ಭಾರತದಲ್ಲೂ ಬಿಡುಗಡೆಯಾಗುತ್ತಾ ಎರ್ಟಿಗಾ ಪ್ರತಿಸ್ಪರ್ಧಿನಿಸ್ಸಾನ್ ಲಿವಿನಾ?

ಭಾರತದಲ್ಲಿ ಸದ್ಯ ಎಂಪಿವಿ(ಮಲ್ಟಿ ಪರ್ಪಸ್ ವೆಹಿಕಲ್) ಕಾರುಗಳಿಗೆ ಉತ್ತಮ ಮಾರುಕಟ್ಟೆಯಿದ್ದು, ಈ ನಿಟ್ಟಿನಲ್ಲಿ ಹಲವು ಆಟೋ ಉತ್ಪಾದನಾ ಸಂಸ್ಥೆಗಳು ವಿವಿಧ ಮಾದರಿಯ ಎಂಪಿವಿ ಕಾರುಗಳನ್ನು ಪರಿಚಯಿಸಿ ಯಶಸ್ವಿಯಾಗಿವೆ. ಇದರಲ್ಲಿ ಟೊಯೊಟಾ ಇನೋವಾ ಕ್ರಿಸ್ಟಾ, ಮಾರುತಿ ಸುಜುಕಿ ಎರ್ಟಿಗಾ ಮತ್ತು ಮಹೀಂದ್ರಾ ಮರಾಜೋ ಕಾರುಗಳು ಸದ್ಯ ಮುಂಚೂಣಿಯಲ್ಲಿದ್ದು, ಇದೀಗ ನಿಸ್ಸಾನ್ ಕೂಡಾ ಇದೇ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿದೆ.

ಭಾರತದಲ್ಲೂ ಬಿಡುಗಡೆಯಾಗುತ್ತಾ ಎರ್ಟಿಗಾ ಪ್ರತಿಸ್ಪರ್ಧಿನಿಸ್ಸಾನ್ ಲಿವಿನಾ?

ಜಪಾನ್ ಆಟೋ ಬ್ರಾಂಡ್‌‌ಗಳಲ್ಲಿ ಒಂದಾಗಿರುವ ನಿಸ್ಸಾನ್ ಸಂಸ್ಥೆಯು ಸದ್ಯ ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ತನ್ನ ಕಾರು ಮಾರಾಟ ಜಾಲ ಹೊಂದಿದ್ದು, ನಿನ್ನೆಯಷ್ಟೇ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಅನಾವರಣ ಮಾಡಲಾದ ಲಿವಿನಾ ಎಂಪಿವಿ ಕಾರು ಸಾಕಷ್ಟು ನೀರಿಕ್ಷೆ ಹುಟ್ಟುಹಾಕಿದೆ. ಸುಜುಕಿ ಸಂಸ್ಥೆಯ ಎರ್ಟಿಗಾ ಎಂಪಿವಿ ಕಾರಿಗೆ ಪ್ರತಿಸ್ಪರ್ಧಿಯಾಗಿ ಲಿವಿನಾ ಕಾರನ್ನು ಹೊರತರಲಾಗಿದ್ದು, ಭಾರತದಲ್ಲೂ ಬಿಡುಗಡೆಯಾಗುವ ಸುಳಿವು ನೀಡಿದೆ.

ಭಾರತದಲ್ಲೂ ಬಿಡುಗಡೆಯಾಗುತ್ತಾ ಎರ್ಟಿಗಾ ಪ್ರತಿಸ್ಪರ್ಧಿನಿಸ್ಸಾನ್ ಲಿವಿನಾ?

ಸದ್ಯ ಇಂಡೋನೇಷ್ಯಾದಲ್ಲಿ ಸುಜುಕಿ ಸಂಸ್ಥೆಯ ಎರ್ಟಿಗಾ ಕಾರು ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದು, ಮಿಟ್ಸುಬಿಷಿ ಸಂಸ್ಥೆಯ ಎಕ್ಸ್‌ಪ್ಯಾಂಡರ್ ಮಾದರಿಯಲ್ಲೇ ನಿಸ್ಸಾನ್ ಲಿವಿನಾ ಕಾರನ್ನು ಸಿದ್ದಗೊಳಿಸಿರುವ ನಿಸ್ಸಾನ್ ಸಂಸ್ಥೆಯು ಭಾರೀ ಪ್ರಮಾಣದ ಬೇಡಿಕೆ ಗಿಟ್ಟಿಸಿಕೊಳ್ಳುವ ತವಕದಲ್ಲಿದೆ.

ಭಾರತದಲ್ಲೂ ಬಿಡುಗಡೆಯಾಗುತ್ತಾ ಎರ್ಟಿಗಾ ಪ್ರತಿಸ್ಪರ್ಧಿನಿಸ್ಸಾನ್ ಲಿವಿನಾ?

ಕಾರು ಮಾರಾಟದಲ್ಲಿ ಜಾಗತಿಕವಾಗಿ 50 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಹೊಸ ಕಾರನ್ನು ಮೊಟ್ಟಮೊದಲ ಬಾರಿಗೆ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿರುವ ನಿಸ್ಸಾನ್, ಮುಂದಿನ ಕೆಲವೇ ದಿನಗಳಲ್ಲಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಹೊಸ ಕಾರನ್ನು ಪರಿಚಯಿಸುವ ಸುಳಿವು ನೀಡಿದೆ.

ಭಾರತದಲ್ಲೂ ಬಿಡುಗಡೆಯಾಗುತ್ತಾ ಎರ್ಟಿಗಾ ಪ್ರತಿಸ್ಪರ್ಧಿನಿಸ್ಸಾನ್ ಲಿವಿನಾ?

ಹೊಸ ಲಿವಿನಾ ಕಾರು ತಾಂತ್ರಿಕವಾಗಿ ಅತ್ಯುತ್ತಮ ಎಂಪಿವಿ ಮಾದರಿಯಾಗಿದ್ದು, ಭಾರತದಲ್ಲಿರುವ ಮಾರುತಿ ಸುಜುಕಿ ಎರ್ಟಿಗಾ ಕಾರಿಗಿಂತಲೂ ಉತ್ತಮ ಒಳ ವಿನ್ಯಾಸವನ್ನು ಪಡೆದುಕೊಂಡಿದೆ. 7 ಸೀಟರ್ ವೈಶಿಷ್ಟ್ಯತೆ ಹೊಂದಿರುವ ಹೊಸ ಕಾರಿನಲ್ಲಿ ಮೂರನೇ ಸಾಲಿನಲ್ಲಿ ಪ್ರಯಾಣಿಕರಿಗೆ ಉತ್ತಮ ಸ್ಥಳಾವಕಾಶ ಒದಗಿಸಿರುವುದು ಎರ್ಟಿಗಾ ಕಾರಿಗೆ ಪಕ್ಕಾ ಪೈಪೋಟಿ ನೀಡಬಲ್ಲದು.

ಭಾರತದಲ್ಲೂ ಬಿಡುಗಡೆಯಾಗುತ್ತಾ ಎರ್ಟಿಗಾ ಪ್ರತಿಸ್ಪರ್ಧಿನಿಸ್ಸಾನ್ ಲಿವಿನಾ?

ಯಾಕೆಂದ್ರೆ ಎರ್ಟಿಗಾ ಕಾರು ತಾಂತ್ರಿಕವಾಗಿ ಉತ್ತಮವಾಗಿದ್ದರು ಸಹ ಮೂರನೇ ಸಾಲಿನಲ್ಲಿರುವ ಕೂರುವ ಪ್ರಯಾಣಿಕರಿಗೆ ತುಸು ಕಷ್ಟ ಎನ್ನಿಸಬಹುದಾಗಿದ್ದು, ಆದ್ರೆ ಲಿವಿನಾ ಕಾರಿನಲ್ಲಿ ಈ ಸಮಸ್ಯೆ ಇಲ್ಲವೇ ಇಲ್ಲ ಎನ್ನಬಹುದು.

ಭಾರತದಲ್ಲೂ ಬಿಡುಗಡೆಯಾಗುತ್ತಾ ಎರ್ಟಿಗಾ ಪ್ರತಿಸ್ಪರ್ಧಿನಿಸ್ಸಾನ್ ಲಿವಿನಾ?

ಹಾಗೆಯೇ ಎಂಜಿನ್ ವಿಭಾಗದಲ್ಲೂ ಉತ್ತಮ ಎನ್ನಿಸುವ ಲಿವಿನಾ ಕಾರು 1.5-ಲೀಟರ್ ಟ್ವಿನ್ ವಿಟಿಸಿ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 103-ಬಿಎಚ್‌ಪಿ ಮತ್ತು 141-ಎನ್ಎಂ ಟಾರ್ಕ್ ಉತ್ಪಾದಿಸುವ ಮೂಲಕ ಉತ್ತಮ ಇಂಧನ ದಕ್ಷತೆ ಪಡೆದುಕೊಂಡಿದೆ.

ಭಾರತದಲ್ಲೂ ಬಿಡುಗಡೆಯಾಗುತ್ತಾ ಎರ್ಟಿಗಾ ಪ್ರತಿಸ್ಪರ್ಧಿನಿಸ್ಸಾನ್ ಲಿವಿನಾ?

ಇನ್ನು ಇಂಡೋನೇಷ್ಯಾ ಲಿವಿನಾ ಆವೃತ್ತಿಯನ್ನು ಹೊರತುಪಡಿಸಿ ಭಾರತದಲ್ಲಿ ಬಿಡುಗಡೆಯ ನೀರಿಕ್ಷೆಯಲ್ಲಿರುವ ಲಿವಿನಾ ಮಾದರಿಯು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಬಿಡುಗಡೆಗೊಳ್ಳುವ ಸಾಧ್ಯತೆಗಳಿದ್ದು, ಫೈವ್ ಸ್ಪೀಡ್ ಮ್ಯಾನುವಲ್ ಮತ್ತು ಫೋರ್ ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿರಲಿದೆ.

ಭಾರತದಲ್ಲೂ ಬಿಡುಗಡೆಯಾಗುತ್ತಾ ಎರ್ಟಿಗಾ ಪ್ರತಿಸ್ಪರ್ಧಿನಿಸ್ಸಾನ್ ಲಿವಿನಾ?

ಒಂದು ವೇಳೆ ಭಾರತದಲ್ಲಿ ಲಿವಿನಾ ಬಿಡುಗಡೆಯಾಗುವುದೇ ಆದಲ್ಲಿ ಕಿಕ್ಸ್ ಕಂಪ್ಯಾಕ್ಟ್ ಎಸ್‌ಯುವಿ ಕಾರಿನ 1.5-ಲೀಟರ್ ಕೆ9ಕೆ ಡೀಸೆಲ್ ಎಂಜಿನ್ ಅನ್ನೇ ಎರವಲು ಪಡೆಯುವ ಸಾಧ್ಯತೆಗಳಿದ್ದು, ಸದ್ಯ ಮಾರಾಟಕ್ಕೆ ಲಭ್ಯವಿರುವ ನಿಸ್ಸಾನ್ ಮತ್ತು ರೆನಾಲ್ಟ್ ಕಾರುಗಳಲ್ಲಿ ಇದೇ ಇದೇ ಎಂಜಿನ್ ಬಳಕೆ ಮಾಡಲಾಗುತ್ತಿದೆ.

MOST READ: ಬರೋಬ್ಬರಿ 400ಕಿ.ಮಿ ಮೈಲೇಜ್ ನೀಡುತಂತೆ ಮಹೀಂದ್ರಾ ಸಂಸ್ಥೆಯ ಈ ಎಲೆಕ್ಟ್ರಿಕ್ ಕಾರು..!

ಭಾರತದಲ್ಲೂ ಬಿಡುಗಡೆಯಾಗುತ್ತಾ ಎರ್ಟಿಗಾ ಪ್ರತಿಸ್ಪರ್ಧಿನಿಸ್ಸಾನ್ ಲಿವಿನಾ?

ಇನ್ನು ಹೊಸದಾಗಿ ಬಿಡುಗಡೆಯಾಗಿರುವ ಕಿಕ್ಸ್ ಕಾರಿನ ಮಾದರಿಯಲ್ಲೇ ಹೊಸ ಲಿವಿನಾ ಕಾರು ವಿ ಮೊಷನ್ ಗ್ರಿಲ್ ಹೊಂದಿದ್ದು, 16-ಇಂಚಿನ ಡ್ಯುಯಲ್ ಟೋನ್ ಅಲಾಯ್ ವೀಲ್ಹ್, ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ ಸೇರಿದಂತೆ ಹಲವು ಹೊಸ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಭಾರತದಲ್ಲೂ ಬಿಡುಗಡೆಯಾಗುತ್ತಾ ಎರ್ಟಿಗಾ ಪ್ರತಿಸ್ಪರ್ಧಿನಿಸ್ಸಾನ್ ಲಿವಿನಾ?

ಹಾಗೆಯೇ ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು,ವೆಹಿಕಲ್ ಡೈನಾಮಿಕ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ಇಕೋ ಮೂಡ್ ಮತ್ತು ಕ್ರೂಸ್ ಕಂಟ್ರೋಲ್ ಸೌಲಭ್ಯವಿದೆ.

MOST READ: ಬ್ರೇಕ್ ಫೇಲ್ ಆದಾಗ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಭಾರತದಲ್ಲೂ ಬಿಡುಗಡೆಯಾಗುತ್ತಾ ಎರ್ಟಿಗಾ ಪ್ರತಿಸ್ಪರ್ಧಿನಿಸ್ಸಾನ್ ಲಿವಿನಾ?

ಒಟ್ಟಿನಲ್ಲಿ ಲಿವಿನಾ ಕಾರಿನ ಮೇಲೆ ಭಾರೀ ನೀರಿಕ್ಷೆ ಇಟ್ಟುಕೊಂಡಿರುವ ನಿಸ್ಸಾನ್ ಸಂಸ್ಥೆಯು ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಎರ್ಟಿಗಾ, ಮರಾಜೋ ಮತ್ತು ಇನೋವಾ ಕ್ರಿಸ್ಟಾ ಕಾರಿಗೆ ಪ್ರತಿಸ್ವರ್ಧಿಯಾಗಿ ಭಾರತದಲ್ಲೂ ಈ ಕಾರನ್ನು ಬಿಡುಗಡೆ ಮಾಡುವುದು ಉತ್ತಮ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಕಾರಿನ ಬೆಲೆ(ಅಂದಾಜು)

ಸದ್ಯ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿರುವ ಅನಾವರಣಗೊಂಡಿರುವ ಲಿವಿನಾ ಕಾರು ಭಾರತೀಯ ರೂಪಾಯಿ ಮೌಲ್ಯದಲ್ಲಿ ಹೇಳುವುದಾದರೇ ಆರಂಭಿಕವಾಗಿ ರೂ.10.04 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.13.22 ಲಕ್ಷ ಬೆಲೆ ಹೊಂದಿದ್ದು, ಹೀಗಾಗಿ ಭಾರತದಲ್ಲಿ ಲಿವಿನಾ ಬಿಡುಗಡೆಗೊಂಡಲ್ಲಿ ನಿಜಕ್ಕೂ ಎಂಪಿವಿ ವಿಭಾಗದಲ್ಲಿ ಲಿವಿನಾ ದಾಖಲೆಯ ಬೇಡಿಕೆ ಗಿಟ್ಟಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
English summary
Nissan Livina MPV Unveiled In Indonesia — Should The Nissan Livina Launch In India? Read in Kannada.
Story first published: Wednesday, February 20, 2019, 19:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X