ಕ್ರಾಶ್ ಟೆಸ್ಟ್ ನಲ್ಲಿ ಡಸ್ಟರ್ ಪಡೆದ ರೇಟಿಂಗ್ ಎಷ್ಟು ಗೊತ್ತಾ?

ಲ್ಯಾಟಿನ್ ಎನ್‍‍ಸಿ‍ಎ‍‍ಪಿ ಕ್ರಾಶ್ ಟೆಸ್ಟ್ ನಲ್ಲಿ ಹೊಸ ಆವೃತ್ತಿಯ ರೆನಾಲ್ಟ್ ಡಸ್ಟರ್ ವಯಸ್ಕರ ಸುರಕ್ಷತೆಗಾಗಿ 4 ಸ್ಟಾರ್ ಹಾಗೂ ಮಕ್ಕಳ ಸುರಕ್ಷತೆಗಾಗಿ 3 ಸ್ಟಾರ್‍‍ಗಳನ್ನು ಪಡೆದಿದೆ. ಈ ಎಸ್‍‍ಯುವಿಯನ್ನು ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡೆಸಿಯಾ ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ.

ಕ್ರಾಶ್ ಟೆಸ್ಟ್ ನಲ್ಲಿ ಡಸ್ಟರ್ ಪಡೆದ ರೇಟಿಂಗ್ ಎಷ್ಟು ಗೊತ್ತಾ?

ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಎಸ್‍‍ಯುವಿಯನ್ನು ಕೊಲಂಬಿಯಾ, ಬ್ರೆಜಿಲ್ ಹಾಗೂ ರೊಮೆನಿಯಾದಲ್ಲಿ ತಯಾರಿಸಲಾಗುತ್ತದೆ. ಲ್ಯಾಟಿನ್ ಎನ್‍‍ಸಿ‍ಎ‍‍ಪಿ, ಡಸ್ಟರ್‌ನ ರಚನೆಯು ಅಸ್ಥಿರವಾಗಿದ್ದು, ಹೆಚ್ಚು ಡಿಕ್ಕಿ ಹೊಡೆಯುವುದನ್ನು ತಡೆದುಕೊಳ್ಳಲು ಸಾಧ್ಯವಾಗಿಲ್ಲ ಎಂಬುದನ್ನು ಗಮನಿಸಿದೆ.

ಕ್ರಾಶ್ ಟೆಸ್ಟ್ ನಲ್ಲಿ ಡಸ್ಟರ್ ಪಡೆದ ರೇಟಿಂಗ್ ಎಷ್ಟು ಗೊತ್ತಾ?

ಸೈಡ್ ಇಂಪ್ಯಾಕ್ಟ್ ಟೆಸ್ಟ್ ಸಮಯದಲ್ಲಿ ಎಸ್‍‍ಯುವಿಗೆ ಹಾನಿಯಾಗುವುದನ್ನು ತೋರಿಸಿದೆ. ಎನ್‌ಸಿಎಪಿ, ಡಸ್ಟರ್‍‍ನ ಹೊಸ ಆವೃತ್ತಿಯಿಂದ ಹೆಚ್ಚು ಸುರಕ್ಷತೆಯನ್ನು ನಿರೀಕ್ಷಿಸುವುದಿಲ್ಲ ಎಂದು ಹೇಳಿದೆ. ಈ ಕ್ರಾಶ್ ಟೆಸ್ಟ್ ನಲ್ಲಿ ಪರೀಕ್ಷಿಸಲಾದ ವಾಹನವನ್ನು ರೊಮೆನಿಯಾದಲ್ಲಿ ತಯಾರಿಸಲಾಗಿತ್ತು. ನಂತರ ಚಿಲಿಗೆ ಆಮದು ಮಾಡಲಾಗಿತ್ತು.

ಕ್ರಾಶ್ ಟೆಸ್ಟ್ ನಲ್ಲಿ ಡಸ್ಟರ್ ಪಡೆದ ರೇಟಿಂಗ್ ಎಷ್ಟು ಗೊತ್ತಾ?

ವಾಹನಗಳ ಲಭ್ಯತೆಗೆ ಅನುಸಾರವಾಗಿ ಲ್ಯಾಟಿನ್ ಎನ್‍‍ಸಿ‍ಎ‍‍ಪಿ ಸ್ಥಳೀಯವಾಗಿ ಕ್ರಾಶ್ ಟೆಸ್ಟ್ ಗಳನ್ನು ನಡೆಸುತ್ತದೆ. ಲ್ಯಾಟಿನ್ ಎನ್‌ಸಿಎಪಿ, ಟೆಸ್ಟ್ ನಡೆಸುವಾಗ ಡಮ್ಮಿ ಮಗುವಿನ ತಲೆಯ ಮೇಲೆ, ವಾಹನದ ಒಳಭಾಗವು ಪರಿಣಾಮ ಬೀರುತ್ತದೆ ಎಂದು ಕಂಡುಹಿಡಿದಿದೆ.

ಕ್ರಾಶ್ ಟೆಸ್ಟ್ ನಲ್ಲಿ ಡಸ್ಟರ್ ಪಡೆದ ರೇಟಿಂಗ್ ಎಷ್ಟು ಗೊತ್ತಾ?

ಇದರಿಂದಾಗಿ ಅಪಘಾತದ ಸಮಯದಲ್ಲಿ ಗಾಯಗಳಾಗುವ ಸಾಧ್ಯತೆಗಳಿವೆ. ಡಸ್ಟರ್‌ನಲ್ಲಿ ಸ್ಟ್ಯಾಂಡರ್ಡ್ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ), ಐಎಸ್‌ಒಎಫ್‍ಐ‍ಎಕ್ಸ್ ಚೈಲ್ಡ್ ಸೀಟ್ ಆಂಕರ್‌ ಹಾಗೂ ಟಾಪ್ ಟೆಥರ್ ಆಂಕಾರೇಜ್‌ಗಳಂತಹ ಸುರಕ್ಷತಾ ಫೀಚರ್‍‍ಗಳಿವೆ.

ಕ್ರಾಶ್ ಟೆಸ್ಟ್ ನಲ್ಲಿ ಡಸ್ಟರ್ ಪಡೆದ ರೇಟಿಂಗ್ ಎಷ್ಟು ಗೊತ್ತಾ?

ಡಸ್ಟರ್‌ನ ಈ ಆವೃತ್ತಿಯನ್ನು ರೆನಾಲ್ಟ್ ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸಿಲ್ಲ. ಈ ಎಸ್‍‍ಯುವಿ ಡಸ್ಟರ್‌ನ ಫೇಸ್ ಲಿಫ್ಟ್ ಎಸ್‌ಯುವಿಯಾಗಿದೆ. ಈ ತಲೆಮಾರಿನ ರೆನಾಲ್ಟ್ ಡಸ್ಟರ್ 2017ರಲ್ಲಿ ನಡೆಸಿದ್ದ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ ವಿಫಲವಾಗಿತ್ತು.

ಕ್ರಾಶ್ ಟೆಸ್ಟ್ ನಲ್ಲಿ ಡಸ್ಟರ್ ಪಡೆದ ರೇಟಿಂಗ್ ಎಷ್ಟು ಗೊತ್ತಾ?

ರೆನಾಲ್ಟ್ ಡಸ್ಟರ್‌ನ ಫೇಸ್‌ಲಿಫ್ಟ್ ಆವೃತ್ತಿಯು ಹೊಸ ಹೆಡ್‌ಲ್ಯಾಂಪ್‌, ಹೊಸ ಗ್ರಿಲ್, ಬಂಪರ್‌, ವ್ಹೀಲ್, ಹಲವು ಬಣ್ಣಗಳ ಆಯ್ಕೆ ಸೇರಿದಂತೆ 25 ಬದಲಾವಣೆಗಳನ್ನು ಹೊಂದಿದೆ. ಇಂಟಿರಿಯರ್‍‍ನಲ್ಲಿ ಪರಿಷ್ಕೃತ ಎ‍‍ಸಿ ವೆಂಟ್ಸ್, ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇಗೆ ಹೊಂದಾಣಿಕೆಯಾಗುವ ಅಪ್‍‍ಡೇಟೆಡ್ ಇನ್ಫೋಟೇನ್‌ಮೆಂಟ್ ಸಿಸ್ಟಂಗಳನ್ನು ಅಳವಡಿಸಲಾಗಿದೆ.

ಕ್ರಾಶ್ ಟೆಸ್ಟ್ ನಲ್ಲಿ ಡಸ್ಟರ್ ಪಡೆದ ರೇಟಿಂಗ್ ಎಷ್ಟು ಗೊತ್ತಾ?

ದೇಶಿಯ ಮಾರುಕಟ್ಟೆಯಲ್ಲಿರುವ ರೆನಾಲ್ಟ್ ಡಸ್ಟರ್, ಬಿಎಸ್ 4 ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍‍ಗಳನ್ನು ಹೊಂದಿದೆ. 1.5 ಲೀಟರಿನ ಪೆಟ್ರೋಲ್ ಎಂಜಿನ್ 104 ಬಿಹೆಚ್‌ಪಿ ಪವರ್ ಹಾಗೂ 142 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5 ಸ್ಪೀಡ್‍‍ನ ಮ್ಯಾನುವಲ್ ಅಥವಾ ಸಿವಿಟಿ ಗೇರ್‍‍ಬಾಕ್ಸ್ ನೀಡಲಾಗುವುದು.

ಕ್ರಾಶ್ ಟೆಸ್ಟ್ ನಲ್ಲಿ ಡಸ್ಟರ್ ಪಡೆದ ರೇಟಿಂಗ್ ಎಷ್ಟು ಗೊತ್ತಾ?

1.5 ಲೀಟರಿನ ಡೀಸೆಲ್ ಎಂಜಿನ್ ಅನ್ನು ಎರಡು ರೀತಿಯಲ್ಲಿ ಟ್ಯೂನ್‌ ಮಾಡಿ ಮಾರಾಟ ಮಾಡಲಾಗುವುದು. 110 ಬಿಹೆಚ್‌ಪಿ ಪವರ್ ಹಾಗೂ 245 ಎನ್ಎಂ ಉತ್ಪಾದಿಸುವ ಈ ಎಂಜಿನ್ ಆರು ಸ್ಪೀಡಿನ ಮ್ಯಾನುವಲ್ ಅಥವಾ ಎಎಂಟಿ ಟ್ರಾನ್ಸ್ ಮಿಷನ್ ಹೊಂದಿದೆ. 85 ಬಿಹೆಚ್‌ಪಿ ಪವರ್ ಹಾಗೂ 200 ಎನ್ಎಂ ಟಾರ್ಕ್ ಉತ್ಪಾದಿಸುವ ಎಂಜಿನ್ 5 ಸ್ಪೀಡಿನ ಮ್ಯಾನ್ಯುವಲ್ ಟ್ರಾನ್ಸ್ ಮಿಷನ್ ಹೊಂದಿದೆ.

ಕ್ರಾಶ್ ಟೆಸ್ಟ್ ನಲ್ಲಿ ಡಸ್ಟರ್ ಪಡೆದ ರೇಟಿಂಗ್ ಎಷ್ಟು ಗೊತ್ತಾ?

2020ರ ಏಪ್ರಿಲ್ 1ರಿಂದ ಹೊಸ ಮಾಲಿನ್ಯ ನಿಯಮಗಳು ಜಾರಿಗೆ ಬರಲಿವೆ. ಇದಾದ ನಂತರ ರೆನಾಲ್ಟ್ ಕಂಪನಿಯು ಕೇವಲ ಬಿಎಸ್ 6 ಪೆಟ್ರೋಲ್ ಎಂಜಿನ್‍ ಹೊಂದಿರುವ ವಾಹನಗಳನ್ನು ಮಾತ್ರ ಮಾರಾಟ ಮಾಡಲಿದೆ. ಹಳೆಯ ಎಂಜಿನ್‍‍ಗಳನ್ನು ಬಿ‍ಎಸ್ 6ಗೆ ಮಾರ್ಪಾಡು ಮಾಡಲು ಹೆಚ್ಚು ವೆಚ್ಚವಾಗುವುದರಿಂದ ಹೊಸ ಎಂಜಿನ್‍‍ಗಳಲ್ಲಿ ಮಾತ್ರ ಮಾರಾಟ ಮಾಡಲಿದೆ.

ಕ್ರಾಶ್ ಟೆಸ್ಟ್ ನಲ್ಲಿ ಡಸ್ಟರ್ ಪಡೆದ ರೇಟಿಂಗ್ ಎಷ್ಟು ಗೊತ್ತಾ?

ಕೇಂದ್ರ ಸರ್ಕಾರವು ದೇಶದಲ್ಲಿ ಮಾರಾಟವಾಗುವ ಎಲ್ಲಾ ಕಾರುಗಳಲ್ಲಿ ಕ್ರ್ಯಾಶ್ ಟೆಸ್ಟುಗಳನ್ನು ಕಡ್ಡಾಯಗೊಳಿಸಿದೆ. ಹೊಸ ಭಾರತ್ ನ್ಯೂ ವೆಹಿಕಲ್ ಸೇಫ್ಟಿ ಅಸೆಸ್‍‍ಮೆಂಟ್ ಪ್ರೊಗ್ರಾಂ (ಬಿಎನ್‌ವಿಎಸ್‌ಎಪಿ) ಅಡಿಯಲ್ಲಿ ಜನಪ್ರಿಯ ವಾಹನಗಳನ್ನು ಪರೀಕ್ಷಿಸಲು ಪ್ರಾರಂಭಿಸಿದ್ದು, ಶೀಘ್ರದಲ್ಲೇ ಈ ಪರೀಕ್ಷೆಯ ಫಲಿತಾಂಶಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ.

ಕ್ರಾಶ್ ಟೆಸ್ಟ್ ನಲ್ಲಿ ಡಸ್ಟರ್ ಪಡೆದ ರೇಟಿಂಗ್ ಎಷ್ಟು ಗೊತ್ತಾ?

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮಕ್ಕಳ ಸುರಕ್ಷತೆಗೆ ಡಸ್ಟರ್ ಕಾರು 3 ಸ್ಟಾರ್ ರೇಟಿಂಗ್ ಗಳಿಸಿರುವುದು ಆಶ್ಚರ್ಯವಾಗಿದೆ. ಡಸ್ಟರ್ ದೇಶದಲ್ಲಿ ಹೆಚ್ಚು ಮಾರಾಟವಾಗುವ ರೆನಾಲ್ಟ್ ಕಂಪನಿಯ ಎಸ್‍‍ಯುವಿಯಾಗಿದೆ. ಈ ರೇಟಿಂಗ್‌ಗಳು ವಾಹನದ ಬೆಲೆಯನ್ನು ಹೆಚ್ಚಿಸುವುದಿಲ್ಲ. ಏಕೆಂದರೆ ಭಾರತದಲ್ಲಿ ಸುರಕ್ಷತೆಗಿಂತ ಬೆಲೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ.

Most Read Articles

Kannada
English summary
Renault Duster Scores Four Stars At Latin NCAP Crash Tests: Details - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X