ಉತ್ಪಾದನೆಯ ಹಂತದಲ್ಲಿ ಹೊಸ ಸ್ಕೋಡಾ ಕಾಂಪ್ಯಾಕ್ಟ್ ಎಸ್‍ಯುವಿ

ಸ್ಕೋಡಾ ತನ್ನ ಹೊಸ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಹೊಸ ಎಸ್‍ಯುವಿ ಹೆಚ್ಚು ಪೈಪೋಟಿಯಿರುವ ಸಬ್ 4 ಮೀಟರ್ ಕಾಂಪ್ಯಾಕ್ಟ್ ಎಸ್‍ಯುವಿ ಸೆಗ್ ಮೆಂಟಿನಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಉತ್ಪಾದನೆಯ ಹಂತದಲ್ಲಿ ಹೊಸ ಸ್ಕೋಡಾ ಕಾಂಪ್ಯಾಕ್ಟ್ ಎಸ್‍ಯುವಿ

ಕಾರ್ ದೇಖೋ, ಸುದ್ದಿಸಂಸ್ಥೆಯ ಪ್ರಕಾರ, ಹೊಸ ಸ್ಕೋಡಾ ಕಾಂಪ್ಯಾಕ್ಟ್ ಎಸ್‍ಯುವಿಯನ್ನು 2022ರ ವೇಳೆಗೆ ಅನಾವರಣಗೊಳಿಸಲು ತೀರ್ಮಾನಿಸಲಾಗಿದ್ದು, ನಂತರವಷ್ಟೆ ಬಿಡುಗಡೆ ಮಾಡಲಾಗುವುದು. ಹೊಸ ಸ್ಕೋಡಾ ಸಬ್ 4 ಮೀಟರ್ ಎಂಕ್ಯೂಬಿ ಎ0-ಐಎನ್ ಪ್ಲಾಟ್ ಫಾರಂ ನ ಮೇಲೆ ಆಧಾರಿತವಾಗಿದ್ದು, ಇದು ಕಾಮಿಕ್ ಎಸ್‍ಯುವಿಯಾಗಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಉತ್ಪಾದನೆಯ ಹಂತದಲ್ಲಿ ಹೊಸ ಸ್ಕೋಡಾ ಕಾಂಪ್ಯಾಕ್ಟ್ ಎಸ್‍ಯುವಿ

ಹೊಸ ಸ್ಕೋಡಾ ಎಸ್‍ಯುವಿ ಸ್ಕೋಡಾದ ಮುಂದಾಳತ್ವದಲ್ಲಿ ನಡೆಯುತ್ತಿರುವ ಫೋಕ್ಸ್​ ವ್ಯಾಗನ್ ನ, ಇಂಡಿಯಾ 2.0 ಯೋಜನೆಯ ಭಾಗವಾಗಿರಲಿದೆ. ಈ ಯೋಜನೆಯ ಭಾಗವಾಗಿ ಸ್ಕೋಡಾ ಮತ್ತು ಫೋಕ್ಸ್​ ವ್ಯಾಗನ್ ಎರಡು ಹೊಸ ಮಾದರಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿವೆ.

ಉತ್ಪಾದನೆಯ ಹಂತದಲ್ಲಿ ಹೊಸ ಸ್ಕೋಡಾ ಕಾಂಪ್ಯಾಕ್ಟ್ ಎಸ್‍ಯುವಿ

ಇದರಲ್ಲಿ ಮೊದಲನೇ ಮಾದರಿಯು ಕಾಮಿಕ್ ಎಸ್‍ಯುವಿ ಯಾಗಿದ್ದರೆ, ಅದರ ನಂತರ ಹೊಸ ತಲೆಮಾರಿನ ರ್‍ಯಾಪಿಡ್ ಸೆಡಾನ್ ಬರಲಿದೆ. ಈ ಎರಡೂ ಮಾದರಿಗಳನ್ನು 2022ರ ಆಸುಪಾಸಿನಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು, ಇವುಗಳು ಎಂಕ್ಯೂಬಿ ಎ0-ಐಎನ್ ಆರ್ಕಿಟೆಕ್ಚರ್ ನ ಭಾಗವಾಗಿರಲಿವೆ.

ಉತ್ಪಾದನೆಯ ಹಂತದಲ್ಲಿ ಹೊಸ ಸ್ಕೋಡಾ ಕಾಂಪ್ಯಾಕ್ಟ್ ಎಸ್‍ಯುವಿ

ಫೋಕ್ಸ್​ ವ್ಯಾಗನ್ ಹೊಸ ತಲೆಮಾರಿನ ವೆಂಟೊ ಜೊತೆಯಲ್ಲಿ ಟಿ-ಕ್ರಾಸ್ ಎಸ್‍ಯುವಿ ಯನ್ನು ಸಹ ಬಿಡುಗಡೆ ಮಾಡಲಿದೆ. ಈ ಮಾದರಿಗಳ ಬಿಡುಗಡೆಯನ್ನು ಸ್ಕೋಡಾದ ಜೊತೆಯಲ್ಲಿಯೇ ಮಾಡಲಾಗುವುದು. ಎಂಕ್ಯೂಬಿ ಎ0-ಐಎನ್ ಪ್ಲಾಟ್ ಫಾರಂ, ಈ ಹಿಂದೆ ಇದ್ದ ಚಾಲ್ತಿಯಲ್ಲಿದ್ದ ಎಂಕ್ಯೂಬಿ ಎ0 ನ ಅಡ್ವಾನ್ಸ್ ಪ್ಲಾಟ್ ಫಾರಂ ಆಗಿದೆ. ಸುಧಾರಿತ ಪ್ಲಾಟ್ ಫಾರಂನಿಂದ ಸ್ಕೋಡಾ ಮತ್ತು ಫೋಕ್ಸ್​ ವ್ಯಾಗನ್ ಗಳು ಸಬ್ 4 ಮೀಟರ್ ಎಸ್‍ಯುವಿ, ಮಿಡ್ ಸೈಜ್ ಎಸ್‍ಯುವಿ, ಸೆಡಾನ್, ಕಾಂಪ್ಯಾಕ್ಟ್ ಸೆಡಾನ್ ಮತ್ತು ಹ್ಯಾಚ್ ಬ್ಯಾಕ್ ಗಳನ್ನು ತಯಾರಿಸಬಹುದು.

ಉತ್ಪಾದನೆಯ ಹಂತದಲ್ಲಿ ಹೊಸ ಸ್ಕೋಡಾ ಕಾಂಪ್ಯಾಕ್ಟ್ ಎಸ್‍ಯುವಿ

ಎಂಕ್ಯೂಬಿ ಎ0-ಐಎನ್ ಪ್ಲಾಟ್ ಫಾರಂ ನಲ್ಲಿ ತಯಾರಾಗುವ ಕಾರುಗಳು 4.4 ಮೀಟರ್ ಗಿಂತ ದೊಡ್ಡದಾಗಿರುವುದಿಲ್ಲ. ಆದ ಕಾರಣ ಫೋಕ್ಸ್​ ವ್ಯಾಗನ್ ಭಾರತೀಯ ಮಾರುಕಟ್ಟೆಗಾಗಿ ಸಬ್ 4 ಮೀಟರ್ ಎಸ್‍ಯುವಿ ಗಳನ್ನು ಪರಿಚಯಿಸಲಿದೆ.

MOST READ: ಸ್ಥಗಿತಗೊಂಡ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಉತ್ಪಾದನೆ

ಉತ್ಪಾದನೆಯ ಹಂತದಲ್ಲಿ ಹೊಸ ಸ್ಕೋಡಾ ಕಾಂಪ್ಯಾಕ್ಟ್ ಎಸ್‍ಯುವಿ

ಸಬ್ 4 ಮೀಟರ್ ಎಸ್‍ಯುವಿಗಳು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಪಡೆಯುತ್ತಿವೆ. ಈ ಸೆಗ್ ಮೆಂಟಿನಲ್ಲಿ ಬಿಡುಗಡೆಯಾದ ಬಹುತೇಕ ಎಲ್ಲಾ ಕಂಪನಿಗಳ ಕಾರುಗಳು ಒಂದಕ್ಕೊಂದು ತೀವ್ರತರವಾದ ಪೈಪೋಟಿಯನ್ನು ನೀಡುತ್ತಿವೆ. ಈ ಸೆಗ್ ಮೆಂಟಿನಲ್ಲಿ ಸದ್ಯಕ್ಕೆ ಬಿಡುಗಡೆಯಾಗಿತ್ತಿರುವ ಹೊಸ ವಾಹನವೆಂದರೆ ಅದು ಹ್ಯುಂಡೈ ಕಂಪನಿಯ ವೆನ್ಯೂ, ಅದು 21ನೇ ಮೇ 2019ರಂದು ಬಿಡುಗಡೆಯಾಗಲಿದೆ.

ಉತ್ಪಾದನೆಯ ಹಂತದಲ್ಲಿ ಹೊಸ ಸ್ಕೋಡಾ ಕಾಂಪ್ಯಾಕ್ಟ್ ಎಸ್‍ಯುವಿ

ಹ್ಯುಂಡೈ ವೆನ್ಯೂ ಜನಪ್ರಿಯತೆಯಲ್ಲಿ ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನು ಪಡೆದಿರುವ ಕ್ರೆಟಾದ ಕೆಳಗಿನ ಸ್ಥಾನದಲ್ಲಿರಲಿದೆ. ಹ್ಯುಂಡೈ ಕ್ರೆಟಾ ವಾಹನವು, ಸ್ಕೋಡಾ ಕಾಮಿಕ್ ಮತ್ತು ಫೋಕ್ಸ್ ವ್ಯಾಗನ್ ಟಿ -ಕ್ರಾಸ್ ಎಸ್‍ಯುವಿ ಗಳಿಗೆ ನೇರ ಪ್ರತಿಸ್ಪರ್ಧಿಯಾಗಿದೆ.

ಉತ್ಪಾದನೆಯ ಹಂತದಲ್ಲಿ ಹೊಸ ಸ್ಕೋಡಾ ಕಾಂಪ್ಯಾಕ್ಟ್ ಎಸ್‍ಯುವಿ

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಸ್ಕೋಡಾ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಬ್ 4 ಮೀಟರ್ ಎಸ್‍ಯುವಿಯನ್ನು ಪರಿಚಯಿಸಲು ಕಾರ್ಯ ಪ್ರವೃತ್ತವಾಗಿದೆ. ಎಂಕ್ಯೂಬಿ ಎ0-ಐಎನ್ ಪ್ಲಾಟ್ ಫಾರಂ ನಿಂದಾಗಿ ಸ್ಕೋಡಾ ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಕಾರುಗಳನ್ನು ಪರಿಚಯಿಸಿ ಮಾರುಕಟ್ಟೆಯನ್ನು ಆಳುವ ಸಾಧ್ಯತೆಗಳಿವೆ. ಸ್ಕೋಡಾ ಕಾಂಪ್ಯಾಕ್ಟ್ ಎಸ್‍ಯುವಿ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, 2022ರ ವೇಳೆಗೆ ಬಿಡುಗಡಯಾಗುವ ಸಾಧ್ಯತೆಗಳಿವೆ.

Most Read Articles

Kannada
Read more on ಸ್ಕೋಡಾ skoda
English summary
New Skoda Compact-SUV For India Might Be In The Works — To Rival The Hyundai Venue - Read in Kannada
Story first published: Tuesday, April 30, 2019, 18:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X