ಬಿಡುಗಡೆಯಾಗಲಿದೆ ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ

ಹ್ಯುಂಡೈ ಕಂಪನಿಯ ಜನಪ್ರಿಯ ಕ್ರೆಟಾ ಎಸ್‍‍ಯು‍‍ವಿ ಕಾರು, ದೇಶಿಯ ಮಾರುಕಟ್ಟೆಯ ಎಸ್‍‍ಯು‍‍ವಿ ಸೆಗ್‍‍ಮೆಂಟಿನಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ಕ್ರೆಟಾ ಕಾರಿಗೆ ಪೈಪೋಟಿ ನೀಡುವಂತಹ ಬೇರೆ ಮಾದರಿಯ ಕಾರ್ ಅನ್ನು ಹ್ಯುಂಡೈ ಕಂಪನಿಯು ಬಿಡುಗಡೆಗೊಳಿಸಿಲ್ಲವಾದ ಕಾರಣ, ಕ್ರೆಟಾ ಈ ಸೆಗ್‍‍ಮೆಂಟಿನಲ್ಲಿ ಹಿಡಿತ ಸಾಧಿಸಿದೆ.

ಬಿಡುಗಡೆಯಾಗಲಿದೆ ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ

ಈ ಸೆಗ್‍‍ಮೆಂಟಿನಲ್ಲಿ ಎದುರಾಗ ಬಹುದಾದ ಪೈಪೋಟಿಯಿಂದಾಗಿ ಹಾಗೂ ಬದಲಾಗುತ್ತಿರುವ ಗ್ರಾಹಕರ ಅಭಿರುಚಿಯಿಂದಾಗಿ ಹ್ಯುಂಡೈ ಕಂಪನಿಯು ಕ್ರೆಟಾ ಕಾರಿನ ವಿನ್ಯಾಸವನ್ನು 2020ರ ವೇಳೆಗೆ ಸಂಪೂರ್ಣವಾಗಿ ಬದಲಾಯಿಸಲು ಸಿದ್ದತೆ ನಡೆಸಿದೆ. ಮುಂದಿನ ವರ್ಷದ ಏಪ್ರಿಲ್‍‍ನಲ್ಲಿ ಬಿಡುಗಡೆಯಾಗಲಿರುವ ಈ ಕಾರ್ ಅನ್ನು, ಮೊದಲಿಗೆ 2019ರ ಫೆಬ್ರವರಿಯಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಗೊಳಿಸಲಾಗುವುದು.

ಬಿಡುಗಡೆಯಾಗಲಿದೆ ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ

ಈ ವರ್ಷದ ಏಪ್ರಿಲ್‍‍ನಲ್ಲಿ ನಡೆದ ಶಾಂಘೈ ಮೋಟಾರ್ ಶೋದಲ್ಲಿ ಹೊಸ ತಲೆಮಾರಿನ ಕ್ರೆಟಾ ಎಸ್‍‍ಯುವಿಯನ್ನು ಅನಾವರಣಗೊಳಿಸಲಾಗಿತ್ತು. ಭಾರತದ ಮಾರುಕಟ್ಟೆಗಾಗಿ ತಯಾರಿಸಲಾಗಿರುವ ಈ ಕ್ರೆಟಾ ಕಾರು ಹ್ಯುಂಡೈ ಕಂಪನಿಯ ಸೋದರ ಸಂಸ್ಥಯ ಕಾರ್ ಆದ ಕಿಯಾ ಕಂಪನಿಯ ಸೆಲ್ಟೋಸ್ ಕಾರಿನಲ್ಲಿರುವ ಹಲವಾರು ಅಂಶಗಳನ್ನು ಹೊಂದಿರಲಿದೆ.

ಬಿಡುಗಡೆಯಾಗಲಿದೆ ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ

ಸೆಲ್ಟೋಸ್ ಕಾರ್ ಅನ್ನು ಈ ತಿಂಗಳ 20ರಂದು ಅನಾವರಣಗೊಳಿಸಲಾಗುವುದು. ದೇಶಿಯ ಮಾರುಕಟ್ಟೆಯಲ್ಲಿ ಈ ಕಾರಿನ ಮೊದಲ ವಾಹನವನ್ನು ಈ ವರ್ಷದ ಕೊನೆಯ ಭಾಗದಲ್ಲಿ ಬಿಡುಗಡೆಗೊಳಿಸಲಾಗುವುದು.

ಬಿಡುಗಡೆಯಾಗಲಿದೆ ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ

ಆನ್‍‍ಲೈನ್ ವರದಿಯ ಪ್ರಕಾರ, ಮುಂದಿನ ತಲೆಮಾರಿನ ಕ್ರೆಟಾ ಎಂಜಿನ್, ಸೆಲ್ಟೋಸ್ ಕಾರಿನಲ್ಲಿರುವ ಎಂಜಿನ್‍‍ನಂತೆಯೇ ಇರಲಿದೆ. ಹೊಸ ಕಾರಿನಲ್ಲಿ 1.5 ಲೀಟರಿನ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍‍ಗಳಿರಲಿವೆ. ಈ ಎರಡೂ ಎಂಜಿನ್‍‍ಗಳನ್ನು ಬಿ‍ಎಸ್6 ಮಾಲಿನ್ಯ ನಿಯಮಗಳಿಗೆ ಹೊಂದಿಕೊಳ್ಳುವಂತೆ ತಯಾರಿಸಲಾಗುವುದು. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಇರಲಿದೆ.

ಬಿಡುಗಡೆಯಾಗಲಿದೆ ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ

ಹೊಸ ಐ‍ಎಕ್ಸ್ 25 ಕ್ರೆಟಾ ಕಾರಿನ ಚಿತ್ರವು ಮುಂಬರುವ ಕಾರು ಹೇಗಿರಲಿದೆ ಎಂಬುದರ ಬಗ್ಗೆ ಬೆಳಕು ಚೆಲ್ಲಲಿದೆ. ಹೊಸ ಕ್ರೆಟಾದಲ್ಲಿರುವ ಹೆಡ್‍‍ಲ್ಯಾಂಪ್ ಸೆಟ್‍ಅಪ್ ಹಾಗೂ ಗ್ರಿಲ್ ಅಸೆಂಬ್ಲಿಗಳನ್ನು ಇತ್ತೀಚಿಗಷ್ಟೇ ಬಿಡುಗಡೆಯಾದ ವೆನ್ಯೂ ಕಾರಿನಿಂದ ಪಡೆಯಲಾಗಿದೆ.

MOST READ: ಮಾರಾಟದಲ್ಲಿ ಹಾರ್ಲೆ ಡೇವಿಡ್‍‍ಸನ್ ಹಿಂದಿಕ್ಕಿದ ಕೆ‍‍ಟಿ‍ಎಂ

ಬಿಡುಗಡೆಯಾಗಲಿದೆ ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ

ಹೊರಭಾಗದಲ್ಲಿನ ಈ ಮಹತ್ವದ ಬದಲಾವಣೆಗಳ ಜೊತೆಗೆ ಇಂಟಿರಿಯರ್‍‍ನಲ್ಲೂ ಹಲವಾರು ಹೊಸ ಫೀಚರ್‍‍ಗಳನ್ನು ಅಳವಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಎದುರಾಗಲಿರುವ ಪೈಪೋಟಿಯನ್ನು ಎದುರಿಸಲು ಕ್ರೆಟಾ ಕಾರಿನಲ್ಲಿ ಬ್ಲೂ ಲಿಂಕ್ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ.

MOST READ: ವಿನೂತನ ವಿನ್ಯಾಸದೊಂದಿಗೆ ಬಿಡುಗಡೆಯಾದ ಅಪೆ ಸಿಟಿ ಪ್ಲಸ್

ಬಿಡುಗಡೆಯಾಗಲಿದೆ ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ

ಈ ಕಾರಿನಲ್ಲಿಯೂ ಸಹ ವೆನ್ಯೂ ಕಾರಿನಲ್ಲಿರುವಂತಹ ದೊಡ್ಡ ಟಚ್‍‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಇರಲಿದ್ದು, ಈ ಫೀಚರ್‍‍ಗಳನ್ನು ಸೆಲ್ಟೋಸ್ ಕಾರಿನಲ್ಲೂ ಸಹ ಅಳವಡಿಸಿರುವ ಸಾಧ್ಯತೆಗಳಿವೆ. ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹಾಗೂ ವೈರ್‍‍ಲೆಸ್ ಚಾರ್ಜಿಂಗ್ ಘಟಕಗಳಿರಲಿದ್ದು, ಈ ಪ್ಯಾಕೇಜ್‍‍ಗಳನ್ನು ಕಿಯಾದ ಸೆಲ್ಟೋಸ್‍‍ನಲ್ಲಿಯೂ ಸಹ ಅಳವಡಿಸಲಾಗಿದೆ.

MOST READ: ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಬೈಕ್

ಬಿಡುಗಡೆಯಾಗಲಿದೆ ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ

ಕೆಲವು ಮೂಲಗಳ ಪ್ರಕಾರ, ಹೊಸ ತಲೆಮಾರಿನ ಕ್ರೆಟಾ ಕಾರಿನಲ್ಲಿ ಈಗಿರುವ ಕಾರಿನಲ್ಲಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ಸೀಟುಗಳನ್ನು ಅಳವಡಿಸುವ ಸಾಧ್ಯತೆಗಳಿವೆ. ಈ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.11 ಲಕ್ಷದಿಂದ - 17 ಲಕ್ಷಗಳವರೆಗೆ ಇರಲಿದೆ.

Most Read Articles

Kannada
English summary
Next-Gen Hyundai Creta India Launch Likely In March 2020 - Read in kannada
Story first published: Monday, June 17, 2019, 12:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X