ಫಾಸ್ಟ್‌ಟ್ಯಾಗ್ ಸೌಲಭ್ಯಕ್ಕೆ ಭಾರೀ ಬೇಡಿಕೆ- ಒಂದೇ ತಿಂಗಳಿನಲ್ಲಿ 80 ಲಕ್ಷ ವಾಹನಗಳಲ್ಲಿ ಅಳವಡಿಕೆ..!

ಫಾಸ್ಟ್‌ಟ್ಯಾಗ್ ಕಡ್ಡಾಯಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅಂತಿಮ ಹಂತದ ಸಿದ್ದತೆ ನಡೆಸಿದ್ದು, ಹೊಸ ಶುಲ್ಕ ಪಾವತಿ ಸೌಲಭ್ಯ ವಿತರಣೆಯಲ್ಲಿ ದಾಖಲೆ ಪ್ರಮಾಣದ ಏರಿಕೆ ಕಂಡುಬಂದಿದೆ.

ಫಾಸ್ಟ್‌ಟ್ಯಾಗ್ ಸೌಲಭ್ಯಕ್ಕೆ ಭಾರೀ ಬೇಡಿಕೆ- ಒಂದೇ ತಿಂಗಳಿನಲ್ಲಿ 80 ಲಕ್ಷ ವಾಹನಗಳಲ್ಲಿ ಅಳವಡಿಕೆ..!

ವಾಹನಗಳಲ್ಲಿ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಕಡ್ಡಾಯವಾಗಿ ಅಳವಡಿಕೆ ಮಾಡಿಕೊಳ್ಳಬೇಕೆಂಬ ಆದೇಶ ಹೊರಡಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಡಿಸೆಂಬರ್ 15ರಿಂದ ಹೊಸ ಶುಲ್ಕು ಪಾವತಿ ವಿಧಾನವನ್ನು ಅಳವಡಿಸಿಕೊಳ್ಳದ ವಾಹನ ಮಾಲೀಕರಿಂದ ದುಪ್ಪಟ್ಟು ಶುಲ್ಕ ವಿಧಿಸಲು ಮುಂದಾಗಿದ್ದು, ಕೊನೆಯ ಹಂತದಲ್ಲಿ ದಂಡದಿಂದ ತಪ್ಪಿಸಿಕೊಳ್ಳಲು ಮುಂದಾಗಿರುವ ವಾಹನ ಮಾಲೀಕರು ಫಾಸ್ಟ್‌ಟ್ಯಾಗ್ ಖರೀದಿಗೆ ಮುಗಿಬಿದ್ದಿದ್ದಾರೆ.

ಫಾಸ್ಟ್‌ಟ್ಯಾಗ್ ಸೌಲಭ್ಯಕ್ಕೆ ಭಾರೀ ಬೇಡಿಕೆ- ಒಂದೇ ತಿಂಗಳಿನಲ್ಲಿ 80 ಲಕ್ಷ ವಾಹನಗಳಲ್ಲಿ ಅಳವಡಿಕೆ..!

ಕಳೆದ 15 ದಿನಗಳಲ್ಲಿ ಬರೋಬ್ಬರಿ 80 ಲಕ್ಷ ವಾಹನ ಮಾಲೀಕರು ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಅಳವಡಿಕೆಮಾಡಿಕೊಂಡಿದ್ದು, ಡೆಡ್‌ಲೈನ್ ಹತ್ತಿರವಾಗುತ್ತಿದ್ದಂತೆ ಪ್ರತಿ ದಿನ ದೇಶಾದ್ಯಂತ ಒಂದೂವರೆಯಿಂದ ಎರಡು ಲಕ್ಷದಷ್ಟು ವಾಹನ ಮಾಲೀಕರು ಫಾಸ್ಟ್‌ಟ್ಯಾಗ್ ಖರೀದಿಸುತ್ತಿದ್ದಾರೆ ಎನ್ನಲಾಗಿದೆ.

ಫಾಸ್ಟ್‌ಟ್ಯಾಗ್ ಸೌಲಭ್ಯಕ್ಕೆ ಭಾರೀ ಬೇಡಿಕೆ- ಒಂದೇ ತಿಂಗಳಿನಲ್ಲಿ 80 ಲಕ್ಷ ವಾಹನಗಳಲ್ಲಿ ಅಳವಡಿಕೆ..!

ಇನ್ನು ಫಾಸ್ಟ್‌ಟ್ಯಾಗ್ ಬಳಕೆಯಿಂದ ವಾಹನ ಮಾಲೀಕರು ಟೋಲ್ ಗೇಟ್‌ಗಳಲ್ಲಿ ಗಂಟೆಗಟ್ಟಲೇ ಕ್ಯೂ ನಿಂತು ಶುಲ್ಕ ಪಾವತಿ ಮಾಡುವ ತಾಪತ್ರಯ ಕಡಿಮೆಯಾಗುವುದಲ್ಲದೇ ಇದರಿಂದ ಹಲವು ಪ್ರಯೋಜನಗಳಿದ್ದು, ಅತಿ ಸುಲಭವಾಗಿ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಫಾಸ್ಟ್‌ಟ್ಯಾಗ್ ಸೌಲಭ್ಯಕ್ಕೆ ಭಾರೀ ಬೇಡಿಕೆ- ಒಂದೇ ತಿಂಗಳಿನಲ್ಲಿ 80 ಲಕ್ಷ ವಾಹನಗಳಲ್ಲಿ ಅಳವಡಿಕೆ..!

ಫಾಸ್ಟ್‌ಟ್ಯಾಗ್ ಎಂದರೇನು?

ಭಾರತದ ಟೋಲ್‍ಗಳಲ್ಲಿ ಉಂಟಾಗುವ ಟ್ರಾಫಿಕ್ ಜಾಮ್ ಕಡಿಮೆ ಮಾಡಲು ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಫಾಸ್ಟ್‌ಟ್ಯಾಗ್ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯಾಗಿದ್ದು, ಟೋಲ್ ಪ್ಲಾಜಾ ಮೂಲಕ ಹಾದುಹೋಗುವ ವಾಹನಗಳ ಟೋಲ್ ಆಟೋಮ್ಯಾಟಿಕ್ ಆಗಿ ಕಡಿತಗೊಳ್ಳುತ್ತದೆ.

ಫಾಸ್ಟ್‌ಟ್ಯಾಗ್ ಸೌಲಭ್ಯಕ್ಕೆ ಭಾರೀ ಬೇಡಿಕೆ- ಒಂದೇ ತಿಂಗಳಿನಲ್ಲಿ 80 ಲಕ್ಷ ವಾಹನಗಳಲ್ಲಿ ಅಳವಡಿಕೆ..!

ಈ ವ್ಯವಸ್ಥೆಯನ್ನು ಭಾರತದಲ್ಲಿ ಮೊದಲ ಬಾರಿಗೆ 2014ರಲ್ಲಿ ಪರಿಚಯಿಸಲಾಯಿತು. ಇದನ್ನು ಭಾರತದೆಲ್ಲೆಡೆ ಜಾರಿಗೆ ತರಲಾಗುತ್ತಿದ್ದು, ಡಿಸೆಂಬರ್ 15ರಿಂದ ಕಡ್ಡಾಯಗೊಳಿಸಲಾಗಿದೆ. ಈ ಸೌಲಭ್ಯ ಹೊಂದಿರುವ ವಾಹನಗಳು ಯಾವುದೇ ಟೋಲ್ ಪ್ಲಾಜಾ ಮೂಲಕ ಹಾದುಹೋಗುವಾಗ ಗಂಟೆಗಟ್ಟಲೇ ಟೋಲ್‍‍ಗಳಲ್ಲಿ ನಿಲ್ಲುವ ಅಗತ್ಯವಿಲ್ಲ. ದೇಶದಲ್ಲಿರುವ ಅನೇಕ ಬ್ಯಾಂಕುಗಳು ಆನ್‌ಲೈನ್‌ನಲ್ಲಿ ಫಾಸ್ಟ್‌ಟ್ಯಾಗ್‍ ಖರೀದಿಸುವ ಸೌಲಭ್ಯವನ್ನು ಒದಗಿಸುತ್ತಿವೆ.

ಫಾಸ್ಟ್‌ಟ್ಯಾಗ್ ಸೌಲಭ್ಯಕ್ಕೆ ಭಾರೀ ಬೇಡಿಕೆ- ಒಂದೇ ತಿಂಗಳಿನಲ್ಲಿ 80 ಲಕ್ಷ ವಾಹನಗಳಲ್ಲಿ ಅಳವಡಿಕೆ..!

ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಡಿಎಫ್‌ಸಿ, ಎಸ್‌ಬಿಐ, ಹೆಚ್‌ಡಿಎಫ್‌ಸಿ, ಸಿಂಡಿಕೇಟ್, ಪೇಟಿಎಂ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್‌ಗಳಲ್ಲಿ ಫಾಸ್ಟ್‌ಟ್ಯಾಗ್‍‍‍ಗೆ ಅರ್ಜಿ ಸಲ್ಲಿಸಬಹುದು. ನಂತರ ಫಾಸ್ಟ್‌ಟ್ಯಾಗ್‍ ಅನ್ನು ನೇರವಾಗಿ ನಿಮ್ಮ ಮನೆಗೆ ತಲುಪಿಸಲಾಗುತ್ತದೆ.

ಫಾಸ್ಟ್‌ಟ್ಯಾಗ್ ಸೌಲಭ್ಯಕ್ಕೆ ಭಾರೀ ಬೇಡಿಕೆ- ಒಂದೇ ತಿಂಗಳಿನಲ್ಲಿ 80 ಲಕ್ಷ ವಾಹನಗಳಲ್ಲಿ ಅಳವಡಿಕೆ..!

ಇದರೊಂದಿಗೆ ಫಾಸ್ಟ್‌ಟ್ಯಾಗ್‍ ಅನ್ನು ಟೋಲ್ ಪ್ಲಾಜಾ ಅಥವಾ ಅಧಿಕೃತ ಏಜೆನ್ಸಿ ಮೂಲಕವೂ ಖರೀದಿಸಬಹುದು. ಗ್ರಾಹಕರು ಆನ್‌ಲೈನ್ ಫಾರಂ ಅನ್ನು ಡೌನ್‌ಲೋಡ್ ಮಾಡಿಕೊಂಡು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕಾಗುತ್ತದೆ.

ಫಾಸ್ಟ್‌ಟ್ಯಾಗ್ ಸೌಲಭ್ಯಕ್ಕೆ ಭಾರೀ ಬೇಡಿಕೆ- ಒಂದೇ ತಿಂಗಳಿನಲ್ಲಿ 80 ಲಕ್ಷ ವಾಹನಗಳಲ್ಲಿ ಅಳವಡಿಕೆ..!

ಫಾಸ್ಟ್‌ಟ್ಯಾಗ್‍‍‍ಗಳನ್ನು ರೀಚಾರ್ಜ್ ಮಾಡುವುದು ಹೇಗೆ?

ಚೆಕ್, ಆನ್‌ಲೈನ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಆರ್‌ಟಿಜಿಎಸ್ ಹಾಗೂ ನೆಟ್ ಬ್ಯಾಂಕಿಂಗ್ ಮೂಲಕವೂ ಫಾಸ್ಟ್‌ಟ್ಯಾಗ್‍‍‍ಗಳನ್ನು ರೀಚಾರ್ಜ್ ಮಾಡಬಹುದು.

ಫಾಸ್ಟ್‌ಟ್ಯಾಗ್ ಸೌಲಭ್ಯಕ್ಕೆ ಭಾರೀ ಬೇಡಿಕೆ- ಒಂದೇ ತಿಂಗಳಿನಲ್ಲಿ 80 ಲಕ್ಷ ವಾಹನಗಳಲ್ಲಿ ಅಳವಡಿಕೆ..!

ಗ್ರಾಹಕರು ರೂ.100ನಿಂದ ರೂ.1 ಲಕ್ಷದವರೆಗೆ ರೀಚಾರ್ಜ್ ಮಾಡಬಹುದು. ಗ್ರಾಹಕರು ಸುಲಭವಾಗಿ ರೀಚಾರ್ಜ್ ಮಾಡಲು ಬೇರೆ ಬೇರೆ ಏಜೆನ್ಸಿಗಳು ಬೇರೆ ಬೇರೆ ವಿಧಾನಗಳನ್ನು ಹಾಗೂ ಆಯ್ಕೆಗಳನ್ನು ನೀಡಲಾಗಿದೆ. ಅವುಗಳನ್ನು ಅನುಸರಿಸುವ ಮೂಲಕ ಫಾಸ್ಟ್‌ಟ್ಯಾಗ್‍‍‍ಗಳನ್ನು ರೀಚಾರ್ಜ್ ಮಾಡಬಹುದು.

ಫಾಸ್ಟ್‌ಟ್ಯಾಗ್ ಸೌಲಭ್ಯಕ್ಕೆ ಭಾರೀ ಬೇಡಿಕೆ- ಒಂದೇ ತಿಂಗಳಿನಲ್ಲಿ 80 ಲಕ್ಷ ವಾಹನಗಳಲ್ಲಿ ಅಳವಡಿಕೆ..!

ಫಾಸ್ಟ್‌ಟ್ಯಾಗ್‍‍‍ನಿಂದಾಗುವ ಪ್ರಯೋಜನಗಳು

*ಸುಲಭ ಪಾವತಿ - ಟೋಲ್ ಪ್ಲಾಜಾವನ್ನು ದಾಟುವಾಗ ನೀವು ಹಣವನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ.

*ಫಾಸ್ಟ್‌ಟ್ಯಾಗ್‍ ವಾಹನಗಳಲ್ಲಿದ್ದರೆ ವಾಹನಗಳನ್ನು ನಿಲ್ಲಿಸುವ ಅಗತ್ಯವಿಲ್ಲ.

*ಆನ್‌ಲೈನ್ ರೀಚಾರ್ಜ್ - ಡೆಬಿಟ್ / ಕ್ರೆಡಿಟ್ ಮತ್ತು ನೆಟ್ ಬ್ಯಾಂಕಿಂಗ್ ಬಳಸಿ ಫಾಸ್ಟ್‌ಟ್ಯಾಗ್‍ ಗ್ರಾಹಕರು ರೀಚಾರ್ಜ್ ಮಾಡಬಹುದು.

*ಎಲ್ಲಾ ಟೋಲ್ ವಹಿವಾಟುಗಳಿಗೆ ಎಸ್‍ಎಂಎಸ್ ಸಂದೇಶ ಬರಲಿದೆ.

*ಟೋಲ್ ಪಾವತಿಯ ಮೇಲೆ ಗ್ರಾಹಕರು 10%ನಷ್ಟು ರಿಯಾಯಿತಿ ಪಡೆಯಲಿದ್ದಾರೆ.

*ವೆಬ್ ಪೋರ್ಟಲ್ ಸೌಲಭ್ಯವು ವಿಶೇಷವಾಗಿ ಫಾಸ್ಟ್‌ಟ್ಯಾಗ್‍‍‍ಗಳಿವೆ ಲಭ್ಯವಿರಲಿದೆ.

*ಫಾಸ್ಟ್‌ಟ್ಯಾಗ್‍‍‍ನಿಂದಾಗಿ ಟೋಲ್‌ನಲ್ಲಿ ದಟ್ಟಣೆ ಕಡಿಮೆಯಾಗಲಿದೆ.

Most Read Articles

Kannada
English summary
NHAI issued more than 80 lakh Fastags in November. Read in Kannada.
Story first published: Friday, December 6, 2019, 14:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X