ಎಸ್‌ಯುವಿ ಮಾರಾಟದಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಂಡ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್

ಕಳೆದ ತಿಂಗಳು ಜುಲೈ 8 ರಂದು ಬಿಡುಗಡೆಯಾಗಿರುವ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್ ಆವೃತ್ತಿಯು ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದು, ಜುಲೈ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಶೇ.61 ರಷ್ಟು ಮುನ್ನಡೆಯೊಂದಿಗೆ ಎಸ್‌ಯುವಿ ಕಾರು ಮಾರಾಟದಲ್ಲಿ ಉತ್ತಮ ಬೇಡಿಕೆಯನ್ನು ತನ್ನದಾಗಿಸಿಕೊಂಡಿದೆ.

ಎಸ್‌ಯುವಿ ಮಾರಾಟದಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಂಡ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್

ರೆನಾಲ್ಟ್ ಸಂಸ್ಥೆಯು ಡಸ್ಟರ್ ಆವೃತ್ತಿಯ ಮಾರಾಟದಲ್ಲಿ ಕಳೆದ 2018ರ ಜುಲೈ ಅವಧಿಯಲ್ಲಿ 534 ಯುನಿಟ್ ಮಾರಾಟ ಮಾಡಿದ್ದರೆ 2019ರ ಜುಲೈನಲ್ಲಿ ಬಿಡುಗಡೆಯಾದ ಫೇಸ್‌ಲಿಫ್ಟ್ ಆವೃತ್ತಿಯ ಮೂಲಕ 943 ಯುನಿಟ್ ಮಾರಾಟ ಮಾಡಿ ಶೇ.61 ರಷ್ಟು ಮುನ್ನಡೆ ಕಾಯ್ದುಕೊಂಡಿದೆ. ಈ ಮೂಲಕ ರೆನಾಲ್ಟ್ ಸಂಸ್ಥೆಗೆ ಉತ್ತಮ ಆದಾಯ ತಂದುಕೊಟ್ಟಿರುವ ಫೇಸ್‌ಲಿಫ್ಟ್ ಡಸ್ಟರ್ ಮಾದರಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಗಿಟ್ಟಿಸಿಕೊಳ್ಳುವ ನೀರಿಕ್ಷೆಯಲ್ಲಿದೆ.

ಎಸ್‌ಯುವಿ ಮಾರಾಟದಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಂಡ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್

ಇನ್ನು ಡಸ್ಟರ್ ಫೇಸ್‌ಲಿಫ್ಟ್ ಆವೃತ್ತಿಯು ಈ ಹಿಂದಿನಂತೆಯೇ ಒಟ್ಟು ಒಂಬತ್ತು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಕಾರಿನಲ್ಲಿ ನೀಡಲಾಗಿರುವ ಸೌಲಭ್ಯಗಳಿಗೆ ಅನುಗುಣವಾಗಿ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.7.99 ಲಕ್ಷಕ್ಕೆ ಮತ್ತು ಅತ್ಯುತ್ತಮ ಫೀಚರ್ಸ್ ಹೊಂದಿರುವ ಟಾಪ್ ಎಂಡ್ ಮಾದರಿಗೆ ರೂ.12.50 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

ಎಸ್‌ಯುವಿ ಮಾರಾಟದಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಂಡ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್

ಹೊಸ ಬೆಲೆಯು ಹಳೆಯ ಬೆಲೆಗಳಿಂತಲೂ ಕಡಿಮೆಯಾಗಿದ್ದು, ಫೇಸ್‌ಲಿಫ್ಟ್‌ನಲ್ಲಿ ಮಾಡಲಾಗಿರುವ ತಾಂತ್ರಿಕ ಬದಲಾವಣೆಗಳು ಈ ಬಾರಿ ಡಸ್ಟರ್ ಮಾರಾಟ ಪ್ರಮಾಣವು ಮತ್ತಷ್ಟು ಹೆಚ್ಚಳವಾಗಲಿದೆ. ವಿನೂತನ ಸೌಲಭ್ಯ ಹೊತ್ತು ಬಂದಿರುವ ಫೇಸ್‌ಲಿಫ್ಟ್ ಮಾದರಿಯು ಎಸ್‌ಯುವಿ ಕಾರುಗಳಲ್ಲೇ ವಿಶೇಷ ಎನ್ನಿಸಲಿದೆ.

ಎಸ್‌ಯುವಿ ಮಾರಾಟದಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಂಡ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್

ರೆನಾಲ್ಟ್ ಸಂಸ್ಥೆಯು ತನ್ನ ಜನಪ್ರಿಯ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಫೇಸ್‌ಲಿಫ್ಟ್ ಆವೃತ್ತಿಗಳು ಸೇರಿದಂತೆ ಒಟ್ಟು ಐದು ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಇದರಲ್ಲಿ ಫೇಸ್‌ಲಿಫ್ಟ್ ಡಸ್ಟರ್ ಕಾರು ಈ ಬಾರಿ ಹೊಸದಾಗಿ ತ್ರಿ ಸ್ಲಾಟ್ ಕ್ರೋಮ್ ಗ್ರಿಲ್ ಡಿಸೈನ್ ಪಡೆದುಕೊಂಡಿದ್ದು, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಡ್ಯುಯಲ್ ಟೋನ್ ಫ್ರಂಟ್ ಬಂಪರ್, ಫಾಗ್ ಲ್ಯಾಂಪ್ಸ್ ಮತ್ತು ಕ್ರೋಮ್ ಸ್ಟ್ರಿಪ್, ಏರ್ ಡ್ಯಾಮ್ ಮತ್ತು ಸ್ಕೀಡ್ ಪ್ಲೇಟ್ ಪಡೆದುಕೊಂಡಿದೆ.

ಎಸ್‌ಯುವಿ ಮಾರಾಟದಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಂಡ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್

ಹಾಗೆಯೇ ಹಿಂಭಾಗದ ವಿನ್ಯಾಸದಲ್ಲೂ ತುಸು ಬದಲಾವಣೆಗಳನ್ನು ಕಂಡಿರುವ ಡಸ್ಟರ್ ಫೇಸ್‌ಲಿಫ್ಟ್ ಕಾರಿನ ಟೈಲ್‌ಗೇಟ್ ಮೇಲೆ ಪ್ಲಾಸ್ಟಿಕ್ ಕ್ಲ್ಯಾಡಿಂಗ್, ಡ್ಯಯುಲ್ ಟೋನ್ ರಿಯರ್ ಬಂಪರ್, ರೂಫ್ ರೈಲ್ಸ್ ಮತ್ತು ಹೊಸ ಮಾದರಿಯ ಡ್ಯುಯಲ್ ಟೋನ್ ಅಲಾಯ್ ಚಕ್ರಗಳನ್ನು ಪಡೆದುಕೊಂಡಿರುವುದು ಎಸ್‌ಯುವಿ ಪ್ರಿಯರನ್ನು ಸೆಳೆಯಲು ಸಿದ್ದವಾಗಿದೆ.

ಎಸ್‌ಯುವಿ ಮಾರಾಟದಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಂಡ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್

ಡಸ್ಟರ್ ಕಾರು ಒಟ್ಟು 3 ಪೆಟ್ರೋಲ್ ಆವೃತ್ತಿಗಳಲ್ಲಿ ಮತ್ತು 6 ಡೀಸೆಲ್ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಫೇಸ್‌ಲಿಫ್ಟ್ ಮಾದರಿಯು ಈ ಹಿಂದಿನಂತೆಯೇ ಎಂಜಿನ್ ಆಯ್ಕೆ ಪಡೆದಿದೆ. ಆರ್‌ಎಕ್ಸ್ಇ ಪೆಟ್ರೋಲ್, ಆರ್‌ಎಕ್ಸ್ಎಸ್ ಪೆಟ್ರೋಲ್, ಆರ್‌ಎಕ್ಸ್ಎಸ್ (ಒ) ಪೆಟ್ರೋಲ್ ಸಿವಿಟಿ, 85ಬಿಎಚ್‌ಪಿ ಆರ್‌ಎಕ್ಸ್ಇ ಡಿಸೇಲ್, 85ಬಿಎಚ್‌ಪಿ ಆರ್‌ಎಕ್ಸ್ಎಸ್ ಡಿಸೇಲ್, 110ಬಿಎಚ್‌ಪಿ ಡೀಸೆಲ್ ಆರ್‌ಎಕ್ಸ್ಎಸ್,110ಬಿಎಚ್‌ಪಿ ಡೀಸೆಲ್ ಆರ್‌ಎಕ್ಸ್‌ಜೆಡ್, 110ಬಿಎಚ್‌ಪಿ ಡೀಸೆಲ್ ಆರ್‌ಎಕ್ಸ್‌ಜೆಡ್ ಎಎಂಟಿ, 110ಬಿಎಚ್‌ಪಿ ಡೀಸೆಲ್ ಆರ್‌ಎಕ್ಸ್‌ಎಸ್ ಎಡಬ್ಲ್ಯುಡಿ ವೆರಿಯೆಂಟ್‌ಗಳನ್ನು ಖರೀದಿಸಬಹುದಾಗಿದೆ.

MOST READ: ಹೆದ್ದಾರಿಗಳಲ್ಲಿ ಬೇಕಾಬಿಟ್ಟಿಯಾಗಿ ಚಲಿಸುವ ಭಾರೀ ಗಾತ್ರದ ವಾಹನಗಳಿಗೆ 5 ಸಾವಿರ ದಂಡ

ಎಸ್‌ಯುವಿ ಮಾರಾಟದಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಂಡ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್

ಎಂಜಿನ್ ಸಾಮರ್ಥ್ಯ

ಈ ಹಿಂದಿನಂತೆಯೇ ಫೇಸ್‌ಲಿಫ್ಟ್ ಡಸ್ಟರ್ ಮಾದರಿಯು 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡಿಸೇಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಈ ಹಿಂದಿಗಿಂತಲೂ ಹೊಸ ಕಾರಿನ ಎಂಜಿನ್ ಮಾದರಿಯು ಹೆಚ್ಚು ಇಂಧನ ದಕ್ಷತೆಯ ಜೊತೆಗೆ ಪರ್ಫಾಮೆನ್ಸ್‌ನಲ್ಲೂ ತುಸು ಸುಧಾರಣೆ ಕಂಡಿದೆ.

MOST READ: ಗ್ರಾಹಕರಿಗೆ ಉಟ ಕೊಡುವ ಧಾವಂತವಲ್ಲಿ ಈ ಡೆಲಿವರಿ ಬಾಯ್ ಮಾಡಿದ ತಪ್ಪುಗಳು ಎಷ್ಟು ಗೊತ್ತಾ?

ಎಸ್‌ಯುವಿ ಮಾರಾಟದಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಂಡ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್

ಹಾಗೆಯೇ ಈ ಬಾರಿ ಟಾಪ್ ಎಂಡ್ ಡೀಸೆಲ್ ಮಾದರಿಯಲ್ಲೂ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದ್ದು, 5-ಸ್ಪೀಡ್ ಮ್ಯಾನುವರ್ ಗೇರ್‌ಬಾಕ್ಸ್‌ನೊಂದಿಗೆ ಆಫ್ ರೋಡ್ ಕೌಶಲ್ಯವನ್ನು ಬಯಸುವ ಗ್ರಾಹಕರು ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ ಪ್ರೇರಿತ ಟಾಪ್ ಎಂಡ್ ಆರ್‌ಎಕ್ಸ್‌ಎಸ್ ಡೀಸೆಲ್ ವೆರಿಯೆಂಟ್ ಖರೀದಿ ಮಾಡಬಹುದಾಗಿದೆ.

MOST READ: ಆಂಧ್ರ ನೂತನ ಸಿಎಂ ಜಗನ್ ಭದ್ರತೆಗಾಗಿ 4 ಕೋಟಿ ವೆಚ್ಚದ ಬುಲೆಟ್ ಪ್ರೂಫ್ ಕಾರ್

ಎಸ್‌ಯುವಿ ಮಾರಾಟದಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಂಡ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್

ಹೊಸ ಕಾರಿನಲ್ಲಿ ಈ ಬಾರಿ ಪ್ರಯಾಣಿಕರ ಆದ್ಯತೆ ಮೇರೆಗೆ ಇನ್ಪೋಟೈನ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ, ಎಸಿ ವೆಂಟ್ಸ್, ಫ್ಲಕ್ಸ್ ಅಲ್ಯೂಮಿನಿಯಂ ಟ್ರಿಮ್, ಸೆಂಟ್ರಲ್ ಕನ್ಸೊಲ್‌ಗಳನ್ನು ಉನ್ನತಿಕರಿಸಲಾಗಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಏರ್‌‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಬ್ರೇಕ್ ಅಸಿಸ್ಟ್ ಮತ್ತು ಟಾಪ್ ಎಂಡ್ ಮಾದರಿಯಲ್ಲಿ ಇಸಿಎಸ್ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ಸೌಲಭ್ಯಗಳನ್ನು ನೀಡಲಾಗಿದೆ.

ಎಸ್‌ಯುವಿ ಮಾರಾಟದಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಂಡ ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್

ಈ ಮೂಲಕ ಹೊಸ ಡಸ್ಟರ್‌ನಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿನ ಆದ್ಯತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಹೊಸ ಕಾರು ಮಾದರಿಯು ಹ್ಯುಂಡೈ ಕ್ರೆಟಾ, ನಿಸ್ಸಾನ್ ಕಿಕ್ಸ್, ಮಾರುತಿ ಸುಜುಕಿ ಎಸ್ ಕ್ರಾಸ್, ಎಂಜಿ ಹೆಕ್ಟರ್ ಮತ್ತು ಬಿಡುಗಡೆಯಾಗಲಿರುವ ಕಿಯಾ ಸೆಲ್ಟೊಸ್ ಕಾರುಗಳಿಗೆ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Renault Duster Facelift Sales Increase By 61 Percent In July 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X