ಸ್ಪೋರ್ಟಿ ಅವತಾರದಲ್ಲಿ ಬರಲಿದೆ ಟೊಯೊಟಾ ಫಾರ್ಚುನರ್ ಎಸ್‍ಯುವಿ

ಹೊಸ ತಲೆಮಾರಿನ ಟೊಯೊಟಾ ಫಾರ್ಚುನರ್ ಐಷಾರಾಮಿ ಎಸ್‍ಯುವಿ ಕಾರು 2016ರಲ್ಲಿ ಬಿಡುಗಡೆಗೊಂಡು, ಇಂದಿಗೂ ಸಹ ಲಕ್ಷುರಿ ಎಸ್‍ಯುವಿ ಸೆಗ್ಮೆಂಟ್‍ನಲ್ಲಿ ಉತ್ತಮ ಮಟ್ಟದ ಬೇಡಿಕೆಯನ್ನು ಪಡೆಯುತ್ತಿದೆ. ಪ್ರತೀ ತಿಂಗಳ ಕಾರು ಮಾರಾಟದಲ್ಲಿ ಫಾರ್ಚುನರ್ ಕಾರು 1500 ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಮತ್ತು ಮಾರುಕಟ್ಟೆಯಲ್ಲಿ ತನ್ನ ಗಟ್ಟಿ ಎದುರಾಳಿಯಾದ ಫೋರ್ಡ್ ಎಂಡೀವರ್ ಕಾರುಗಳು ತಿಂಗಳಿಗೆ ಸುಮಾರು 600 ಯೂನಿಟ್ ಮಾರಾಟಗೊಳ್ಳುತ್ತಿದೆ.

ಸ್ಪೋರ್ಟಿ ಅವತಾರದಲ್ಲಿ ಬರಲಿದೆ ಟೊಯೊಟಾ ಫಾರ್ಚುನರ್ ಎಸ್‍ಯುವಿ

ಹೀಗಾಗಿ ಟೊಯೊಟಾ ಸಂಸ್ಥೆಯು ತಮ್ಮ ಜನಪ್ರಿಯ ಫಾರ್ಚುನರ್ ಕಾರಿನ ಟಾಪ್ ಹಾಗು ಸ್ಪೋರ್ಟಿ ವೇರಿಯೆಂಟ್ ಅನ್ನು 2019ರ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡಲಿದೆ ಎಂಬ ಮಾಹಿತಿಯು ಲಭ್ಯವಾಗಿದೆ. ಈ ಕಾರಿಗೆ ಟೊಯೊಟಾ ಫಾರ್ಚುನರ್ ಟಿಆರ್‍‍ಡಿ ಸ್ಪೋರ್ಟಿವೊ ಎಂದು ಹೆಸರಿಡಲಾಗಿದೆ. ಈ ಕಾರು ಫಾರ್ಚುನರ್ ಕಾರಿನ ಸ್ಪೋರ್ಟ್ ಮಾದರಿಯಾಗಿದ್ದು, ಇದನ್ನು ಸಂಸ್ಥೆಯ ಟಿಆರ್‍‍ಡಿ ಅಂದರೆ ಟೊಯೊಟಾ ರೇಸಿಂಗ್ ಡೆವೆಲೆಪ್ಮೆಂಟ್ ಎಂಬಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಸ್ಪೋರ್ಟಿ ಅವತಾರದಲ್ಲಿ ಬರಲಿದೆ ಟೊಯೊಟಾ ಫಾರ್ಚುನರ್ ಎಸ್‍ಯುವಿ

ಟೊಯೊಟಾ ಫಾರ್ಚುನರ್ ಟಿಆರ್‍‍ಡಿ ಸ್ಪೋರ್ಟಿವೊ ಕಾರನ್ನು ಬಿಡುಗಡೆ ಮಾಡುವುದಕ್ಕು ಮುನ್ನ, ಸಧ್ಯ ಸಂಸ್ಥೆಯು ನಡೆಸುತ್ತಿರುವ ಎಕ್ಸ್ಕ್ಲೂಸಿವ್ ಈವೆಂಟ್‍ನಲ್ಲಿ ಡೀಲರ್‍‍‍ಗಳಿಗೆ ತೋರಿಸಲಾಗಿದೆ. ಇದೇ ಈವೆಂಟ್‍‍ನಲ್ಲಿ ಟೊಯೊಟಾ ಸಂಸ್ಥೆಯು ಇದೇ ವರ್ಷದಲ್ಲಿ ಬಿಡುಗಡೆ ಮಾಡಲಿರುವ ವೆಲ್‍ಫೈರ್ ಎಂಬ ಲಕ್ಷುರಿ ಎಂಪಿವಿ ಕಾರನ್ನು ಕೂಡಾ ಪ್ರದರ್ಶಿಸಲಾಗಿದೆ.

ಸ್ಪೋರ್ಟಿ ಅವತಾರದಲ್ಲಿ ಬರಲಿದೆ ಟೊಯೊಟಾ ಫಾರ್ಚುನರ್ ಎಸ್‍ಯುವಿ

ಟೊಯೊಟಾ ಫಾರ್ಚುನರ್ ಟಿಆರ್‍‍ಡಿ ಸ್ಪೋರ್ಟಿವೊ ಕಾರು ಈಗಾಗಲೇ ಥಾಯ್‍‍ಲ್ಯಾಂಡ್‍ನಲ್ಲಿ ಮಾರಾಟಗೊಳ್ಳುತ್ತಿದ್ದು, ಭಾರತಕ್ಕೆ ಲಗ್ಗೆಯಿಡಲಿರುವ ಕಾರು ಮಾದರಿಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಭಾರತಕ್ಕೆ ಲಗ್ಗೆಯಿಡಲಿರುವ ಟೊಯೊಟಾ ಫಾರ್ಚುನರ್ ಟಿಆರ್‍‍ಡಿ ಸ್ಪೋರ್ಟಿವೊ ಕಾರು ಮುಂಭಾಗದ ಗ್ರಿಲ್‍ಗೆ ಕ್ರೋಮ್ ಅನ್ನು ನೀಡಲಾಗಿದೆ.

ಸ್ಪೋರ್ಟಿ ಅವತಾರದಲ್ಲಿ ಬರಲಿದೆ ಟೊಯೊಟಾ ಫಾರ್ಚುನರ್ ಎಸ್‍ಯುವಿ

ಇದರ ಜೊತೆಗೆ ಈ ಕಾರು ಟಿಆರ್‍‍ಡಿ ಸ್ಪೋರ್ಟಿವೊ ಆದ ಕಾರಣ ಇದರ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಹಾಗು ಕಾರಿನ ವಿವಿಧ ಭಾಗಗಳಲ್ಲಿ ಟಿಆರ್‍‍ಡಿ ಬ್ಯಾಡ್ಜಿಂಗ್ ಅನ್ನು ಒದಗಿಸಲಾಗಿದೆ. ಈ ಕಾರು ಸಂಪುರ್ಣವಾಗಿ ಬಿಳಿ ಬಣ್ಣದಲ್ಲಿ ಲಭ್ಯವಿರಲಿದ್ದು, ಕಪ್ಪು ಬಣ್ಣದ ರೂಫ್ ಅನ್ನು ಹೊಂದಿರಲಿದೆ.

ಸ್ಪೋರ್ಟಿ ಅವತಾರದಲ್ಲಿ ಬರಲಿದೆ ಟೊಯೊಟಾ ಫಾರ್ಚುನರ್ ಎಸ್‍ಯುವಿ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಇನ್ನು ಕಾರಿನ ಒಳಭಾಗವನ್ನು ಕೆಂಪು ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು, ಬಾಗಿಲುಗಳಲ್ಲಿಯೂ ಸಹ ಟಿಆರ್‍‍ಡಿ ಬ್ಯಾಡ್ಜಿಂಗ್ ಅನ್ನು ಕಾಣಬಹುದಾಗಿದೆ. ಕಾರನ್ನು ಸ್ಟಾರ್ಟ್ ಮಾಡಿದ ನಂತರ ಟಿಆರ್‍‍ಡಿ ಸ್ಪೋರ್ಟಿವೊ ಎಂಬ ಆನಿಮೇಷನ್ ಗೋಚರಿಸುತ್ತದೆ. ಕೀ ಫೋಬ್‍ನ ಮೇಲೆಯು ಕೂಡಾ ನೀವು ಟಿಆರ್‍‍ಡಿ ಟ್ರೀಟ್ಮೆಂಟ್ ಅನ್ನು ಕಾಣಬಹುದಾಗಿದೆ.

ಸ್ಪೋರ್ಟಿ ಅವತಾರದಲ್ಲಿ ಬರಲಿದೆ ಟೊಯೊಟಾ ಫಾರ್ಚುನರ್ ಎಸ್‍ಯುವಿ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಟೊಯೊಟಾ ಫಾರ್ಚುನರ್ ಸ್ಪೋರ್ಟಿವೊ ಕಾರಿನಲ್ಲಿ ಜೆಬಿಎಲ್‍ನಿಂದ ಪಡೆದ 11 ಸ್ಪೀಕರ್ ಆಡಿಯೋ ಸಿಸ್ಟಂ, ಟಿಆರ್‍‍ಡಿ ಸಪ್ಸ್ಪೆನ್ಷನ್, ಅಗಲವಾದ ಡಿಸ್ಕ್ ಬ್ರೇಕ್, 20 ಇಂಚಿನ ಅಲಾಯ್ ವ್ಹೀಲ್ಸ್, ಕೆಂಪು ಮತ್ತು ಕಪ್ಪು ಬಣ್ಣದ ಸ್ಟಿಚಿಂಗ್ ಪಡೆದ ಸೀಟ್‍‍ಗಳು, ಕಾರ್ಬನ್ ಕೆವ್ಲರ್ ಟ್ರಿಮ್ ಅನ್ನು ಗೇರ್ ಕ್ನಾಬ್‍‍ನ ಮೇಲೆ ಮತ್ತು ಸ್ಟೀರಿಂಗ್‍ನ ಮೇಲೆ ನೀಡಲಾಗಿದೆ.

ಸ್ಪೋರ್ಟಿ ಅವತಾರದಲ್ಲಿ ಬರಲಿದೆ ಟೊಯೊಟಾ ಫಾರ್ಚುನರ್ ಎಸ್‍ಯುವಿ

ಎಂಜಿನ್ ಸಾಮರ್ಥ್ಯ

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಹೊಸ ಟೊಯೊಟಾ ಫಾರ್ಚ್ಯುನಾರ್ ಟಿಆರ್‍‍ಡಿ ಸ್ಪೋರ್ಟಿವೊ ಕಾರು 2.8 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 174 ಬಿಹೆಚ್‍ಪಿ ಮತ್ತು 450ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಸ್ಪೋರ್ಟಿ ಅವತಾರದಲ್ಲಿ ಬರಲಿದೆ ಟೊಯೊಟಾ ಫಾರ್ಚುನರ್ ಎಸ್‍ಯುವಿ

ಬೆಲೆ ಮತ್ತು ಬಿಡುಗಡೆಯ ಅವಧಿ

ಮಾರುಕಟ್ಟೆಗೆ ಲಗ್ಗೆಯಿಡಲಿರುವ ಟೊಯೊಟಾ ಫಾರ್ಚುನರ್ ಟಿಆರ್‍‍ಡಿ ಸ್ಪೋರ್ಟಿವೊ ಕಾರು ಇದೇ ವರ್ಷದ ಸೆಪ್ಟೆಂಬರ್‍‍ನಲ್ಲಿ ಬಿಡುಗಡೆಯಾಗಲಿದೆ. ಈ ಕಾರು 2WD ಮತ್ತು 4WD ಎಂಬ ಆಯ್ಕೆಗಳಲ್ಲಿ ಲಭ್ಯವಿರಲಿದ್ದು, ಎಕ್ಸ್ ಶೋರುಂ ಪ್ರಕಾರ ರೂ. 35 ಲಕ್ಷದಿಂದ ರೂ. 37 ಲಕ್ಷದ ಬೆಲೆಯಲ್ಲಿ ದೊರೆಯಲಿದೆ ಎಂದು ಅಂದಾಜಿಸಲಾಗಿದೆ.

ಸ್ಪೋರ್ಟಿ ಅವತಾರದಲ್ಲಿ ಬರಲಿದೆ ಟೊಯೊಟಾ ಫಾರ್ಚುನರ್ ಎಸ್‍ಯುವಿ

ಇನ್ನು ಸಾಧಾರಣ ಟೊಯೊಟಾ ಫಾರ್ಚೂನರ್ ಕಾರು ಬಿಡುಗಡೆಗೊಂಡು ಸುಮಾರು 10 ವರ್ಷಗಳಾದರೂ ಇಂದಿಗೂ ಸಹ ತನ್ನ ಸೆಗ್ಮೆಂಟ್‍ನಲ್ಲಿ ಮೊದಲ ಸ್ಥಾವನನ್ನು ಪಡೆದುಕೊಂಡಿದೆ. ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಟೊಯೊಟಾ ಈ ಹಣಕಾಸಿನ ವರ್ಷದಲ್ಲಿ ಸುಮಾರುಬ್ 21,141 ಯೂನಿಟ್ ಫಾರ್ಚುನರ್ ಕಾರುಗಳನ್ನು ಮಾರಾಟ ಮಾಡಿದೆ. ಮಾರಾಟಗೊಂಡ ಇಷ್ಟು ಕಾರುಗಳಲ್ಲಿ ಗ್ರಾಹಕರು ಡೀಸೆಲ್ ಮಾದರಿಯ ಕಾರುಗಳನ್ನೆ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ವರದಿಗಳು ತಿಳಿಸುತ್ತಿದೆ.

ಸ್ಪೋರ್ಟಿ ಅವತಾರದಲ್ಲಿ ಬರಲಿದೆ ಟೊಯೊಟಾ ಫಾರ್ಚುನರ್ ಎಸ್‍ಯುವಿ

ಎಸ್‌ಯುವಿಗಳಲ್ಲೇ ವಿಶೇಷ ಎನ್ನಿಸಿರುವ ಫಾರ್ಚೂನರ್ ಕಾರು 7 ಸೀಟರ್ ವಿನ್ಯಾಸದೊಂದಿಗೆ ಈ ಕಾರಿನ ಬೇಸ್ ವೇರೆಯಂಟ್ ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 28 ಲಕ್ಷದ ಬೆಲೆಯನ್ನು ಮತ್ತು ಈ ಕಾರಿನ ಟಾಪ್ ವೇರಿಯೆಂಟ್ ರೂ. 33.60 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ.

ಸ್ಪೋರ್ಟಿ ಅವತಾರದಲ್ಲಿ ಬರಲಿದೆ ಟೊಯೊಟಾ ಫಾರ್ಚುನರ್ ಎಸ್‍ಯುವಿ

ಟೊಯೊಟಾ ಫಾರ್ಚುನರ್ ಪ್ರೀಮಿಯಂ ಎಸ್‍ಯುವಿ ಕಾರು 2.8-ಲೀಟರ್ ಡಿಸೇಲ್ ಮತ್ತು 2.7-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿವೆ. ಈ ಮೂಲಕ ಡೀಸೆಲ್ ಎಂಜಿನ್ ಮಾದರಿಯು ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 174.5 ಬಿಎಚ್‌ಪಿ ಮತ್ತು 420 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಸ್ಪೋರ್ಟಿ ಅವತಾರದಲ್ಲಿ ಬರಲಿದೆ ಟೊಯೊಟಾ ಫಾರ್ಚುನರ್ ಎಸ್‍ಯುವಿ

ಇನ್ನು 6-ಸ್ಪೀಡ್ ಆಟೋಮ್ಯಾಟಿಕ್ ಮಾದರಿಯ ಡಿಸೇಲ್ ಎಂಜಿನ್ ಮಾದರಿಯು 450 ಎನ್ಎಂ ಉತ್ಪಾದಿಸುತ್ತೆ. ಹಾಗೆಯೇ, ಪೆಟ್ರೋಲ್ ಎಂಜಿನ್ ಪ್ರೇರಿತ ಕಾರು 164 ಬಿಎಚ್‌ಪಿ ಮತ್ತು 245 ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಮಾಡಬಹುದು.

ಸ್ಪೋರ್ಟಿ ಅವತಾರದಲ್ಲಿ ಬರಲಿದೆ ಟೊಯೊಟಾ ಫಾರ್ಚುನರ್ ಎಸ್‍ಯುವಿ

ಬಲಿಷ್ಠ ಎಂಜಿನ್‌ನೊಂದಿಗೆ ಉತ್ತಮ ಇಂಧನ ದಕ್ಷತೆ ಹೊಂದಿರುವ ಫಾರ್ಚೂನರ್ ಎಸ್‌ಯುವಿಯು, ಪೆಟ್ರೋಲ್ ಎಂಜಿನ್ ಮೂಲಕ ಪ್ರತಿ ಲೀಟರ್‌ಗೆ 10ಕಿ.ಮಿ ಮೈಲೇಜ್ ನೀಡಿದಲ್ಲಿ ಡಿಸೇಲ್ ಎಂಜಿನ್ ಪ್ರೇರಣೆಯೊಂದಿಗೆ ಪ್ರತಿ ಲೀಟರ್‌ಗೆ 12 ರಿಂದ 14 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತವೆ.

Source: Rushlane

Most Read Articles

Kannada
English summary
New Toyota Fortuner TRD Sportivo Unveiled In India - Launch In September. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more