ಬರಲಿದೆ ಹೊಸ ರೂಲ್ಸ್ - ನಿಮ್ಮ ಮನೆ ಮುಂದೆ ವಾಹನ ನಿಲುಗಡೆ ಮಾಡಲು ಶುಲ್ಕ ಪಾವತಿಸಬೇಕು..!

ನಿಮ್ಮ ಸ್ವಂತ ವಾಹನವನು ಮನೆಯ ಮುಂದೆ ಪರ್ಕಿಂಗ್ ಮಾಡಲು ಇನ್ಮುಂದೆ ಶುಲ್ಕ ಪಾವತಿಸಬೇಕು. ಹೌದು., ನೀವು ಓದಿದ್ದು ನಿಜ ಶೀಘ್ರದಲ್ಲೇ ಈ ಹೊಸ ರೂಲ್ಸ್ ಜಾರಿಯಾಗಲಿದ್ದು, ನಿಮ್ಮ ಮನೆಯ ಮುಂದೆ ನಿಮ್ಮ ಕಾರನ್ನು ಅಥವಾ ಬೈಕುಗಳನ್ನು ನಿಲುಗಡೆ ಮಾಡಲು ನೀವು ಶೀಘ್ರದಲ್ಲೇ ಶುಲ್ಕಗಳು ಪಾವತಿಸಬೇಕಾಗಬಹುದು.

ಬರಲಿದೆ ಹೊಸ ರೂಲ್ಸ್ - ನಿಮ್ಮ ಮನೆ ಮುಂದೆ ವಾಹನ ನಿಲುಗಡೆ ಮಾಡಲು ಶುಲ್ಕ ಪಾವತಿಸಬೇಕು..!

ಈ ಕುರಿತಾಗಿ ನಗರಾಭಿವೃದ್ಧಿ ಇಲಾಖೆಯಿಂದ ಒಂದು ನೀತಿಯನ್ನು ರಚಿಸಲಾಗುತ್ತಿದ್ದು, ಇನ್ಮುಂದೆ ಪ್ರತಿ ವಾಹನ ಮಾಲೀಕರು ಸಾರ್ವಜನಿಕ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡಲು ಅಧಿಕಾರಿಗಳಿಗೆ ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾಗುತ್ತದೆ. ವಾಹನಗಳನ್ನು ಸಾರ್ವಜನಿಕ ರಸ್ತೆಗಳಿಂದ ಹೊರಗಿಡಲು ಚಲನಶೀಲ ತಜ್ಞರು ನೀಡಿದ ಸಲಹೆಗಳಲ್ಲಿ ಇದು ಒಂದಾಗಿದ್ದು, ಈ ನೀತಿಯು ಕಾರ್ಯರೂಪಕ್ಕೆ ಬಂದರೆ, ಸಾರ್ವಜನಿಕ ರಸ್ತೆಗಳಲ್ಲಿ ಜನರು ಪಾರ್ಕಿಂಗ್ ಮಾಡುವ ರೀತಿಯಲ್ಲಿ ಕೆಲವು ಬದಲಾವಣೆಯನ್ನು ಕಾಣಬಹುದಾಗಿದೆ.

ರಸ್ತೆಗಳು ಇದೀಗ ಬಹುತೇಕ ನಗರಗಳಲ್ಲಿ ಪ್ರೀಮಿಯಂ ಆಗಿರಲಿದ್ದು, ಜೊತೆಗೆ ಫುಟ್‍‍ಪಾತ್‍ಗಳು ಸಹ ಪ್ರೀಮಿಯಂ ಆಗಿರಲಿದೆ. ಈ ಫುಟ್‍‍ಪಾತ್‍ಗಳು ಚಲನಶೀಲತೆಗಾಗಿಯೆ ಹೊರತು ಪಾರ್ಕಿಂಗ್‍‍ಗಾಗಿ ಬಳಸಲಾಗುವುದಿಲ್ಲ. ಈ ನಿಟ್ಟಿನಲ್ಲಿ ನಗರದೊಳಗೆ ಪಾರ್ಕಿಂಗ್ ಸ್ಥಳವನ್ನು ನಿಯಂತ್ರಿಸುವ ಸಲುವಾಗಿ ಈ ಹೊಸ ಯೋಜನೆಯನ್ನು ನಾವು ಮಾದುತ್ತಿದ್ದೇವೆ. ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಾದ ಮಹೇಂದ್ರ ಜೈನ್ ಅವರು ಹೇಳಿಕೊಂಡಿದ್ದಾರೆ.

ಬರಲಿದೆ ಹೊಸ ರೂಲ್ಸ್ - ನಿಮ್ಮ ಮನೆ ಮುಂದೆ ವಾಹನ ನಿಲುಗಡೆ ಮಾಡಲು ಶುಲ್ಕ ಪಾವತಿಸಬೇಕು..!

ಇದರ ಜೊತೆಗೆ ರಸ್ತೆ ಸುರಕ್ಷತೆ, ಪಾದಚಾರಿಗಳಿಗೆ ಸೌಲಭ್ಯಗಳು, ಪಾರ್ಕಿಂಗ್ ಸ್ಥಳಾವಕಾಶಗಳ ಅಭಿವೃದ್ಧಿ ಮತ್ತು ಇದೇ ರೀತಿಯ ಚಟುವಟಿಕೆಗಳನ್ನು ಸುಧಾರಿಸಲು ಪಾರ್ಕಿಂಗ್ ಶುಲ್ಕದಿಂದ ಪಡೆದ ಹಣವನ್ನು ಬಳಸಿಕೊಳ್ಳಲಾಗುವುದು ಎಂದು ಜೈನ್ ಸೇರಿಸಲಾಗಿದೆ. ಈ ನೀತಿಯು ರಸ್ತೆಗಳಲ್ಲಿ ದಟ್ಟಣೆಯನ್ನು ಗಮನಾರ್ಹ ರೀತಿಯಲ್ಲಿ ಕಡಿಮೆಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಹೀಗಿರುವಾಗ ಈ ಮುಂದೆಯೆ 2015 ರಲ್ಲಿ ಪರಿಷ್ಕೃತ ಪರಿಹಾರವನ್ನು ರೂಪಿಸಲು ಸ್ಥಳೀಯ ಪ್ರದೇಶದ ನಿರ್ದಿಷ್ಟ ಅಥವಾ ಸಂಯೋಜಿತ ಪಾರ್ಕಿಂಗ್ ಯೋಜನೆಯನ್ನು ತಯಾರಿಸಲು ಮತ್ತು ಕಾರ್ಯಗತಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸೂಚಿಸಲಾಗಿದೆ. ಬಿಬಿಎಂಪಿ ಕಾರ್ಯಪಡೆಯಾಗಿ ನೇಮಕಗೊಳ್ಳಲಿದೆ ಹಾಗು ಬಿಬಿಎಂಪಿಯ ವಲಯ ಆಯುಕ್ತರು ತಮ್ಮ ವ್ಯಾಪ್ತಿ ವ್ಯಾಪ್ತಿಯ ಪ್ರದೇಶಗಳಿಗೆ ಅವರು ಪಾರ್ಕಿಂಗ್ ಯೋಜನೆಗಳನ್ನು ಸಿದ್ಧಪಡಿಸುತ್ತಾರೆ ಎನ್ನಲಾಗಿದೆ.

ಬರಲಿದೆ ಹೊಸ ರೂಲ್ಸ್ - ನಿಮ್ಮ ಮನೆ ಮುಂದೆ ವಾಹನ ನಿಲುಗಡೆ ಮಾಡಲು ಶುಲ್ಕ ಪಾವತಿಸಬೇಕು..!

ಪಾಲಿಸಿಯನ್ನು ಹಂತ ಹಂತದಲ್ಲಿ ಕಾರ್ಯಗತಗೊಳಿಸಲಾಗಿದ್ದು, ಆರಂಭದಲ್ಲಿ, ಎಲ್ಲಾ ಅಪಧಮನಿ ರಸ್ತೆಗಳು, ವಾಣಿಜ್ಯ ಪ್ರದೇಶಗಳು ಮತ್ತು ಭಾರೀ ಸಂಚಾರವನ್ನು ಹೊಂದಿರುವ ಪ್ರಮುಖ ರಸ್ತೆಗಳು ನಾಲ್ಕು ತಿಂಗಳುಗಳಲ್ಲಿ ಮುಚ್ಚಲ್ಪಡುತ್ತವೆ. ಮೊದಲನೆಯ ಹಂತದಿಂದ ಕಲಿಯುವಿಕೆ ಮತ್ತು ಅನುಭವಗಳ ಆಧಾರದ ಮೇಲೆ ಎಲ್ಲಾ ಇತರ ರಸ್ತೆಗಳನ್ನು ಪಾರ್ಕಿಂಗ್ ಯೋಜನೆಯ ಮುಂದಿನ ಹಂತವು ಒಳಗೊಳ್ಳುತ್ತದೆ.

ಪಾದಚಾರಿಗಳಿಗೆ, ಸಾಮೂಹಿಕ ಸಾರ್ವಜನಿಕ ಸಾರಿಗೆ ವಿಧಾನಗಳು, ತುರ್ತು ವಾಹನಗಳು, ಸೈಕಲ್‍ಗಳು, ವಿಭಿನ್ನವಾಗಿ ಹೊಂದುವ ಮತ್ತು ಪಾರ್ಕಿಂಗ್ ಸೌಲಭ್ಯಗಳಿಗೆ ಮೊದಲನೆಯದಾಗಿ ಆದ್ಯತೆಯನ್ನು ನೀಡಲಾಗುತ್ತದೆ ಎಂದು ಪಟ್ಟಿಯಲ್ಲಿ ಹೇಳಲಾಗಿದೆ. ಇನ್ನು ಈ ಹೊಸ ಪಾಲಿಸಿಯು ಇನ್ನು ಕೆಲವೇ ತಿಂಗಳಿನಲಿ ಜಾರಿಯಾಗುವುದಂತು ಖಚಿತ.

Source: ET Auto

Most Read Articles

Kannada
English summary
Parking Your Vehicle Even In Front Of Your Home May No Longer Be Free. Read In Kannada
Story first published: Friday, February 15, 2019, 11:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X