ಮುಂದಿನ ವಾರ ಬಿಡುಗಡೆಯಾಗಲಿರುವ ನಿಸ್ಸಾನ್ ಕಿಕ್ಸ್ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...

ನಿಸ್ಸಾನ್ ಇಂಡಿಯಾ ಸಂಸ್ಥೆಯು ತಮ್ಮ ಕಿಕ್ಸ್ ವಿನೂತನ ಮಾದರಿಯ ಹೊಚ್ಚ ಹೊಸ ಎಸ್‌ಯುವಿ ಮಾದರಿಯೊಂದನ್ನು ಇದೇ ತಿಂಗಳ 22ರಂದು ಬಿಡುಗಡೆಗೊಳಿಸುತ್ತಿದ್ದು, ಈಗಾಗಲೆ ಈ ಕಾರಿನ ಖರೀದಿಗಾಗಿ ಡೀಲರ್‍‍ಗಳು ಗ್ರಾಹಾಕರಿಂದ ಅಧಿಕೃತವಾಗಿ ರೂ. 25 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಸ್ವೀಕರಿಸುತ್ತಿದ್ದಾರೆ.

ಮುಂದಿನ ವಾರ ಬಿಡುಗಡೆಯಾಗಲಿರುವ ನಿಸ್ಸಾನ್ ಕಿಕ್ಸ್ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...

ನಿಸ್ಸಾನ್ ಕಿಕ್ಸ್ ಹೊಸ ಕಾರು ರೆನಾಲ್ಟ್ ಡಸ್ಟರ್ ಬಿ0 ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿ ಅಭಿವೃದ್ಧಿಗೊಂಡಿದ್ದು, ಕಾರಿನ ವಿನ್ಯಾಸಗಳು, ತಾಂತ್ರಿಕ ಅಂಶ, ಎಂಜಿನ್ ಪರ್ಫಾಮೆನ್ಸ್ ಮತ್ತು ಬೆಲೆಗಳು ಗ್ರಾಹಕರ ಆಕರ್ಷಣೆಗೆ ಕಾರಣವಾಗಿವೆ. ಇದೀಗ ಕಾರಿನ ವೇರಿಯಂಟ್‍ಗಳ ಕುರಿತಾಗಿ ಮತ್ತು ಇನ್ನಿತರೆ ತಾಂತ್ರಿಕ ಅಂಶಗಳ ಬಗೆಗಿನ ಬ್ರೋಶರ್ ಬಹಿರಂಗಗೊಂಡಿದ್ದು, ಮತ್ತಷ್ಟು ಮಾಹಿತಿಯನ್ನು ತಿಳಿಯಲು ಮುಂದಕ್ಕೆ ಓದಿರಿ.

ಮುಂದಿನ ವಾರ ಬಿಡುಗಡೆಯಾಗಲಿರುವ ನಿಸ್ಸಾನ್ ಕಿಕ್ಸ್ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...

ಎಕ್ಸ್ಎಲ್, ಎಕ್ಸ್ವಿ, ಎಕ್ಸ್ವಿ ಪ್ರೀ ಮತ್ತು ಎಕ್ಸ್ವಿ ಪ್ರೀ-ಆಪ್ಷನ್ ಎಂಬ ಒಟ್ಟು ನಾಲ್ಕು ವೇರಿಯಂಟ್‍ಗಳಲ್ಲಿ ಬಿಡುಗಡೆಯಾಗಲಿರುವ ನಿಸ್ಸಾನ್ ಕಿಕ್ಸ್ ಕಾರು ರೆನಾಲ್ಟ್ ಕ್ಯಾಪ್ಚರ್‌ಗಿಂತಲೂ ಹೆಚ್ಚಿನ ಗುಣಮಟ್ಟದ ವಿನ್ಯಾಸಗಳನ್ನು ಪಡೆದುಕೊಂಡಿದ್ದು, ಹಾಗೆಯೇ ಡಸ್ಟರ್ ಮತ್ತು ಟೆರಾನೋ ಮಾದರಿಗಳಿಂತ ಹೆಚ್ಚು ಆಕರ್ಷಣೆ ಪಡೆದಿದೆ. ಹೀಗಾಗಿ ಹೊಸ ಕಾರು ಭಾರೀ ಪ್ರಮಾಣದ ಮಾರಾಟ ನೀರಿಕ್ಷೆಯಿದ್ದು, ಎಸ್‌ಯುವಿ ಪ್ರಿಯರಿಗೆ ಇಷ್ಟವಾಗುವ ಬಹುತೇಕ ಅಂಶಗಳು ಇದರಲ್ಲಿವೆ.

GRAPHENE ಡಿಸೈನ್ ತಂತ್ರಜ್ಞಾನದೊಂದಿಗೆ ಸಿದ್ದವಾಗಿರುವ ಹೊರ ವಿನ್ಯಾಸಗಳು ಕಿಕ್ಸ್‌ಗೆ ಪ್ರೀಮಿಯಂ ಮೆರಗು ತಂದಿದ್ದು, ಮಲ್ಟಿ ಲೇಯರ್ ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್ ವ್ಯವಸ್ಥೆ ಹೊಂದಿದ್ದು, ಲೆದರ್ ಕೊಟಿಂಗ್ ಸೀಟುಗಳು ಮತ್ತು ಪುಶ್ ಡೋರ್ ಟ್ರಿಮ್ ಅನುಕೂಲತೆಯಿದೆ.

ಮುಂದಿನ ವಾರ ಬಿಡುಗಡೆಯಾಗಲಿರುವ ನಿಸ್ಸಾನ್ ಕಿಕ್ಸ್ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...

ಇನ್ನು ವಿನೂತನ ಕಾರಿನಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋ‌ಟೈನ್‌ಮೆಂಟ್ ಹಾಗೂ ಕಾರಿನ ಸುತ್ತ ನೋಡಬಹುದಾದ 360 ವಿವ್ಯೂ ಮಾನಿಟರ್ ವ್ಯವಸ್ಥೆಯಿದ್ದು, ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾರಾಟವಾಗುತ್ತಿರುವ ಇತರೆ ಸಬ್ ಕಂಪ್ಯಾಕ್ಟ್ ಮಾದರಿಗಳಲ್ಲೇ ವಿಶೇಷ ಕಾರು ಎನ್ನಬಹುದು.

ಮುಂದಿನ ವಾರ ಬಿಡುಗಡೆಯಾಗಲಿರುವ ನಿಸ್ಸಾನ್ ಕಿಕ್ಸ್ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...

ಹಾಗೆಯೇ ಪ್ರೀಮಿಯಂ ಕಾರುಗಳಲ್ಲಿ ಕಂಡುಬರುವ ವಿ ಮೊಷನ್ ಗ್ರೀಲ್, ಫಾಲೋ ಮಿ ಹೆಡ್‌ಲ್ಯಾಂಪ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್, ಎಲ್ಇಡಿ ಫಾಗ್ ಲ್ಯಾಂಪ್, ಸ್ಪೋರ್ಟಿ ಲುಕ್ ನೀಡುವ 17-ಇಂಚಿನ ಫೈವ್ ಸ್ಪೋಕ್ ಅಲಾಯ್ ಚಕ್ರಗಳು ಮತ್ತು ಪ್ಲಾಸ್ಟಿಕ್ ಬಾಡಿ ಕ್ಲ್ಯಾಡಿಂಗ್ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದೆ.

ಮುಂದಿನ ವಾರ ಬಿಡುಗಡೆಯಾಗಲಿರುವ ನಿಸ್ಸಾನ್ ಕಿಕ್ಸ್ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...

ಸಬ್ ಕಂಪ್ಯಾಕ್ಟ್ ಎಸ್‌ಯುವಿ ವೈಶಿಷ್ಟ್ಯತೆಯ ಕಿಕ್ಸ್ ಕಾರು ಉತ್ತಮ ಉದ್ದಳತೆ ಹೊಂದಿದ್ದು, 4,384ಎಂಎಂ ಉದ್ದ, 1,813ಎಂಎಂ ಅಗಲವಾಗಿದೆ. ಜೊತೆಗೆ 2,673 ಎಂಎಂ ಎತ್ತರವಾಗಿದ್ದು, ಐದು ಜನ ಆರಾಮದಾಯಕವಾಗಿ ಪ್ರಯಾಣ ಮಾಡಬಹುದಾಗಿದೆ.

ಮುಂದಿನ ವಾರ ಬಿಡುಗಡೆಯಾಗಲಿರುವ ನಿಸ್ಸಾನ್ ಕಿಕ್ಸ್ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...

ಇನ್ನುಳಿದಂತೆ ಆರಾಮದಾಯಕ ಪ್ರಯಾಣಕ್ಕೆ ಸಹಕಾರಿಯಾಗುವ ಅಂಡ್ರಾಯಿಡ್ ಆಟೋ ಪ್ಲೇ, ಆ್ಯಪಲ್ ಕಾರ್ ಪ್ಲೇ, ಯುಎಸ್‌ಬಿ ಪೋರ್ಟ್, ಚಾಲಕ ಮತ್ತು ಮುಂಭಾಗದ ಪ್ರಯಾಣಿಕರಿಗೆ ಆರ್ಮ್ ರೆಸ್ಟ್, ಹಿಂಬದಿಯಲ್ಲಿ ಎಸಿ ವೆಂಟ್ಸ್, ಸ್ಪೀಡ್ ಸೆನ್ಸಾರ್ ಡೋರ್ ಲಾಕ್/ಅನ್‌ಲಾಕ್ ಸೌಲಭ್ಯ, ರಿಯರ್ ಪಾರ್ಕಿಂಗ್ ವ್ಯವಸ್ಥೆಯಿರಲಿದೆ.

MOST READ: ಜಾವಾ, ಯಜ್ಡಿ, ಯಮಹಾ ಆರ್‌ಎಕ್ಸ್100 ಬೈಕ್‍ ಹೊಂದಿರುವ ಮಾಲೀಕರಿಗೆ ಸದ್ಯದಲ್ಲೇ ಶಾಕಿಂಗ್ ನ್ಯೂಸ್..!

ಮುಂದಿನ ವಾರ ಬಿಡುಗಡೆಯಾಗಲಿರುವ ನಿಸ್ಸಾನ್ ಕಿಕ್ಸ್ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...

ಎಂಜಿನ್ ಸಾಮರ್ಥ್ಯ

ಹೊಸ ಕಿಕ್ಸ್ ಮಾದರಿಯು 1.5-ಲೀಟರ್ ಪೆಟ್ರೋಲ್ ಹಾಗೂ 1.5-ಲೀಟರ್ ಡಿಸೇಲ್ ಎಂಜಿನ್ ಆಯ್ಕೆ ಹೊಂದಿದ್ದು, ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 106-ಬಿಎಚ್‌ಪಿ ಉತ್ಪಾದಿಸಿದ್ದಲ್ಲಿ ಡೀಸೆಲ್ ಕಾರು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 110-ಬಿಎಚ್‌ಪಿ ಉತ್ಪಾದಿಸುತ್ತೆ.

ಮುಂದಿನ ವಾರ ಬಿಡುಗಡೆಯಾಗಲಿರುವ ನಿಸ್ಸಾನ್ ಕಿಕ್ಸ್ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...

ಸುರಕ್ಷಾ ಸಾಧನಗಳು

ಇನ್ನು ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ವೆಹಿಕಲ್ ಡೈನಾಮಿಕ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಮೂರು ಏರ್‌ಬ್ಯಾಗ್, ಎಬಿಎಸ್, ಇಕೋ ಮೂಡ್ ಮತ್ತು ಕ್ರೂಸ್ ಕಂಟ್ರೋಲ್ ಸೌಲಭ್ಯವಿದೆ.

ಮುಂದಿನ ವಾರ ಬಿಡುಗಡೆಯಾಗಲಿರುವ ನಿಸ್ಸಾನ್ ಕಿಕ್ಸ್ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...

ಲಭ್ಯವಿರುವ ಬಣ್ಣಗಳು

ಹೊಸ ನಿಸ್ಸಾನ್ ಕಿಕ್ಸ್ ಕಾರು ಪರ್ಲ್ಸ್ ವೈಟ್, ಬ್ಲೆಡ್ ಸಿಲ್ವರ್, ಬ್ರಾಂಝ್ ಗ್ರೇ, ಆಂಬೆರ್ ಆರೆಂಜ್, ಡೀಪ್ ಬ್ಲೂ ಪರ್ಲ್, ನೈಟ್ ಶೇಡ್, ಫೈರ್ ರೆಡ್ ಎಂಬ ಸಿಂಗಲ್ ಕಲರ್ ಆಯ್ಕೆಯಲ್ಲಿ ಲಭ್ಯವಿರಲಿದ್ದು, ಟಾಪ್ ಎಂಡ್ ವೇರಿಯಂಟ್ ಆದ ಕಾರುಗಳು ಪರ್ಲ್ ವೈಟ್ ಮತ್ತು ಆಂಬರ್, ಪರ್ಲ್ ವೈಟ್ ಮತ್ತು ಆನಿಕ್ ಬ್ಲಾಕ್, ಬ್ರಾಂಝ್ ಗ್ರೇ ಮತ್ತು ಆಂಬೆರ್ ಆರೆಂಜ್ ಹಾಗು ಫೈರ್ ರೆಡ್ ಮತ್ತು ಆನಿಕ್ಸ್ ಬ್ಲಾಕ್ ಎಂಬ ಬಣ್ಣಗಳಲ್ಲಿ ಲಭ್ಯವಿರಲಿದೆ.

ಮುಂದಿನ ವಾರ ಬಿಡುಗಡೆಯಾಗಲಿರುವ ನಿಸ್ಸಾನ್ ಕಿಕ್ಸ್ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...

ಕಾರಿನ ಬೆಲೆ

ಹೊಸ ನಿಸ್ಸಾನ್ ಕಿಕ್ಸ್ ಕಾರಿನ ಕಾರಿನ ಬೆಲೆಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.11 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ.15 ಲಕ್ಷ ಬೆಲೆ ಇರಬಹುದೆಂದು ಅಂದಾಜಿಸಲಾಗಿದೆ.

MOST READ: ಕಾರು ಖರೀದಿದಾರರಿಗೆ ಮತ್ತಷ್ಟು ಹೊಸತನ ನೀಡಿದ ಮಾರುತಿ ಸುಜುಕಿ ಅರೆನಾ

ಮುಂದಿನ ವಾರ ಬಿಡುಗಡೆಯಾಗಲಿರುವ ನಿಸ್ಸಾನ್ ಕಿಕ್ಸ್ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...

ಹೀಗಾಗಿ ಹೊಸ ಕಿಕ್ಸ್ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಬ್ರೆಝಾ, ಹ್ಯುಂಡೈ ಕ್ರೇಟಾ, ಮಹೀಂದ್ರಾ ಎಕ್ಸ್‌ಯುವಿ 500 ಮತ್ತು ಬಿಡುಗಡೆಯಾಗಲಿರುವ ಟಾಟಾ ಹ್ಯಾರಿಯರ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ಗುಣಲಕ್ಷಣಗಳನ್ನು ಹೊಂದಿದ್ದು, ಗುಣಮಟ್ಟದಲ್ಲಿ ಇತರೆ ಸಬ್ ಕಂಪ್ಯಾಕ್ಟ್ ಎಸ್‌ಯುವಿಗಳಿಂತಲೂ ವಿಶೇಷ ಎನ್ನಿಸಲಿವೆ.

Source: Team bhp

Most Read Articles

Kannada
English summary
Here Is The Full Details About Nissan Kicks - Engine, Variants, Colors -Read In Kannada
Story first published: Friday, January 18, 2019, 12:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X