ಎಸ್‌ಯುವಿ ವಿಭಾಗದಲ್ಲಿ ಹೊಸ ನಿರೀಕ್ಷೆಯೊಂದಿಗೆ ಬಿಡುಗಡೆಯಾದ ನಿಸ್ಸಾನ್ ಕಿಕ್ಸ್

ದೇಶಿಯ ಮಾರುಕಟ್ಟೆಯಲ್ಲಿ ಎಸ್‌ಯುವಿ(ಸ್ಪೋರ್ಟ್ ಯುಟಿಲಿಟಿ ವೆಹಿಕಲ್) ಮಾದರಿಗಳಿಗೆ ಉತ್ತಮ ಬೇಡಿಕೆ ಕಂಡುಬರುತ್ತಿದ್ದು, ಈ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸಿರುವ ನಿಸ್ಸಾನ್ ಇಂಡಿಯಾ ಸಹ ಭಾರೀ ಪ್ರಮಾಣದಲ್ಲಿ ಕಾರು ಪ್ರಿಯರನ್ನು ಸೆಳೆಯುವ ಉದ್ದೇಶದೊಂದಿಗೆ ಕಿಕ್ಸ್ ಎನ್ನುವ ಹೊಸ ಕಾರು ಉತ್ಪನ್ನವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಎಸ್‌ಯುವಿ ವಿಭಾಗದಲ್ಲಿ ಹೊಸ ನೀರಿಕ್ಷೆಯೊಂದಿಗೆ ಬಿಡುಗಡೆಯಾದ ನಿಸ್ಸಾನ್ ಕಿಕ್ಸ್

ಜಾಗತಿಕ ಮಾರುಕಟ್ಟೆಗಳಲ್ಲಿ 2017ರ ಅವಧಿಯ ಬೆಸ್ಟ್ ಎಸ್‌ಯುವಿ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಕಿಕ್ಸ್ ಕಾರು ಇದೀಗ ಭಾರತದಲ್ಲೂ ಕಮಾಲ್ ಮಾಡಲು ಬಿಡುಗಡೆಯಾಗಿದ್ದು, ಆಕರ್ಷಕ ನೋಟ, ಗಮನಸೆಳೆಯುವ ಎಂಜಿನ್ ಪರ್ಫಾಮೆನ್ಸ್ ಮತ್ತು ಕೈಗೆಟುಕುವ ಬೆಲೆಗಳೇ ಕಿಕ್ಸ್ ಹೊಸ ಕಾರಿನ ಪ್ರಮುಖ ಹೈಲೆಟ್ಸ್ ಎಂದ್ರೆ ತಪ್ಪಾಗುವುದಿಲ್ಲ.

ಎಸ್‌ಯುವಿ ವಿಭಾಗದಲ್ಲಿ ಹೊಸ ನೀರಿಕ್ಷೆಯೊಂದಿಗೆ ಬಿಡುಗಡೆಯಾದ ನಿಸ್ಸಾನ್ ಕಿಕ್ಸ್

2016ರಲ್ಲೇ ಬ್ರೆಜಿಲ್ ಸೇರಿದಂತೆ ಯುರೋಪಿನ ಪ್ರಮುಖ ಮಾರುಕಟ್ಟೆಯಲ್ಲಿ ಕಿಕ್ಸ್ ಕಾರು ಬಿಡುಗಡೆಗೊಂಡಿದ್ದು, ವಿಶ್ವದರ್ಜೆಯ ಡಿಸೈನ್ ಲಾಂಗ್ವೆಜ್ ವಿನ್ಯಾಸವಾದ ಬಿ0 ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿ ಹೊಸ ಕಾರನ್ನು ಅಭಿವೃದ್ಧಿಗೊಳಿಸಲಾಗಿದೆ.

ಎಸ್‌ಯುವಿ ವಿಭಾಗದಲ್ಲಿ ಹೊಸ ನೀರಿಕ್ಷೆಯೊಂದಿಗೆ ಬಿಡುಗಡೆಯಾದ ನಿಸ್ಸಾನ್ ಕಿಕ್ಸ್

ಹೀಗಾಗಿ ಜಾಗತಿಕವಾಗಿ ಯಶಸ್ವಿಯಾಗಿರುವ ಕಿಕ್ಸ್ ಕಾರು ಭಾರತದಲ್ಲೂ ಕೊರಿಯಾ ಬ್ರಾಂಡ್‌ ಹ್ಯುಂಡೈ ಕ್ರೆಟಾ ಕಾರುಗಳಿಗೆ ಭಾರೀ ಪೈಪೋಟಿ ನೀಡುವ ನಿರೀಕ್ಷೆಯೊಂದಿಗೆ ಬಿಡುಗಡೆ ಮಾಡಲಾಗಿದ್ದು, ನಿಸ್ಸಾನ್ ಟೆರಾನೋ ಮತ್ತು ರೆನಾಲ್ಟ್ ಡಸ್ಟರ್ ಕಾರುಗಳ ಶೈಲಿ ಆಧರಿಸಿ ಹೊಸ ಕಾರನ್ನು ನಿರ್ಮಾಣ ಮಾಡಲಾಗಿದೆ.

ಎಸ್‌ಯುವಿ ವಿಭಾಗದಲ್ಲಿ ಹೊಸ ನೀರಿಕ್ಷೆಯೊಂದಿಗೆ ಬಿಡುಗಡೆಯಾದ ನಿಸ್ಸಾನ್ ಕಿಕ್ಸ್

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಿಕ್ಸ್ ಕಾರುಗಳನ್ನು ಪೆಟ್ರೋಲ್ ವರ್ಷನ್‌ನಲ್ಲಿ ಎರಡು ಮತ್ತು ಡಿಸೇಲ್ ಆವೃತ್ತಿಯಲ್ಲಿ ನಾಲ್ಕು ಆವೃತ್ತಿಗಳನ್ನು ಬಿಡುಗಡೆ ಮಾಡಲಾಗಿದ್ದು, ಆರಂಭಿಕ ಕಿಕ್ಸ್ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.9.55 ಲಕ್ಷ ಬೆಲೆ ಹೊಂದಿರುತ್ತೆ.

ಎಸ್‌ಯುವಿ ವಿಭಾಗದಲ್ಲಿ ಹೊಸ ನೀರಿಕ್ಷೆಯೊಂದಿಗೆ ಬಿಡುಗಡೆಯಾದ ನಿಸ್ಸಾನ್ ಕಿಕ್ಸ್

ಕಿಕ್ಸ್ ಕಾರಿನ ವೆರಿಯೆಂಟ್‌ಗಳು ಮತ್ತು ಬೆಲೆಗಳು

ಬೆಲೆಗಳು (ಎಕ್ಸ್‌ಶೋರೂಂ ಪ್ರಕಾರ) ಪೆಟ್ರೋಲ್ ವರ್ಷನ್ ಡೀಸೆಲ್ ವರ್ಷನ್
ಎಕ್ಸ್ಎಲ್ ರೂ. 9,55,000 ರೂ. 10,85,000

ಎಕ್ಸ್‌ವಿ ರೂ. 10,95,000 ರೂ. 12,49,000

ಎಕ್ಸ್‌ವಿ ಪ್ರೀಮಿಯಂ ಲಭ್ಯವಿಲ್ಲ ರೂ. 13,65,000

ಎಕ್ಸ್‌ವಿ ಪ್ರೀಮಿಯಂ ಪ್ಲಸ್ ಲಭ್ಯವಿಲ್ಲ ರೂ. 14,65,000

ಎಸ್‌ಯುವಿ ವಿಭಾಗದಲ್ಲಿ ಹೊಸ ನೀರಿಕ್ಷೆಯೊಂದಿಗೆ ಬಿಡುಗಡೆಯಾದ ನಿಸ್ಸಾನ್ ಕಿಕ್ಸ್

ಕಿಕ್ಸ್ ಕಾರಿನ ಡಿಸೈನ್

GRAPHENE ಡಿಸೈನ್ ತಂತ್ರಜ್ಞಾನದೊಂದಿಗೆ ಸಿದ್ದವಾಗಿರುವ ಹೊರ ವಿನ್ಯಾಸಗಳು ಕಿಕ್ಸ್‌ಗೆ ಪ್ರೀಮಿಯಂ ವೈಶಿಷ್ಟ್ಯತೆಯು ಮೆರಗು ತಂದಿದ್ದು, ವಿ ಮೊಷನ್ ಗ್ರಿಲ್, ಎಲ್‌ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಕೆಳಭಾಗದಲ್ಲಿ ಅಳವಡಿಸಲಾಗಿರುವ ಫಾಗ್ ಲ್ಯಾಂಪ್, ಸಿಲ್ವರ್ ಸ್ಕೀಡ್ ಪ್ಲೇಟ್ ಮತ್ತು ಬಲಿಷ್ಠವಾಗಿರುವ ಫ್ರಂಟ್ ಪ್ರೋಫೈಲ್ ನೀಡಲಾಗಿದೆ.

ಎಸ್‌ಯುವಿ ವಿಭಾಗದಲ್ಲಿ ಹೊಸ ನೀರಿಕ್ಷೆಯೊಂದಿಗೆ ಬಿಡುಗಡೆಯಾದ ನಿಸ್ಸಾನ್ ಕಿಕ್ಸ್

ಕಿಕ್ಸ್ ಕಾರುಗಳಿಗೆ ಮತ್ತಷ್ಟು ಮೆರಗು ತರುವ ಉದ್ದೇಶದಿಂದ ಕಾರಿನ ಎಡ್ಜ್‌ಗಳಲ್ಲಿ ಶಾರ್ಪ್ ಡಿಸೈನ್ ಬಳಕೆ ಮಾಡಲಾಗಿದ್ದು, ರೂಫ್ ರೈಲ್ಸ್ ಹಾಗೂ ಕಾರಿನ ಎರಡು ಬದಿಗಳಲ್ಲೂ ನೀಡಲಾಗಿರುವ ಕ್ರೋಮ್ ಸೌಲಭ್ಯವು ಕಾರಿನ ಸೈಡ್ ಪ್ರೋಫೈಲ್‌ಗೆ ಲುಕ್ ನೀಡಿದೆ.

ಎಸ್‌ಯುವಿ ವಿಭಾಗದಲ್ಲಿ ಹೊಸ ನೀರಿಕ್ಷೆಯೊಂದಿಗೆ ಬಿಡುಗಡೆಯಾದ ನಿಸ್ಸಾನ್ ಕಿಕ್ಸ್

ಇನ್ನು ಕಾರಿನಲ್ಲಿ 17-ಇಂಚಿನ ಫೈವ್ ಸ್ಪೋಕ್ ಅಲಾಯ್ ಚಕ್ರಗಳ ಜೋಡಣೆ, 210 ಎಂಎಂ ನಷ್ಟು ಗ್ರೌಂಡ್ ಕ್ಲಿಯೆರೆನ್ಸ್, ಬೂಮೆರ್ಗ್ ಟೈಲ್ ಲ್ಯಾಂಪ್ಸ್, ಗಮನ ಸೆಳೆಯುವ ರಿಯರ್ ಬಂಪರ್ ಸೇರಿದಂತೆ ಹಲವು ಸುಧಾರಿತ ಸೌಲಭ್ಯಗಳು ಕಿಕ್ಸ್ ಕಾರಿನಲ್ಲಿವೆ.

ಎಸ್‌ಯುವಿ ವಿಭಾಗದಲ್ಲಿ ಹೊಸ ನೀರಿಕ್ಷೆಯೊಂದಿಗೆ ಬಿಡುಗಡೆಯಾದ ನಿಸ್ಸಾನ್ ಕಿಕ್ಸ್

ಕಾರಿನ ಒಳವಿನ್ಯಾಸ

ಗ್ಲಿಡಿಂಗ್ ವಿಂಗ್ ಡ್ಯಾಶ್‌ಬೋರ್ಡ್ ಹೊಂದಿರುವ ಕಿಕ್ಸ್ ಕಾರಿನಲ್ಲಿ ಒಳಾಂಗಣ ವಿಸ್ತಿರ್ಣವು ಚಿಕ್ಕದು ಎನಿಸಿದರೂ ಆಧುನಿಕ ಕಾರುಗಳಲ್ಲಿ ಇರಬೇಕಾದ ಬಹುತೇಕ ಸೌಲಭ್ಯವು ಇದರಲ್ಲಿವೆ. ಬ್ಲ್ಯಾಕ್ ಪ್ಲಾಸ್ಟಿಕ್ ಪ್ಯಾನೆಲ್, ಬ್ರೌನ್ ಲೆದರ್‌ನಿಂದ ಸಿದ್ದವಾದ ಡ್ಯಾಶ್‌ಬೋರ್ಡ್, ಲೆದರ್ ಹೊದಿಕೆಯುಳ್ಳ ಸ್ಟೀರಿಂಗ್ ವೀಲ್ಹ್ ಹೊಂದಿರುವುದು ಕಾರು ಚಾಲನೆಯಲ್ಲಿ ಐಷಾರಾಮಿ ಅನುಭವ ನೀಡುತ್ತೆ.

MOST READ: ನ್ಯಾನೋ ಬರುವುದಕ್ಕೂ ಮುನ್ನ ಬಂದು ಹೋದ 'ಮೀರಾ' ಕಾರಿನ ಕಥೆ ಗೊತ್ತಾ?

ಎಸ್‌ಯುವಿ ವಿಭಾಗದಲ್ಲಿ ಹೊಸ ನೀರಿಕ್ಷೆಯೊಂದಿಗೆ ಬಿಡುಗಡೆಯಾದ ನಿಸ್ಸಾನ್ ಕಿಕ್ಸ್

ಅದರ ಹೊರತಾಗಿ ಮತ್ತಷ್ಟು ಹೊಸ ಸೌಲಭ್ಯವನ್ನು ಬಯಸುವ ಎಸ್‌ಯುವಿ ಪ್ರಿಯರಿಗೆ ಕಿಕ್ಸ್ ತುಸು ನಿರಾಶೆ ಮೂಡಿಸಬಹುದಾಗಿದ್ದು, ಬೆಲೆಗಳನ್ನು ಕಡಿಮೆಗೊಳಿಸುವ ಉದ್ದೇಶದಿಂದ ಇರುವುದರಲ್ಲೇ ಬೆಸ್ಟ್ ಎನ್ನುವ ರೀತಿಯಲ್ಲಿ ಕಿಕ್ಸ್ ಕಾರು ಹೊರತಂದಿರುವ ನಿಸ್ಸಾನ್ ಪ್ರಯತ್ನವನ್ನು ಮೆಚ್ಚಲೇಬೇಕು.

ಎಸ್‌ಯುವಿ ವಿಭಾಗದಲ್ಲಿ ಹೊಸ ನೀರಿಕ್ಷೆಯೊಂದಿಗೆ ಬಿಡುಗಡೆಯಾದ ನಿಸ್ಸಾನ್ ಕಿಕ್ಸ್

ಇದಕ್ಕೆ ಉದಾಹರಣೆ ಅಂದ್ರೆ, ವಿನೂತನ ಕಾರಿನಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋ‌ಟೈನ್‌ಮೆಂಟ್ ಹಾಗೂ ಕಾರಿನ ಸುತ್ತ ನೋಡಬಹುದಾದ 360 ಡಿಗ್ರಿ ವಿವ್ಯೂ ಮಾನಿಟರ್ ವ್ಯವಸ್ಥೆಯಿದ್ದು, ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾರಾಟವಾಗುತ್ತಿರುವ ಇತರೆ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಲ್ಲೇ ಈ ಕಾರು ವಿಶೇಷ ಎನ್ನಿಸಲಿದೆ.

ಎಸ್‌ಯುವಿ ವಿಭಾಗದಲ್ಲಿ ಹೊಸ ನೀರಿಕ್ಷೆಯೊಂದಿಗೆ ಬಿಡುಗಡೆಯಾದ ನಿಸ್ಸಾನ್ ಕಿಕ್ಸ್

ಇದಲ್ಲದೇ ನಿಸ್ಸಾನ್ ಮುಂಬರುವ ಮತ್ತೊಂದು ಕಾರು ಮಾದರಿಯಾದ ಅಲ್ಟಿಮಾ ಸೆಡಾನ್ ಕಾರಿನಿಂದಲೂ ಕೆಲವು ಫೀಚರ್ಸ್‌ಗಳನ್ನು ಕಿಕ್ಸ್ ಕಾರಿನಲ್ಲಿ ಎರವಲು ಪಡೆದುಕೊಳ್ಳಲಾಗಿದ್ದು, ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ, ಧ್ವನಿ ಗ್ರಹಿಸಿ ಕಾರ್ಯನಿರ್ವಹಿಸುವ "Hey Siri" ಮತ್ತು "Okay Google" ಆ್ಯಪ್ ಸೌಲಭ್ಯವಿದೆ.

MOST READ: ನ್ಯಾನೋ ಬರುವುದಕ್ಕೂ ಮುನ್ನ ಬಂದು ಹೋದ 'ಮೀರಾ' ಕಾರಿನ ಕಥೆ ಗೊತ್ತಾ?

ಎಸ್‌ಯುವಿ ವಿಭಾಗದಲ್ಲಿ ಹೊಸ ನೀರಿಕ್ಷೆಯೊಂದಿಗೆ ಬಿಡುಗಡೆಯಾದ ನಿಸ್ಸಾನ್ ಕಿಕ್ಸ್

ಜೊತೆಗೆ ನಿಸ್ಸಾನ್ ಕನೆಕ್ಟ್ ಆ್ಯಪ್ ಸೌಲಭ್ಯವು ಸಹ ವಿವಿಧ ಕಾರ್ಯಗಳಿಗೆ ಬಳಕೆಯಾಗಲಿದ್ದು, ಚಾಲಕನಿಗೆ ಸರ್ವಿಸ್ ಬುಕ್ಕಿಂಗ್ ರಿಮೆಂಡರ್, ಕಾರಿನ ಆರೋಗ್ಯ(ಎಂಜಿನ್, ಬ್ಯಾಟರಿ, ಬ್ರೇಕಿಂಗ್) ಮತ್ತು ಡೋರ್ ಲಾಕ್/ಅನ್ ಲಾಕ್‌ಗೆ ಸಂಬಂಧಿಸಿದಂತೆ ಸಮಸ್ಯೆಗಳ ಕುರಿತಾಗಿ ಸಮಯಕ್ಕೆ ಸರಿಯಾಗಿ ಎಚ್ಚರಿಕೆ ನೀಡುತ್ತೆ.

ಎಸ್‌ಯುವಿ ವಿಭಾಗದಲ್ಲಿ ಹೊಸ ನೀರಿಕ್ಷೆಯೊಂದಿಗೆ ಬಿಡುಗಡೆಯಾದ ನಿಸ್ಸಾನ್ ಕಿಕ್ಸ್

ಕಾರಿನ ಅಳತೆ ಮತ್ತು ಆಸನ ಸೌಲಭ್ಯ

ಸಬ್ ಕಂಪ್ಯಾಕ್ಟ್ ಎಸ್‌ಯುವಿ ವೈಶಿಷ್ಟ್ಯತೆಯ ಕಿಕ್ಸ್ ಕಾರು ಉತ್ತಮ ಉದ್ದಳತೆ ಹೊಂದಿದ್ದು, 4,384ಎಂಎಂ ಉದ್ದ, 1,813ಎಂಎಂ ಅಗಲವಾಗಿದೆ. ಜೊತೆಗೆ 2,673 ಎಂಎಂ ಎತ್ತರವಾಗಿದ್ದು, ಐದು ಜನ ಆರಾಮದಾಯಕವಾಗಿ ಪ್ರಯಾಣ ಮಾಡಬಹುದಾಗಿದೆ.

ಎಸ್‌ಯುವಿ ವಿಭಾಗದಲ್ಲಿ ಹೊಸ ನೀರಿಕ್ಷೆಯೊಂದಿಗೆ ಬಿಡುಗಡೆಯಾದ ನಿಸ್ಸಾನ್ ಕಿಕ್ಸ್

ಇನ್ನುಳಿದಂತೆ ಆರಾಮದಾಯಕ ಪ್ರಯಾಣಕ್ಕೆ ಸಹಕಾರಿಯಾಗುವ ಅಂಡ್ರಾಯಿಡ್ ಆಟೋ ಪ್ಲೇ, ಆ್ಯಪಲ್ ಕಾರ್ ಪ್ಲೇ, ಯುಎಸ್‌ಬಿ ಪೋರ್ಟ್, ಚಾಲಕ ಮತ್ತು ಮುಂಭಾಗದ ಪ್ರಯಾಣಿಕರಿಗೆ ಆರ್ಮ್ ರೆಸ್ಟ್, ಹಿಂಬದಿಯಲ್ಲಿ ಎಸಿ ವೆಂಟ್ಸ್, ಸ್ಪೀಡ್ ಸೆನ್ಸಾರ್ ಡೋರ್ ಲಾಕ್/ಅನ್‌ಲಾಕ್ ಸೌಲಭ್ಯ, ರಿಯರ್ ಪಾರ್ಕಿಂಗ್ ವ್ಯವಸ್ಥೆಯಿರಲಿದೆ.

ಎಸ್‌ಯುವಿ ವಿಭಾಗದಲ್ಲಿ ಹೊಸ ನೀರಿಕ್ಷೆಯೊಂದಿಗೆ ಬಿಡುಗಡೆಯಾದ ನಿಸ್ಸಾನ್ ಕಿಕ್ಸ್

ಎಂಜಿನ್ ಸಾಮರ್ಥ್ಯ

ಹೊಸ ಕಿಕ್ಸ್ ಮಾದರಿಯು 1.5-ಲೀಟರ್ ಹೆಚ್4ಕೆ ಪೆಟ್ರೋಲ್ ಎಂಜಿನ್ ಹಾಗೂ 1.5-ಲೀಟರ್ ಕೆ9ಕೆ ಡಿಸೇಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಪೆಟ್ರೋಲ್ ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು ಡಿಸೇಲ್ ಮಾದರಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೋಡಿಸಲಾಗಿದೆ.

ಎಸ್‌ಯುವಿ ವಿಭಾಗದಲ್ಲಿ ಹೊಸ ನೀರಿಕ್ಷೆಯೊಂದಿಗೆ ಬಿಡುಗಡೆಯಾದ ನಿಸ್ಸಾನ್ ಕಿಕ್ಸ್

ಈ ಪೆಟ್ರೋಲ್ ಮಾದರಿಯು 104-ಬಿಎಚ್‌ಪಿ, 142-ಎನ್ಎಂ ಟಾರ್ಕ್ ಉತ್ಪಾದಿಸಿದ್ದಲ್ಲಿ ಡೀಸೆಲ್ ಮಾದರಿಯು 108-ಬಿಎಚ್‌ಪಿ, 240-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಉತ್ತಮ ಇಂಧನ ದಕ್ಷತೆಯನ್ನು ಹೊಂದಿವೆ.

ಎಸ್‌ಯುವಿ ವಿಭಾಗದಲ್ಲಿ ಹೊಸ ನೀರಿಕ್ಷೆಯೊಂದಿಗೆ ಬಿಡುಗಡೆಯಾದ ನಿಸ್ಸಾನ್ ಕಿಕ್ಸ್

ಸುರಕ್ಷಾ ಸೌಲಭ್ಯಗಳು

ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ವೆಹಿಕಲ್ ಡೈನಾಮಿಕ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಮೂರು ಏರ್‌ಬ್ಯಾಗ್, ಎಬಿಎಸ್, ಇಕೋ ಮೂಡ್ ಮತ್ತು ಕ್ರೂಸ್ ಕಂಟ್ರೋಲ್ ಸೌಲಭ್ಯವಿದೆ.

ಎಸ್‌ಯುವಿ ವಿಭಾಗದಲ್ಲಿ ಹೊಸ ನೀರಿಕ್ಷೆಯೊಂದಿಗೆ ಬಿಡುಗಡೆಯಾದ ನಿಸ್ಸಾನ್ ಕಿಕ್ಸ್

ಕಾರಿನ ಮೈಲೇಜ್ ಮತ್ತು ಬಣ್ಣದ ಆಯ್ಕೆ

ಹೊಸ ಕಿಕ್ಸ್ ಕಾರುಗಳು ಪ್ರತಿ ಲೀಟರ್ ಪೆಟ್ರೋಲ್‌ಗೆ 13 ರಿಂದ 15ಕಿ.ಮಿ ಮತ್ತು ಡಿಸೇಲ್ ಕಾರುಗಳು 17 ರಿಂದ 19 ಕಿ.ಮಿ ಇಂಧನ ದಕ್ಷತೆಯನ್ನು ಹೊಂದಿದ್ದು, ಒಟ್ಟು 11 ಬಣ್ಣಗಳ ಆಯ್ಕೆ ಹೊಂದಿದೆ. ಹೀಗಾಗಿ ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಪರ್ಲ್ ವೈಟ್, ಬ್ಲೇಡ್ ಸಿಲ್ವರ್, ಬ್ರೊಂಜ್ ಗ್ರೇ, ಅಂಬರ್ ಆರೇಂಜ್, ಡೀಪ್ ಬ್ಲ್ಯೂ, ನೈಟ್ ಶೇಡ್, ಫೈರ್ ರೆಡ್ ಮತ್ತು ಡ್ಯುಯಲ್ ಟೋನ್ ಬಣ್ಣದಲ್ಲಿ ಪರ್ಲ್ ವೈಟ್/ಅಂಬರ್ ಆರೇಂಜ್, ಪರ್ಲ್ ವೈಟ್/ ಆಕ್ಸನ್ ಬ್ಲ್ಯಾಕ್, ಬ್ರೊಂಜ್ ಗ್ರೇ/ಅಂಬರ್ ಆರೇಜ್, ಫೈರ್ ರೆಡ್/ಆಕ್ಸನ್ ಬ್ಲ್ಯಾಕ್ ಬಣ್ಣದಲ್ಲಿ ಲಭ್ಯವಿವೆ.

ಎಸ್‌ಯುವಿ ವಿಭಾಗದಲ್ಲಿ ಹೊಸ ನೀರಿಕ್ಷೆಯೊಂದಿಗೆ ಬಿಡುಗಡೆಯಾದ ನಿಸ್ಸಾನ್ ಕಿಕ್ಸ್

ಹೀಗಾಗಿ ಹೊಸ ಕಿಕ್ಸ್ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಎಸ್ ಕ್ರಾಸ್, ಹ್ಯುಂಡೈ ಕ್ರೇಟಾ, ಮಹೀಂದ್ರಾ ಎಕ್ಸ್‌ಯುವಿ 500 ಮತ್ತು ಬಿಡುಗಡೆಯಾಗಲಿರುವ ಟಾಟಾ ಹ್ಯಾರಿಯರ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ಗುಣಲಕ್ಷಣಗಳನ್ನು ಹೊಂದಿದ್ದು, ಗುಣಮಟ್ಟದಲ್ಲಿ ಇತರೆ ಸಬ್ ಕಂಪ್ಯಾಕ್ಟ್ ಎಸ್‌ಯುವಿಗಳಿಂತಲೂ ವಿಶೇಷ ಎನ್ನಿಸಲಿವೆ.

Most Read Articles

Kannada
English summary
New Nissan Kicks SUV Launched In India — Prices Starting At Rs 9.55 Lakh. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X