ಹೀಗಿರಲಿದೆ 2020ರ ಹೊಸ ಸ್ಕೋಡಾ ಆಕ್ಟೀವಿಯಾ

ಹೊಸ ಸ್ಕೋಡಾ ಆಕ್ಟೀವಿಯಾದ ಅಧಿಕೃತ ಚಿತ್ರವು ನವೆಂಬರ್ 11ರಂದು ಜಾಗತಿಕವಾಗಿ ಬಿಡುಗಡೆ ಮಾಡುವ ಮೊದಲೇ ಸೋರಿಕೆಯಾಗಿದೆ. ಸ್ಕೋಡಾ ಕಳೆದ ವಾರ 2020ರ ಆಕ್ಟೀವಿಯಾದ ಅಧಿಕೃತ ಟೀಸರ್ ಚಿತ್ರಗಳನ್ನು ಬಿಡುಗಡೆ ಮಾಡಿತ್ತು.

ಹೀಗಿರಲಿದೆ 2020ರ ಹೊಸ ಸ್ಕೋಡಾ ಆಕ್ಟೀವಿಯಾ

ಕಂಪನಿಯ ಅನ್‍‍ಲೈನ್‍ ಕಾರ್ ಕಾನ್ಫಿಗರರೇಟರ್ ಮೂಲಕ ಸೋರಿಕೆಯಾದ ನಂತರ 2020ರ ಸ್ಕೋಡಾ ಆಕ್ಟೇವಿಯಾದ ಚಿತ್ರವನ್ನು ಸ್ಕೋಡಾ ಕಮ್ಯುನಿಟಿ ಡಿಇ ಫೋರಂ ಮತ್ತು ಇನ್‍‍ಸ್ಟಾಗ್ರಾಮ್‍‍ನಲ್ಲಿ ಪೋಸ್ಟ್ ಮಾಡಲಾಗಿದೆ. ನವೀಕರಿಸಿದ ಆಕ್ಟೇವಿಯಾ ವಿನ್ಯಾಸವು ಸ್ಕೋಡಾ ಸ್ಕೇಲಾ ಹ್ಯಾಚ್‍‍ಬ್ಯಾಕ್ ಮತ್ತು ಸ್ಕೋಡಾ ಸುಪರ್ಬ್ ಸೆಡಾನ್ ಅನ್ನು ಹೋಲುತ್ತದೆ.

ಹೀಗಿರಲಿದೆ 2020ರ ಹೊಸ ಸ್ಕೋಡಾ ಆಕ್ಟೀವಿಯಾ

2020ರ ಆಕ್ಟೀವಿಯಾದಲ್ಲಿ ಎಲ್‍ಇಡಿ ಹೆಡ್‍‍ಲೈ‍‍ಟ್‍, ಕ್ರೋಮ್ ಸುತ್ತಲೂ ಹೊಂದಿರುವ 3 ಡಿ ಬಟರ್‍‍ಫ್ಲೈ ಗ್ರಿಲ್, ಐದು ಸ್ಪೋಕ್ ಮಿಷನ್ ಅಲಾಯ್ ವ್ಹೀಲ್, ಸಿ-ಆಕಾರದ ಸ್ಪ್ಲಿಟ್ ಎಲ್‍ಇ‍ಡಿ ಲೈಟ್ಸ್ ಮತ್ತು ಹಿಂಭಾಗದಲ್ಲಿ ಸ್ಕೋಡಾ ಲೆಟರಿಂಗ್ ಬದಲಿಗೆ ಸ್ಕೋಡಾ ಬ್ಯಾಡ್ಜ್ ಅನ್ನು ಹೊಂದಿದೆ.

ಹೀಗಿರಲಿದೆ 2020ರ ಹೊಸ ಸ್ಕೋಡಾ ಆಕ್ಟೀವಿಯಾ

2020ರ ಆಕ್ಟೀವಿಯಾದ ಇಂಟಿರಿಯರ್‍‍ನ ಯಾವುದು ಚಿತ್ರಗಳಿಲ್ಲ. ಆದರೆ ಉನ್ನತ ಗುಣಮಟ್ಟದ ಉತ್ಪನ್ನಗಳೊಂದಿಗೆ ಹೊಸ ಕ್ಯಾಬಿನ್ ವಿನ್ಯಾಸವನ್ನು ಹೊಂದಿರಬಹುದು ಎಂದು ನಿರೀಕ್ಷಿಸುತ್ತೇವೆ. ಈ ಕಾರಿನಲ್ಲಿ ವರ್ಚುವಲ್-ಕಾಕ್‍‍ಪಿಟ್ ಇನ್ಸ್ ಟ್ರೂ‍ಮೆಂಟ್ ಕ್ಲಸ್ಟರ್, ಫ್ಲೋಟಿಂಗ್ ಟಚ್‍ಸ್ಕ್ರೀನ್ ಮತ್ತು ಹೊಚ್ಚ ಹೊಸ ಎರಡು-ಸ್ಪೀಕ್ ಸ್ಟೀರಿಂಗ್ ವ್ಹೀಲ್ ಇರಲಿದೆ ಎಂದು ಮೊದಲೇ ಸ್ಪೈ ಚಿತ್ರಗಳು ಬಹಿರಂಗಪಡಿಸಿವೆ.

ಹೀಗಿರಲಿದೆ 2020ರ ಹೊಸ ಸ್ಕೋಡಾ ಆಕ್ಟೀವಿಯಾ

ಪ್ರಸ್ತುತ 1.8 ಲೀಟರ್ ಪೆಟ್ರೋಲ್ ಮತ್ತು 2.0 ಲೀಟರ್ ಡೀಸೆಲ್ ಎಂಜಿನ್‍‍ಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ನಿರೀಕ್ಷೆಯಿಲ್ಲವಾದರೂ, 48 ವಿ ಮೈಲ್ಡ್ ಹೈಬ್ರಿಡ್ ಮೋಟರ್ ಬಗ್ಗೆ ವದಂತಿಗಳಿವೆ, ಇದನ್ನು 2020ರ ಸ್ಕೋಡಾ ಆಕ್ಟೇವಿಯಾದಲ್ಲಿ ಅಳವಡಿಸುವ ಸಾಧ್ಯತೆಗಳಿವೆ.

ಹೀಗಿರಲಿದೆ 2020ರ ಹೊಸ ಸ್ಕೋಡಾ ಆಕ್ಟೀವಿಯಾ

ಸ್ಕೋಡಾ ಆಕ್ಟೇವಿಯಾ ಪ್ರಸ್ತುತ ನಾಲ್ಕು ಪೆಟ್ರೋಲ್ ಮತ್ತು ಡೀಸೆಲ್ ರೂಪಾಂತರಗಳಲ್ಲಿ ಲಭ್ಯವಿದೆ. ಪೆಟ್ರೋಲ್ ಮಾದರಿಗಳು 1.4 ಲೀಟರ್ ಮತ್ತು 1.8 ಲೀಟರ್ ಎಂಜಿನ್‍ಗಳನ್ನು ಹೊಂದಿದ್ದು, 1.4 ಲೀಟರ್ ಪೆಟ್ರೋಲ್ ಎಂಜಿನ್‍ 148 ಬಿಎಚ್‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸಿದರೆ 1.8 ಲೀಟರ್ ಎಂಜಿ‍‍ನ್‍ 177 ಬಿಎಚ್‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 1.4 ಲೀಟರ್ ಎಂಜಿನ್‍ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅಳವಡಿಸಿದರೆ, 1.8 ಲೀಟರ್ ಎಂಜಿನ್‍‍ನೊಂದಿಗೆ 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಹೀಗಿರಲಿದೆ 2020ರ ಹೊಸ ಸ್ಕೋಡಾ ಆಕ್ಟೀವಿಯಾ

ಡೀಸೆಲ್ ಮಾದರಿಗಳಲ್ಲಿ, 2.0 ಲೀಟರ್ ಟರ್ಬೋಜಾಜ್ಡ್ ಎಂಜಿನ್ ಹೊಂದಿದೆ. ಈ ಎಂಜಿನ್ 141 ಬಿಎಚ್‍ಪಿ ಪವರ್ ಮತ್ತು 320 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 6 ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಸ್ಕೋಡಾ ಆಕ್ಟೇವಿಯಾ ಕಾರಿನ ಬೆಲೆಯು ಪ್ರಸ್ತುತ ಎಕ್ಸ್ ಶೋರೂಂ ಪ್ರಕಾರ ರೂ.16 ಲಕ್ಷ ಮತ್ತು ರೂ.26 ಲಕ್ಷಗಳಾಗಿವೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಹೀಗಿರಲಿದೆ 2020ರ ಹೊಸ ಸ್ಕೋಡಾ ಆಕ್ಟೀವಿಯಾ

ಸ್ಕೋಡಾ ಆಕ್ಟೀವಿಯಾ ಅಧಿಕೃತ ಚಿತ್ರಗಳು ಬಿಡುಗಡೆಗೊಳಿಸುವ ಮುನ್ನವೇ ಸೋರಿಕೆಯಾದೆ. ಸ್ಕೋಡಾ ಆಕ್ಟೇವಿಯಾ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಹೊಸ ಸ್ಕೋಡಾ ಆಕರ್ಷಕ ಲುಕ್ ಅನ್ನು ಹೊಂದಿದೆ. ಸ್ಕೋಡಾ ಆಕ್ಟೇವಿಯಾ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯ ಬಳಿಕ ಹೋಂಡಾ ಸಿವಿಕ್, ಹ್ಯುಂಡೈ ಎಲಾಂಟ್ರಾ ಮತ್ತು ಟೊಯೊಟಾ ಕೊರೊಲ್ಲಾ ಆಲ್ಟಿಸ್ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on ಸ್ಕೋಡಾ skoda
English summary
2020 Skoda Octavia Official Image Leaked Ahead Of 11 November Unveil - Read in Kannada
Story first published: Wednesday, October 23, 2019, 18:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X