ನಿಸ್ಸಾನ್ ಕಿಕ್ಸ್, ದಟ್ಸನ್ ಗೋ ಮತ್ತು ಗೋ ಪ್ಲಸ್‌ನಲ್ಲಿ ಶೀಘ್ರವೇ ಎಎಂಟಿ ವರ್ಷನ್

ಹೊಸ ಕಾರು ಖರೀದಿದಾರರು ಇತ್ತೀಚೆಗೆ ಮ್ಯಾನುವಲ್‌ಗಿಂತ ಆಟೋಮ್ಯಾಟಿಕ್ ವರ್ಷನ್‌ಗಳ ಖರೀದಿ ಮೇಲೆ ಹೆಚ್ಚಿನ ಒತ್ತುನೀಡುತ್ತಿದ್ದು, ಬದಲಾದ ಮಾರುಕಟ್ಟೆ ಸನ್ನಿವೇಶದಲ್ಲಿ ನಿಸ್ಸಾನ್ ಸಂಸ್ಥೆಯು ತನ್ನ ಕಾರ್ ಬ್ರಾಂಡ್‌ಗಳಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ತರಲು ಸಿದ್ದತೆ ನಡೆಸಿದೆ.

ನಿಸ್ಸಾನ್ ಕಿಕ್ಸ್, ದಟ್ಸನ್ ಗೋ ಮತ್ತು ಗೋ ಪ್ಲಸ್‌ನಲ್ಲಿ ಶೀಘ್ರವೇ ಎಎಂಟಿ ವರ್ಷನ್

ವಾಣಿಜ್ಯ ಬಳಕೆಯ ಕಾರು ಮಾದರಿಗಳನ್ನು ಹೊರತುಪಡಿಸಿ ವ್ಯಯಕ್ತಿಕ ಕಾರು ಬಳಕೆದಾರರು ಹೆಚ್ಚಿನ ಮಟ್ಟದಲ್ಲಿ ಆಟೋಮ್ಯಾಟಿಕ್ ಆವೃತ್ತಿಗಳನ್ನೇ ಹೆಚ್ಚು ಖರೀದಿ ಮಾಡುತ್ತಿದ್ದು, ನಿಸ್ಸಾನ್ ಸಂಸ್ಥೆಯು ತನ್ನ ಪ್ರಮುಖ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ಕಿಕ್ಸ್ ಹಾಗೂ ದಟ್ಸನ್ ಗೋ ಮತ್ತು ಗೋ ಪ್ಲಸ್ ಕಾರುಗಳಲ್ಲೂ ಇದೇ ಮೊದಲ ಬಾರಿಗೆ ಎಎಂಟಿ(ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್‌ಮಿಷನ್) ವರ್ಷನ್‌ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

ನಿಸ್ಸಾನ್ ಕಿಕ್ಸ್, ದಟ್ಸನ್ ಗೋ ಮತ್ತು ಗೋ ಪ್ಲಸ್‌ನಲ್ಲಿ ಶೀಘ್ರವೇ ಎಎಂಟಿ ವರ್ಷನ್

ದೈನಿಕ್ ಭಾಸ್ಕರ್ ಸುದ್ದಿಸಂಸ್ಥೆಯ ಸಂದರ್ಶನ ಮಾತನಾಡಿರುವ ನಿಸ್ಸಾನ್ ಇಂಡಿಯಾ ಕಾರು ಮಾರಾಟ ವಿಭಾಗದ ಮುಖ್ಯಸ್ಥ ಹರ್ದಿಪ್ ಸಿಂಗ್ ಬ್ರಾರ್ ಅವರು, ಭಾರತೀಯ ಮಾರುಕಟ್ಟೆಗಾಗಿ ಹಲವು ಹೊಸ ಯೋಜನೆಗಳನ್ನು ರೂಪಿಸಲಾಗಿದ್ದು, ಗ್ರಾಹಕರ ಬೇಡಿಕೆಯ ಅನುಸಾರ ಎಎಂಟಿ ಮಾದರಿಗಳ ಬಿಡುಗಡೆಗಾಗಿ ಸಿದ್ದತೆ ನಡೆಸಿರುವುದಾಗಿ ಮಾಹಿತಿ ನೀಡಿದ್ದಾರೆ.

ನಿಸ್ಸಾನ್ ಕಿಕ್ಸ್, ದಟ್ಸನ್ ಗೋ ಮತ್ತು ಗೋ ಪ್ಲಸ್‌ನಲ್ಲಿ ಶೀಘ್ರವೇ ಎಎಂಟಿ ವರ್ಷನ್

ಹೊಸ ಎಎಂಟಿ ವರ್ಷನ್ ಮಾದರಿಗಳು ಮುಂಬರುವ ದೀಪಾವಳಿ ಹೊತ್ತಿಗೆ ಮಾರುಕಟ್ಟೆಯಲ್ಲಿ ಖರೀದಿ ಲಭ್ಯವಾಗುವ ಸಾಧ್ಯತೆಗಳಿದ್ದು, ನಗರಪ್ರದೇಶಗಳಲ್ಲಿನ ವ್ಯಯಕ್ತಿಕ ಕಾರು ಖರೀದಿದಾರರಿಗೆ ಇದು ಹೊಸ ಆಯ್ಕೆಯನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ನಿಸ್ಸಾನ್ ಕಿಕ್ಸ್, ದಟ್ಸನ್ ಗೋ ಮತ್ತು ಗೋ ಪ್ಲಸ್‌ನಲ್ಲಿ ಶೀಘ್ರವೇ ಎಎಂಟಿ ವರ್ಷನ್

ಸದ್ಯ ಮಾರುಕಟ್ಟೆಯಲ್ಲಿರುವ ನಿಸ್ಸಾನ್ ಕಿಕ್ಸ್, ದಟ್ಸನ್ ಗೋ, ಗೋ ಪ್ಲಸ್ ಕಾರುಗಳು 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದ್ದು, ಇದೀಗ ಗ್ರಾಹಕರ ಬೇಡಿಕೆಯೆಂತೆ 5-ಸ್ಪೀಡ್ ಆಟೋಮ್ಯಾಟಿಕ್ ಆವೃತ್ತಿಯನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಮ್ಯಾನುವಲ್ ಕಾರುಗಳಿಂತ ಆಟೋಮ್ಯಾಟಿಕ್ ಆವೃತ್ತಿಗಳು ಬೆಲೆಯಲ್ಲಿ ತುಸು ದುಬಾರಿ ಎನ್ನಿಸಲಿದ್ದು, ಎಕ್ಸ್‌ಶೋರೂಂ ರೂ. 20 ಸಾವಿರದಿಂದ ರೂ.60 ಸಾವಿರ ಹೆಚ್ಚುವರಿ ಬೆಲೆ ಹೊಂದಲಿವೆ.

ನಿಸ್ಸಾನ್ ಕಿಕ್ಸ್, ದಟ್ಸನ್ ಗೋ ಮತ್ತು ಗೋ ಪ್ಲಸ್‌ನಲ್ಲಿ ಶೀಘ್ರವೇ ಎಎಂಟಿ ವರ್ಷನ್

ಇನ್ನು ನಿಸ್ಸಾನ್ ಸಂಸ್ಥೆಯು ಟಾಟಾ ಹ್ಯಾರಿಯರ್ ಎಸ್‍ಯುವಿ ಕಾರುಗಳಿಗೆ ಪೈಪೋಟಿಯಾಗಿ ಕಿಕ್ಸ್ ಡೀಸೆಲ್ ಮಾದರಿಯಲ್ಲಿ ಎಕ್ಸ್ಇ ಎನ್ನುವ ಹೊಸ ವೆರಿಯೆಂಟ್‌ವೊಂದನ್ನು ಪರಿಚಯಿಸಿದ್ದು, ಹೊಸ ಕಾರು ಎಂಟ್ರಿ ಲೆವಲ್ ಮಾದರಿಯಾಗಿ ಮಾರಾಟಗೊಳ್ಳಲಿದೆ.

ನಿಸ್ಸಾನ್ ಕಿಕ್ಸ್, ದಟ್ಸನ್ ಗೋ ಮತ್ತು ಗೋ ಪ್ಲಸ್‌ನಲ್ಲಿ ಶೀಘ್ರವೇ ಎಎಂಟಿ ವರ್ಷನ್

ಈ ಹಿಂದೆ ಎಕ್ಸ್ಎಲ್, ಎಕ್ಸ್‌ವಿ, ಮತ್ತು ಎಕ್ಸ್‌ವಿ ಪ್ರೀ ಎಂಬ ಡೀಸೆಲ್ ವೆರಿಯೆಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿದ್ದ ಕಿಕ್ಸ್ ಕಾರು ಇದೀಗ ಎಂಟ್ರಿ ಲೆವೆಲ್‌ನಲ್ಲಿ 'ಎಕ್ಸ್ಇ' ಮಾದರಿಯು ಬಿಡುಗಡೆಯಾಗಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.9.89 ಲಕ್ಷ ಬೆಲೆ ಪಡೆದುಕೊಂಡಿದೆ.

MOST READ: ಹೋಂಡಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ..!

ನಿಸ್ಸಾನ್ ಕಿಕ್ಸ್, ದಟ್ಸನ್ ಗೋ ಮತ್ತು ಗೋ ಪ್ಲಸ್‌ನಲ್ಲಿ ಶೀಘ್ರವೇ ಎಎಂಟಿ ವರ್ಷನ್

ಹೀಗಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿ ಕಿಕ್ಸ್ ಎಸ್‌ಯುವಿ ಮಾದರಿಯು ಒಟ್ಟು ನಾಲ್ಕು ಡೀಸೆಲ್ ಆವೃತ್ತಿಗಳಲ್ಲಿ ಮತ್ತು 4 ಪೆಟ್ರೋಲ್ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದ್ದು, 1.5-ಲೀಟರ್ ಹೆಚ್4ಕೆ ಪೆಟ್ರೋಲ್ ಎಂಜಿನ್ ಹಾಗೂ 1.5-ಲೀಟರ್ ಕೆ9ಕೆ ಡಿಸೇಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ನಿಸ್ಸಾನ್ ಕಿಕ್ಸ್, ದಟ್ಸನ್ ಗೋ ಮತ್ತು ಗೋ ಪ್ಲಸ್‌ನಲ್ಲಿ ಶೀಘ್ರವೇ ಎಎಂಟಿ ವರ್ಷನ್

ಪೆಟ್ರೋಲ್ ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು ಡಿಸೇಲ್ ಮಾದರಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೋಡಿಸಲಾಗಿದ್ದು, ಮುಂಬರುವ ದೀಪಾವಳಿ ಹೊತ್ತಿಗೆ ಕಿಕ್ಸ್, ದಟ್ಸನ್ ಗೋ ಮತ್ತು ಗೋ ಪ್ಲಸ್ ಕಾರುಗಳು ಆಟೋಮ್ಯಾಟಿಕ್ ವರ್ಷನ್‌ಗಳಲ್ಲಿ ಉನ್ನತಿಕರಣಗೊಳ್ಳಲಿವೆ.

MOST READ: ರೋಲ್ಸ್ ರಾಯ್ಸ್ ಕಾರು ಖರೀದಿಗಾಗಿ ಹತ್ತಾರು ಕಠಿಣ ಪರೀಕ್ಷೆಗಳನ್ನು ಎದುರಿಸಿದ್ರು ಎಂಟಿಬಿ..!

ನಿಸ್ಸಾನ್ ಕಿಕ್ಸ್, ದಟ್ಸನ್ ಗೋ ಮತ್ತು ಗೋ ಪ್ಲಸ್‌ನಲ್ಲಿ ಶೀಘ್ರವೇ ಎಎಂಟಿ ವರ್ಷನ್

ಇದಲ್ಲದೇ ಕಂಪ್ಯಾಕ್ಟ್ ಎಸ್‍ಯುವಿ ಕಾರುಗಳಲ್ಲಿ ವಿಶೇಷವೆನ್ನಿಸುವ ಹಾಗೆ ಈ ಕಾರು ಹಲವಾರು ಹೊಸ ವೈಶಿಷ್ಟ್ಯತೆಗಳನ್ನು ಮತ್ತು ಸೆಗ್ಮೆಂಟ್ ಫರ್ಸ್ಟ್ ಫೀಚರ್ಸ್ ಅನ್ನು ಪಡೆದುಕೊಂಡಿದ್ದು, ಈ ಕಾರಿನ ಪೆಟ್ರೋಲ್ ಮಾದರಿಗಳು ಒಂದು ಲೀಟರ್‍‍ಗೆ 14.23 ಕಿ.ಮೀ ಮೈಲೇಜ್ ನೀಡಿದ್ದಲ್ಲಿ, ಡೀಸೆಲ್ ಎಂಜಿನ್ ಕಾರುಗಳು ಪ್ರತೀ ಲೀಟರ್‍‍ಗೆ 20.45 ಕಿ.ಮೀ ಮೈಲೇಜ್ ನೀಡಬಲ್ಲವು.

Source: Dainik Bhaskar

Most Read Articles

Kannada
English summary
Nissan Kicks & Datsun Go And Go Plus Models To Get Automatic Transmissions. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X