ಬೆಂಗಳೂರಿಗರನ್ನು ಮೋಡಿ ಮಾಡಿದ ನಿಸ್ಸಾನ್ ಕಿಕ್ಸ್

ಭಾರತದಲ್ಲಿ ಕ್ರಿಕೆಟ್ ಜ್ವರ ಶುರುವಾಗಿದೆ. ಭಾರತದಲ್ಲಿರುವ ಬಹುತೇಕ ಮಂದಿಯ ನೆಚ್ಚಿನ ಆಟ ಕ್ರಿಕೆಟ್. ಈ ಆಟವನ್ನು ಮೆಚ್ಚದ ಭಾರತೀಯರಿಲ್ಲವೆಂದೇ ಹೇಳಬಹುದು. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ಮುದುಕರವರೆಗೆ ಎಲ್ಲರೂ ಈ ಆಟದ ಅಭಿಮಾನಿಗಳೆ. ಮೊನ್ನೆಯಷ್ಟೆ ವಿಶ್ವ ಕಪ್ ಕ್ರಿಕೆಟ್ ಪಂದ್ಯಾವಳಿಗಳು ಪ್ರಾರಂಭವಾಗಿವೆ.

ಬೆಂಗಳೂರಿಗರನ್ನು ಮೋಡಿ ಮಾಡಿದ ನಿಸ್ಸಾನ್ ಕಿಕ್ಸ್

ಈ ಕ್ರಿಕೆಟ್ ಹಬ್ಬವನ್ನು ಕಣ್ತುಂಬಿಕೊಳ್ಳಲ್ಲು ಕ್ರಿಕೆಟ್ ಪ್ರಿಯರು ಕಾತರರಾಗಿದ್ದಾರೆ. ಈ ಬಾರಿಯ ವಿಶ್ವ ಕಪ್ ಪಂದ್ಯಾವಳಿಗಳು ಇಂಗ್ಲೆಂಡ್‍‍ನಲ್ಲಿ ಮೇ 30 ರಿಂದ ಜುಲೈ 14ರವರೆಗೆ ನಡೆಯಲಿವೆ. ಒಟ್ಟು 10 ತಂಡಗಳು ಭಾಗವಹಿಸಲಿರುವ ಈ ಪಂದ್ಯಾವಳಿಯಲ್ಲಿ, 46 ದಿನಗಳ ಅವಧಿಯಲ್ಲಿ 48 ಪಂದ್ಯಗಳು ನಡೆಯಲಿವೆ. ನಿಸ್ಸಾನ್ ಕಂಪನಿಯು ವಿಶ್ವ ಕ್ರಿಕೆಟ್ ಮಂಡಳಿ (ಐಸಿಸಿ)ಯ ಗ್ಲೋಬಲ್ ಪಾರ್ಟ್‍‍ನರ್ ಆಗಿದ್ದು, ಈ ಬಾರಿಯ ವಿಶ್ವ ಕಪ್‍‍ನ ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ.

ಬೆಂಗಳೂರಿಗರನ್ನು ಮೋಡಿ ಮಾಡಿದ ನಿಸ್ಸಾನ್ ಕಿಕ್ಸ್

ನಿಸ್ಸಾನ್ ಕಂಪನಿಯ ಕಿಕ್ಸ್ ಕಾರನ್ನು 2019ರ ಐಸಿಸಿ ವಿಶ್ವ ಕಪ್‍‍ನ ಅಫಿಶಿಯಲ್ ಕಾರ್ ಎಂದು ಆಯ್ಕೆ ಮಾಡಲಾಗಿದೆ. ಆದ್ದರಿಂದ ನಾವು ಕಿಕ್ಸ್ ಕಾರನ್ನು ಬೆಂಗಳೂರಿನಲ್ಲಿ ಸುತ್ತಾಡಿಸಿ, ಗಾರ್ಡನ್ ಸಿಟಿಯ ಕ್ರಿಕೆಟ್ ಪ್ರಿಯರನ್ನು ಮಾತನಾಡಿಸಿದ್ದೇವೆ.

1550ನೇ ಇಸವಿಯಲ್ಲಿ ಚಿಕ್ಕ ಮಕ್ಕಳು ಸರ್‍ರೆ ಎಂಬ ಇಂಗ್ಲೆಂಡಿನ ಹಳ್ಳಿಯಲ್ಲಿ ಕ್ರಿಕೆಟ್ ಆಡಲು ಶುರು ಮಾಡಿದರು. ನೂರಾರು ವರ್ಷಗಳ ಅವಧಿಯಲ್ಲಿ ಈ ಆಟವು ದೊಡ್ಡದಾಗಿ ಬೆಳೆದು, ಈಗ ವಿಶ್ವದ ಅತಿ ದೊಡ್ಡ ಕ್ರೀಡೆಗಳಲ್ಲಿ ಒಂದಾಗಿದೆ.

ಬೆಂಗಳೂರಿಗರನ್ನು ಮೋಡಿ ಮಾಡಿದ ನಿಸ್ಸಾನ್ ಕಿಕ್ಸ್

ವರ್ಷಕ್ಕೊಮ್ಮೆ ನಡೆಯುವ ಐಪಿ‍ಎಲ್ ಹಾಗೂ ಈ ಮಾದರಿಯ ಅನೇಕ ಟಿ20 ಪಂದ್ಯಗಳು ಕ್ರಿಕೆಟ್ ಪ್ರೇಮಿಗಳನ್ನು ಆಕರ್ಷಿಸುತ್ತಲೇ ಇವೆ. ಆದರೆ ವಿಶ್ವ ಕಪ್ ಎಂದಾಗ ಎಲ್ಲವೂ ಬದಲಾಗುತ್ತವೆ. ವಿಶ್ವ ಕ್ರಿಕೆಟ್ ಮಂಡಳಿಯಿಂದ ಅರ್ಹತೆ ಪಡೆದಿರುವ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತವೆ. ಪ್ರತಿಯೊಂದು ತಂಡವು ಉಳಿದ 9 ತಂಡಗಳನ್ನು ಎದುರಿಸುತ್ತದೆ. ವಿಶ್ವ ಕಪ್ ಗೆಲ್ಲುವುದು ತಂಡದಲ್ಲಿರುವ ಆಟಗಾರರಿಗೆ ಮಾತ್ರವಲ್ಲದೇ, ಇಡಿ ದೇಶಕ್ಕೆ ಹೆಮ್ಮೆ ಹಾಗೂ ಗೌರವದ ಸಂಗತಿಯಾಗಿದೆ.

ಬೆಂಗಳೂರಿಗರನ್ನು ಮೋಡಿ ಮಾಡಿದ ನಿಸ್ಸಾನ್ ಕಿಕ್ಸ್

ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಪಂದ್ಯಾವಳಿಯಲ್ಲಿ ಪ್ರತಿಯೊಂದು ತಂಡಗಳು ಬದ್ದ ವೈರಿಗಳಾಗಿ ಮೈದಾನವೆಂಬ ರಣರಂಗದಲ್ಲಿ ಸೆಣೆಸುತ್ತವೆ. ಪ್ರತಿಯೊಬ್ಬ ಭಾರತೀಯನು ಟೀಂ ಇಂಡಿಯಾ ಆಡುವ ಪ್ರತಿ ಪಂದ್ಯವನ್ನು ಗೆದ್ದು, ವಿಶ್ವ ಕಪ್ ಅನ್ನು ಮರಳಿ ತರಲಿ ಎಂದು ಹಾರೈಸುತ್ತಿದ್ದಾರೆ. ಭಾರತವು ಈ ಮೊದಲು 1983 ಹಾಗೂ 2011ರಲ್ಲಿ ವಿಶ್ವಕಪ್ ಗೆದ್ದಿದೆ. ಇಂಗ್ಲೆಂಡಿನಲ್ಲಿ ನಡೆಯುತ್ತಿರುವ ಈ ಬಾರಿಯ ವಿಶ್ವಕಪ್ ಅನ್ನು ಭಾರತವು ಗೆಲ್ಲುವ ವಿಶ್ವಾಸದಲ್ಲಿದೆ.

ಬೆಂಗಳೂರಿಗರನ್ನು ಮೋಡಿ ಮಾಡಿದ ನಿಸ್ಸಾನ್ ಕಿಕ್ಸ್

ಈ ಬಾರಿ 10 ತಂಡಗಳು ಭಾಗವಹಿಸುತ್ತಿದ್ದು, ಪ್ರತಿಯೊಂದು ತಂಡವು ಉಳಿದ 9 ತಂಡಗಳನ್ನು ಎದುರಿಸಲಿದೆ. ಇದರಲ್ಲಿ ಹೆಚ್ಚು ಪಂದ್ಯಗಳನ್ನು ಗೆಲ್ಲುವ ಮೊದಲ ನಾಲ್ಕು ತಂಡಗಳು ಸೆಮಿ ಫೈನಲ್‍‍ಗೆ ಅರ್ಹತೆ ಪಡೆಯಲಿವೆ. ಈ ಸೆಮಿಫೈನಲ್‍‍ನಲ್ಲಿ ಗೆಲ್ಲುವ ಎರಡು ತಂಡಗಳು ಜುಲೈ 14ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯಲಿವೆ. ಈ ಎಲ್ಲಾ ಪಂದ್ಯಗಳು 46 ದಿನಗಳಲ್ಲಿ ನಡೆಯಲಿವೆ.

MOST READ: ಅತಿ ಮೈಲೇಜ್ ನೀಡಬಲ್ಲ ಸ್ಮಾರ್ಟ್ ಹೈಬ್ರಿಡ್‌ ಎಂಜಿನ್‌ನೊಂದಿಗೆ ಮಾರುತಿ ಬಲೆನೊ ಬಿಡುಗಡೆ

ಬೆಂಗಳೂರಿಗರನ್ನು ಮೋಡಿ ಮಾಡಿದ ನಿಸ್ಸಾನ್ ಕಿಕ್ಸ್

ಕಳೆದ ಹಲವು ವರ್ಷಗಳಿಂದ ನಿಸ್ಸಾನ್ ಕಂಪನಿಯು ಐಸಿಸಿಯ ಪಾರ್ಟ್‍‍ನರ್ ಆಗಿದ್ದು, 2019ರ ವಿಶ್ವಕಪ್ ಮಾತ್ರವಲ್ಲದೇ, 2023ರಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಗೂ ಪ್ರಾಯೋಜಕತ್ವ ವಹಿಸಲಿದೆ. ನಿಸ್ಸಾನ್ ಕಂಪನಿಯು ವಿಶ್ವ ಮಾರುಕಟ್ಟೆಯಲ್ಲಿ ಹೆಸರುವಾಸಿಯಾಗಿರುವ ಕಂಪನಿಯಾಗಿದ್ದು, ಅನೇಕ ಅಂತರ್‍‍ರಾಷ್ಟ್ರೀಯ ಕ್ರೀಡೆಗಳನ್ನು ಆಯೋಜಿಸಿದೆ. ಕ್ರೀಡೆಗಳನ್ನು ಪ್ರಾಯೋಜಿಸುವುದು ನಿಸ್ಸಾನ್ ಕಂಪನಿಯ ಮಾರ್ಕೆಟಿಂಗ್‍‍ನ ಭಾಗವಾಗಿದ್ದು, ಅನೇಕ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ಪ್ರಾಯೋಜಿಸಿದೆ.

ಬೆಂಗಳೂರಿಗರನ್ನು ಮೋಡಿ ಮಾಡಿದ ನಿಸ್ಸಾನ್ ಕಿಕ್ಸ್

ನಿಸ್ಸಾನ್ ಕಿಕ್ಸ್ ಕಾರನ್ನು 2019ರ ಐಸಿಸಿ ವಿಶ್ವ ಕಪ್‍‍ನ ಅಧಿಕೃತ ಕಾರು ಎಂದು ಘೋಷಿಸಲಾಗಿದೆ. ವಿಶ್ವ ಮಾರುಕಟ್ಟೆಯಲ್ಲಿ ಈಗಾಗಲೇ ಮಾರಾಟವಾಗುತ್ತಿರುವ ಈ ಕಾರನ್ನು ಈ ವರ್ಷದ ಜನವರಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು.

MOST READ: ಯಾವ ಯಾವ ರಾಜಕಾರಣಿಗಳ ಬಳಿ ಯಾವೆಲ್ಲಾ ಐಷಾರಾಮಿ ಕಾರುಗಳಿವೆ ಗೊತ್ತಾ?

ಬೆಂಗಳೂರಿಗರನ್ನು ಮೋಡಿ ಮಾಡಿದ ನಿಸ್ಸಾನ್ ಕಿಕ್ಸ್

ನಿಸ್ಸಾನ್ ಕಿಕ್ಸ್ ಭಾರತೀಯ ಮಾರುಕಟ್ಟೆಯಲ್ಲಿರುವ ಸ್ಟೈಲಿಶ್ ಎಸ್‍‍ಯು‍‍ವಿ ಕಾರುಗಳಲ್ಲಿ ಒಂದಾಗಿದೆ. ಇದರಲ್ಲಿ ಶಾರ್ಪ್ ಫ್ರಂಟ್ ಎಂಡ್‍‍ನ ಜೊತೆಗೆ ಸ್ವೇಪ್ಟ್ ಬ್ಯಾಕ್ ಹೆಡ್‍‍ಲ್ಯಾಂಪ್ಸ್ ಹಾಗೂ ಆಕರ್ಷಕವಾಗಿರುವ ಬಂಪರ್ ಹಾಗೂ ಗ್ರಿಲ್ ಸೆಟ್‍ಅಪ್‍‍ಗಳಿವೆ. ಹಿಂಭಾಗದಲ್ಲಿ ಸ್ಲೊಪಿಂಗ್ ರೂಫ್‍‍ಲೈನ್ ಹಾಗೂ ಸ್ವೇಪ್ಟ್ ಬ್ಯಾಕ್ ಟೇಲ್ ಲ್ಯಾಂಪ್‍‍ಗಳಿವೆ.

ಬೆಂಗಳೂರಿಗರನ್ನು ಮೋಡಿ ಮಾಡಿದ ನಿಸ್ಸಾನ್ ಕಿಕ್ಸ್

ಈ ಕಾರಿನಲ್ಲಿ 1.5 ಲೀಟರಿನ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍‍ಗಳಿರಲಿವೆ. ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಮ್ಯಾನುಯಲ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. ನಿಸ್ಸಾನ್ ಕಿಕ್ಸ್ ಕಾರಿನಲ್ಲಿ ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್ / ಅನ್‍‍ಲಾಕ್, ಎಂಜಿನ್ ಇಂಮೊಬೈಲೇಸರ್, ಡ್ಯೂಯಲ್ ಏರ್‍‍ಬ್ಯಾಗ್ಸ್, ಇ‍‍ಬಿ‍‍ಡಿ ಹೊಂದಿರುವ ಎ‍‍ಬಿ‍ಎಸ್, ಬ್ರೇಕ್ ಅಸಿಸ್ಟ್, ಹಿಲ್ ಸ್ಟಾರ್ಟ್ ಅಸಿಸ್ಟ್ ಹಾಗೂ ಸೀಟ್ ಬೆಲ್ಟ್ ರಿಮೈಂಡರ್ ಸೇರಿದಂತೆ ಹಲವಾರು ಪ್ರಿಮೀಯಂ ಫೀಚರ್‍‍ಗಳಿವೆ.

MOST READ: ಜೀಪ್ ಕಂಪಾಸ್ ಹೊಂದಿರುವ ಭಾರತದ ಖ್ಯಾತ ಸೆಲೆಬ್ರಿಟಿಗಳು

ಬೆಂಗಳೂರಿಗರನ್ನು ಮೋಡಿ ಮಾಡಿದ ನಿಸ್ಸಾನ್ ಕಿಕ್ಸ್

ಈ ನಿಸ್ಸಾನ್ ಕಿಕ್ಸ್ ಕಾರಿನಲ್ಲಿ ವಾಹನಗಳ ಡೈನಾಮಿಕ್ ಕಂಟ್ರೋಲ್ ಸಿಸ್ಟಂ ಆದ ಇಂಟೆಲಿಜೆನ್ಸ್ ಟ್ರೇಸ್ ಕಂಟ್ರೋಲ್ ಅಳವಡಿಸಲಾಗಿದೆ. ಈ ಕಾರಿನ ಗ್ರೌಂಡ್ ಕ್ಲಿಯರೆನ್ಸ್ 210 ಎಂಎಂ ಆಗಿದೆ. ಇದರಲ್ಲಿರುವ ಕುಶಲತೆಯು 5.2 ಮೀಟರ್‍‍ಗಳ ರೇಡಿಯಸ್ ಹೊಂದಿದೆ.

ಬೆಂಗಳೂರಿಗರನ್ನು ಮೋಡಿ ಮಾಡಿದ ನಿಸ್ಸಾನ್ ಕಿಕ್ಸ್

ನಿಸ್ಸಾನ್ ಕಿಕ್ಸ್ ಕಾರಿನಲ್ಲಿ ಸ್ಪೇಷಿಯಸ್ ಆದ ಇಂಟಿರಿಯರ್ಸ್‍‍ಗಳಿವೆ. ಡ್ಯಾಶ್ ಬೋರ್ಡಿನಲ್ಲಿ 8 ಇಂಚಿನ ಟಚ್‍‍ಸ್ಕ್ರೀನ್ ಇನ್ಫೊಟೇನ್‍‍ಮೆಂಟ್ ಸಿಸ್ಟಂಯಿದ್ದು, ಇದರಲ್ಲಿ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯಿಡ್ ಆಟೊ ಫೀಚರ್‍‍ಗಳನ್ನು ಅಳವಡಿಸಲಾಗಿದೆ. ಇದರಲ್ಲಿ ನಿಸ್ಸಾನ್ ಕನೆಕ್ಟ್ ಎಂಬ ಫೀಚರ್‍‍ಯಿದ್ದು, ಈ ಫೀಚರ್ ಅನ್ನು ನಿಸ್ಸಾನ್ ಕಾರುಗಳಿಗಾಗಿಯೇ ತಯಾರಿಸಲಾಗಿದೆ. ಈ ಎಸ್‍‍ಯು‍‍ವಿ ಕಾರಿನಲ್ಲಿ ಮೊದಲ ಬಾರಿಗೆ ಅರೌಂಡ್ ವೀವ್ ಮಾನಿಟರ್ ಡಿಸ್‍‍ಪ್ಲೇ ಅಳವಡಿಸಲಾಗಿದೆ. ಈ ಫೀಚರ್‍‍ನಿಂದಾಗಿ ಇಕ್ಕಟ್ಟಾದ ಜಾಗಗಳಲ್ಲಿ, ವಿಶೇಷವಾಗಿ ಪಾರ್ಕಿಂಗ್ ಮಾಡುವಾಗ ಅನುಕೂಲವಾಗಲಿದೆ.

ಬೆಂಗಳೂರಿಗರನ್ನು ಮೋಡಿ ಮಾಡಿದ ನಿಸ್ಸಾನ್ ಕಿಕ್ಸ್

ಈಗ ನಡೆಯುತ್ತಿರುವ ವಿಶ್ವಕಪ್ ನೋಡಲು ಬಹುತೇಕ ಕ್ರಿಕೆಟ್ ಪ್ರಿಯರು ಉತ್ಸುಕರಾಗಿದ್ದಾರೆ. ನಿಸ್ಸಾನ್ ಈ ಪಂದ್ಯಾವಳಿಯನ್ನು ಪ್ರಾಯೋಜಿಸುತ್ತಿರುವುದರಿಂದ ಬಹುತೇಕ ಜನರಿಗೆ ನಿಸ್ಸಾನ್ ಕಿಕ್ಸ್ ಕಾರಿನ ಬಗೆಗೆ ತಿಳಿಯಲಿದೆ.

ಬೆಂಗಳೂರಿಗರನ್ನು ಮೋಡಿ ಮಾಡಿದ ನಿಸ್ಸಾನ್ ಕಿಕ್ಸ್

ನಿಸ್ಸಾನ್ ಕಿಕ್ಸ್ ಎಸ್‍‍ಯು‍‍ವಿ ಕಾರು ತನ್ನ ಹೊಸ ಬಗೆಯ ವಿನ್ಯಾಸದಿಂದಾಗಿ ಎಲ್ಲರ ಗಮನಸೆಳೆಯುತ್ತದೆ. ಈಗ 2019ರ ವಿಶ್ವ ಕಪ್‍‍ನ ಅಧಿಕೃತ ಕಾರು ಎಂಬ ಮನ್ನಣೆಯನ್ನು ಪಡೆದಿರುವುದರಿಂದ ವಿಶ್ವದ್ಯಾಂತವಿರುವ ಕ್ರಿಕೆಟ್ ಪ್ರಿಯರ ಗಮನವನ್ನೂ ಸೆಳೆಯಲಿದೆ.

ಬೆಂಗಳೂರಿಗರನ್ನು ಮೋಡಿ ಮಾಡಿದ ನಿಸ್ಸಾನ್ ಕಿಕ್ಸ್

ನಿಸ್ಸಾನ್ ಕಿಕ್ಸ್ ಕಾರನ್ನು ಬೆಂಗಳೂರಿನ ರಸ್ತೆಗಳಲ್ಲಿ ಚಲಾಯಿಸಿ ಕ್ರಿಕೆಟ್ ಪ್ರೇಮಿಗಳ ಜೊತೆಗೆ ಮಾತನಾಡಿದ್ದು ನಿಜಕ್ಕೂ ರೋಮಾಂಚನವನ್ನುಂಟು ಮಾಡಿತು. ಈ ಕಾರು ತನ್ನ ವಿನ್ಯಾಸದಿಂದಲೇ ಹೆಚ್ಚು ಗಮನ ಸೆಳೆಯಲಿದೆ. ಟೀಂ ಇಂಡಿಯಾಗೆ ಶುಭಕೋರಲೆಂದು ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಸಾಲಿನಲ್ಲಿ ನಿಂತು ಶುಭ ಕೋರಿದ್ದಾರೆ.

ಬೆಂಗಳೂರಿಗರನ್ನು ಮೋಡಿ ಮಾಡಿದ ನಿಸ್ಸಾನ್ ಕಿಕ್ಸ್

ಎಲ್ಲರೂ ಕ್ರಿಕೆಟ್ ಪಂದ್ಯಗಳನ್ನು ನೋಡಿ ಟೀಂ ಇಂಡಿಯಾ ಆಡುವ ಪ್ರತಿ ಪಂದ್ಯವನ್ನು ಪ್ರೋತ್ಸಾಹಿಸಿ ಹಾಗೂ 2019ರ ವಿಶ್ವಕಪ್‍‍ನ ಅಫಿಶಿಯಲ್ ಕಾರ್ ಆದ ನಿಸ್ಸಾನ್ ಕಿಕ್ಸ್ ಕಾರನ್ನೂ ಸಹ ವೀಕ್ಷಿಸಿ.

Most Read Articles

Kannada
English summary
Nissan Kicks "World Cup Wish Tour" Reaches Bangalore — Official Car For The Cricket World Cup 2019 - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X