ವಿ6 ಪೆಟ್ರೋಲ್ ಎಂಜಿನ್‍‍ನಲ್ಲಿ ಕಾರುಗಳನ್ನು ಬಿಡುಗಡೆಗೊಳಿಸಿದ ಮಸೆರಾಟಿ

ಇಟಲಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮಸೆರಾಟಿ ತನ್ನ ಸರಣಿಯಲ್ಲಿರುವ ಘಿಬ್ಲಿ, ಕ್ವಾಟ್ರೊಪೋರ್ಟ್ ಹಾಗೂ ಲೆವಾಂತೆ ಕಾರುಗಳ ವಿ6 ಪೆಟ್ರೋಲ್ ಎಂಜಿನ್ ಮಾದರಿಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದಾಗಿ ತಿಳಿಸಿದೆ.

ವಿ6 ಪೆಟ್ರೋಲ್ ಎಂಜಿನ್‍‍ನಲ್ಲಿ ಕಾರುಗಳನ್ನು ಬಿಡುಗಡೆಗೊಳಿಸಿದ ಮಸೆರಾಟಿ

ಈ ಹೊಸ ಎಂಜಿನ್ ಆಯ್ಕೆಗಳು ಮಸೆರಾಟಿ ಕಂಪನಿಯ 2020ರ ಸರಣಿಯ ಭಾಗವಾಗಿವೆ. ವಿ6 ಪೆಟ್ರೋಲ್ ಎಂಜಿನ್‍‍ಗಳನ್ನು ಎರಡು ರೀತಿಯಲ್ಲಿ ಟ್ಯೂನ್ ಮಾಡಬಹುದಾಗಿದೆ. ಲೋವರ್ ಸ್ಪೆಸಿಫಿಕೇಶನ್ ಎಂಜಿನ್ 345.2 ಬಿ‍‍ಹೆಚ್‍‍ಪಿ ಪವರ್ ಹಾಗೂ 500 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ವಿ6 ಪೆಟ್ರೋಲ್ ಎಂಜಿನ್‍‍ನಲ್ಲಿ ಕಾರುಗಳನ್ನು ಬಿಡುಗಡೆಗೊಳಿಸಿದ ಮಸೆರಾಟಿ

ಹೈಯರ್ ಸ್ಪೆಸಿಫಿಕೇಶನ್ ಎಂಜಿನ್ 424.1 ಬಿ‍ಹೆಚ್‍‍ಪಿ ಪವರ್ ಹಾಗೂ 580 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍‍ಗಳನ್ನು ಮರನೆಲ್ಲೊದಲ್ಲಿರುವ ಫೆರಾರಿ ಘಟಕದಲ್ಲಿ ತಯಾರಿಸಲಾಗಿದೆ. ಹೊಸ ವಿ6 ಎಂಜಿನ್ ಯುರೋ 6 ನಿಯಮಕ್ಕೆ ತಕ್ಕಂತೆ ಇದೆ.

ವಿ6 ಪೆಟ್ರೋಲ್ ಎಂಜಿನ್‍‍ನಲ್ಲಿ ಕಾರುಗಳನ್ನು ಬಿಡುಗಡೆಗೊಳಿಸಿದ ಮಸೆರಾಟಿ

ಯುರೋ 6, ಭಾರತದ ಬಿಎಸ್ 6 ಮಾಲಿನ್ಯ ನಿಯಮಕ್ಕೆ ಸಮನಾಗಿದೆ. ಘಿಬ್ಲಿ, ಕ್ವಾಟ್ರೊಪೋರ್ಟ್ ಹಾಗೂ ಲೆವಾಂತೆ ಕಾರುಗಳನ್ನು ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಎಂಟ್ರಿ ಲೆವೆಲ್ ಮಾದರಿಯಲ್ಲಿ ಲೋವರ್ ಸ್ಪೆಸಿಫಿಕೇಶನ್‍‍ನ ವಿ6 ಎಂಜಿನ್ ಅಳವಡಿಸಲಾಗುವುದು.

ವಿ6 ಪೆಟ್ರೋಲ್ ಎಂಜಿನ್‍‍ನಲ್ಲಿ ಕಾರುಗಳನ್ನು ಬಿಡುಗಡೆಗೊಳಿಸಿದ ಮಸೆರಾಟಿ

ಪರ್ಫಾಮೆನ್ಸ್ ಆಧಾರಿತ ಎಸ್ ಮಾದರಿಯಲ್ಲಿ ಹೈಯರ್ ಸ್ಪೆಸಿಫಿಕೇಶನ್‍‍ನ ವಿ6 ಎಂಜಿನ್ ಅಳವಡಿಸಲಾಗುವುದು. ಈ ಎರಡೂ ಮಾದರಿಯ ಎಂಜಿನ್‍‍ಗಳಲ್ಲಿ ಎಂಟು ಸ್ಪೀಡಿನ ಝಡ್‍ಎಫ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು.

ವಿ6 ಪೆಟ್ರೋಲ್ ಎಂಜಿನ್‍‍ನಲ್ಲಿ ಕಾರುಗಳನ್ನು ಬಿಡುಗಡೆಗೊಳಿಸಿದ ಮಸೆರಾಟಿ

ಮಾಸೆರೋಟಿ ಇಂಡಿಯಾದ ಆಪರೇಷನ್ಸ್ ಮುಖ್ಯಸ್ಥರಾದ ಬೊಜನ್ ಜಂಕುಲೋವ್ಸ್ಕಿ ರವರು ಮಾತನಾಡಿ, ಲೆವಾಂತೆ, ಘಿಬ್ಲಿ ಹಾಗೂ ಕ್ವಾಟ್ರೋಪೋರ್ಟ್‌ ಕಾರುಗಳ ವಿ6 ಪೆಟ್ರೋಲ್ ಆವೃತ್ತಿಗಳನ್ನು ಬಿಡುಗಡೆಗೊಳಿಸುವ ಮೂಲಕ ಭಾರತದಲ್ಲಿ ಗಮನಾರ್ಹವಾಗಿ ಹೆಚ್ಚುತ್ತಿರುವ ಪೆಟ್ರೋಲ್ ಕಾರುಗಳ ಬೇಡಿಕೆಯನ್ನು ಪೂರೈಸುವ ನಮ್ಮ ಬದ್ಧತೆಯ ಮೇಲೆ ನಾವು ಮತ್ತೆ ಅನುಸರಿಸುತ್ತೇವೆ.

ಮಾದರಿಗಳು ಬೆಲೆಗಳು
ಲೆವಾಂತೆ ರೂ.1.41 ಕೋಟಿ
ಲೆವಾಂತೆ ಎಸ್ ರೂ.1.53 ಕೋಟಿ
ಘಿಬ್ಲಿ ರೂ.1.31 ಕೋಟಿ
ಘಿಬ್ಲಿ ಎಸ್ ರೂ.1.44 ಕೋಟಿ
ಕ್ವಾಟ್ರೊಪೋರ್ಟ್ ರೂ.1.63 ಕೋಟಿ
ಕ್ವಾಟ್ರೊಪೋರ್ಟ್ ಎಸ್ ರೂ.1.73 ಕೋಟಿ
ವಿ6 ಪೆಟ್ರೋಲ್ ಎಂಜಿನ್‍‍ನಲ್ಲಿ ಕಾರುಗಳನ್ನು ಬಿಡುಗಡೆಗೊಳಿಸಿದ ಮಸೆರಾಟಿ

ಮಸೆರಾಟಿ ಕಾರುಗಳು ಆಕರ್ಷಕ ಹಾಗೂ ಐಷಾರಾಮಿ ಪರ್ಫಾಮೆನ್ಸ್ ಆಗಿವೆ. ನಮ್ಮ ಗ್ರಾಹಕರಿಗೆ ವಿಶ್ವದರ್ಜೆಯ ಅನುಭವವನ್ನು ನೀಡುತ್ತೇವೆ. ಮಸೆರಾಟಿ ಕಾರು ಪ್ರಿಯರಿಗೆ ಅತ್ಯುತ್ತಮವಾದುದನ್ನು ನೀಡಲಿದೆ ಎಂದು ಹೇಳಿದರು.

MOST READ: ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ವಿ6 ಪೆಟ್ರೋಲ್ ಎಂಜಿನ್‍‍ನಲ್ಲಿ ಕಾರುಗಳನ್ನು ಬಿಡುಗಡೆಗೊಳಿಸಿದ ಮಸೆರಾಟಿ

ಈ ಮಾದರಿಗಳಲ್ಲಿ 8.4-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಅನ್ನು ಸೆಂಟರ್ ಕನ್ಸೋಲ್‌ನಲ್ಲಿ ಡಬಲ್ ರೋಟರಿ ನಾಬ್‌ನೊಂದಿಗೆ ಅಳವಡಿಸಲಾಗಿದೆ. ಅಪ್‍‍ಡೇಟೆಡ್ ಡಿಸ್‍‍ಪ್ಲೇ ಗ್ರಾಫಿಕ್ಸ್‌ನೊಂದಿಗೆ ಇನ್ಫೋಟೇನ್‌ಮೆಂಟ್ ಹಾಗೂ ಇಂಟರ್‍‍ಫೇಸ್‍‍ನ ಸಾಫ್ಟ್‌ವೇರ್ ಅನ್ನು ಮತ್ತಷ್ಟು ಸುಧಾರಿಸಲಾಗಿದೆ.

MOST READ: ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್‌ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?

ವಿ6 ಪೆಟ್ರೋಲ್ ಎಂಜಿನ್‍‍ನಲ್ಲಿ ಕಾರುಗಳನ್ನು ಬಿಡುಗಡೆಗೊಳಿಸಿದ ಮಸೆರಾಟಿ

ಏರ್ ಫ್ಲೋ ಡಿಸ್ಟ್ರಿಬ್ಯೂಷನ್ ಕಂಟ್ರೋಲ್ ಈಗ ಹೆಚ್ಚು ಕಸ್ಟಮೈಸ್ ಆಗಿದ್ದು, ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ ಅನ್ನು ಸಹ ಸುಧಾರಿಸಲಾಗಿದೆ. ಇದರ ಜೊತೆಗೆ ಎಲ್ಲಾ ಮೂರು ಮಾದರಿಗಳ ಇಂಟಿರಿಯರ್‍‍ನಲ್ಲಿ ಕಂಪನಿಯ ಫುಲ್ ಗ್ರೇನ್ ಪಿಯೆನೊ ಫಿಯೋರ್ ಲೆದರ್ ಅಳವಡಿಸಲಾಗಿದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ವಿ6 ಪೆಟ್ರೋಲ್ ಎಂಜಿನ್‍‍ನಲ್ಲಿ ಕಾರುಗಳನ್ನು ಬಿಡುಗಡೆಗೊಳಿಸಿದ ಮಸೆರಾಟಿ

ಈ ಲೆದರ್ ಬೇರೆ ಲೆದರ್ ಅಪ್‍‍ಹೊಲೆಸ್ಟರಿಗಳಂತಿರದೇ ಮೃದುವಾದ ಭಾವನೆಯನ್ನು ಹೊಂದಿದೆ. ಎಲ್ಲಾ ಲೆವಾಂತೆ, ಘಿಬ್ಲಿ ಹಾಗೂ ಕ್ವಾಟ್ರೊಪೋರ್ಟ್ ಆವೃತ್ತಿಗಳಲ್ಲಿ ಮೂರು ಬಣ್ಣಗಳಲ್ಲಿ ಪಿಯೆನೊ ಫಿಯೋರ್ ಲಭ್ಯವಿದೆ.

ವಿ6 ಪೆಟ್ರೋಲ್ ಎಂಜಿನ್‍‍ನಲ್ಲಿ ಕಾರುಗಳನ್ನು ಬಿಡುಗಡೆಗೊಳಿಸಿದ ಮಸೆರಾಟಿ

ಆಸನಗಳ ಮೇಲೆ ನಿರ್ದಿಷ್ಟವಾದ ಸ್ಟಿಚಿಂಗ್ ಹಾಗೂ ಡೋರ್ ಪ್ಯಾನೆಲ್‍‍ಗಳ ಮೇಲೆ ಡಬಲ್ ಸ್ಟಿಚಿಂಗ್‍‍ಗಳಿವೆ. ಈ ಐಷಾರಾಮಿ ಮಾದರಿಗಳಲ್ಲಿ ಇತರ ಕಸ್ಟಮೈಸ್ ಆಯ್ಕೆಗಳೂ ಸಹ ಇವೆ.

ವಿ6 ಪೆಟ್ರೋಲ್ ಎಂಜಿನ್‍‍ನಲ್ಲಿ ಕಾರುಗಳನ್ನು ಬಿಡುಗಡೆಗೊಳಿಸಿದ ಮಸೆರಾಟಿ

ಈ ಎಲ್ಲಾ ಮೂರು ಮಾದರಿಗಳನ್ನು ವಿವಿಧ ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ಕ್ವಾಟ್ರೋಪೋರ್ಟ್‌ ಮಾದರಿಯನ್ನು ಹತ್ತು ರೀತಿಯ ಬಣ್ಣಗಳಲ್ಲಿ, ಘಿಬ್ಲಿ ಹಾಗೂ ಲೆವಾಂತೆ ಮಾದರಿಗಳನ್ನು ಹನ್ನೊಂದು ಬಗೆಯ ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

ವಿ6 ಪೆಟ್ರೋಲ್ ಎಂಜಿನ್‍‍ನಲ್ಲಿ ಕಾರುಗಳನ್ನು ಬಿಡುಗಡೆಗೊಳಿಸಿದ ಮಸೆರಾಟಿ

ಈಗ ಐಕಾನಿಕ್ ರೊಸ್ಸೊ ಪೊಟೆಂಟೆ ಹಾಗೂ ಡೀಪ್ ಡಾರ್ಕ್ ಬ್ಲೂ ನೋಬಲ್ ಎಂಬ ಎರಡು ಹೊಸ ಟ್ರೈ-ಕೋಟ್ ಬಣ್ಣಗಳಿವೆ. ಹೊಸ ವಿ6 ಮಾದರಿಗಳಲ್ಲಿ ಹೊಸ ವಿನ್ಯಾಸವನ್ನು ಹೊಂದಿರುವ ಅಲಾಯ್ ವ್ಹೀಲ್‍‍ಗಳನ್ನು ನೀಡಲಾಗುವುದು.

ವಿ6 ಪೆಟ್ರೋಲ್ ಎಂಜಿನ್‍‍ನಲ್ಲಿ ಕಾರುಗಳನ್ನು ಬಿಡುಗಡೆಗೊಳಿಸಿದ ಮಸೆರಾಟಿ

ಇವುಗಳಲ್ಲಿ 20 ಇಂಚಿನ ಹಾಗೂ 21 ಇಂಚಿನ ಐದು ಹೊಸ ವಿನ್ಯಾಸಗಳಿವೆ. ಈ ಐದರಲ್ಲಿ ತಲಾ ಎರಡನ್ನು ಲೆವಾಂತೆ ಹಾಗೂ ಕ್ವಾಟ್ರೋಪೋರ್ಟ್ ಮಾದರಿಗಳಲ್ಲಿ ಅಳವಡಿಸಿದರೆ, ಒಂದನ್ನು ಘಿಬ್ಲಿ ಮಾದರಿಯಲ್ಲಿ ಅಳವಡಿಸಲಾಗುವುದು.

ವಿ6 ಪೆಟ್ರೋಲ್ ಎಂಜಿನ್‍‍ನಲ್ಲಿ ಕಾರುಗಳನ್ನು ಬಿಡುಗಡೆಗೊಳಿಸಿದ ಮಸೆರಾಟಿ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಇಂಟಿರಿಯರ್ ಹಾಗೂ ಎಕ್ಸ್ ಟಿರಿಯರ್‍‍ನಲ್ಲಿ ಕೆಲವು ಬದಲಾವಣೆಗಳನ್ನು ಹೊಂದಿರುವ ಮಸೆರಾಟಿ ಕಾರುಗಳು ಹೆಚ್ಚು ಆಕರ್ಷಕವಾಗಿವೆ. ಬಿ‍ಎಸ್ 6 ಮಾಲಿನ್ಯ ನಿಯಮಗಳಿಗೆ ಹೊಂದಿಕೊಳ್ಳುವಂತೆ ಮಸೆರಾಟಿ ಕಂಪನಿಯು ಹೊಸ ವಿ6 ಎಂಜಿನ್‍‍ಗಳನ್ನು ಈ ಕಾರುಗಳಲ್ಲಿ ಅಳವಡಿಸಿದೆ.

ವಿ6 ಪೆಟ್ರೋಲ್ ಎಂಜಿನ್‍‍ನಲ್ಲಿ ಕಾರುಗಳನ್ನು ಬಿಡುಗಡೆಗೊಳಿಸಿದ ಮಸೆರಾಟಿ

ಇದರ ಜೊತೆಗೆ ಮಸೆರಾಟಿ ಕಂಪನಿಯು ಹೊಸ ಲೆವಾಂತೆ ಜಿಟಿಎಸ್ ಹಾಗೂ ಟ್ರೋಫಿಯೊ ಕಾರುಗಳನ್ನು ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದಾಗಿ ತಿಳಿಸಿದೆ.

Most Read Articles

Kannada
English summary
Maserati Levante, Ghibli & Quattroporte Launched With V6 Petrol Engines - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X