ರಲಿ ಸ್ಥಗಿತಗೊಂಡ ವ್ಯಾಗನ್‍ಆರ್ ಸ್ಟಿಂಗ್ರೇ ಆಗಿರಬಹುದು ಎಂಬ ನಿರೀಕ್ಷೆ ಇದೆ. ಹೊಸ ವ್ಯಾಗನ್‍ಆರ್ ವೈಶಿಷ್ಟೈತೆಗಳಲ್ಲಿ ಮತ್ತು ಇಂಟಿರಿಯರ್ ನಲ್ಲಿ ಅಪ್‍‍ಡೇಟ್ ಮಾಡಿದ್ದು, ಬಿಡುಗಡೆಯಾಗುವ ಹೊಸ ಕಾರುಗಳಲ್ಲಿ ಇರುವ ಹಾಗೆ ಹೊಸ ಟಚ್ ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಮ್ ಅನ್ನು ಈ ಹೊಸ ಕಾರಿನಲ್ಲಿ ಅಳವಡಿಸಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ವ್ಯಾಗನ್‍ಆರ್ ಹೊಸ ರೂಪಾಂತರ

ಕಾರಿನ ಹೊರ ಭಾಗದ ವಿನ್ಯಾಸದಲ್ಲಿ ಆಕರ್ಷಕವಾಗಿದ್ದು, ಎರಡು ಬದಿಯ ಬಂಪರ್ ಕಾರಿಗೆ ಹೊಸ ಸ್ಪುರ್ಟಿಯರ್ ಲುಕ್ ನೀಡಿದೆ. ಹೆಡ್‍‍ಲೈಟ್ ಕ್ಲಸ್ಟರ್‍‍ನೊಂದಿಗೆ ಎಲ್ಇ‍ಡಿ ಡಿಆರ್‍ಎಲ್‍ಎಸ್ ಮತ್ತು ಪ್ರೋಜೆಕ್ಟರ್ ಹೆಡ್‍ಲ್ಯಾಂಪ್, ಟೈಲ್ ಲೈಟ್ ಇದು ಎಲ್‍ಇಡಿ ಇಂದ ಕೊಡಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ವ್ಯಾಗನ್‍ಆರ್ ಹೊಸ ರೂಪಾಂತರ

ಹೊಸ ಜನರೇಷನ್ ವ್ಯಾಗನ್‍ಆರ್ ಈ ವರ್ಷದಲ್ಲೇ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಇದೆ. ಹೊಸ ವ್ಯಾಗನ್‍ಆರ್ ಬಿ‍ಎಸ್-6 ಪ್ರೇರಿತ ಎಂಜಿನ್ ಅನ್ನು ಅಳವಡಿಸಿದೆ. ಇದು ಎರಡು ಎಂಜಿನ್‍‍ಗಳ ಆಯ್ಕೆಗಳನ್ನು ಹೊಂದಿದ್ದು, 1.0 ಲೀಟರ್ ಎಂಜಿನ್‍‍ನಲ್ಲಿ 82 ಬಿಎಚ್‍‍ಪಿ ಉತ್ಪಾದಿಸುವ ಗುಣ ಹೊಂದಿದ್ದರೆ, 1.2 ಲೀಟರ್ ಎಂಜಿನ್‍‍ನಲ್ಲಿ 82 ಬಿ‍ಎಚ್‍‍ಪಿ ಯನ್ನು ಉತ್ಪಾದಿಸುತ್ತದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ವ್ಯಾಗನ್‍ಆರ್ ಹೊಸ ರೂಪಾಂತರ

ವ್ಯಾಗನ್‍ಆರ್ ಕಾರಿನ ಎಂಜಿನ್‍‍ಗೆ 5-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಿದ್ದು, 1.2 ಲೀಟರ್ ರೂಪಾಂತರ ಕಾರಿಗೆ ಎಜಿಎಸ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಿದೆ. ವ್ಯಾಗನಾರ್ ಸ್ಟಿಂಗ್ರೇ ಕಾರಿಗೂ ಅದೇ ಎಂಜಿನ್ ಅನ್ನು ಅಳವಡಿಸುವ ಸಾಧ್ಯತೆಗಳಿವೆ.

ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ವ್ಯಾಗನ್‍ಆರ್ ಹೊಸ ರೂಪಾಂತರ

ಮಾರುತಿ ಸುಜುಕಿಯು ಇನ್ನೊದು ಹೊಸ ಕಾರನ್ನು ಇದೇ ತಿಂಗಳು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಮಾರುತಿಯ ಎಸ್-ಪ್ರೆಸ್ಸೊ ಕಾರು ಅಲ್ಟೊ ಮತ್ತು ಸೆಲೆರಿಯೊ ಕಾರಿನ ಸ್ಥಾನ ಪಡೆದುಕೊಳ್ಳಬಹುದಾ ಎಂದು ನೋಡಬೇಕು. ಹೊಸ ಎ‍‍ಸ್‍-ಪ್ರೆಸ್ಸೊ ಕಾರು ಹ್ಯುಂಡೈ ವೆನ್ಯೂ ಮತ್ತು ರೆನಾಲ್ಟ್ ಕ್ವಿಡ್‍‍ಗೆ ಪೈಪೋಟಿಯನ್ನು ನೀಡಲಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ವ್ಯಾಗನ್‍ಆರ್ ಹೊಸ ರೂಪಾಂತರ

ಮಾರುತಿ ಸುಜುಕಿ ಕಂಪನಿಯು ಮಧ್ಯಮ ವರ್ಗದವರನ್ನು ಗುರಿಯಾಗಿಸಿಕೊಂಡು ಕೈಗೆಟುಕುವ ಬೆಲೆಯಲ್ಲಿ ಮಾರಾಟ ಮಾಡುವುದರಿಂದ ಹೊಸ ಎಸ್-ಪ್ರೆಸ್ಸೊ ಕಾರಿನ ಮೆಲೆ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದಾರೆ. ಈ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 5- ಸ್ಪೀಡ್ ಆಟೋಮ್ಯಾಟಿಕ್ ಎಎಂಟಿ ಗೇರ್‍‍ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿರಲಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ವ್ಯಾಗನ್‍ಆರ್ ಹೊಸ ರೂಪಾಂತರ

ಮಾರುತಿಯವರ ಎಂಪಿವಿ ವಿಭಾಗದಲ್ಲಿ ಅತೀ ಹೆಚ್ಚು ಮಾರಾಟವಾದ ಕಾರು ಎರ್ಟಿಗಾ ಕಾರಿನ ಮಾದರಿಯಲ್ಲೇ ವಿನ್ಯಾಸ, ವೈಶಿಷ್ಟಗಳು ಎಕ್ಸ್ಎಲ್6 ಕಾರನ್ನು ಬಿಡುಗಡೆಗೊಳಿಸಿದ್ದರು, ಇದೀಗ ನೆಕ್ಸಾ ಪ್ರೀಮಿಯಂ ಬ್ಯಾನರ್ ಅಡಿಯಲ್ಲಿ ಮಾರಾಟವಾಗುತ್ತಿದೆ. ವ್ಯಾಗನಾರ್ ಸ್ಟಿಂಗ್ರೇ ಕಾರು ಕೂಡ ಅದೇ ಡೀಲರ್‍‍ಗಳ ಮೂಲಕ ಉತ್ತಮ ಮಾರಾಟವಾಗಬಹುದು.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ವ್ಯಾಗನ್‍ಆರ್ ಹೊಸ ರೂಪಾಂತರ

ಈ ಹಿಂದೆ ಮಾರುತಿ ಸುಜುಕಿ ಕಂಪನಿಯ ಹೆಚ್ಚು ಮಾರಾಟವಾದ ಹ್ಯಾಚ್‍‍ಬ್ಯಾಕ್ ಕಾರು ವ್ಯಾಗನರ್ ಆಗಿತ್ತು. ಹೊಸ ವ್ಯಾಗನ್‍ಆರ್ ಕಾರು ಆಕರ್ಷಕ ವಿನ್ಯಾಸವನ್ನು ಹೊಂದಿದ್ದು, ಹಳೇ ಕಾರಿನ ವಿನ್ಯಾಸಕ್ಕಿಂತಲೂ ಉತ್ತಮವಾಗಿದೆ. ವ್ಯಾಗನ್‍ಆರ್ ಮಧ್ಯಮ ವರ್ಗದ ಜನರ ಮೆಚ್ಚಿನ ಕಾರು, ಇದರ ಬೆಲೆ ಮತ್ತು ಇತರ ವೈಶಿಷ್ಟೈಗಳಿಂದ ಹೆಚ್ಚಿನ ಗ್ರಾಹಕರ ಗಮನಸೆಳದಿದೆ. ಒಟ್ಟಾರೆ ಯಾಗಿ ಹೊಸ ವಿನ್ಯಾಸದೊಂದಿಗೆ ಮುಂಬರುವ ಆವೃತಿ ಇಗ್ನಿಸ್ ಮತ್ತು ವ್ಯಾಗನ್‍ಆರ್ ಒಂದೇ ರೀತಿಯ ರೂಪಾಂತರದ ಕಾಂಬೋ ಆಗಿದೆಯೇ ಎಂದು ಕಾದು ನೋಡಬೇಕು.

Most Read Articles

Kannada
English summary
New Maruti WagonR Variant Spied Testing: Is This The New Stingray? - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X