2019ರ ಸ್ಕೋಡಾ ಸೂಪರ್ಬ್ ಕಾರ್ಪೊರೇಟ್ ಎಡಿಷನ್ ಬಿಡುಗಡೆ

ಸ್ಕೋಡಾ ಸಂಸ್ಥೆಯು ಸೂಪರ್ಬ್ ಐಷಾರಾಮಿ ಸೆಡಾನ್ ಕಾರುಗಳನ್ನು ಈ ಹಿಂದೆ 2016ರಲ್ಲೇ ಬಿಡುಗಡೆಗೊಳಿಸಿದ್ದು, ಇದೀಗ ಗ್ರಾಹಕರ ಆಕರ್ಷಣೆಗಾಗಿ ಕಾರ್ಪೊರೇಟ್ ಎಡಿಷನ್ ಕಾರು ಮಾದರಿಯನ್ನು ಪರಿಚಯಿಸಿದೆ. ತಾಂತ್ರಿಕವಾಗಿ ಈ ಹಿಂದಿನ ಮಾದರಿಯನ್ನೇ ಆಧರಿಸಿರುವ ಕಾರ್ಪೊರೇಟ್ ಎಡಿಷನ್ ಹೊಸ ಕಾರಿನ ಬೆಲೆಯನ್ನು ಆರಂಭಿಕವಾಗಿ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.23.99 ಲಕ್ಷಕ್ಕೆ ನಿಗದಿಗೊಳಿಸಲಾಗಿದೆ.

2019ರ ಸ್ಕೋಡಾ ಸೂಪರ್ಬ್ ಕಾರ್ಪೊರೇಟ್ ಎಡಿಷನ್ ಬಿಡುಗಡೆ

ಸ್ಕೋಡಾ ಸಂಸ್ಥೆಯು ಸೆಡಾನ್ ಆವೃತ್ತಿಗಳಲ್ಲಿ ಉನ್ನತೀಕರಿಸಲು ಬಯಸುವ ಗ್ರಾಹಕರಿಗಾಗಿ ಕಾರ್ಪೊರೇಟ್ ಎಡಿಷನ್ ಬಿಡುಗಡೆ ಮಾಡಿದ್ದು, ಕಾರ್ಪೊರೇಟ್ ಎಡಿಷನ್ ಬ್ಯಾಡ್ಜ್ ಹೊರತುಪಡಿಸಿ ಕಾರಿನ ವಿನ್ಯಾಸ ಮತ್ತು ತಾಂತ್ರಿಕವಾಗಿ ಯಾವುದೇ ಬದಲಾವಣೆ ತಂದಿಲ್ಲ. ಹೀಗಾಗಿ ಈ ಹೊಸ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ಮಾದರಿಗಳಿಂತ ಯಾವುದೇ ಹೊಸ ಭಿನ್ನತೆಯನ್ನು ಹೊಂದಿಲ್ಲ ಎನ್ನಬಹುದು.

2019ರ ಸ್ಕೋಡಾ ಸೂಪರ್ಬ್ ಕಾರ್ಪೊರೇಟ್ ಎಡಿಷನ್ ಬಿಡುಗಡೆ

ಸ್ಕೋಡಾ ಸೂಪರ್ಬ್ ಕಾರುಗಳು ಸೆಡಾನ್ ಕಾರುಗಳಲ್ಲೇ ವಿಭಿನ್ನತೆ ಎನ್ನಿಸಲಿದ್ದು, ಪ್ರೀಮಿಯಂ ಸೌಲಭ್ಯಗಳೊಂದಿಗೆ ಗ್ರಾಹಕರ ನೆಚ್ಚಿನ ಆಯ್ಕೆಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಪ್ರಮುಖ 5 ವೆರಿಯೆಂಟ್‌ಗಳಲ್ಲಿ ಲಭ್ಯವಿರುವ ಸೂಪರ್ಬ್ ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳಲ್ಲಿ ಲಭ್ಯವಿವೆ.

2019ರ ಸ್ಕೋಡಾ ಸೂಪರ್ಬ್ ಕಾರ್ಪೊರೇಟ್ ಎಡಿಷನ್ ಬಿಡುಗಡೆ

ಸೂಪರ್ಬ್ ಕಾರುಗಳು ಪೆಟ್ರೋಲ್ ಎಂಜಿನ್‌ಗಳಲ್ಲಿ ಮೂರು ವೆರಿಯೆಂಟ್‌ಗಳು ಲಭ್ಯವಿದ್ದಲ್ಲಿ ಡೀಸೆಲ್ ಎಂಜಿನ್‌ನಲ್ಲಿ ಎರಡು ವೆರಿಯೆಂಟ್ ಲಭ್ಯವಿದ್ದು, ಪೆಟ್ರೋಲ್ ಕಾರುಗಳು ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದರೆ ಡೀಸೆಲ್ ಕಾರುಗಳು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯದೊಂದಿಗೆ ಮಾತ್ರವೇ ಖರೀದಿಸಬಹುದಾಗಿದೆ.

2019ರ ಸ್ಕೋಡಾ ಸೂಪರ್ಬ್ ಕಾರ್ಪೊರೇಟ್ ಎಡಿಷನ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಸ್ಕೋಡಾ ಸೂಪರ್ಬ್ ಪೆಟ್ರೋಲ್ ಕಾರುಗಳು 1.8-ಲೀಟರ್ ಫೋರ್ ಸಿಲಿಂಡರ್ ಎಂಜಿನ್ ಹೊಂದಿದ್ದು, 177-ಬಿಎಚ್‌ಪಿ ಮತ್ತು 320-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಇವುಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್‌ಬಾಕ್ಸ್ ಒದಗಿಸಲಾಗಿದೆ.

2019ರ ಸ್ಕೋಡಾ ಸೂಪರ್ಬ್ ಕಾರ್ಪೊರೇಟ್ ಎಡಿಷನ್ ಬಿಡುಗಡೆ

ಹಾಗೆಯೇ ಡೀಸೆಲ್ ಕಾರುಗಳಲ್ಲಿ 2-ಲೀಟರ್ ಫೌರ್ ಸಿಲಿಂಡರ್ ಟರ್ಬೋಚಾಜ್ಡ್ ಎಂಜಿನ್ ಒದಗಿಸಲಾಗಿದ್ದು, 175-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ 6-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್‌ಮಿಷನ್ ಸೌಲಭ್ಯ ಹೊಂದಿದೆ.

2019ರ ಸ್ಕೋಡಾ ಸೂಪರ್ಬ್ ಕಾರ್ಪೊರೇಟ್ ಎಡಿಷನ್ ಬಿಡುಗಡೆ

ಕಾರಿನ ವೈಶಿಷ್ಟ್ಯತೆಗಳು

ಬಿ-ಜೆನಾನ್ ಹೆಡ್‌ಲೈಟ್ಸ್ ಹೊಂದಿರುವ ಸ್ಕೋಡಾ ಸೂಪರ್ಬ್ ಕಾರುಗಳಲ್ಲಿ ಅಡಾಪ್ಟಿವ್ ಫ್ರಂಟ್ ಲೈಟ್ ಸಿಸ್ಟಂ, 17-ಇಂಚಿನ ಅಲಾಯ್ ಚಕ್ರಗಳು, ರಿಯರ್ ವ್ಯೂ ಕ್ಯಾಮೆರಾ, ವಿವಿಧ ಮಾಹಿತಿ ನೀಡಬಲ್ಲ ಡಿಸ್‌ಪ್ಲೇ, ಇನ್ಪೋಟೈನ್‌ಮೆಂಟ್ ಮತ್ತು ತ್ರಿ ಜೋನ್ ಕ್ಲೈಮೆಟ್ ಕಂಟ್ರೋಲರ್ ಸೌಲಭ್ಯ ಹೊಂದಿದೆ.

2019ರ ಸ್ಕೋಡಾ ಸೂಪರ್ಬ್ ಕಾರ್ಪೊರೇಟ್ ಎಡಿಷನ್ ಬಿಡುಗಡೆ

ಇನ್ನು ಐಷಾರಾಮಿ ಕಾರಿನ ಗುಣಲಕ್ಷಣಗಳಾದ ಸ್ಟಾರ್ಟ್/ಸ್ಟಾಪ್ ಬಟನ್, ಕೀ ಲೆಸ್ ಎಂಟ್ರಿ, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಎಲೆಕ್ಟ್ರಿಕ್ ಪ್ರೇರಿತ 12 ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಚಾಲಕ ಸೀಟು, ಫ್ರಂಟ್ ಡ್ಯುಟಲ್ ಏರ್‌ಬ್ಯಾಗ್, ಸೈಡ್ ಏರ್‌ಬ್ಯಾಗ್ ಮತ್ತು ಹಿಲ್ ಹೋಲ್ಡ್ ಕಂಟ್ರೋಲರ್ ಪಡೆದುಕೊಂಡಿದೆ.

2019ರ ಸ್ಕೋಡಾ ಸೂಪರ್ಬ್ ಕಾರ್ಪೊರೇಟ್ ಎಡಿಷನ್ ಬಿಡುಗಡೆ

ಇದರೊಂದಿಗೆ 2019ರ ಆವೃತ್ತಿಯ ಬ್ಯಾನೆಟ್ ಡಿಸೈನ್‌ನಲ್ಲಿ ತುಸು ಬದಲಾವಣೆಗೊಳಿಸಿರುವ ಸ್ಕೋಡಾ ಸಂಸ್ಥೆಯು ಹೊಸ ಕಾರನ್ನು ಎರಡು ಬಣ್ಣಗಳಲ್ಲಿ ಪ್ರಮುಖ ಬಣ್ಣಗಳಲ್ಲಿ ಬಿಡುಗಡೆಗೊಳಿಸಿದ್ದು, ಮ್ಯಾಗ್ನೆಟಿಕ್ ಬ್ರೌನ್ ಮತ್ತು ಕ್ಯಾಂಡಿ ಬಣ್ಣದೊಂದಿಗೆ 4 ವರ್ಷಗಳ ವಾರಂಟಿಯನ್ನು ಘೋಷಣೆ ಮಾಡಿದೆ.

MOST READ: ಮಹೀಂದ್ರಾ ಅಲ್ಟುರಾಸ್ ಜಿ4 ಕಾರಿಗೆ ಹೊಸ ಹೆಸರು ನೀಡಿದ್ರೆ 2 ಕಾರು ಫ್ರೀ ಅಂತೆ..!

2019ರ ಸ್ಕೋಡಾ ಸೂಪರ್ಬ್ ಕಾರ್ಪೊರೇಟ್ ಎಡಿಷನ್ ಬಿಡುಗಡೆ

ಹೀಗಾಗಿ ಮಧ್ಯಮ ಗಾತ್ರದ ಐಷಾರಾಮಿ ಸೆಡಾನ್ ಖರೀದಿಸುವ ಗ್ರಾಹಕರಿಗೆ ಸ್ಕೋಡಾ ಸೂಪರ್ಬ್ ಆಯ್ಕೆ ಉತ್ತಮವಾಗಿದ್ದು, ಹೊಸ ಕಾರಿನ ಕುರಿತಾಗಿ ಇನ್ನಷ್ಟು ಮಾಹಿತಿ ಬಯಸುವ ಗ್ರಾಹಕರು ನಿಮ್ಮ ಹತ್ತಿರದ ಸ್ಕೋಡಾ ಡೀಲರ್ಸ್ ಸಂಪರ್ಕಿಸಬಹುದು.

Most Read Articles

Kannada
Read more on ಸ್ಕೋಡಾ skoda
English summary
2019 Skoda Superb Corporate Edition Launched In India. Read in Kannada.
Story first published: Thursday, January 17, 2019, 13:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X