ಟೆಸ್ಲಾ ಕಾರುಗಳಂತೆ ಸದ್ದು ಮಾಡಲಿದೆ ಮರ್ಸಿಡಿಸ್ ಹೊಸ ಎಸ್ ಕ್ಲಾಸ್

ಜರ್ಮನ್ ಮೂಲದ ಆಟೋ ಮೋಬೈಲ್ ದೈತ್ಯ ಮರ್ಸಿಡಿಸ್ ಬೆಂಜ್ 2020ರಲ್ಲಿ ಸುಧಾರಿತ ಆವೃತ್ತಿಯ ಎಸ್-ಕ್ಲಾಸ್ ಕಾರನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಮರ್ಸಿಡಿಸ್ ಈಗಾಗಲೇ ತನ್ನ ಹೊಸ ತಲೆಮಾರಿನ ಎಸ್-ಕ್ಲಾಸ್ ಅನ್ನು ಅಪ್ ಗ್ರೇಡ್ ಮಾಡುತ್ತಿದ್ದು, ಅದರ ಚಿತ್ರಗಳು ಲಭ್ಯವಾಗಿದ್ದು, ಹಲವು ಬದಲಾವಣೆಗಳಾಗಲಿವೆ. ಪ್ರಸ್ತುತ ತಲೆಮಾರಿನ ಎಸ್-ಕ್ಲಾಸ್ ಸುಮಾರು 5 ವರ್ಷಗಳಿಂದ ಮಾರುಕಟ್ಟೆಯಲ್ಲಿದೆ.

ಟೆಸ್ಲಾ ಕಾರುಗಳಂತೆ ಸದ್ದು ಮಾಡಲಿದೆ ಮರ್ಸಿಡಿಸ್ ಹೊಸ ಎಸ್ ಕ್ಲಾಸ್

ಹೊರ ವಿನ್ಯಾಸವು ಈಗಿರುವ ವಾಹನದಂತೆಯೇ ಇರಲಿದ್ದು, ಅದು ಹೊಸ ಎಲ್ಇಡಿ ಹೆಡ್ ಲೈಟ್, ಅಪ್ ಗ್ರೇಡ್ ಮಾಡಿರುವ ಟೇಲ್ ಲೈಟ್ ಮತ್ತು ಫಾಕ್ಸ್ ಎಕ್ಸ್ ಹಾಸ್ಟ್ ಹೊಂದಿರುವ ಹಿಂಭಾಗದ ಬಂಪರ್ ಗಳನ್ನು ಸಣ್ಣ ಬದಲಾವಣೆಗಳೊಂದಿಗೆ ಹೊಂದಿರಲಿದೆ. ಒಳ ವಿನ್ಯಾಸವು ಸಹ ಅಪ್ ಗ್ರೇಡ್ ಆಗಲಿದ್ದು, ಹೊಸ ವಾಹನವು ಕಡಿಮೆ ಪ್ರಮಾಣದಲ್ಲಿ ಬಟನ್ ಗಳನ್ನು ಮತ್ತು ಹ್ಯಾಂಡ್ ಕ್ರಾಫ್ಟೆಡ್ ಮೇಟಿರಿಯಲ್ ಗಳನ್ನು ಒಳಗೊಂಡಿರಲಿದೆ. ಕ್ಯಾಬಿನ್ ಇನ್ನಷ್ಟು ಆಕರ್ಷಕವಾಗಿರಲಿದೆ.

ಟೆಸ್ಲಾ ಕಾರುಗಳಂತೆ ಸದ್ದು ಮಾಡಲಿದೆ ಮರ್ಸಿಡಿಸ್ ಹೊಸ ಎಸ್ ಕ್ಲಾಸ್

ಈ ವಾಹನದಲ್ಲಿ ದೊಡ್ಡ ಟಚ್ ಸ್ಕ್ರೀನ್ ಇನ್ಫೊಟೇನ್‍ಮೆಂಟ್ ಸಿಸ್ಟಮ್ ಇರಲಿದ್ದು, ಮರು ವಿನ್ಯಾಸಗೊಳಿಸಲಾಗಿರುವ ಮಲ್ಟಿಫಂಕ್ಷನಲ್ ಸ್ಟೀಯರಿಂಗ್ ವ್ಹೀಲ್ ಇರಲಿದೆ. ಟಚ್ ಸ್ಕ್ರೀನ್ ಇನ್ಫೊಟೇನ್‍ಮೆಂಟ್ ಸಿಸ್ಟಮ್ ಟೆಲ್ಸಾ ಮಾದರಿಯಲ್ಲಿ ಇರುವಂತೆ ಇರಲಿದೆ. ಹೊಸ ಮರ್ಸಿಡಿಸ್ ಎಸ್-ಕ್ಲಾಸ್ ನಲ್ಲೂ ಹೊಸ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಇರಲಿದೆ.

ಟೆಸ್ಲಾ ಕಾರುಗಳಂತೆ ಸದ್ದು ಮಾಡಲಿದೆ ಮರ್ಸಿಡಿಸ್ ಹೊಸ ಎಸ್ ಕ್ಲಾಸ್

ಜರ್ಮನಿಯ ಲಗ್ಷುರಿ ಕಾರು ತಯಾರಕ ಕಂಪನಿಯು ಎಸ್-ಕ್ಲಾಸ್ ನಲ್ಲೂ ಐಸಿ ಎಂಜಿನ್ ಬಳಸಲಿದೆ. ಆದರೆ ಕಾರು ಹೈಬ್ರಿಡ್ ಟೆಕ್ನಾಲಜಿ ಮತ್ತು ಮಾಲಿನ್ಯ ಕಡಿಮೆ ಮಾಡುವ ಕಾಂಪೋನೆಂಟ್ ಗಳನ್ನು ಒಳಗೊಂಡಿರಲಿದೆ. ಟಾಪ್ ಮಾದರಿಯ ಎಎಂಜಿ ಮಾದರಿಗಳನ್ನು ಮುಂದುವರೆಸಲಾಗುವುದು.

ಟೆಸ್ಲಾ ಕಾರುಗಳಂತೆ ಸದ್ದು ಮಾಡಲಿದೆ ಮರ್ಸಿಡಿಸ್ ಹೊಸ ಎಸ್ ಕ್ಲಾಸ್

ಪ್ರಸ್ತುತ ಮರ್ಸಿಡಿಸ್ ಎಸ್-ಕ್ಲಾಸ್ ದೇಶಿಯ ಮಾರುಕಟ್ಟೆಯಲ್ಲಿ 4 ಮಾದರಿಗಳಲ್ಲಿ ಮತ್ತು 14 ಬಣ್ಣಗಳಲ್ಲಿ ಮಾರಾಟವಾಗುತ್ತಿದೆ. ಡೀಸೆಲ್ ಮಾದರಿಯ ಮರ್ಸಿಡಿಸ್ ಬೆಂಜ್ ಎಸ್-ಕ್ಲಾಸ್ ಎಸ್ 350ಡಿ, 3 ಲೀಟರ್ ಎಂಜಿನ್ ಹೊಂದಿದ್ದು 282 ಬಿಹೆಚ್‍ಪಿ ಮತ್ತು 600 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಉಳಿದ ಮೂರು ವೇರಿಯಂಟ್ ಗಳು ಪೆಟ್ರೋಲ್ ಮಾದರಿಯಲ್ಲಿ ದೊರೆಯುತ್ತವೆ. ಈ ಮಾದರಿಯಲ್ಲಿರುವ ಮರ್ಸಿಡಿಸ್ ಬೆಂಜ್ ಎಸ್-ಕ್ಲಾಸ್ ಎಸ್450 ವಾಹನವು 3 ಲೀಟರಿನ ಎಂಜಿನ್ ಹೊಂದಿದ್ದು 362 ಬಿಹೆಚ್‍ಪಿ ಮತ್ತು 500 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 9 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿದೆ.

ಟೆಸ್ಲಾ ಕಾರುಗಳಂತೆ ಸದ್ದು ಮಾಡಲಿದೆ ಮರ್ಸಿಡಿಸ್ ಹೊಸ ಎಸ್ ಕ್ಲಾಸ್

ಮರ್ಸಿಡಿಸ್ ಬೆಂಜ್ ಎಸ್-ಕ್ಲಾಸ್ ಮೇ ಬಾಕ್ ಎಸ್560 ವಾಹನದಲ್ಲಿ 4 ಲೀಟರ್ ಎಂಜಿನ್ ಇದ್ದು, 463 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 9 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿದೆ. ಮರ್ಸಿಡಿಸ್ ಬೆಂಜ್ ಎಸ್-ಕ್ಲಾಸ್ ಮೇ ಬಾಕ್ ಎಸ್650 ವಾಹನದಲ್ಲಿ 6 ಲೀಟರ್ ಎಂಜಿನ್ ಇದ್ದು, 621 ಬಿಹೆಚ್‍ಪಿ ಪವರ್ ಮತ್ತು 1000 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 7 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿದೆ.

ಟೆಸ್ಲಾ ಕಾರುಗಳಂತೆ ಸದ್ದು ಮಾಡಲಿದೆ ಮರ್ಸಿಡಿಸ್ ಹೊಸ ಎಸ್ ಕ್ಲಾಸ್

ಮರ್ಸಿಡಿಸ್ ಎಸ್ ಕ್ಲಾಸ್ ಸರಣಿಯ ಕಾರುಗಳ ದರವು ಭಾರತದ ಎಕ್ಸ್ ಶೋರೂಂ ನಂತೆ ರೂ. 2.8 ಕೋಟಿಗಳಾಗಿದೆ.

MOST READ: ಗೂರ್ಖಾ ಅಪ್‍‍ಗ್ರೇಡ್ ಮಾಡಲಿದೆ ಫೋರ್ಸ್ ಮೋಟಾರ್ಸ್/strong>

ಟೆಸ್ಲಾ ಕಾರುಗಳಂತೆ ಸದ್ದು ಮಾಡಲಿದೆ ಮರ್ಸಿಡಿಸ್ ಹೊಸ ಎಸ್ ಕ್ಲಾಸ್

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಮರ್ಸಿಡಿಸ್ ಕಂಪನಿಯು ಎಸ್-ಕ್ಲಾಸ್ ಸರಣಿಯ ಕಾರುಗಳನ್ನು ಸುಮಾರು 5 ವರ್ಷಗಳಿಂದ ಮಾರಾಟ ಮಾಡುತ್ತಿದ್ದು, ಅವುಗಳಿಗೆ ಅಪ್ ಗ್ರೇಡ್ ನ ಅವಶ್ಯಕತೆ ಇದೆ. ಆಡಿ ಮತ್ತು ಬಿಎಂಡಬ್ಲೂ ಕಂಪನಿಗಳು ಈಗಾಗಲೇ ಅಪ್ ಗ್ರೇಡ್ ಮಾಡಿ ಕ್ರಮವಾಗಿ ಎ 8 ಮತ್ತು 7 ಸರಣಿಯ ಮಾದರಿಗಳನ್ನು ಮಾರಾಟ ಮಾಡುತ್ತಿವೆ.

Most Read Articles

Kannada
English summary
Next Gen Mercedes S-Class Gets Tesla Like Upgrade — Changes Coming 2020 - Read in Kannada
Story first published: Thursday, May 2, 2019, 19:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X