Just In
- 11 hrs ago ಡಿ ಬಾಸ್ ಪತ್ನಿ ಖರೀದಿಸಿದ್ದು ಸಾಮಾನ್ಯ ಕಾರಲ್ಲ: ಬಂಗಲೆಯಂತಹ ಇಂಟೀರಿಯರ್!
- 11 hrs ago ಭಾರತದ ನಂ.1 ಕಾರು... ದಾಖಲೆಯ ಮಾರಾಟ... 5.5 ಲಕ್ಷ ಬೆಲೆ... 34 ಕಿ.ಮೀ ಮೈಲೇಜ್
- 12 hrs ago ಈ ಹ್ಯುಂಡೈ ಕಾರಿಗೆ ಭಾರತದಲ್ಲಿ ಭರ್ಜರಿ ಬೇಡಿಕೆ: ಇದು ನಿಮಗೆ ಬೇಕು ಅಂದ್ರೆ ಕಾಯಲೇಬೇಕು!
- 12 hrs ago ಈ ತಿಂಗಳಲ್ಲಿ ಕೈಗೆಟಕುವ ಬೆಲೆಯ ಎಸ್ಯುವಿಗಳು: ಮಿಸ್ ಮಾಡಬೇಡಿ, ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
Don't Miss!
- News ಮೋದಿ ಕಾರ್ಯಕ್ರಮಕ್ಕೆ ಚಕ್ಕರ್, ಮಠಗಳಿಗೆ ಭೇಟಿ ಕೊಟ್ಟು ಪ್ರಚಾರ ಆರಂಭಿಸಿದ ಕೆಎಸ್ ಈಶ್ವರಪ್ಪ!
- Movies 'ಹಿಟ್ಲರ್ ಕಲ್ಯಾಣ' ಧಾರಾವಾಹಿ ಅಂತ್ಯ: ಪ್ರೋತ್ಸಾಹ ನೀಡಿದ ವೀಕ್ಷಕರಿಗೆ ಧನ್ಯವಾದ ಎಂದ ನಟಿ ರಜಿನಿ
- Sports IPL 2024: ಮುಂಬೈ ಇಂಡಿಯನ್ಸ್ ತಂಡ ಸೇರಿದ ಮಾಜಿ ನಾಯಕ: ಹಾಲಿ ನಾಯಕನ ಆತಂಕ ದೂರ
- Lifestyle ಫ್ಲ್ಯಾಟ್ನಲ್ಲಿ ವಾಸಿಸಲು ಹೋಗುವಾಗ ಸಮೃದ್ಧಿ, ಆರೋಗ್ಯಕ್ಕಾಗಿ ವಾಸ್ತು ಹೀಗಿದೆಯೇ ಎಂದು ನೋಡಬೇಕು
- Technology ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಇನ್ಫಿನಿಕ್ಸ್ ನೋಟ್ 40 ಪ್ರೊ ಪ್ಲಸ್ 5G ಫೋನ್: ಫೀಚರ್ಸ್ ಹೇಗಿದೆ?
- Finance ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ, ನಿಮ್ಮ ನಗರದಲ್ಲಿ 24 ಕ್ಯಾರೆಟ್ ಚಿನ್ನದ ದರ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೂನ್ನಲ್ಲಿ ನಿಸ್ಸಾನ್ ಕಿಕ್ಸ್ ಕಾರಿಗಿಂತಲೂ ಟೆರಾನೊ ಕಾರು ಹೆಚ್ಚು ಸೇಲ್ ಆಗಿದ್ಯಂತೆ.!
ಟಾಟಾ ಹ್ಯಾರಿಯರ್ ಕಾರಿಗೆ ಪೈಪೋಟಿ ನೀಡಲು ನಿಸ್ಸಾನ್ ಸಂಸ್ಥೆಯು ಇದೇ ಜನವರಿಯಲ್ಲಿ ತಮ್ಮ ಕಾಂಪ್ಯಾಕ್ಟ್ ಎಸ್ಯುವಿಯಾದ ಕಿಕ್ಸ್ ಅನ್ನು ಬಿಡುಗಡೆ ಮಾಡಲಾಗಿದ್ದು, ಇದು ನಿಸ್ಸಾನ್ ಸಂಸ್ಥೆಯಲ್ಲಿರುವ ಟೆರಾನೊ ಕಾರಿನ ಸ್ಥಾನವನ್ನು ಪಡೆದುಕೊಂಡಿದೆ. ಆದರೆ ಇಲ್ಲಿ ಅಚ್ಚರಿ ಏನಪ್ಪಾ ಅಂದ್ರೆ ಜೂನ್ 2019ರ ಕಾರು ಮಾರಾಟದಲ್ಲಿ ನಿಸ್ಸಾನ್ ಕಿಕ್ಸ್ ಕಾರಿಗಿಂತಲೂ ಗ್ರಾಹಕರು ಟೆರಾನೊ ಕಾರನ್ನೆ ಹೆಚ್ಚಾಗಿ ಖರೀದಿಸಿದ್ದಾರೆ.
2019ರ ಕ್ರಿಕೆಟ್ ವಿಶ್ವ ಕಪ್ ಪಂದ್ಯಗಳಿಗೆ ಅಫಿಷಿಯಲ್ ಸ್ಪಾನ್ಸರ್ ಆದ ನಿಸ್ಸಾನ್ ಕಿಕ್ಸ್, ತನ್ನ ಕಿಕ್ಸ್ ಕಾರನ್ನು ಅಫಿಷಿಯಲ್ ಕಾರಾಗಿ ಘೋಷಿಸಲಾಗಿತ್ತು. ಇದರಿಂದ ಮೇ ತಿಂಗಳಿನಲ್ಲಿ ಸುಮಾರು 72 ಸಂಖ್ಯೆಯಲ್ಲಿ ಮಾರಾಟವಾದ ನಿಸ್ಸಾನ್ ಕಿಕ್ಸ್ ಕಾರು, ಜೂನ್ ತಿಂಗಳಿನಲ್ಲಿ 128 ಯೂನಿಟ್ ಮಾತ್ರ ಮಾರಾಟಗೊಂಡಿದೆ. ಪ್ರಸ್ತುತ ಸಂಸ್ಥೆಯು ಟೆರಾನೊ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಆ ಸ್ಥಾನಕ್ಕೆ ನಿಸ್ಸಾನ್ ಕಿಕ್ಸ್ ಅನ್ನು ನಿಲ್ಲಿಸಲಾಯಿತು. ಆದರೆ ಜೂನ್ 2019ರಲ್ಲಿ 132 ಯೂನಿಟ್ ಟೇರಾನೊ ಕಾರುಗಳು ಮಾರಾಟವಾಗಿದ್ಯಂತೆ.
ಟೆರಾನೊ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ನಿಸ್ಸಾನ್ ಸಂಸ್ಥೆಯು, ಮಾರಾಟವಾಗದೆಯೆ ಉಳಿದ ಟೆರಾನೊ ಕಾರುಗಳನ್ನು ಡೀಲರ್ಗಳಿಗೆ ತಲುಪಿಸಲಾಗಿದ್ದು, ಅವುಗಳನ್ನು ಆದಷ್ಟು ಬೇಗ ಮಾರಾಟ ಮಾಡಲು ಹೇಳಿದ್ದರು. ಹೀಗಾಗಿ ಗ್ರಾಹಕರು ಟೆರಾನೊ ಕಾರಿನ ವಿನ್ಯಾಕ್ಕೆ ಮೊರೆಹೋಗಿ ಅದನ್ನು ಖರೀದಿಸಿದ್ದಾರೆ ಎಂದರೆ ತಪ್ಪಾಗಲಾರದು.
ಇನ್ನು ನಿಸ್ಸಾನ್ ಕಿಕ್ಸ್ ಕಾರಿನ ಬಗ್ಗೆ ಹೇಳುವುದಾದರೆ ನಿಸ್ಸಾನ್ ಕಿಕ್ಸ್ ಎಸ್ಯುವಿ ಕಾರಿನಲ್ಲಿ ಸೆಗ್ಮೆಂಟ್ ಫಸ್ಟ್ ಎಂದು ಕರೆಯಲು 360 ಡಿಗ್ರಿ ಕ್ಯಾಮೆರಾ, ವೆಹಿಕಲ್ ಡೈನಾಮಿಕ್ ಕಂಟೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಎಬಿಡಿ ಮತ್ತು ಹಲವಾರು ಏರ್ಬ್ಯಾಗ್ಗಳನ್ನು ತನ್ನ ಎದುರಾಳಿ ಕಾರುಗಳಲ್ಲಿ ಇಲ್ಲದ ಹಾಗೆ ಇದು ಪಡೆದುಕೊಂಡಿದೆ.
ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಿಕ್ಸ್ ಕಾರುಗಳನ್ನು ಪೆಟ್ರೋಲ್ ವರ್ಷನ್ನಲ್ಲಿ ಎರಡು ಮತ್ತು ಡಿಸೇಲ್ ಆವೃತ್ತಿಯಲ್ಲಿ ನಾಲ್ಕು ಆವೃತ್ತಿಗಳನ್ನು ಬಿಡುಗಡೆ ಮಾಡಲಾಗಿದ್ದು, ಆರಂಭಿಕ ಕಿಕ್ಸ್ ಆವೃತ್ತಿಯು ದೆಹಲಿ ಎಕ್ಸ್ಶೋರೂಂ ಪ್ರಕಾರ ರೂ.9.55 ಲಕ್ಷ ಬೆಲೆ ಹೊಂದಿರುತ್ತೆ.
ಕಿಕ್ಸ್ ಕಾರಿನ ಡಿಸೈನ್
GRAPHENE ಡಿಸೈನ್ ತಂತ್ರಜ್ಞಾನದೊಂದಿಗೆ ಸಿದ್ದವಾಗಿರುವ ಹೊರ ವಿನ್ಯಾಸಗಳು ಕಿಕ್ಸ್ಗೆ ಪ್ರೀಮಿಯಂ ವೈಶಿಷ್ಟ್ಯತೆಯು ಮೆರಗು ತಂದಿದ್ದು, ವಿ ಮೊಷನ್ ಗ್ರಿಲ್, ಎಲ್ಇಡಿ ಪ್ರೋಜೆಕ್ಟರ್ ಹೆಡ್ಲ್ಯಾಂಪ್, ಕೆಳಭಾಗದಲ್ಲಿ ಅಳವಡಿಸಲಾಗಿರುವ ಫಾಗ್ ಲ್ಯಾಂಪ್, ಸಿಲ್ವರ್ ಸ್ಕೀಡ್ ಪ್ಲೇಟ್ ಮತ್ತು ಬಲಿಷ್ಠವಾಗಿರುವ ಫ್ರಂಟ್ ಪ್ರೋಫೈಲ್ ನೀಡಲಾಗಿದೆ.
ಕಿಕ್ಸ್ ಕಾರುಗಳಿಗೆ ಮತ್ತಷ್ಟು ಮೆರಗು ತರುವ ಉದ್ದೇಶದಿಂದ ಕಾರಿನ ಎಡ್ಜ್ಗಳಲ್ಲಿ ಶಾರ್ಪ್ ಡಿಸೈನ್ ಬಳಕೆ ಮಾಡಲಾಗಿದ್ದು, ರೂಫ್ ರೈಲ್ಸ್ ಹಾಗೂ ಕಾರಿನ ಎರಡು ಬದಿಗಳಲ್ಲೂ ನೀಡಲಾಗಿರುವ ಕ್ರೋಮ್ ಸೌಲಭ್ಯವು ಕಾರಿನ ಸೈಡ್ ಪ್ರೋಫೈಲ್ಗೆ ಲುಕ್ ನೀಡಿದೆ. ಇನ್ನು ಕಾರಿನಲ್ಲಿ 17-ಇಂಚಿನ 5 ಸ್ಪೋಕ್ ಅಲಾಯ್ ಚಕ್ರಗಳ ಜೋಡಣೆ, 210 ಎಂಎಂ ನಷ್ಟು ಗ್ರೌಂಡ್ ಕ್ಲಿಯೆರೆನ್ಸ್, ಬೂಮೆರ್ಗ್ ಟೈಲ್ ಲ್ಯಾಂಪ್ಸ್, ಗಮನ ಸೆಳೆಯುವ ರಿಯರ್ ಬಂಪರ್ ಸೇರಿದಂತೆ ಹಲವು ಸುಧಾರಿತ ಸೌಲಭ್ಯಗಳು ಕಿಕ್ಸ್ ಕಾರಿನಲ್ಲಿವೆ.
ಕಾರಿನ ಒಳವಿನ್ಯಾಸ
ಗ್ಲಿಡಿಂಗ್ ವಿಂಗ್ ಡ್ಯಾಶ್ಬೋರ್ಡ್ ಹೊಂದಿರುವ ಕಿಕ್ಸ್ ಕಾರಿನಲ್ಲಿ ಒಳಾಂಗಣ ವಿಸ್ತಿರ್ಣವು ಚಿಕ್ಕದು ಎನಿಸಿದರೂ ಆಧುನಿಕ ಕಾರುಗಳಲ್ಲಿ ಇರಬೇಕಾದ ಬಹುತೇಕ ಸೌಲಭ್ಯವು ಇದರಲ್ಲಿವೆ. ಬ್ಲ್ಯಾಕ್ ಪ್ಲಾಸ್ಟಿಕ್ ಪ್ಯಾನೆಲ್, ಬ್ರೌನ್ ಲೆದರ್ನಿಂದ ಸಿದ್ದವಾದ ಡ್ಯಾಶ್ಬೋರ್ಡ್, ಲೆದರ್ ಹೊದಿಕೆಯುಳ್ಳ ಸ್ಟೀರಿಂಗ್ ವೀಲ್ಹ್ ಹೊಂದಿರುವುದು ಕಾರು ಚಾಲನೆಯಲ್ಲಿ ಐಷಾರಾಮಿ ಅನುಭವ ನೀಡುತ್ತೆ.
ವಿನೂತನ ಕಾರಿನಲ್ಲಿ 8-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಹಾಗೂ ಕಾರಿನ ಸುತ್ತ ನೋಡಬಹುದಾದ 360 ಡಿಗ್ರಿ ವಿವ್ಯೂ ಮಾನಿಟರ್ ವ್ಯವಸ್ಥೆಯಿದ್ದು, ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾರಾಟವಾಗುತ್ತಿರುವ ಇತರೆ ಸಬ್ ಕಂಪ್ಯಾಕ್ಟ್ ಎಸ್ಯುವಿ ಮಾದರಿಗಳಲ್ಲೇ ಈ ಕಾರು ವಿಶೇಷ ಎನ್ನಿಸಲಿದೆ.
ಇದಲ್ಲದೇ ನಿಸ್ಸಾನ್ ಮುಂಬರುವ ಮತ್ತೊಂದು ಕಾರು ಮಾದರಿಯಾದ ಅಲ್ಟಿಮಾ ಸೆಡಾನ್ ಕಾರಿನಿಂದಲೂ ಕೆಲವು ಫೀಚರ್ಸ್ಗಳನ್ನು ಕಿಕ್ಸ್ ಕಾರಿನಲ್ಲಿ ಎರವಲು ಪಡೆದುಕೊಳ್ಳಲಾಗಿದ್ದು, ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ, ಧ್ವನಿ ಗ್ರಹಿಸಿ ಕಾರ್ಯನಿರ್ವಹಿಸುವ "Hey Siri" ಮತ್ತು "Okay Google" ಆ್ಯಪ್ ಸೌಲಭ್ಯವಿದೆ.
ಜೊತೆಗೆ ನಿಸ್ಸಾನ್ ಕನೆಕ್ಟ್ ಆ್ಯಪ್ ಸೌಲಭ್ಯವು ಸಹ ವಿವಿಧ ಕಾರ್ಯಗಳಿಗೆ ಬಳಕೆಯಾಗಲಿದ್ದು, ಚಾಲಕನಿಗೆ ಸರ್ವಿಸ್ ಬುಕ್ಕಿಂಗ್ ರಿಮೆಂಡರ್, ಕಾರಿನ ಆರೋಗ್ಯ(ಎಂಜಿನ್, ಬ್ಯಾಟರಿ, ಬ್ರೇಕಿಂಗ್) ಮತ್ತು ಡೋರ್ ಲಾಕ್/ಅನ್ ಲಾಕ್ಗೆ ಸಂಬಂಧಿಸಿದಂತೆ ಸಮಸ್ಯೆಗಳ ಕುರಿತಾಗಿ ಸಮಯಕ್ಕೆ ಸರಿಯಾಗಿ ಎಚ್ಚರಿಕೆ ನೀಡುತ್ತೆ.
ಇನ್ನುಳಿದಂತೆ ಆರಾಮದಾಯಕ ಪ್ರಯಾಣಕ್ಕೆ ಸಹಕಾರಿಯಾಗುವ ಅಂಡ್ರಾಯಿಡ್ ಆಟೋ ಪ್ಲೇ, ಆ್ಯಪಲ್ ಕಾರ್ ಪ್ಲೇ, ಯುಎಸ್ಬಿ ಪೋರ್ಟ್, ಚಾಲಕ ಮತ್ತು ಮುಂಭಾಗದ ಪ್ರಯಾಣಿಕರಿಗೆ ಆರ್ಮ್ ರೆಸ್ಟ್, ಹಿಂಬದಿಯಲ್ಲಿ ಎಸಿ ವೆಂಟ್ಸ್, ಸ್ಪೀಡ್ ಸೆನ್ಸಾರ್ ಡೋರ್ ಲಾಕ್/ಅನ್ಲಾಕ್ ಸೌಲಭ್ಯ, ರಿಯರ್ ಪಾರ್ಕಿಂಗ್ ವ್ಯವಸ್ಥೆಯಿರಲಿದೆ.
ಎಂಜಿನ್ ಸಾಮರ್ಥ್ಯ
ಹೊಸ ಕಿಕ್ಸ್ ಮಾದರಿಯು 1.5-ಲೀಟರ್ ಹೆಚ್4ಕೆ ಪೆಟ್ರೋಲ್ ಎಂಜಿನ್ ಹಾಗೂ 1.5-ಲೀಟರ್ ಕೆ9ಕೆ ಡಿಸೇಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಪೆಟ್ರೋಲ್ ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು ಡಿಸೇಲ್ ಮಾದರಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಜೋಡಿಸಲಾಗಿದೆ. ಈ ಪೆಟ್ರೋಲ್ ಮಾದರಿಯು 104-ಬಿಎಚ್ಪಿ, 142-ಎನ್ಎಂ ಟಾರ್ಕ್ ಉತ್ಪಾದಿಸಿದ್ದಲ್ಲಿ ಡೀಸೆಲ್ ಮಾದರಿಯು 108-ಬಿಎಚ್ಪಿ, 240-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಉತ್ತಮ ಇಂಧನ ದಕ್ಷತೆಯನ್ನು ಹೊಂದಿವೆ.
ಸುರಕ್ಷಾ ಸೌಲಭ್ಯಗಳು
ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ವೆಹಿಕಲ್ ಡೈನಾಮಿಕ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಮೂರು ಏರ್ಬ್ಯಾಗ್, ಎಬಿಎಸ್, ಇಕೋ ಮೂಡ್ ಮತ್ತು ಕ್ರೂಸ್ ಕಂಟ್ರೋಲ್ ಸೌಲಭ್ಯವಿದೆ.
ಕಾರಿನ ಮೈಲೇಜ್
ಹೊಸ ಕಿಕ್ಸ್ ಕಾರುಗಳು ಪ್ರತಿ ಲೀಟರ್ ಪೆಟ್ರೋಲ್ಗೆ 13 ರಿಂದ 15ಕಿ.ಮಿ ಮತ್ತು ಡಿಸೇಲ್ ಕಾರುಗಳು 17 ರಿಂದ 19 ಕಿ.ಮಿ ಇಂಧನ ದಕ್ಷತೆಯನ್ನು ಹೊಂದಿದ್ದು, ಮಾರುತಿ ಸುಜುಕಿ ಎಸ್ ಕ್ರಾಸ್, ಹ್ಯುಂಡೈ ಕ್ರೇಟಾ, ಮಹೀಂದ್ರಾ ಎಕ್ಸ್ಯುವಿ 500 ಮತ್ತು ಬಿಡುಗಡೆಯಾಗಲಿರುವ ಟಾಟಾ ಹ್ಯಾರಿಯರ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ.