ಹೊಸ ವಾಹನಗಳ ನೋಂದಣಿಯಲ್ಲಿ ತೀವ್ರ ಕುಸಿತ- ಜಿಎಸ್‌ಟಿ ಇಳಿಕೆಗೆ ಕೇಂದ್ರದ ಮೇಲೆ ಹೆಚ್ಚಿದ ಒತ್ತಡ..!

ವರ್ಷದ ಆರಂಭದಿಂದ ಹೊಸ ವಾಹನಗಳ ಮಾರಾಟದಲ್ಲಿ ತೀವ್ರ ಕುಸಿತ ದಾಖಲಾಗುತ್ತಿದ್ದು, ಅನೇಕ ವಾಹನ ಉತ್ಪಾದನಾ ಸಂಸ್ಥೆಗಳು ತಾತ್ಕಲಿಕವಾಗಿ ವಾಹನಗಳ ಉತ್ಪಾದನೆಯನ್ನೇ ಸ್ಥಗಿತಗೊಳಿಸಬೇಕಾದ ಪರಿಸ್ಥಿತಿ ಎದುರಾಗಿತ್ತು. ಇದೀಗ ಹೊಸ ವಾಹನಗಳ ಮಾರಾಟದಲ್ಲಿ ತುಸು ಏರಿಕೆ ಕಂಡುಬಂದರೂ ಸಹ ತೀವ್ರ ಕುಸಿತದಿಂದ ಕಂಗಾಲಾಗಿರುವ ಆಟೋ ಉತ್ಪಾದನಾ ಸಂಸ್ಥೆಗಳು ಜಿಎಸ್‌ಟಿ ಇಳಿಕೆಗೆ ಪಟ್ಟುಹಿಡಿದಿವೆ.

ಹೊಸ ವಾಹನಗಳ ನೋಂದಣಿಯಲ್ಲಿ ತೀವ್ರ ಕುಸಿತ- ಜಿಎಸ್‌ಟಿ ಇಳಿಕೆಗೆ ಕೇಂದ್ರದ ಮೇಲೆ ಹೆಚ್ಚಿದ ಒತ್ತಡ..!

ಸದ್ಯ ಮಾರುಕಟ್ಟೆಯಲ್ಲಿ ಹೊಸ ಬ್ರಾಂಡ್ ವಾಹನಗಳನ್ನು ಹೊರತುಪಡಿಸಿ ಬಹುತೇಕ ವಾಹನಗಳ ಮಾರಾಟದಲ್ಲಿ ಹಿನ್ನಡೆಗೆ ಕಾರಣವಾಗಿದ್ದು, ಫೆಡರೇಷನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೆಷನ್ ಸಂಸ್ಥೆಯ ಪ್ರಕಾರ 2019ರ ಸೆಪ್ಟೆಂಬರ್ ಅವಧಿಯಲ್ಲಿ ಶೇ. 12.9 ರಷ್ಟು ಹೊಸ ವಾಹನಗಳ ನೋಂದಣಿಯು ಕುಸಿತ ಕಂಡಿದೆ ಎಂದು ಮಾಹಿತಿ ನೀಡಿದೆ. ಇದರಲ್ಲಿ ದ್ವಿಚಕ್ರ, ತ್ರಿ ಚಕ್ರ ಮತ್ತು ವಾಣಿಜ್ಯ ವಾಹನಗಳಿಂತ ಪ್ಯಾಸೆಂಜರ್ ಕಾರುಗಳ ಮಾರಾಟವು ತೀವ್ರ ಕುಸಿತಕ್ಕೆ ಕಾರಣವಾಗಿದ್ದು, ಜನಪ್ರಿಯ ಕಾರು ಸಂಸ್ಥೆಗಳೇ ನೆಲಕಚ್ಚಿವೆ.

ಹೊಸ ವಾಹನಗಳ ನೋಂದಣಿಯಲ್ಲಿ ತೀವ್ರ ಕುಸಿತ- ಜಿಎಸ್‌ಟಿ ಇಳಿಕೆಗೆ ಕೇಂದ್ರದ ಮೇಲೆ ಹೆಚ್ಚಿದ ಒತ್ತಡ..!

ಫೆಡರೇಷನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೆಷನ್ ಪ್ರಕಾರ ಸೆಪ್ಟೆಂಬರ್ ಅವಧಿಯಲ್ಲಿ ದ್ವಿಚಕ್ರ ವಾಹನಗಳ ನೋಂದಣಿಯಲ್ಲಿ ಶೇ.12.1 ರಷ್ಟು, ಪ್ಯಾಸೆಂಜರ್ ಕಾರು ನೋಂದಣಿಯಲ್ಲಿ ಶೇ.20.1, ವಾಣಿಜ್ಯ ವಾಹನಗಳ ನೋಂದಣಿಯಲ್ಲಿ ಶೇ.18.5 ರಷ್ಟು ಕುಸಿತವಾಗಿದೆ.

ಹೊಸ ವಾಹನಗಳ ನೋಂದಣಿಯಲ್ಲಿ ತೀವ್ರ ಕುಸಿತ- ಜಿಎಸ್‌ಟಿ ಇಳಿಕೆಗೆ ಕೇಂದ್ರದ ಮೇಲೆ ಹೆಚ್ಚಿದ ಒತ್ತಡ..!

ಆದರೆ ಹೊಸ ವಾಹನಗಳ ಮಾರಾಟದಲ್ಲಿ ಸತತ ಕುಸಿತದ ನಡುವೆ ಅಚ್ಚರಿ ಎನ್ನುವಂತೆ ತ್ರಿ ಚಕ್ರ ವಾಹನಗಳ ಮಾರಾಟದಲ್ಲಿ ಮಾತ್ರವೇ ಶೇ.1.8 ರಷ್ಟು ಮುನ್ನಡೆ ಕಾಯ್ದುಕೊಳ್ಳಲಾಗಿದ್ದು, ಇನ್ನುಳಿದ ಎಲ್ಲಾ ಮಾದರಿಯ ಹೊಸ ವಾಹನಗಳ ನೋಂದಣಿಯಲ್ಲಿ ಶೇ.12.9 ರಷ್ಟು ಕುಸಿತವಾಗಿದೆ.

ಹೊಸ ವಾಹನಗಳ ನೋಂದಣಿಯಲ್ಲಿ ತೀವ್ರ ಕುಸಿತ- ಜಿಎಸ್‌ಟಿ ಇಳಿಕೆಗೆ ಕೇಂದ್ರದ ಮೇಲೆ ಹೆಚ್ಚಿದ ಒತ್ತಡ..!

ಇಲ್ಲಿ ಇನ್ನೊಂದು ಅಚ್ಚರಿ ಬೆಳವಣಿಗೆ ಎನ್ನುವಂತೆ ಇತ್ತೀಚೆಗೆ ಬಿಡುಗಡೆಯಾದ ಕೆಲವು ಹೊಸ ಕಾರು ಮಾದರಿಗಳು ಆಟೋ ಮೊಬೈಲ್ ಉದ್ಯಮದಲ್ಲಿ ಸತತ ಹಿನ್ನಡೆಯಲ್ಲೂ ದಾಖಲೆ ಪ್ರಮಾಣದ ಬೇಡಿಕೆ ಪಡೆದುಕೊಂಡಿದ್ದು, ಈ ಹಿಂದೆ ಬಿಡುಗಡೆ ಕಾರು ಮಾದರಿಗಳ ಬೇಡಿಕೆಯಲ್ಲಿ ಮಾತ್ರ ನೆಲಕಚ್ಚಿರುವುದು ಕಾರು ಮಾರಾಟ ಪ್ರಮಾಣವನ್ನು ಗಮನಿಸಿದಾಗ ಸ್ಪಷ್ಟವಾಗಿ ಗೋಚರಿಸುತ್ತದೆ. ಇದೇ ಕಾರಣಕ್ಕೆ ಆಟೋ ಉತ್ಪಾದನಾ ಸಂಸ್ಥೆಗಳ ಜಿಎಸ್‌ಟಿ ಇಳಿಕೆಯ ಬೇಡಿಕೆ ಜಗ್ಗದ ಕೇಂದ್ರ ಸರ್ಕಾರವು ಬಿಎಸ್-6 ನತ್ತ ಮಹತ್ವದ ಹೆಜ್ಜೆಯಿರಿಸುತ್ತಿದೆ.

ಹೊಸ ವಾಹನಗಳ ನೋಂದಣಿಯಲ್ಲಿ ತೀವ್ರ ಕುಸಿತ- ಜಿಎಸ್‌ಟಿ ಇಳಿಕೆಗೆ ಕೇಂದ್ರದ ಮೇಲೆ ಹೆಚ್ಚಿದ ಒತ್ತಡ..!

ಕಾರ್ಪೊರೇಟ್ ತೆರಿಗೆಯಲ್ಲಿ ತುಸು ಇಳಿಕೆ ಮಾಡಿರುವುದನ್ನು ಹೊರತುಪಡಿಸಿ ಜಿಎಸ್‌ಟಿ ಪ್ರಮಾಣವನ್ನು ಶೇ.23ರಿಂದ ಶೇ.18ಕ್ಕೆ ಇಳಿಕೆ ಮಾಡಬೇಕೆಂಬ ಬೇಡಿಕೆಯನ್ನು ತಳ್ಳಿಹಾಕುತ್ತಿರುವ ಕೇಂದ್ರ ಸರ್ಕಾರವು ಆಟೋ ಉತ್ಪಾದನಾ ವಲಯದ ಇಳಿಕೆಗೆ ಜಿಎಸ್‌ಟಿ ಒಂದೇ ಕಾರಣವಲ್ಲ ಎಂಬುವುದನ್ನು ಈಗಾಗಲೇ ಸಾಕಷ್ಟು ಬಾರಿ ಸ್ಪಷ್ಟಪಡಿಸಿದೆ.

ಹೊಸ ವಾಹನಗಳ ನೋಂದಣಿಯಲ್ಲಿ ತೀವ್ರ ಕುಸಿತ- ಜಿಎಸ್‌ಟಿ ಇಳಿಕೆಗೆ ಕೇಂದ್ರದ ಮೇಲೆ ಹೆಚ್ಚಿದ ಒತ್ತಡ..!

ಹೊಸ ವಾಹನಗಳ ಮಾರಾಟದ ಮೇಲೆ ಜಿಎಸ್‌ಟಿ ಪರಿಣಾಮ ಬೀರಿದ್ದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಕಾರುಗಳ ಮಾರಾಟದಲ್ಲಿ ಅಚ್ಚರಿ ಎನ್ನುವಂತೆ ಬೇಡಿಕೆ ಪಡೆದುಕೊಳ್ಳುತ್ತಿರುವ ಬಗ್ಗೆ ಪ್ರಶ್ನೆಸುತ್ತಿರುವ ಕೇಂದ್ರ ಸರ್ಕಾರವು ಆಟೋ ಉತ್ಪಾದನಾ ಸಂಸ್ಥೆಗಳ ಬೇಡಿಕೆಯನ್ನು ತಳ್ಳಿಹಾಕುತ್ತಿದೆ.

ಹೊಸ ವಾಹನಗಳ ನೋಂದಣಿಯಲ್ಲಿ ತೀವ್ರ ಕುಸಿತ- ಜಿಎಸ್‌ಟಿ ಇಳಿಕೆಗೆ ಕೇಂದ್ರದ ಮೇಲೆ ಹೆಚ್ಚಿದ ಒತ್ತಡ..!

ಇದರಿಂದ ಅನಿವಾರ್ಯವಾಗಿ ಇದೀಗ ಬಿಎಸ್-6 ವೈಶಿಷ್ಟ್ಯತೆಗಳ ವಾಹನ ಬಿಡುಗಡೆಯ ಯೋಜನೆ ಮೇಲೆ ಹೆಚ್ಚಿನ ಗಮನಹರಿಸಿರುವ ಆಟೋ ಉತ್ಪಾದನಾ ಸಂಸ್ಥೆಗಳು ಸಾಂಪ್ರಾದಾಯಿಕ ವಾಹನ ಜೊತೆ ಜೊತೆಗೆ ಭವಿಷ್ಯದ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮೇಲೂ ಭಾರೀ ಪ್ರಮಾಣದ ಹೂಡಿಕೆಗೆ ಮುಂದಾಗಿವೆ.

ಹೊಸ ವಾಹನಗಳ ನೋಂದಣಿಯಲ್ಲಿ ತೀವ್ರ ಕುಸಿತ- ಜಿಎಸ್‌ಟಿ ಇಳಿಕೆಗೆ ಕೇಂದ್ರದ ಮೇಲೆ ಹೆಚ್ಚಿದ ಒತ್ತಡ..!

ಕೇಂದ್ರ ಸರ್ಕಾರವು ಸಹ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಮತ್ತು ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಹೆಚ್ಚಿಸಲು ಜಿಎಸ್‌ಟಿಯಲ್ಲಿ ವಿನಾಯ್ತಿ, ಆದಾಯ ತೆರಿಗೆಯಲ್ಲಿ ವಿನಾಯ್ತಿ ಮತ್ತು ಸಬ್ಸಡಿ ಯೋಜನೆಗಳನ್ನು ಘೋಷಣೆ ಮಾಡಿದೆ.

ಹೊಸ ವಾಹನಗಳ ನೋಂದಣಿಯಲ್ಲಿ ತೀವ್ರ ಕುಸಿತ- ಜಿಎಸ್‌ಟಿ ಇಳಿಕೆಗೆ ಕೇಂದ್ರದ ಮೇಲೆ ಹೆಚ್ಚಿದ ಒತ್ತಡ..!

ಒಟ್ಟಿನಲ್ಲಿ ಆಟೋ ಉತ್ಪಾದನಾ ಸಂಸ್ಥೆಗಳ ಜಿಎಸ್‌ಟಿ ಇಳಿಕೆಯ ಬೇಡಿಕೆಗೆ ಮಣೆ ಹಾಕದ ಕೇಂದ್ರ ಸರ್ಕಾರವು ಭವಿಷ್ಯದ ಎಲೆಕ್ಟ್ರಿಕ್ ವಾಹನ ಮಾದರಿಗಳ ಮಾರಾಟವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹೊಸ ನೀತಿಗಳನ್ನು ರೂಪಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಆಟೋ ಉತ್ಪಾದನಾ ವಲಯದಲ್ಲಿ ಚೇತರಿಕೆ ಕಂಡುಬರುವ ವಿಶ್ವಾಸ ವ್ಯಕ್ತಪಡಿಸಿದೆ.

Most Read Articles

Kannada
English summary
New Vehicle Registrations continue to fall; down 12.9%. Read in Kannada.
Story first published: Saturday, October 19, 2019, 14:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X