Just In
Don't Miss!
- News
ಸಿದ್ದರಾಮಯ್ಯ ಜ್ಯೋತಿಷ್ಯಾಲಯಕ್ಕೆ ಬೀಗ ಜಡೀರಿ: ಆರ್.ಅಶೋಕ ಲೇವಡಿ
- Movies
'ಚಪಾಕ್' ಟ್ರೈಲರ್ ರಿಲೀಸ್ ವೇಳೆ ಭಾವುಕರಾಗಿ ಕಣ್ಣೀರಿಟ್ಟ ನಟಿ ದೀಪಿಕಾ ಪಡುಕೋಣೆ
- Lifestyle
ಬರೋಬ್ಬರಿ 85ಲಕ್ಷ ಬೆಲೆಬಾಳುವ ಬಾಳೆಹಣ್ಣು ತಿಂದ ಭೂಪ!
- Travel
ಬೀಚ್ಗೆ ಹೋಗುವ ಮುನ್ನ ಈ ಸಂಗತಿಗಳು ನೆನಪಿನಲ್ಲಿರಲಿ
- Technology
ವಾಟ್ಸ್ ಆಪ್ ಚಾಟ್ ನ್ನು ಹೈಡ್ ಮಾಡುವುದಕ್ಕೆ ಇರುವ ಸಿಂಪಲ್ ಟ್ರಿಕ್ಸ್ ಗಳು
- Sports
ಕ್ರಿಕೆಟ್ನಿಂದ ದೂರವಿರುವ ಧೋನಿ ಸೈನಿಕರಿಗಾಗಿ ಮಾಡುತ್ತಿರೋದೇನು!
- Finance
ಗುಡ್ ರಿಟರ್ನ್ ವೃತ್ತಿ ಮಾರ್ಗದರ್ಶಿ: ಅಡುಗೆ ಕಾಂಟ್ರ್ಯಾಕ್ಟ್ ಬಗ್ಗೆ ಇಂಚಿಂಚು ಮಾಹಿತಿ
- Education
HAL Recruitment 2019: ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮುಂದಿನ ವರ್ಷ ಬಿಡುಗಡೆಯಾಗಲಿರುವ ಸ್ಕೋಡಾ ಅಕ್ಟೀವಿಯಾ ಕಾರಿನ ಮಾಹಿತಿ ಬಹಿರಂಗ
ಮೂರನೇ ತಲೆಮಾರಿನ ಆಕ್ಟೇವಿಯಾವನ್ನು ಬಿಡುಗಡೆಗೊಳಿಸಿ ಏಳು ವರ್ಷಗಳು ಕಳೆದ ಬಳಿಕ ಇದೀಗ ಸ್ಕೋಡಾ ತನ್ನ ಹೊಸ ತಲೆಮಾರಿನ ಅಕ್ಟೀವಿಯಾವನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ಸ್ಕೋಡಾ ಅಕ್ಟೀವಿಯಾ ತನ್ನದೇ ಸರಣಿಯ ಸ್ಕಾಲಾ ಹ್ಯಾಚ್‍ಬ್ಯಾಕ್‍ನ ವಿನ್ಯಾಸದ ಕೆಲವು ಅಂಶಗಳನ್ನು ಹೊಂದಿರಲಿದೆ.

ಹೊಸ ತಲೆಮಾರಿನ ಸ್ಕೋಡಾ ಆಕ್ಟೀವಿಯಾ ಹಿಂಭಾಗದಲ್ಲಿ ತಮ್ಮ ಸರಣಿಯ ಸ್ಕಾಲಾ ಕಾರ್‍ನ ಮಾದರಿಯ ಬೂಮರಾಂಗ್ ಆಕಾರದ ಪೂರ್ಣ ಪ್ರಮಾಣದ ಟೇಲ್ ಲ್ಯಾಂಟ್ ಅನ್ನು ಹೊಂದಿರಲಿದೆ. ಹಿಂಭಾಗದಲ್ಲಿ ಬ್ರ್ಯಾಂಡ್ ಲೋಗೋ ಬದಲು ಬ್ರ್ಯಾಂಡ್‍ನ ಹೆಸರನ್ನು ಆಕರ್ಷಕವಾಗಿ ಬರೆಯಲಾಗಿದೆ.

ಸ್ಕೋಡಾ 2020ರ ಆಕ್ಟೀವಿಯಾದ ಇಂಟಿರಿಯರ್‍ನಲ್ಲಿಯೂ ಬದಲಾವಣೆಗಳನ್ನು ನಡೆಸಿದೆ. ಈ ಕಾರು ಈಗ ಡ್ಯುಯಲ್ ಟೋನ್ ಬ್ಲ್ಯಾಕ್ ಮತ್ತು ಬೀಜ್ ಟ್ರೇಟ್‍ಮೆಂಟ್ ಬಣ್ಣದ ಆಯ್ಕೆಗಳನ್ನು ಹೊಂದಿದೆ. ಎಲ್ಲಾ ಹೊಸ ಎರಡು ಸ್ಪೋಕ್ ಸ್ಟೀಯರಿಂಗ್ ವ್ಹೀಲ್, 10 ಇಂಚಿನ ಪೂರ್ಣ ಪ್ರಮಾಣದ ಡಿಜಿಟಲ್ ಎಂಐಡಿ ಮತ್ತು 10 ಇಂಚಿನ ಫ್ಲೋಟಿಂಗ್ ಟಚ್‍ಸ್ಕ್ರೀನ್ ಇನ್ಫೋಟೇನ್‍ಮೆಂಟ್ ಅನ್ನು ಹೊಂದಿದೆ. ಹೊಸ ಅಕ್ಟೀವಿಯಾವು ಮೊದಲ ಬಾರಿಗೆ ಹೆಡ್ - ಅಪ್ ಡಿಸ್‍ಪ್ಲೇ ಸಹ ಹೊಂದಿದೆ.

ಹೊಸ 2020ರ ಸ್ಕೋಡಾ ಆಕ್ಟೇವಿಯಾ ಮೂರು ಮಾದರಿಯ ಪೆಟ್ರೋಲ್ ಆಯ್ಕೆಗಳಲ್ಲಿ ಲಭ್ಯವಿದೆ. 1.0 ಲೀಟರ್ ಮೂರು ಸಿಲಿಂಡರ್ ಎಂಜಿನ್ 110 ಬಿಹೆಚ್‍ಪಿ ಪವರ್ ಉತ್ಪಾದಿಸಿದರೆ, 1.5 ಲೀಟರ್ ಟಿಎಸ್ಐ ನಾಲ್ಕು ಸಿಲಿಂಡರ್ ಎಂಜಿನ್ 150 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6 ಸ್ಪೀಡ್ ಗೇರ್‍ಬಾಕ್ಸ್ ಅನ್ನು ಅಳವಡಿಸಿದೆ.

ಇದರೊಂದಿಗೆ 1.5 ಲೀಟರ್ ಪೆಟ್ರೋಲ್ ಎಂಜಿನ್ ಮಿಲ್ಡ್ ಹೈಬ್ರಿಡ್ ಆಗಿ ಲಭ್ಯವಿದೆ, ಈ ಎಂಜಿನ್‍ನೊಂದಿಗೆ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಹೊಂದಿರಲಿದೆ. 2.0 ಲೀಟರ್ ಟಿಎಸ್ಐ ಎಂಜಿನ್ 190 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ, ಸ್ಕೋಡಾ ಈ ಎಂಜಿನ್ ಅಳವಡಿಸಲು ಯೋಜಿಸುತ್ತಿದೆ. ಈ ಎಂಜಿನ್ ಎಡಬ್ಲ್ಯುಡಿ ಕಾನ್ಫಿಗರೇಷನ್ ಮತ್ತು 7 ಸ್ಪೀಡ್ ಡಿಎಸ್‍ಜಿ ಗೇರ್‍ಬಾಕ್ಸ್ ಅನ್ನು ಅಳವಡಿಸಬಹುದು.

ಹೊಸ 2020ರ ಅಕ್ಟೀವಿಯಾವು ಮೂರು ವಿಭಿನ್ನ 2.0 ಲೀಟರ್ ಟಿಡಿಐ ಡೀಸೆಲ್ ಎಂಜಿನ್‍ಗಳಲ್ಲಿ ಲಭ್ಯವಿದೆ. ಈ ಎಂಜಿನ್‍ಗಳು 115ಬಿಹೆಚ್‍ಪಿ ಪವರ್ 150 ಬಿಹೆಚ್‍ಪಿ ಪವರ್ ಮತ್ತು 200 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. 115 ಬಿಹೆಚ್‍ಪಿ ಪವರ್ ಉತ್ಪಾದಿಸುವ ಬೇಸ್ ಮಾದರಿಗಳು ಎಂಜಿನ್ ಅಲ್-ವ್ಹೀಲ್ ಡ್ರೈವ್‍ನೊಂದಿಗೆ ಲಭ್ಯವಿರುವುದಿಲ್ಲ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

2020ರ ಅಕ್ಟೀವಿಯಾ ಎರಡು ಪ್ಲಗ್-ಇನ್ ಹೈಬ್ರಿಡ್ ಐವಿ ರೂಪಾಂತರಗಳು ಸಹ ಪ್ರಸ್ತಾಪದಲ್ಲಿವೆ. 1.4 ಲೀಟರ್ ಟಿಎಸ್ಐ ಎಂಜಿನ್‍ನೊಂದಿಗೆ ಅಳವಡಿಸಿರುವ ಎಲೆಕ್ಟಿಕ್ ಮೋಟಾರ್ ಅನ್ನು ಹೊಂದಿರಲಿದೆ. ಇದು ಬೇಸ್ ಮಾದರಿಯಲ್ಲಿ 204 ಬಿಹೆಚ್‍ಪಿ ಪವರ್ ಅಥವಾ ಟಾಪ್ ಎಂಡ್ ಮಾದರಿಗಳಲ್ಲಿ 245 ಬಿಹೆಚ್‍ಪಿ ಪವರ್ ಉತ್ಪಾದಿಸುತ್ತದೆ. ಈ ಎರಡು ಎಂಜಿನ್‍ಗಳೊಂದಿಗೆ 6 ಸ್ಪೀಡ್ ಡಿಎಸ್‍ಜಿ ಗೇರ್‍ಬಾಕ್ಸ್ ಅನ್ನು ಅಳವಡಿಸಲಿದೆ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

2020ರ ಆಟೋ ಎಕ್ಸ್ ಪೋದಲ್ಲಿ ಹೊಸ 2020ರ ಸ್ಕೋಡಾ ಅಕ್ಟೀವಿಯಾ ಮೊದಲ ಬಾರಿಗೆ ಅನಾವರಣವಾಗುವ ನಿರೀಕ್ಷೆಗಳಿವೆ. ಅನಾವರಣಗೊಂಡ ಕೆಲವೇ ತಿಂಗಳುಗಳಲ್ಲಿ ಹೊಸ ಸ್ಕೋಡಾ ಕಾರನ್ನು ಬಿಡುಗಡೆ ಮಾಡಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಹೊಸ ಸ್ಕೋಡಾ ಅಕ್ಟೀವಿಯಾ ಕಾರಿಗೆ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.18 ಲಕ್ಷದಿಂದ ರೂ.28 ಲಕ್ಷದವರೆಗೆ ಬೆಲೆ ಹೊಂದಿರಲಿದೆ ಎಂದು ನಾವು ನಿರೀಕ್ಷಿಸುತ್ತೇವೆ.