ಹೊಸ ಕಾಯ್ದೆ ಶುರು - ಟ್ಯಾಕ್ಸಿ ಚಾಲಕರಿಗೆ ಪೊಲೀಸರಿಂದ ನೋಟಿಸ್..!

2019 ಶುರುವಾಗುತ್ತಿದ್ದಂತೆಯೆ ಕೆಂದ್ರ ಸರ್ಕಾರವು ಈ ವರ್ಷದಲ್ಲಿ ಆಗಬಹುದಾದ ಅಪಘಾತಗಳನ್ನು ತಡೆಗಟ್ಟಲು ಸಂಚಾರಿ ನಿಯಮಗಳಲ್ಲಿ ಹಲವಾರು ಹೊಸ ಕಾಯಿದೆಗಳನ್ನು ಜಾರಿಗೊಳಿಸಲು ಮುಂದಾಗಿದೆ. ದ್ವಿಚಕ್ರ ವಾಹನಗಳಲ್ಲಿ ಎಬಿಎಸ್, ಆಟೋ ರಿಕ್ಷಾಗಳಲ್ಲಿ ಸೇಫ್ಟಿ ಫೀಚರ್ಸ್ ಮತ್ತು ಸಾರ್ವಜನಿಕ ವಾಹನಗಳಲ್ಲಿ ಪ್ಯಾನಿಕ್ ಬಟನ್ ಹಾಗು ನ್ಯಾವಿಗೇಷನ್ ಸಿಸ್ಟಂ ಅನ್ನು ಅಳವಡಿಸಬೇಕಾಗಿದೆ.

ಹೊಸ ಕಾಯ್ದೆ ಶುರು - ಟ್ಯಾಕ್ಸಿ ಚಾಲಕರಿಗೆ ಪೊಲೀಸರಿಂದ ನೋಟಿಸ್..!

ಇದರ ನಡುವೆ ಟ್ಯಾಕ್ಸಿ ಚಾಲಕರಿಗಂತು ಜಾರಿಯಾದ ಈ ಹೊಸ ನಿಯಮದಿಂದ ತಲೆನೋವು ಶುರುವಾಗಿದ್ದು, ವಾಣಿಜ್ಯ ಬಳಕೆಯ ಕಾರುಗಳಲ್ಲಿ ಚೈಲ್ಡ್ ಲಾಕ್ ಸಿಸ್ಟಂ ಅನ್ನು ಸಂಪೂರ್ಣವಾಗಿ ಮುಕ್ತಗೊಳಿಸಲೇಬೇಕಾಗಿದೆ. ಈ ಹೊಸ ನಿಯಮದಿಂದಾಗಿ ಟ್ಯಾಕ್ಸಿ ಚಾಲಕರು ಹೆಚ್ಚು ನಷ್ಟ ಅನಿಭವಿಸುವ ಸಾಧ್ಯತೆಗಳಿದ್ದು, ಇದೇ ತಿಂಗಳ 16ರರೊಳಗೆ ವಾಣಿಜ್ಯ ಬಳಕೆಯ ಕಾರುಗಳಲ್ಲಿ ಚೈಲ್ಡ್ ಸೇಫ್ಟಿ ಲಾಕ್ ಸಿಸ್ಟಂ ಅನ್ನು ರದ್ದುಗೊಳಿಸಲು ಆದೇಶ ನೀಡಿದೆ.

ಹೊಸ ಕಾಯ್ದೆ ಶುರು - ಟ್ಯಾಕ್ಸಿ ಚಾಲಕರಿಗೆ ಪೊಲೀಸರಿಂದ ನೋಟಿಸ್..!

ಕ್ಯಾಬ್ ಸೇವೆಗಳಲ್ಲಿ ಮುಂಚೂಣಿಯಲ್ಲಿರುವ ಓಲಾ, ಉಬರ್ ಕಾರುಗಳು ಸೇರಿದಂತೆ ಎಂ1 ಪಟ್ಟಿಯಲ್ಲಿ ಬರುವ ವಾಣಿಜ್ಯ ವಾಹನಗಳಲ್ಲಿ ಇಷ್ಟು ದಿನ ಬಳಕೆಯಾಗುತ್ತಿದ್ದ ಚೈಲ್ಡ್ ಲಾಕ್ ಸೌಲಭ್ಯಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಉಪಯೋಗಕ್ಕಿಂತ ಹೆಚ್ಚು ದುರ್ಬಳಿಕೆಯಾಗುತ್ತಿದ್ದ ಚೈಲ್ಡ್ ಲಾಕ್ ಸೌಲಭ್ಯವನ್ನು ಕಿತ್ತುಹಾಕಬೇಕು ಎನ್ನುವ ಬಹುಜನರ ಬೇಡಿಕೆಗೆ ಕೇಂದ್ರ ಸಾರಿಗೆ ಇಲಾಯೆಯು ಸಮ್ಮತಿ ಸೂಚಿಸಿದೆ.

ಹೊಸ ಕಾಯ್ದೆ ಶುರು - ಟ್ಯಾಕ್ಸಿ ಚಾಲಕರಿಗೆ ಪೊಲೀಸರಿಂದ ನೋಟಿಸ್..!

ಈಗಾಗಲೆ ರಾಜ್ಯದಲ್ಲಿ ಹೊಸ ಕಾಯ್ದೆಯು ಕಡ್ಡಾಯವಾಗಿ ಜಾರಿಗೆ ಬರಲಿದ್ದು, ಎಂ1 ಪಟ್ಟಿಯಲ್ಲಿ ಬರುವ ವಾಣಿಜ್ಯ ಬಳಕೆಯ ಎಂಟು ಆಸನಗಳನ್ನು ಒಳಗೊಂಡಿರುವ ಎಲ್ಲಾ ಪ್ರಯಾಣಿಕ ವಾಹನಗಳಲ್ಲಿರುವ 'ಚೈಲ್ಡ್ ಲಾಕಿಂಗ್' ವ್ಯವಸ್ಥೆಯನ್ನು ಕಡ್ಡಾಯವಾಗಿ ತೆಗೆದು ಹಾಕಬೇಕಿದೆ.

ಹೊಸ ಕಾಯ್ದೆ ಶುರು - ಟ್ಯಾಕ್ಸಿ ಚಾಲಕರಿಗೆ ಪೊಲೀಸರಿಂದ ನೋಟಿಸ್..!

ಚೈಲ್ಡ್ ಲಾಕ್ ಸಿಸ್ಟಂ ನಿಷ್ಕ್ರಿಯಗೊಳಿಸಲು ಮತ್ತು ಚೈಲ್ಡ್ ಲಾಕ್ ವ್ಯವಸ್ಥೆಯುಳ್ಳ ವಾಹನಗಳಿಗೆ ರಹದಾರಿ ಪರವಾನಗಿ ನೀಡಬಾರದು ಎಂದು ರಾಜ್ಯ ಸರ್ಕಾರವು ಸಾರಿಗೆ ಇಲಾಖೆಗೆ ಸೂಚಿಸಲಾಗಿದ್ದು, ಆಪ್ ಆಧಾರಿತ ಟ್ಯಾಕ್ಸಿಗಳನ್ನು ಹೊಂದಿರುವ ಮಾಲೀಕರು ಶೀಘ್ರವೇ ತಮ್ಮ ವಾಹನದ ದಾಖಲೆಗಳೊಂದಿಗೆ ನೋಂದಣಿ ಪ್ರಾಧಿಕಾರಗಳಲ್ಲಿ ವಾಹನವನ್ನು ಹಾಜರು ಪಡಿಸಿ, ಚೈಲ್ಡ್ ಲಾಕ್ ನಿಷ್ಕ್ರಿಯಗೊಳಿಸಿರುವ ಕುರಿತು ದೃಢೀಕರಣ ಪಡೆಯಬೇಕಾಗಿದೆ.

ಹೊಸ ಕಾಯ್ದೆ ಶುರು - ಟ್ಯಾಕ್ಸಿ ಚಾಲಕರಿಗೆ ಪೊಲೀಸರಿಂದ ನೋಟಿಸ್..!

ಚೈಲ್ಡ್ ಲಾಕ್ ವ್ಯವಸ್ಥೆಯು ಉತ್ತಮವಾಗಿದ್ದರೂ ಸಹ ಕಾರಿನಲ್ಲಿ ಇವುಗಳನ್ನು ಲಾಕ್ ಮಾಡುವ ಮೂಲಕ ಅಪರಾಧ ಮಾಡುವ ಪ್ರಕರಣಗಳು ಹೆಚ್ಚುತ್ತಿದ್ದು, ಇದು ಅಲ್ಲದೇ ವಿಶೇಷವಾಗಿ ಮಹಿಳಾ ಪ್ರಯಾಣಿಕರು ಪ್ರಯಾಣಿಸುವಾಗ ಸಾಕಷ್ಟು ಅಪರಾಧ ಪ್ರಕರಣಗಳು ದಾಖಲಾಗಿದ್ದು ಬಹುತೇಕರಿಗೆ ಗೊತ್ತಿರುವ ವಿಚಾರ.

ಹೊಸ ಕಾಯ್ದೆ ಶುರು - ಟ್ಯಾಕ್ಸಿ ಚಾಲಕರಿಗೆ ಪೊಲೀಸರಿಂದ ನೋಟಿಸ್..!

ಇದೇ ಕಾರಣಕ್ಕೆ ವಾಣಿಜ್ಯ ಬಳಕೆಯ ಕಾರುಗಳಲ್ಲಿ ಚೈಲ್ಡ್ ಲಾಕ್ ಸೇಫ್ಟಿ ವ್ಯವಸ್ಥೆಯನ್ನು ತೆಗೆದು ಹಾಕುವ ಕುರಿತಂತೆ ರಸ್ತೆ ಸಾರಿಗೆ ಇಲಾಖೆಯು ಕಳೆದ ಒಂದು ವರ್ಷದಿಂದ ಚರ್ಚೆ ನಡೆಸುತ್ತಾ ಬಂದಿತ್ತು. ಇದೀಗ ಅಂತಿಮವಾಗಿ ಜುಲೈ ತಿಂಗಳಿನಿಂದ ಹೊಸ ಕಾಯ್ದೆ ಜಾರಿಗೆ ಮಾಡುತ್ತಿದೆ.

ಹೊಸ ಕಾಯ್ದೆ ಶುರು - ಟ್ಯಾಕ್ಸಿ ಚಾಲಕರಿಗೆ ಪೊಲೀಸರಿಂದ ನೋಟಿಸ್..!

ಈ ಹಿಂದೆಯೇ ಈ ಬಗ್ಗೆ ಧ್ವನಿ ಎತ್ತಿದ್ದ ಬೆಂಗಳೂರು ಪ್ರಸೂತಿ ಮತ್ತು ಸ್ತ್ರೀರೋಗ ಸೊಸೈಟಿ ಸಂಸ್ಥೆಯು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಈ ಬಗ್ಗೆ ಕುಲಂಕೂಶವಾಗಿ ಪರಿಶೀಲನೆ ಮಾಡಿದ್ದ ಸಿಜೆ ದಿನೇಶ್ ಮಹೇಶ್ವರಿ ಹಾಗೂ ನ್ಯಾ. ಎಸ್ ಜಿ ಪಂಡಿತ್ ಅವರಿದ್ದ ನ್ಯಾಯ ಪೀಠವು ಚೈಲ್ಡ್ ದುರ್ಬಳಿಕೆ ಕುರಿತಂತೆ ಆತಂಕ ವ್ಯಕ್ತಪಡಿಸಿತ್ತು.

MOST READ: ಹತ್ತು ಮಂದಿ ಸಾವು - ಇದಕ್ಕೆ ಕಾರಣ ಗೊತ್ತಾದ್ರೆ ಇನ್ಮುಂದೆ ನೀವು ವಾಹನದಲ್ಲಿ ಪ್ರಯಾಣಿಸುವುದಿಲ್ಲ

ಹೊಸ ಕಾಯ್ದೆ ಶುರು - ಟ್ಯಾಕ್ಸಿ ಚಾಲಕರಿಗೆ ಪೊಲೀಸರಿಂದ ನೋಟಿಸ್..!

ಮುಂದುವರೆದು, ಚೈಲ್ಡ್ ಸೇಫ್ಟಿ ಲಾಕ್ ನಿಷ್ಕ್ರಿಯಗೊಳಿಸುವ ಕುರಿತು ಅಧಿಸೂಚನೆ ಹೊರಡಿಸಿದ್ದ ಕರ್ನಾಟಕ ಹೈಕೋರ್ಟ್, ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ ನಿಯಮಕ್ಕೆ ತಿದ್ದುಪಡಿಪಡಿ ತರುವಂತೆ ರಾಜ್ಯಸರ್ಕಾರಕ್ಕೆ ನಿರ್ದೇಶನ ಮಾಡಿತ್ತು.

ಹೊಸ ಕಾಯ್ದೆ ಶುರು - ಟ್ಯಾಕ್ಸಿ ಚಾಲಕರಿಗೆ ಪೊಲೀಸರಿಂದ ನೋಟಿಸ್..!

ಆದ್ರೆ ಇದು ಕೇಂದ್ರ ಸಾರಿಗೆ ಇಲಾಖೆಯ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಕೇಂದ್ರಕ್ಕೂ ಈ ಬಗ್ಗೆ ಮನವರಿಕೆ ಮಾಡಿಕೊಡಲಾಗಿತ್ತು. ಅಂತಿಮವಾಗಿ ಈ ಹಿಂದಿನ ಎಲ್ಲಾ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಚೈಲ್ಡ್ ಲಾಕ್ ಸೌಲಭ್ಯವನ್ನು ಕಿತ್ತು ಹಾಕುವ ನಿರ್ಧಾರಕ್ಕೆ ಬರಲಾಗಿದೆ.

ಹೊಸ ಕಾಯ್ದೆ ಶುರು - ಟ್ಯಾಕ್ಸಿ ಚಾಲಕರಿಗೆ ಪೊಲೀಸರಿಂದ ನೋಟಿಸ್..!

ನಿಯಮ ಮೀರಿದ್ರೆ ದಂಡ..!

ಹೌದು, ಕೇಂದ್ರ ಸಾರಿಗೆ ಇಲಾಖೆಯು ನಿಗದಿ ಪಡಿಸಿರುವ ಅವಧಿಯೊಳಗೆ ಚೈಲ್ಡ್ ಲಾಕ್ ಸೌಲಭ್ಯವನ್ನು ತೆಗೆದುಹಾಕಬೇಕಿದ್ದು, ಒಂದು ವೇಳೆ ನಿಯಮ ಮೀರಿ ಚೈಲ್ಡ್ ಲಾಕ್ ಹಾಗೆಯೇ ಉಳಿಸಿಕೊಂಡಿದ್ದರೆ ದಂಡ ಕಟ್ಟಬೇಕಾಗುತ್ತೆ.

ಹೊಸ ಕಾಯ್ದೆ ಶುರು - ಟ್ಯಾಕ್ಸಿ ಚಾಲಕರಿಗೆ ಪೊಲೀಸರಿಂದ ನೋಟಿಸ್..!

ಜೊತೆಗೆ ವಾಹನ ವಿಮೆ ನವೀಕರಣ ಸಂದರ್ಭದಲ್ಲೂ ಚೈಲ್ಡ್ ಲಾಕ್ ತೆಗೆದುಹಾಕದ ಹೊರತು ವಿಮೆ ನವೀಕರಣಕ್ಕೂ ಬ್ರೇಕ್ ಬೀಳಲಿದ್ದು, ಹೊಸ ಕಾಯ್ದೆ ಅನುಷ್ಠಾನದ ಬಗ್ಗೆ ಆಟೋ ತಂತ್ರಜ್ಞರು ಕೂಡಾ ಅಪಸ್ವರ ಎತ್ತಿದ್ದಾರೆ.

ಹೊಸ ಕಾಯ್ದೆ ಶುರು - ಟ್ಯಾಕ್ಸಿ ಚಾಲಕರಿಗೆ ಪೊಲೀಸರಿಂದ ನೋಟಿಸ್..!

ಕೇವಲ ಮಹಿಳೆಯ ರಕ್ಷಣೆಗಾಗಿ ಚೈಲ್ಡ್ ಲಾಕ್ ಸಿಸ್ಟಂ ತೆಗೆದುಹಾಕುತ್ತಿರುವ ಕೇಂದ್ರ ಸಾರಿಗೆ ಇಲಾಖೆಯ ನಿರ್ಧಾರದಿಂದಾಗಿ ಮಕ್ಕಳಿಗೆ ಹೆಚ್ಚಿನ ತೊಂದರೆಯಾಗಬಹುದು ಎನ್ನಲಾಗುತ್ತಿದೆ. ಕಾರು ಚಾಲನೆ ಸಂದರ್ಭದಲ್ಲಿ ಮಕ್ಕಳು ಡೋರ್ ಓಪನ್ ಮಾಡಬಹುದಾದ ಸಾಧ್ಯತೆಗಳಿದ್ದು, ಇದರಿಂದ ಮತ್ತಷ್ಟು ದುರಂತ ಸಂಭವಿಸಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಲಾಗುತ್ತಿದೆ.

MOST READ: ಸಂಚಾರಿ ನಿಯಮ ಪಾಲಿಸದ ಟ್ರಾಫಿಕ್ ಪೊಲೀಸರಿಂದಲೇ ಯುವಕನ ಮೇಲೆ ದರ್ಪ..!

ಹೊಸ ಕಾಯ್ದೆ ಶುರು - ಟ್ಯಾಕ್ಸಿ ಚಾಲಕರಿಗೆ ಪೊಲೀಸರಿಂದ ನೋಟಿಸ್..!

ಇದು ಕೇವಲ ವಾಣಿಜ್ಯ ಬಳಕೆಯ ಕಾರುಗಳಲ್ಲಿ ಮಾತ್ರವೇ ಎಂದೂ ಹೇಳಿದ್ದರೂ ಶಾಲಾ ಮಕ್ಕಳನ್ನು ಕರೆದುಕೊಂಡು ವಾಹನಗಳಲ್ಲಿ ಹಠಾತ್ ಆಗಿ ಡೋರ್ ತೆರೆಯುವ ಸಂದರ್ಭಗಳು ಎದುರಾಗಬಹುದಾಗಿದ್ದು, ಒಟ್ಟಿನಲ್ಲಿ ಹೊಸ ನಿಯಮದಿಂದಾಗಿ ವಾಹನ ಮಾಲೀಕರಲ್ಲೇ ಪರ-ವಿರೋಧ ಕೇಳಿಬರುತ್ತಿವೆ.

Most Read Articles

Kannada
English summary
New Rules For Cabs To Remove Child Lock System. Read In Kannada
Story first published: Saturday, January 12, 2019, 13:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X