ಪ್ರದರ್ಶನಗೊಂಡ 400 ಕಿ.ಮೀ ರೇಂಜ್ ಸಾಮರ್ಥ್ಯದ ನಿಸ್ಸಾನ್ ಲೀಫ್ ಕಾರು..

ನಿಸ್ಸಾನ್ ಸಂಸ್ಥೆಯು ತಮ್ಮ ಕಿಕ್ಸ್ ಎಸ್‍ಯುವಿ ಕಾರಿನ ಬಿಡುಗಡೆ ಮಾಡುವ ಸಮಯದಲ್ಲಿ ತಮ್ಮ ಮುಂದಿನ ವಾಹನಗಳು ಮತ್ತು ಭವಿಷ್ಯದ ಯೋಜನೆಯ ಕುರಿತಾಗಿ ಮಾಹಿತಿಯನ್ನು ಹೇಳಲಾಗಿತ್ತು. ಅವುಗಳಲ್ಲಿ ಒಂದು ನಿಸ್ಸಾನ್ ಸಂಸ್ಥೆಯು ಬಿಡುಗಡೆಗೊಳಿಸಲಿರುವ ಮೊದಲ ಎಲೆಕ್ಟ್ರಿಕ್ ಕಾರು, ಅದೇ ನಿಸ್ಸಾನ್ ಲೀಫ್. ಸಧ್ಯಕ್ಕೆ ಈ ಕಾರು ಥಾಯ್‍ಲ್ಯಾಂಡ್‍ನಲ್ಲಿ ನಡೆಯುತ್ತಿರುವ 2019ರ ಬಿಐಎಂಎಸ್ ಸಾಮಾರಂಭದಲ್ಲಿ ಪ್ರದರ್ಶಿಸಲಾಗಿದೆ.

ಪ್ರದರ್ಶನಗೊಂಡ 400 ಕಿ.ಮೀ ರೇಂಜ್ ಸಾಮರ್ಥ್ಯದ ನಿಸ್ಸಾನ್ ಲೀಫ್ ಕಾರು..

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಶೈಲಿಯನ್ನು ಹೊಂದಿರುವ ನಿಸ್ಸಾನ್ ಲೀಫ್ ಕಾರುಗಳು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ನಮೂನೆಯ ಹೊರ ವಿನ್ಯಾಸಗಳನ್ನು ಪಡೆದುಕೊಂಡಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಬಳಕೆಯು ಈ ಕಾರಿನ ಪ್ರಮುಖ ಆಕರ್ಷಣೆಯಾಗಿದೆ.

ಪ್ರದರ್ಶನಗೊಂಡ 400 ಕಿ.ಮೀ ರೇಂಜ್ ಸಾಮರ್ಥ್ಯದ ನಿಸ್ಸಾನ್ ಲೀಫ್ ಕಾರು..

ಸೇಕೆಂಡ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಲೀಫ್ ಕಾರ್‌ನ್ನು ಅಭಿವೃದ್ಧಿ ಮಾಡಿರುವ ನಿಸ್ಸಾನ್ ಸಂಸ್ಥೆಯು, ಇದುವರೆಗೆ ಯಾವುದೇ ಆಟೋ ಉತ್ಪಾದನಾ ಸಂಸ್ಥೆಗಳು ಬಳಸದ ಸುಧಾರಿತ ಮಾದರಿಯ ಎಲೆಕ್ಟ್ಕಿಕ್ ಎಂಜಿನ್ ಅಳವಡಿಸಿರುವುದು ಈ ಕಾರಿನ ಪ್ರಮುಖ ಆಕರ್ಷಣೆ.

ಪ್ರದರ್ಶನಗೊಂಡ 400 ಕಿ.ಮೀ ರೇಂಜ್ ಸಾಮರ್ಥ್ಯದ ನಿಸ್ಸಾನ್ ಲೀಫ್ ಕಾರು..

ಇದೇ ಕಾರಣಕ್ಕೆ ಒಂದು ಬಾರಿ ಚಾರ್ಜ್ ಮಾಡಿದಲ್ಲಿ ಬರೋಬ್ಬರಿ 400 ಕಿ.ಮೀ ಮೈಲೇಜ್ ನೀಡಲಿದೆ ಎಂದು ಹೇಳಿಕೊಂಡಿರುವ ನಿಸ್ಸಾನ್ ಸಂಸ್ಥೆಯು, 380 ಕಿಮಿ ಮೈಲೇಜ್ ರೇಂಜ್ ಹೊಂದಿರುವ ಟೆಸ್ಲಾ ಮಾಡೆಲ್ 3 ಕಾರಿಗಿಂತಲೂ ಅತ್ಯತ್ತಮ ಎಲೆಕ್ಟ್ರಿಕ್ ಕಾರು ಮಾದರಿ ಇದಾಗಿದೆ ಎಂದಿದೆ.

ಪ್ರದರ್ಶನಗೊಂಡ 400 ಕಿ.ಮೀ ರೇಂಜ್ ಸಾಮರ್ಥ್ಯದ ನಿಸ್ಸಾನ್ ಲೀಫ್ ಕಾರು..

ನಿಸ್ಸಾನ್ ಲೀಫ್ ಎಲೆಕ್ಟ್ರಿಕ್ ಕಾರುಗಳಲ್ಲಿ 40kWh ಬ್ಯಾಟರಿ ಬಳಕೆ ಮಾಡಲಾಗಿದ್ದು, ಪೂರ್ಣ ಪ್ರಮಾಣದ ಬ್ಯಾಟರಿ ಚಾರ್ಜ್ ಮಾಡಲು 8 ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳುತ್ತೆ. ಹಾಗೆಯೇ ಮತ್ತೊಂದು ವಿಶೇಷ ಅಂದ್ರೆ ಕೇವಲ 40 ನಿಮಿಷಗಳಲ್ಲಿ ಶೇ.80ರಷ್ಟು ಚಾರ್ಜ್ ಆಗುವ ಇದರ ಗುಣಲಕ್ಷಣವಾಗಿದೆ.

ಪ್ರದರ್ಶನಗೊಂಡ 400 ಕಿ.ಮೀ ರೇಂಜ್ ಸಾಮರ್ಥ್ಯದ ನಿಸ್ಸಾನ್ ಲೀಫ್ ಕಾರು..

ಇದಲ್ಲದೇ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಕಾರುಗಳ ಕುರಿತು ಪ್ರಚಾರಕ್ಕಾಗಿ ಎರಡು ಲೀಫ್ ಎಲೆಕ್ಟ್ರಿಕ್ ಕಾರುಗಳನ್ನು ಸಹ ಭಾರತದಲ್ಲಿ ಆಮದು ಮಾಡಿಕೊಳ್ಳಲಾಗಿದ್ದು, ಆಸಕ್ತ ಗ್ರಾಹಕರು ಟೆಸ್ಟ್ ಡ್ರೈವ್ ಮೂಲಕ ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತು ಅನುಭವ ಪಡೆದುಕೊಳ್ಳಬಹುದಾಗಿದೆ.

ಪ್ರದರ್ಶನಗೊಂಡ 400 ಕಿ.ಮೀ ರೇಂಜ್ ಸಾಮರ್ಥ್ಯದ ನಿಸ್ಸಾನ್ ಲೀಫ್ ಕಾರು..

ಇದಕ್ಕಾಗಿಯೇ ಚೆನ್ನೈ ಬಳಿ 650 ಎಕರೆ ವಿಸ್ತಿರಣದ ಟ್ರ್ಯಾಕ್ ನಿರ್ಮಾಣ ಮಾಡಿರುವ ನಿಸ್ಸಾನ್ ಸಂಸ್ಥೆಯು ಅಲ್ಲಿ ತನ್ನ ಹೊಸ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿ ಮತ್ತು ಟೆಸ್ಟ್ ಡ್ರೈವ್ ಕಾರ್ಯವನ್ನು ನಡೆಸಲಿದೆ ಎಂಬ ಮಹತ್ವದ ಮಾಹಿತಿ ಕೂಡಾ ಲಭ್ಯವಾಗಿದೆ.

ಪ್ರದರ್ಶನಗೊಂಡ 400 ಕಿ.ಮೀ ರೇಂಜ್ ಸಾಮರ್ಥ್ಯದ ನಿಸ್ಸಾನ್ ಲೀಫ್ ಕಾರು..

ಕಾರು ಬಿಡುಗಡೆಯ ಅವಧಿ ಮತ್ತು ಬೆಲೆ(ಅಂದಾಜು)

ವರದಿ ಪ್ರಕಾರ ಹೊಚ್ಚ ಹೊಸ ಲೀಫ್ ಕಾರು ಮಾದರಿಯನ್ನು 2019ರ ಮಧ್ಯಂತರದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಐಷಾರಾಮಿ ಗುಣಲಕ್ಷಣಗಳನ್ನು ಹೊಂದಿರುವ ಹೊಸ ಕಾರಿನ ಬೆಲೆಯು ರೂ.30 ಲಕ್ಷದಿಂದ ರೂ.35 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ. ಆದ್ರೆ ಭಾರತದಲ್ಲೇ ಹೊಸ ಕಾರುಗಳು ನಿರ್ಮಾಣವಾದಲ್ಲಿ ಕಾರಿನ ಬೆಲೆಗಳು ಗಣನೀಯವಾಗಿ ತಗ್ಗಬಹುದು.

ಪ್ರದರ್ಶನಗೊಂಡ 400 ಕಿ.ಮೀ ರೇಂಜ್ ಸಾಮರ್ಥ್ಯದ ನಿಸ್ಸಾನ್ ಲೀಫ್ ಕಾರು..

ಇನ್ನು ಲೀಫ್ ಕಾರುಗಳಲ್ಲಿ ಒದಗಿಸಲಾಗಿರುವ ವಿಶ್ವದರ್ಜೆ ಸೌಲಭ್ಯಗಳು ಕಾರಿನ ಪ್ರಯಾಣವನ್ನು ಮತ್ತಷ್ಟು ಸುಖಕರವಾಗಿಸಿದ್ದು, ಕಾರಿನ ಹೊರ ಮತ್ತು ಒಳ ವಿನ್ಯಾಸಗಳು ಸಾಕಷ್ಟು ಆಕರ್ಷಣೆಯಿಂದ ಕೂಡಿರುವುದಲ್ಲದೇ ಸ್ಪೋರ್ಟಿ ಲುಕ್ ಸಹ ಪಡೆದುಕೊಂಡಿವೆ.

ಪ್ರದರ್ಶನಗೊಂಡ 400 ಕಿ.ಮೀ ರೇಂಜ್ ಸಾಮರ್ಥ್ಯದ ನಿಸ್ಸಾನ್ ಲೀಫ್ ಕಾರು..

ಒಟ್ಟಿನಲ್ಲಿ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಜನಪ್ರಿಯವಾಗುತ್ತಿರುವ ಲೀಫ್ ಎಲೆಕ್ಟ್ರಿಕ್ ಕಾರುಗಳು ಭಾರತದಲ್ಲೂ ಬಿಡುಗಡೆಯಾಗುವುದು ಖಚಿತವಾಗಿದ್ದು, ಲೀಫ್ ಬಿಡುಗಡೆಯ ನಂತರ ಹಲವು ಮಾದರಿಯ ಐಷಾರಾಮಿ ಕಾರುಗಳು ಉತ್ಪಾದನೆಯಿಂದ ಹಿಂದೆ ಸರಿಯಬಹುದಾದ ಸಾಧ್ಯತೆಗಳು ಕೂಡಾ ಇವೆ.

Most Read Articles

Kannada
English summary
Nissan Leaf EV Exhibited At 2019 BIMS; India Launch This Year. Read In Kannada
Story first published: Saturday, March 30, 2019, 14:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X