ಮೊದಲ ಬಾರಿ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ಹ್ಯುಂಡೈ ಐ20 ಕಾರು

ಹೊಸ ತಲೆಮಾರಿನ ಹ್ಯುಂಡೈ ಐ20 ಕಾರ್ ಅನ್ನು ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಈ ಕಾರ್ ಅನ್ನು ಶ್ರೀಪೆರಂಬದೂರ್‍‍ನಲ್ಲಿರುವ ಕಂಪನಿಯ ಉತ್ಪಾದನಾ ಘಟಕದ ಬಳಿ ಟೆಸ್ಟ್ ಮಾಡಲಾಗಿದ್ದು ಕ್ಯಾಮರಾದಲ್ಲಿ ಸೆರೆಯಾಗಿದೆ.

ಮೊದಲ ಬಾರಿ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ಹ್ಯುಂಡೈ ಐ20 ಕಾರು

ಹೊಸ ತಲೆಮಾರಿನ ಕಾರು ಸಹ ಈಗಿರುವ ಕಾರಿನ ಶೇಪ್ ಹೊಂದಿದ್ದು, ಹೆಚ್ಚು ಹುರುಪಿನೊಂದಿಗೆ ಯೂರೋಪಿಯನ್ ಸ್ಟೈಲ್ ನಲ್ಲಿ ಕಾಣುತ್ತದೆ. ಇದೇ ಮೊದಲ ಬಾರಿಗೆ ಐ20 ಕಾರಿನಲ್ಲಿ ಹಲವಾರು ಬದಲಾವಣೆಗಳನ್ನು ನಿರೀಕ್ಷಿಸಬಹುದು. ಈ ಕಾರಿನ ಬಿಡುಗಡೆಯ ನಂತರ ಸಬ್ ಕಾಂಪ್ಯಾಕ್ಟ್ ಹ್ಯಾಚ್‍‍ಬ್ಯಾಕ್ ಕಾರು ಮೂರನೇ ತಲೆಮಾರಿನ ಕಾರ್ ಅನ್ನು ಹೊಂದಲಿದೆ. ಹೊಸ ಐ20 ಕಾರು ಅಗಲವಾಗಿದ್ದು, ಕಡಿಮೆ ಬಾಡಿಯನ್ನು ಹೊಂದಿರುವುದರಿಂದ ಚಪ್ಪಟೆ ರೀತಿಯಲ್ಲಿ ಈಗಿರುವ ಕಾರಿನಂತೆಯೇ ಕಾಣುತ್ತದೆ.

ಮೊದಲ ಬಾರಿ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ಹ್ಯುಂಡೈ ಐ20 ಕಾರು

ಬೆಲ್ಟ್ ಲೈನ್, ಗ್ರೀನ್ ಹೌಸ್ ಹಾಗೂ ಟೇಲ್ ಗೇಟ್ ಗಳು ಈಗಿರುವ ಕಾರಿನಲ್ಲಿರುವಂತೆಯೇ ಕಾಣುತ್ತವೆ. ಇದರಲ್ಲಿರುವ ಒ‍ಆರ್‍‍ವಿ‍ಎಂಗಳು ನುಣುಪಾಗಿ ಕಾಣಿಸುತ್ತವೆ. ರೇರ್ ಕ್ವಾರ್ಟರ್ ಗ್ಲಾಸ್ ಅನ್ನು ತೆಗೆದು ಹಾಕಿರುವುದರಿಂದ ಹಿಂಬದಿಯಲ್ಲಿರುವ ಪ್ರಯಾಣಿಕರು ಹೊರಗಿನ ದೃಶ್ಯಗಳನ್ನು ನೋಡಲು ಅನುಕೂಲವಾಗಲಿದೆ.

ಮೊದಲ ಬಾರಿ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ಹ್ಯುಂಡೈ ಐ20 ಕಾರು

ಹೊಸ ಕಾರಿನಲ್ಲಿ ಹೊಸ ವಿನ್ಯಾಸದ ಎಲ್‍ಇ‍‍ಡಿ ಹೆಡ್‍‍ಲೈಟ್‍‍ಗಳು ಹಾಗೂ ಟೇಲ್ ಲೈಟ್‍‍ಗಳಿವೆ. ಹೊಸ ಐ20 ಕಾರಿನಲ್ಲಿ ಹೊಸದಾಗಿ ವಿನ್ಯಾಸಗೊಳಿಸಲಾಗಿರುವ ಡ್ಯಾಶ್ ಬೋರ್ಡ್, ಹೆಚ್ಚು ಆರಾಮದಾಯಕವೆನಿಸುವ ಸೀಟುಗಳಿವೆ.

ಮೊದಲ ಬಾರಿ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ಹ್ಯುಂಡೈ ಐ20 ಕಾರು

ಇದರ ಜೊತೆಗೆ ಹ್ಯುಂಡೈ ವೆನ್ಯೂ ಕಾರಿನಲ್ಲಿರುವಂತಹ ಪಡೆದಿರುವ ಕಾಂಪ್ಯಾಕ್ಟ್ ಸ್ಟೀಯರಿಂಗ್ ವ್ಹೀಲ್, ಫ್ಲೋಟಿಂಗ್ ಟಚ್‍ಸ್ಕ್ರೀನ್ ಇನ್ಫೋ‍‍ಟೇನ್‍‍ಮೆಂಟ್ ಸಿಸ್ಟಂ, ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸೇರಿದಂತೆ ಹಲವು ಅಂಶಗಳನ್ನು ಅಳವಡಿಸಲಾಗಿದೆ. ಹ್ಯುಂಡೈ ಕಂಪನಿಯು ಯಾವುದೇ ಸೆಗ್‍‍ಮೆಂಟಿನಲ್ಲಿ ಬದಲಾವಣೆಗಳನ್ನು ಮೊದಲ ಬಾರಿಗೆ ಪರಿಚಯಿಸುವುದಕ್ಕೆ ಹೆಸರುವಾಸಿಯಾಗಿದೆ. ಈ ಕಾರಣದಿಂದಾಗಿ ಈ ಸೆಗೆ‍ಮೆಂಟಿನಲ್ಲಿ ಮೊದಲ ಬಾರಿಗೆ ಆರಾಮದಾಯಕವಾದ, ಅನುಕೂಲವಾದ ಹಾಗೂ ಕನೆಕ್ಟಿವಿಟಿ ಫೀಚರ್‍‍ಗಳನ್ನು ನಿರೀಕ್ಷಿಸಲಾಗುತ್ತಿದೆ.

ಮೊದಲ ಬಾರಿ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ಹ್ಯುಂಡೈ ಐ20 ಕಾರು

ಈ ಕಾರಿನಲ್ಲಿ ಸಬ್ 4 ಮೀಟರ್ ಎಸ್‍‍ಯು‍‍ವಿಯಲ್ಲಿರುವಂತಹ ಬ್ಲೂ ಲಿಂಕ್ ಸೂಟ್ ಅನ್ನು ಅಳವಡಿಸುವ ನಿರೀಕ್ಷೆಗಳಿವೆ. ಮೂರನೇ ತಲೆಮಾರಿನ ಈ ಕಾರು ಹಳೆಯ ಕಾರಿನಲ್ಲಿರುವ ಪ್ಲಾಟ್‍‍ಫಾರಂನ ಅಪ್‍‍ಗ್ರೇಡೆಡ್ ಅಂಶಗಳನ್ನು ಹೊಂದಲಿದೆ. ಈಗಿರುವ ಕಾರಿನಲ್ಲಿರುವ 81ಬಿ‍‍ಹೆಚ್‍‍ಪಿ ಉತ್ಪಾದಿಸುವ 1.2 ಲೀಟರಿನ ಪೆಟ್ರೋಲ್ ಎಂಜಿನ್ ಹಾಗೂ 88 ಬಿ‍‍ಹೆಚ್‍‍ಪಿ ಉತ್ಪಾದಿಸುವ 1.4 ಲೀಟರಿನ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್‍‍ಗಳನ್ನು ಬಿ‍ಎಸ್6 ಮಾಲಿನ್ಯ ನಿಯಮಗಳಿಗೆ ಹೊಂದಿಕೊಳ್ಳುವಂತೆ ಅಪ್‍‍ಗ್ರೇಡ್ ಮಾಡಲಾಗುವುದು.

MOST READ: ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ಮೊದಲ ಬಾರಿ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ಹ್ಯುಂಡೈ ಐ20 ಕಾರು

ಪೆಟ್ರೋಲ್ ಎಂಜಿನ್‍‍ನಲ್ಲಿ ಸ್ಟಾಂಡರ್ಡ್ 5 ಸ್ಪೀಡಿನ ಎಂಟಿ ಅಥವಾ ಸಿವಿಟಿಗಳನ್ನು ಅಳವಡಿಸಲಾಗುವುದು. ಡೀಸೆಲ್ ಎಂಜಿನ್ 6 ಸ್ಪೀಡಿನ ಎಂಟಿ ಟ್ರಾನ್ಸ್ ಮಿಷನ್ ಹೊಂದಿರಲಿದೆ. ಹ್ಯುಂಡೈ ಐ20 ಕಾರಿನ ಬಿಡುಗಡೆಯೊಂದಿಗೆ ಹ್ಯುಂಡೈ ಎನ್ ಘಟಕವು ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲು ಸರಿಯಾದ ಕಾಲವಾಗಿದ್ದು, ಎನ್ ಲೈನ್ ಅಥವಾ ಎನ್ ವೇರಿಯಂಟ್‍ ಮಾದರಿಯ ಕಾರುಗಳಲ್ಲಿ 1.0 ಲೀಟರಿನ ಟಿ-ಜಿಡಿ‍ಐ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್‍‍ನಲ್ಲಿ 7 ಸ್ಪೀಡಿನ ಡಿ‍‍ಸಿ‍‍ಟಿ ಅಳವಡಿಸಲಾಗುವುದು.

ಮೊದಲ ಬಾರಿ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ಹ್ಯುಂಡೈ ಐ20 ಕಾರು

ಕಳೆದ ತಿಂಗಳು ಈ ಬಗ್ಗೆ ಮಾತನಾಡಿದ್ದ, ಹ್ಯುಂಡೈ ಮೋಟಾರ್ ಗ್ರೂಪಿನ ಅಧ್ಯಕ್ಷ ಹಾಗೂ ಆರ್ ಅಂಡ್ ಡಿ ವಿಭಾಗದ ಮುಖ್ಯಸ್ಥರಾದ ಆಲ್ಬರ್ಟ್ ಬಿಯರ್‍‍ಮನ್‍‍ರವರು ಹ್ಯುಂಡೈ ಕಂಪನಿಯ ಎನ್ ಸರಣಿಯು ಮುಂದಿನ ಮೂರು ವರ್ಷಗಳಲ್ಲಿ ಭಾರತಕ್ಕೆ ಕಾಲಿಡಲಿದೆ ಎಂದು ತಿಳಿಸಿದ್ದರು.

MOST READ: ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿದ್ರೆ ಬೈಕ್ ಬ್ಲಾಸ್ಟ್ ಆಗುತ್ತಾ?

ಮೊದಲ ಬಾರಿ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ಹ್ಯುಂಡೈ ಐ20 ಕಾರು

1.0 ಲೀಟರಿನ ಟಿ-ಜಿ‍‍ಡಿ‍ಐ ಎಂಜಿನ್ 98 ಬಿ‍‍ಹೆಚ್‍‍ಪಿ ಹಾಗೂ 118 ಬಿ‍‍ಹೆಚ್‍‍ಪಿ ಉತ್ಪಾದಿಸುವಂತೆ ಅಭಿವೃದ್ಧಿಪಡಿಸಲಾಗಿದೆ. ಈ ಎಂಜಿನ್ ಅನ್ನು ಭಾರತದಲ್ಲಿಯೇ ತಯಾರಿಸಲಾಗುತ್ತಿದೆ. ಮೊದಲ ಬಾರಿಗೆ ಈ ಎಂಜಿನ್ ಅನ್ನು ವೆನ್ಯೂ ಕಾರಿನಲ್ಲಿ ಅಳವಡಿಸಲಾಗಿದೆ.

ಮೊದಲ ಬಾರಿ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ಹ್ಯುಂಡೈ ಐ20 ಕಾರು

ಇನ್ನು ಮುಂದೆ ಬಹಳಷ್ಟು ವಾಹನಗಳಲ್ಲಿ ಅಳವಡಿಸುವ ಉದ್ದೇಶದಿಂದ ಹೆಚ್ಚಿನ ಬಂಡವಾಳವನ್ನು ಹೂಡಿಕೆ ಮಾಡಿ ಸ್ಥಳೀಯವಾಗಿ ತಯಾರಿಸಲಾಗುವುದು. ಹ್ಯುಂಡೈ ಇಂಡಿಯಾದ ಮಾರುಕಟ್ಟೆ ವಿಭಾಗದ ಹಿರಿಯ ಜನರಲ್ ಮ್ಯಾನೇಜರ್ ಹಾಗೂ ಗ್ರೂಪ್ ಹೆಡ್ ಪುನೀತ್ ಆನಂದ್‍‍ರವರ ಪ್ರಕಾರ ಈ ಎಂಜಿನ್‍‍ಗಳನ್ನು ಹೊಸ ತಲೆಮಾರಿನ ಐ20 ಕಾರಿನಲ್ಲಿ ಅಳವಡಿಸಲಾಗುವುದು.

MOST READ: ಮ್ಯಾನುವಲ್ ಕಾರ್ ಡ್ರೈವಿಂಗ್ ಮಾಡದಿದ್ರೆ ಲೈಸೆನ್ಸ್ ಸಿಗೋದಿಲ್ಲ

ಮೊದಲ ಬಾರಿ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ಹ್ಯುಂಡೈ ಐ20 ಕಾರು

ಹೊಸ ಎಂಜಿನ್‍‍ಗಳನ್ನು ಐ20 ಹಾಗೂ ಗ್ರಾಂಡ್ ಐ10 ಕಾರುಗಳ ಜೊತೆಗೆ ಇತರ ಹೈ ಎಂಡ್ ವಾಹನಗಳಲ್ಲೂ ಅಳವಡಿಸಲಾಗುವುದು ಎಂದು 1.0 ಲೀಟರಿನ ಟಿ-ಜಿ‍‍ಡಿ‍ಐ ಎಂಜಿನ್‍‍ನ ಮುಂದಿನ ಯೋಜನೆಯ ಬಗ್ಗೆ ತಿಳಿಸಿದರು.

Source: IAB

Most Read Articles

Kannada
English summary
Next-gen 2020 Hyundai i20 spied for the first time - Read in kannada
Story first published: Monday, June 10, 2019, 14:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X