ಇತಿಹಾಸದ ಪುಟ ಸೇರಲಿದೆ ದಟ್ಸನ್ ಇಂಡಿಯಾ..!

ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ನಿಸ್ಸಾನ್, ಭಾರತ ಸೇರಿದಂತೆ ವಿಶ್ವದಾದ್ಯಂತ ತಮ್ಮ ದಟ್ಸನ್ ಬ್ರ್ಯಾಂಡ್ ಅನ್ನು ಸ್ಥಗಿತಗೊಳಿಸುವ ಸಾಧ್ಯತೆಗಳಿವೆ. 1986ರಲ್ಲಿ ಸ್ಥಗಿತಗೊಂಡಿದ್ದ ದಟ್ಸನ್ ಬ್ರ್ಯಾಂಡ್ ಅನ್ನು 2013ರಲ್ಲಿ ಮತ್ತೆ ಪ್ರಾರಂಭಿಸಲಾಗಿತ್ತು. ದಟ್ಸನ್ ಕಾರುಗಳು ಪ್ರಸ್ತುತ ಭಾರತ, ರಷ್ಯಾ, ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ ಸೇರಿದಂತೆ ಇತರ ದೇಶದ ಮಾರುಕಟ್ವೆ‍‍ಗಳಲ್ಲಿ ಮಾರಾಟವಾಗುತ್ತಿವೆ.

ಇತಿಹಾಸದ ಪುಟ ಸೇರಲಿದೆ ದಟ್ಸನ್ ಇಂಡಿಯಾ..!

ಆಟೋಕಾರ್ ಇಂಡಿಯಾ ವರದಿಯ ಪ್ರಕಾರ, ವಿಶ್ವದಾದ್ಯಂತ 2022ರ ವೇಳೆಗೆ ದಟ್ಸನ್ ಬ್ರ್ಯಾಂಡ್ ಅನ್ನು ಹಂತಹಂತವಾಗಿ ಸ್ಥಗಿತಗೊಳಿಸಲು ಪ್ರಯತ್ನಿಸುತ್ತಿದೆ. ನಿಸ್ಸಾನ್ ಮಾಜಿ ಸಿಇಒ ಕಾರ್ಲೋಸ್ ಘೋಸ್‍‍ನ ಅವರೊಂದಿಗೆ ದೆಹಲಿಯಲ್ಲಿ ನಡೆದ ಮೊದಲ ಪ್ರದರ್ಶನದಲ್ಲಿ ಗೋ ಹ್ಯಾಚ್‍‍ಬ್ಯಾಕ್ ಅನ್ನು ಅನಾವರಣಗೊಳಿಸಿದ ನಂತರ ನಿಸ್ಸಾನ್ ಭಾರತದಲ್ಲಿ ದಟ್ಸನ್‍ನನ್ನು ವಿಶ್ವಕ್ಕೆ ಮರುಬಿ‍ಡುಗಡೆ ಮಾಡಿತು.

ಇತಿಹಾಸದ ಪುಟ ಸೇರಲಿದೆ ದಟ್ಸನ್ ಇಂಡಿಯಾ..!

ನಿಸ್ಸಾನ್ ಕಂಪನಿ ಮತ್ತು ಹೋವರ್ ಆಟೋಮೋಟಿವ್ ಇಂಡಿಯಾ(ಎಚ್ಎಐ) ನಡುವಿನ ಸಮಸ್ಯೆಗಳಿಂದಾಗಿ ಗೋ ಹ್ಯಾಚ್‍‍ಬ್ಯಾಕ್ ಕಾರು ಆರಂಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಲಿಲ್ಲ. ಹೋವರ್ ಆಟೋಮೋಟಿವ್ ಇಂಡಿಯಾ ದೇಶದಲ್ಲಿ ನಿಸ್ಸಾನ್ ಡೆಲಿವರಿ, ಮಾರಾಟ ಮತ್ತು ಸರ್ವಿಸ್ ಪಾಲುದಾರರಾಗಿದ್ದರು ಮತ್ತು ಎರಡೂ ಸಂಸ್ಥೆಗಳ ನಡುವಿನ ಸಮಸ್ಯೆಗಳು ವಾಹನ ಮಾರಾಟದ ಮೇಲೆ ಪರಿಣಾಮ ಬೀರಿದವು.

ಇತಿಹಾಸದ ಪುಟ ಸೇರಲಿದೆ ದಟ್ಸನ್ ಇಂಡಿಯಾ..!

ಮಾರಾಟ ನೆಟವರ್ಕ್ ಹೊರತಾಗಿ ಗೋ ಹ್ಯಾಚ್‍‍ಬ್ಯಾಕ್ ಗ್ಲೋಬಲ್ ಎನ್‍‍ಸಿಎಪಿ ಟೆಸ್ಟ್ ನಲ್ಲಿ ಕಳಪೆ ಪರ್ಫಾಮೆನ್ಸ್ ನಿಂದಾಗಿ ಹ್ಯಾಚ್‍‍ಬ್ಯಾಕ್ ಮತ್ತು ದಟ್ಸನ್ ಬ್ರ್ಯಾಂಡ್ ಹೆಸರಿನ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿತು.

ಇತಿಹಾಸದ ಪುಟ ಸೇರಲಿದೆ ದಟ್ಸನ್ ಇಂಡಿಯಾ..!

ಗೋ ಹ್ಯಾಚ್‍‍ಬ್ಯಾಕ್ ನಂತರ ಹೊಸ ಗೋ ಪ್ಲಸ್ ಕಾಂಪ್ಯಾಕ್ಟ್ -ಎಂಪಿವಿ ಮತ್ತು ರೆಡಿ-ಗೋ ಕಂಪನಿಯ ಎಂಟ್ರಿ ಲೆವೆಲ್ ಹ್ಯಾಚ್‍‍ಬ್ಯಾಕ್‍ ಅನ್ನು ಕ್ವಿಡ್ ಹ್ಯಾಚ್‍‍ಬ್ಯಾಕ್‍‍ಗೆ ಪೈಪೋಟಿ ನೀಡಲು ಬಿಡುಗಡೆಗೊಳಿಸಿದ್ದರು. ಆದರೆ ದಟ್ಸನ್ ರೆಡಿ-ಗೋ ಹ್ಯಾಚ್‍‍ಬ್ಯಾಕ್‍ಗೆ ಹೋಲಿಸಿದರೆ ರೆನಾಲ್ಟ್ ಕ್ವಿಡ್ ಮೂರು ಪಟ್ಟು ಹೆಚ್ಚು ಮಾರಾಟವಾಗಿದೆ. ಇದು ಕೂಡ ದಟ್ಸನ್ ಬ್ರ್ಯಾಂಡ್‍ ಅನ್ನು ಸ್ಥಗಿತಗೊಳಿಸಲು ಕಾರಣವಾಗಿದೆ.

ಇತಿಹಾಸದ ಪುಟ ಸೇರಲಿದೆ ದಟ್ಸನ್ ಇಂಡಿಯಾ..!

ನಿಸ್ಸಾನ್ ಕಂಪನಿಯ ಲಾಭದ ಪ್ರಮಾಣವು ಕುಸಿಯುತ್ತಿದೆ. ಯುಎಸ್(ಅಮೇರಿಕ) ಮತ್ತು ಯು‍ರೋಪ್ ಮಾರುಕಟ್ಟೆಗಳಲ್ಲಿ ಜಾಗತಿಕ ಮಾರಾಟವು ಕುಸಿದಿದೆ. ಆದರೆ ಕರ್ಲೋಸ್ ಘೋಸ್‍‍ನ ಹಗರಣ, ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಲು ಮತ್ತು ತಯಾರಿಸಲು ಬೇಕಾದ ಹೂಡಿಕೆಗಳಿಂದ ಏಷ್ಯಾದ ಮಾರಾಟದ ಮೇಲೆ ಪರಿಣಾಮ ಬೀರಿದೆ. ಕಂಪನಿಯು ಯಾವುದೇ ಹೊಸ ಉತ್ಪನ್ನಗಳನ್ನು ಪರಿಚಯಿಸುವಲ್ಲಿ ವಿಫಲವಾಗಿದೆ.

ಇತಿಹಾಸದ ಪುಟ ಸೇರಲಿದೆ ದಟ್ಸನ್ ಇಂಡಿಯಾ..!

ನಿಸ್ಸಾನ್ ಜುಲೈ ತಿಂಗಳಿನಲ್ಲಿ ಸಾಮರ್ಥ್ಯ ಮತ್ತು ಮಾದರಿ ಶ್ರೇಣಿಯನ್ನು ಕಡಿಮೆ ಮಾಡುವ ಮೂಲಕ ವಿಶ್ವದಾದ್ಯಂತ ಬ್ರ್ಯಾಂಡ್ ಅನ್ನು ಮರುರಚನೆಗೊಳಿಸುವ ಕಾರ್ಯಕ್ರಮವನ್ನು ಘೋಷಿಸಿತ್ತು. ಇದು ಭಾರತ ಸೇರಿದಂತೆ 14 ದೇಶಗಳಲ್ಲಿ 12,500 ಉದ್ಯೋಗ ಕಡಿತಕ್ಕೆ ಕಾರಣವಾಯ್ತು. ಕಳೆದ ಮೇ ತಿಂಗಳಲ್ಲಿ ಕಂಪನಿಯ ಲಾಭವು 2009-10ರ ನಂತರ ದೊಡ್ಡ ಪ್ರಮಾಣದಲ್ಲಿ ಕುಸಿತವಾಗಿದೆ ಎಂದು ವರದಿಯಾಗಿದೆ. ನಿಸ್ಸಾನ್ ವಾರ್ಷಿಕ ಸುಮಾರು ರೂ.20,000 ನೆಟ್(ನಿವ್ವಳ) ಕೋಟಿ ಲಾಭಗಳಿಸಿದೆ. ಇದು ಹಿಂದಿನ ವರ್ಷಕ್ಕಿಂತ ಶೇ.5ರಷ್ಟು ಕಡಿಮೆಯಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಇತಿಹಾಸದ ಪುಟ ಸೇರಲಿದೆ ದಟ್ಸನ್ ಇಂಡಿಯಾ..!

ಯುಎಸ್(ಅಮೇರಿಕ) ಮತ್ತು ಚೀನಾ ಮಾರುಕಟ್ಟೆಗಳ ಮೇಲೆ ಹೆಚ್ಚು ಗಮನಹರಿಸುವ ಉದ್ದೇಶದಿಂದ ನಿಸ್ಸಾನ್ ಕಾರ್ಯಕ್ಷಮತೆ ಹೆಚ್ಚಿಸುವ ಯೋಜನೆಯನ್ನು ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ತಿಂಗಳ ಕೊನೆಯಲ್ಲಿ ಜಾಗತಿಕ ಬೆಳವಣಿಗೆಯ ಯೋಜನೆಯನ್ನು ಮತ್ತು ದಟ್ಸನ್ ಬ್ರ್ಯಾಂಡ್ ಸ್ಥಗಿತಗೊಳಿಸುವುದರ ಬಗ್ಗೆ ಕಂಪನಿಯು ಅಧಿಕೃತವಾಗಿ ಬಹಿರಂಗಪಡಿಸಬಹುದು.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಇತಿಹಾಸದ ಪುಟ ಸೇರಲಿದೆ ದಟ್ಸನ್ ಇಂಡಿಯಾ..!

ನಿಸ್ಸಾನ್ ಮೋಟಾರ್ ಕೊ. ಲಿಮಿ‍ಟಿಡ್‍ನ ಗ್ಲೋಬಲ್ ದಟ್ಸನ್ ಬ್ಯುಸಿನೆಸ್ ಯುನಿ‍ಟ್‍‍ನ ಹಿರಿಯ ಉಪಾಧ್ಯಕ್ಷರದಾ ಪೇಮನ್ ಕಾರ್ಗರ್ ಅವರು ಮಾತನಾಡಿ, ರೆಡಿ ಗೋ ಹ್ಯಾಚಾ‍‍ಬ್ಯಾಕ್ ಬಿಎಸ್-6 ಎಂಜಿನ್‍‍ನೊಂದಿಗೆ 2020ರಲ್ಲಿ ಬಿಡುಗಡೆ ಮಾಡಲಾಗುವುದು ಮತ್ತು ಪ್ರಸ್ತುತಕ್ಕಿಂತ ಹೆಚ್ಚಿನ ಸುಧಾರಣೆಯನ್ನು ಹೊಂದಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಇತಿಹಾಸದ ಪುಟ ಸೇರಲಿದೆ ದಟ್ಸನ್ ಇಂಡಿಯಾ..!

1986ರಲ್ಲಿ ಸ್ಥಗಿತಗೊಂಡ ನಂತರ ನಿಸ್ಸಾನ್ ದಟ್ಸನ್‍‍ನನ್ನು ಮತ್ತೆ ಪ್ರಾರಂಭಿಸಲಾಗಿತ್ತು. ಆದರೆ ನಿಸ್ಸಾನ್ ಕಂಪನಿಯು ತಮ್ಮ ನಷ್ಟವನ್ನು ಕಡಿಮೆ ಮಾಡಲು ಮತ್ತು ಜಾಗತಿಕವಾಗಿ ಉತ್ತಮ ಪ್ರದರ್ಶನ ನೀಡಲು ದಟ್ಸನ್ ಬ್ರ್ಯಾಂಡ್‍ ಅನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ದಟ್ಸನ್ ಗೋ ಬಿಎಸ್-6 ಹ್ಯಾಚ್‍‍ಬ್ಯಾಕ್ ಬಿಡುಗಡೆಗೊಳಿಸಿರುವುದಾಗಿ ತಿಳಿಸಿರುವುದರಿಂದ ಇದು ದಟ್ಸನ್ ಬ್ರ್ಯಾಂ‍ಡ್‍‍ನ ಕೊನೆಯ ಮಾದರಿಯಾಗಬಹುದು.

Most Read Articles

Kannada
Read more on ದಟ್ಸನ್ datsun
English summary
Datsun India To Discontinue Operations Very Soon: Here's Why! - Read in Kannada
Story first published: Friday, October 25, 2019, 15:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X