ಬಹಿರಂಗವಾಯ್ತು ಟೊಯೊಟಾ ರೈಝ್ ಎಸ್‍‍ಯು‍ವಿಯ ಚಿತ್ರಗಳು

ಟೊಯೊಟಾದ ಮುಂಬರುವ ಎಸ್‍ಯು‍ವಿ ರೈಝ್ ಎಸ್‍‍ಯುವಿಯನ್ನು ಮುಂದಿನ ತಿಂಗಳು ನಡೆಯಲಿರುವ ತನ್ನ ಅಧಿಕೃತ ವರ್ಲ್ಡ್ ಪ್ರೀಮಿಯಂಗಿಂತ ಮೊದಲೇ ಬಹಿರಂಗಪಡಿಸಲಾಗಿದೆ. 2019ರ ಟೋಕಿಯೊ ಮೋಟಾರ್ ಶೋದಲ್ಲಿ ಡೈಹಟ್ಸು ರಾಕಿ ಕ್ಯಾಂಪಕ್ಟ್ ಎಸ್‍‍ಯು‍ವಿಯನ್ನು ಮೊದಲ ಬಾರಿಗೆ ಅನಾವರಣಗೊಳಿಸಿದೆ.

ಬಹಿರಂಗವಾಯ್ತು ಟೊಯೊಟಾ ರೈಝ್ ಎಸ್‍‍ಯು‍ವಿಯ ಚಿತ್ರಗಳು

ಹೊಸ ಟೊಯೊಟಾ ರೈಝ್ ತನ್ನ ಬ್ರ್ಯಾಂಡ್ ಶ್ರೇಣಿಯ ಡೈಹಟ್ಸು ಎಸ್‍‍‍ಯುವಿಯ ಮಾದರಿಯಂತೆ ಸಾಕಷ್ಟು ಸಾಮ್ಯತೆಗಳಿದ್ದರೂ, ಕೆಲವು ಬದಲಾವಣೆಗಳನ್ನು ಹೊಂದಿದೆ. ರೈಝ್ ಟೊಯೊಟಾ ಎಸ್‍‍ಯುವಿ ದೊಡ್ಡ ಗಾತ್ರದ ಟ್ರೆಪೆಜೋಡಿಯಲ್ ಗ್ರಿಲ್‍ ಅನ್ನು ಹೊಂದಿದೆ. ಈ ಎಸ್‍‍ಯು‍ವಿಯು ಫಾಂಗ್ ಲ್ಯಾಂಪ್‍ ಮತ್ತು ಎಲ್‍ಇ‍ಡಿ ಡೇ ಟೈಮ್ ರನ್ನಿಂಗ್ ಲ್ಯಾಂಪ್‍, ಟೊಯೊಟಾ ಲೋಗೊವನ್ನು ಹೊಂದಿದೆ.

ಈ ಎಸ್‍‍ಯು‍ವಿಯು 17 ಇಂಚಿನ ಅಲಾಯ್ ವ್ಹೀಲ್‍‍ಗಳನ್ನು ಹೊಂದಿದೆ. ಹೊಸ ರೈಝ್ ಟಿಆರ್‍‍‍ಡಿ ಪ್ಯಾಕೇಜ್ ಸೇರಿದಂತೆ ವಿವಿಧ ಬಾಡಿ ಕಿಟ್‍ಗಳನ್ನು ಹೊಂದಿರಲಿದೆ. ಹಿಂಭಾಗದಲ್ಲಿ ಟೈಲ್‍ ಲ್ಯಾಂಪ್,ಫ್ಲೋಟಿಂಗ್ ಡೀ ಪಿಲ್ಲರ್ ಮತ್ತು ಬಂಪರ್ ಅನ್ನು ಹೊಂದಿದೆ.

ಹೊಸ ರಾಕಿ ಮತ್ತು ರೈಜ್ ಎಸ್‍‍ಯು‍ವಿಗಳು ಆಕರ್ಷಕ ಇಂಟಿರಿಯರ್‍‍‍ಗಳನ್ನು ಹೊಂದಿವೆ. ಎಸ್‍‍ಯು‍ವಿಯ ಇಂಟಿರಿಯರ್‍‍ನಲ್ಲಿ ಅಡ್ಜಸ್ಟಬಲ್ ಚಾಲಕನ ಸೀಟು, ರೇರ್ ಎಸಿ ವೆಂಟ್ಸ್ ಮತ್ತು ಸ್ಟೀಯರಿಂಗ್ ವ್ಹೀಲ್ ಫಾಕ್ಸ್ ಬ್ರಷ್ಡ್-ಅಲ್ಯೂಮಿನಿಯಂ ಬಿಟ್‌ಗಳಿಂದ ಆವೃತ್ತವಾಗಿರುವ ಡ್ಯಾಶ್‌ಬೋರ್ಡ್ ಅನ್ನು ಹೊಂದಿದೆ. ಸೆಂಟರ್ ಕನ್ಸೋಲ್ , ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ಬಹಿರಂಗವಾಯ್ತು ಟೊಯೊಟಾ ರೈಝ್ ಎಸ್‍‍ಯು‍ವಿಯ ಚಿತ್ರಗಳು

ಹೊಸ ಈ ಎಸ್‍‍ಯು‍ವಿಯು 3,995 ಎಂಎಂ ಉದ್ದ, 1,695 ಎಂಎಂ ಎತ್ತರ, 1,620 ಎಂಎಂ ಅಗಲ ಮತ್ತು 2,525 ಎಂಎಂ ವ್ಹೀಲ್‍‍ಬೇಸ್ ಅನ್ನು ಹೊಂದಿದೆ. ಈ ಎಸ್‍‍ಯು‍ವಿಯು ಟೊಯೊಟಾದ ಡಿಎನ್‍ಜಿಎ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿದೆ. ಈ ಪ್ಲಾಟ್‍‍ಫಾರ್ಮ್ ಮೂಲಭೂತವಾಗಿ ಸುಧಾರಿತ ಟಿಎನ್‍‍ಜಿಎ ಮಾಡ್ಯುಲರ್ ಆರ್ಕಿಟೆಕ್ಚರ್‍‍ನ ಕಡಿಮೆ ವೆಚ್ಚದ ಆವೃತ್ತಿಯಾಗಿದೆ.

ಟೊಯೊಟಾ ರೈಝ್ ಎಸ್‍‍ಯು‍ವಿಯು 1.0 ಲೀಟರ್ ಮೂರು ಸಿಲಿಂಡರ್ 12 ವಾಲ್ಟ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 6,000 ಆರ್‍‍ಪಿಎಂನಲ್ಲಿ 98 ಬಿ‍ಹೆಚ್‍‍ಪಿ ಮತ್ತು 2,400-4,000 ಆರ್‍‍ಪಿಎಂನಲ್ಲಿ 140.2 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿ‍ನ್‍‍ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಗೇರ್‍‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಬಹಿರಂಗವಾಯ್ತು ಟೊಯೊಟಾ ರೈಝ್ ಎಸ್‍‍ಯು‍ವಿಯ ಚಿತ್ರಗಳು

ಟೊಯೊಟಾ ರೈಝ್ ಭಾರತದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಟೊಯೊಟಾ ರೈಝ್ ಬಿಡುಗಡೆಯಾದ ಬಳಿಕ ಮಾರುತಿ ಸುಜುಕಿ ವಿಟಾರಾ ಬ್ರಿಝಾ, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್ , ಫೋರ್ಡ್ ಇಕೋಸ್ಪೋರ್ಟ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 300 ಎಸ್‍‍ಯು‍ವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಟೊಯೊಟಾ toyota
English summary
Toyota Raize compact SUV: first images - Read in Kannada
Story first published: Wednesday, October 30, 2019, 18:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X